Search results - 165 Results
 • Madikeri Sampaje Road Open For Traffic

  NEWS17, Sep 2018, 9:29 AM IST

  ಸವಾಲಾಗಿದ್ದ ಮಡಿಕೇರಿ - ಸಂಪಾಜೆ ಹೆದ್ದಾರಿ 20 ದಿನದಲ್ಲೇ ಸಂಚಾರಕ್ಕೆ ಸಿದ್ಧ

  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ-ಮಡಿಕೇರಿ ರಸ್ತೆಯನ್ನು ಕೇವಲ 20 ದಿನಗಳಲ್ಲಿ ಸಂಚಾರ ಯೋಗ್ಯವಾಗಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆ  ತನ್ನ ತಾಂತ್ರಿಕ ಕೌಶಲ್ಯವನ್ನು ಎತ್ತಿ ಹಿಡಿದಿದೆ. ಕನಿಷ್ಠ ಆರು ತಿಂಗಳಿಗಿಂತಲೂ ಮೊದಲು ಕಾಮಗಾರಿ ಪೂರ್ಣವಾಗುವುದು ಸಾಧ್ಯವೇ ಎಂದು ಪ್ರಶ್ನಾರ್ಥಕ ಚಿಹ್ನೆಯಂತೆ ಗೋಚರಿಸಿದ್ದ ಪರಿಸರದಲ್ಲೀಗ ಪ್ರಾಧಿಕಾರ ಕ್ಷಿಪ್ರ ಕ್ರಾಂತಿಯನ್ನೇ ನಡೆಸಿದೆ.  

 • What Is The Reason Behind Kodagu Flood

  NEWS15, Sep 2018, 9:06 AM IST

  ಕೊಡಗು ಮಹಾ ದುರಂತಕ್ಕೆ ಕಾರಣವೇನು ?

  ಕೊಡಗಿನಲ್ಲಿ ಈ ಭಾರೀ ಭಾರೀ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು ಇದೀಗ ಇದಕ್ಕೆ ಕಾರಣ ಏನು ಎನ್ನುವ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಇದರಲ್ಲಿ ಪ್ರಮುಖವಾಗಿ ಐದು ಅಂಶಗಳನ್ನು ನೀಡಲಾಗಿದೆ.  

 • central team Kodagu Flood Inspection BJP Leader Slams MP Pratap Simha

  NEWS13, Sep 2018, 9:44 PM IST

  ಸೆಂಟ್ರಲ್ ಟೀಂ ಎದುರೆ ಬಿಜೆಪಿ ಮುಖಂಡನಿಂದ ಸಂಸದ ಸಿಂಹಗೆ ತರಾಟೆ..!

  ಕಂಡು ಕೇಳರಿಯದ ರೀತಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ನಲುಗಿದ್ದ ಕೊಡಗಿನಲ್ಲಿ ಸೆಂಟ್ರಲ್ ಟೀಂ ಇಂದು ಕೂಡ ರೌಂಡ್ಸ್ ಹಾಕಿದೆ.ತೀವ್ರ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡಕ್ಕೆ ಎಂಪಿ, ಎಂಎಲ್ಎಗಳು ಸೇರಿದಂತೆ ಡಿಸಿ ಮಾಹಿತಿ ನೀಡಿದರು. ಆದರೆ ಈ ವೇಳೆ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಮುಖಂಡರೊಬ್ಬರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಏನಪ್ಪಾ ಸುದ್ದಿ ಪೂರ್ಣ ಓದಿ..

 • State Government Identifies 5 Reason For Kodagu Landslides

  NEWS13, Sep 2018, 5:25 PM IST

  ಕೊಡಗು-ಮಲೆನಾಡು ಭೂಕುಸಿತಕ್ಕೆ 5 ಕಾರಣಗಳು ಬಹಿರಂಗ!

  ಕಳೆದ ಆಗಸ್ಟ್‌ನಲ್ಲಿ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಂಭವಿಸಿದ ಭೂಕುಸಿತಗಳಿಗೆ ಕಾರಣವಾಗಿರುವ 5 ಅಂಶಗಳನ್ನು ಇದೀಗ ರಾಜ್ಯ ಸರ್ಕಾರ ಗುರುತಿಸಿದೆ. ಆ ಅಂಶಗಳು ಯಾವುವು? ರಾಜ್ಯ ಸರ್ಕಾರ ಸಿದ್ಧಪಡಿಸಿರುವ ವರದಿಯಲ್ಲೇನಿದೆ ಇಲ್ಲಿದೆ ವಿವರ.      

 • Today Central Team to Visit Flood Hit Kodagu

  NEWS13, Sep 2018, 11:33 AM IST

  ಇಂದು ಕೊಡಗಿಗೆ ಕೇಂದ್ರ ಅಧ್ಯಯನ ತಂಡ

    ಅತಿವೃಷ್ಟಿಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಹಾನಿ ಉಂಟಾಗಿದ್ದ ಪ್ರದೇಶಗಳಿಗೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಇಂದು  ಕೊಡಗಿನಲ್ಲಿ ಹೆಬ್ಬೆಟ್ಟಗೇರಿ, ದೇವಸ್ತೂರು, ಶಾಲಾ ಜಂಕ್ಷನ್, ತಂತಿಪಾಲ ಸೇತುವೆ ಸೇರಿ ಕೆಲವೆಡೆಥಿ ದಕ್ಷಿಣ ಕನ್ನಡದಲ್ಲಿ ಮೂಲಾರ್ ಪಟ್ಟಣ, ವಿಟ್ಲ ಪಡ್ನೂರು, ಕಾಣಿಯೂರು, ಕಲ್ಲಾಜೆ, ಕಲ್ಮಕಾರು, ಶಿರಾಡಿ ಘಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. 

 • Kodagu DC Transfer Gossip circulated On Social Media

  NEWS10, Sep 2018, 10:22 AM IST

  ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಕೊಡಗು DC ವರ್ಗಾವಣೆ?

  ಕೊಡಗಿನಲ್ಲಿ ಭಾರೀ ಮಳೆ ಸುರಿದು ಉಂಟಾದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ  ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಸರ್ಕಾರ ವರ್ಗಾವಣೆ ಮಾಡಲಿದೆ ಎನ್ನುವ ವದಂತಿ
  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

 • Are christian Michanarise Try To Convert In Kodagu Flood Victims

  NEWS9, Sep 2018, 1:12 PM IST

  ಕೊಡಗಲ್ಲಿ ಕ್ರೈಸ್ತ ಮಿಷನರಿಗಳಿಂದ ಮತಾಂತರ ಯತ್ನ?

  ಸಂತ್ರಸ್ತರನ್ನು ಗುರಿಯಾಗಿಸಿಕೊಂಡಿರುವ ಕ್ರೈಸ್ತ ಮಿಷನರಿಗಳು ಇಂತಹ ನೋವಿನ ಸಂದರ್ಭದಲ್ಲೂ ಮತಾಂತರ ಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ ಎಂಬ ಆರೋಪ ಕೊಡಗಿನಲ್ಲಿ ಕೇಳಿ ಬಂದಿದೆ. 

 • Kodagu Flood Victims Allege Discrimination Hold Protest

  NEWS6, Sep 2018, 11:30 AM IST

  ತಾರತಮ್ಯ: ಕೊಡಗು ಪ್ರವಾಹ ಸಂತ್ರಸ್ತರಿಂದ ಪ್ರತಿಭಟನೆ

  ಪ್ರವಾಹದಿಂದ ತತ್ತರಿಸಿರುವ ಕೊಡಗಿನಲ್ಲಿ ಜನರಿಗೆ ಸರಿಯಾಗಿ ಸವಲತ್ತುಗಳನ್ನು ನೀಡುತ್ತಿಲ್ಲ, ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಸಂತ್ರಸ್ತರು ಅಧಿಕಾರಿಗಳನ್ನೇ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.   

 • Ex Soldier Family In Flood Hit Kodagu

  NEWS3, Sep 2018, 8:55 AM IST

  ಮನೆ, ಜಮೀನು ಸರ್ವನಾಶ : ಬೀದಿಗೆ ಬಿದ್ದ ಯೋಧನ ಪರಿವಾರ

  ಆಪರೇಷನ್ ಬ್ಲೂ ಸ್ಟಾರ್ ನಲ್ಲಿ ಸೆಣೆಸಿದ್ದ ಯೋಧನ ಕುಟುಂಬವೀಗ ಸಂಪೂರ್ಣ ಬೀದಿಗೆ ಬಿದ್ದಿದೆ.  ಕೊಡಗಿನಲ್ಲಿ ಉಂಟಾದ ಪ್ರವಾಹದಿಂದ ಮನೆ ಜಮೀನು ಕಳೆದುಕೊಂಡ ಈ ಕುಟುಂಬ ಬೇರೆ ಒಬ್ಬರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ.

 • Rental House For Kodagu Flood Victims Says UT Khader

  NEWS2, Sep 2018, 10:57 AM IST

  ಕೊಡಗು ಸಂತ್ರಸ್ತರಿಗೆ ಬಾಡಿಗೆ ಮನೆ

  ಕೊಡಗು ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ  ಎಕರೆ ಜಮೀನು ಗುರುತಿಸಿದ್ದು, ಈ ಪೈಕಿ 24 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಸಂಗ್ರಹವಾಗಿದೆ. ಮನೆ ನಿರ್ಮಿಸುವವರೆಗೂ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು. ಆದ್ದರಿಂದ ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧಿಷ್ಟ ಹಣ ನೀಡಲು ಚಿಂತನೆ ನಡೆದಿದೆ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. 

 • Kodagu Flood Victims Not Get Compensation

  NEWS2, Sep 2018, 10:44 AM IST

  ಕೊಡಗು ಪ್ರವಾಹ : ಸಂತ್ರಸ್ತರಿಗೆ ಸಿಗದ ಪರಿಹಾರ

  ಪುನರ್ವಸತಿ ಕೇಂದ್ರಗಳನ್ನು ತೊರೆದು ಮನೆಗಳಿಗೆ ತೆರಳುವ ಸಂತ್ರಸ್ತರಿಗೆ ತಿಂಗಳಿಗೆ ಸರಿದೂಗಿಸುವಷ್ಟು ದವಸ ಧಾನ್ಯ, 3,800 ಕಡ್ಡಾಯವಾಗಿ ನೀಡುವಂತೆ ಸರ್ಕಾರ, ಜಿಲ್ಲಾಡಳಿತ ಆದೇಶ ನೀಡಿದೆ. ಆದರೂ ಪುನರ್ವಸತಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ನೈಜ ನಿರಾಶ್ರಿತರಿಗೆ ಸರ್ಕಾರ ಘೋಷಿಸಿರುವ ಆಹಾರ ಮತ್ತು ಧನ ಸಹಾಯ ದೊರೆಯುತ್ತಿಲ್ಲ.

 • Karnataka Arya Vysya Mahasabha help to Kodagu Flood

  Kodagu1, Sep 2018, 8:24 PM IST

  ಕೊಡಗಿನ ಜನತೆಯ ನೆರವಿಗೆ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ!

  ಪ್ರವಾಹಕ್ಕೆ ತತ್ತರಿಸಿರೋ ಕೊಡಗಿನ ಒಂದು ಗ್ರಾಮವನ್ನು ದತ್ತು ಪಡೆಯಲಾಗಿದೆ. ಈ ಮಹತ್ದವ ಕಾರ್ಯವನ್ನು ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಎತ್ತಿಕೊಂಡಿದ್ದು, ಗ್ರಾಮವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ. 

 • After Kerala, floods wreaks havoc in Nagaland

  NEWS31, Aug 2018, 5:10 PM IST

  ಕೇರಳ, ಕೊಡಗು ಆಯ್ತು: ಮಳೆಯಲ್ಲಿ ಮುಳುಗೋ ಸರದಿ ಈ ನಗರದ್ದು!

  ಕೇರಳ, ಕೊಡಗು ಜಲಪ್ರಳಯದ ಮುಂದುವರಿಕೆ! ನಾಗಾಲ್ಯಾಂಡ್ ನಲ್ಲಿ ಶುರುವಾಗಿದೆ ಮಳೆಯ ರುದ್ರ ನರ್ತನ! ಭೀಕರ ಮಳೆಗೆ ೧೨ ಜನರ ದುರ್ಮರಣ! ಸಹಾಯ ಕೋರಿ ಟ್ವೀಟ್ ಮಾಡಿದ ನಾಗಾಲ್ಯಾಂಡ್ ಸಿಎಂ!
  ಕೇಂದ್ರದಿಂದ ಸೂಕ್ತ ನೆರವಿನ ಭರವಸೆ ನೀಡಿದ ರಾಜನಾಥ್ ಸಿಂಗ್
   

 • House of Throw ball played destroyed in Kodagu Floods

  OTHER SPORTS31, Aug 2018, 11:55 AM IST

  ಥ್ರೋಬಾಲ್‌ ಆಟಗಾರ್ತಿ ತಶ್ಮಾ ಮುತ್ತಪ್ಪ ಮನೆ ಪ್ರವಾಹದಲ್ಲಿ ನೆಲಸಮ

  ಕೊಡಗಿನಲ್ಲಿ ಸುರಿದ ಮಳೆಗೆ ಸಾಕಷ್ಟು ಮಂದಿ ತಮ್ಮವರನ್ನು ಕಳೆದುಕೊಂಡಿದ್ದಾರೆ. ತಮ್ಮ ಆಸ್ತಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೀಗ ಕೆಲವು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇವರಲ್ಲಿ ಅಂತಾರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿಯೊಬ್ಬರು ಸೇರಿದ್ದಾರೆ.

 • Kodagu Face More Trouble After Flood

  NEWS31, Aug 2018, 10:48 AM IST

  ಉಸಿರು ನಿಲ್ಲಿಸಿದ ಕೊಡಗಿನ ಹಸಿರ ಹಾದಿ

  ಕೊಡಗಿನಲ್ಲಿ ನಿರ್ಮಾಣವಾದ  ಪ್ರವಾಹ ಪರಿಸ್ಥಿತಿ ಅಲ್ಲಿನ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಸುಂದರ ಸೊಬಗಿನ ಹಸಿರ ನಾಡಾಗಿದ್ದ ಕೊಡಗಿನಲ್ಲಿ ಇದೀಗ ಎಲ್ಲೆಡೆ ಮಣ್ಣಿನ ರಾಶಿ ಕೆಸರಿನ ಹಾದಿ ಕಾಣಿಸುತ್ತಿದೆ.