ಕೆ ಎಸ್‌ ಈಶ್ವರಪ್ಪ  

(Search results - 13)
 • <p>Siddaramaiah</p>

  Karnataka Districts24, Jul 2020, 2:16 PM

  'ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವುದೇ ಸಿದ್ದು, ಡಿಕೆಶಿ ದಂಧೆ ಆಗಿದೆ'

  ವಿಧಾನ ಪರಿಷತ್ ಸ್ಥಾನಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಐದು ಸ್ಥಾನಗಳಿಗೆ ಆಯ್ಕೆ ಆಗುತ್ತಿದ್ದಂತೆ ಉಳಿದವರು ಸುಮ್ಮನಾಗಿದ್ದಾರೆ. ಐದು ಮಂದಿ ಆಯ್ಕೆಯಲ್ಲಿ ಯಾವುದೇ ಒಂದೇ ಒಂದು ಒಡಕಿನ ಧ್ವನಿ ಕೂಡ‌ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. 
   

 • Karnataka Districts17, Jun 2020, 9:59 AM

  'ಪರಮೇಶ್ವರ ನಾಯ್ಕ ಪುತ್ರನ ಮದುವೆಯಲ್ಲಿ ನಿಯಮ ಉಲ್ಲಂಘನೆ ಸಮರ್ಥಿಸಿಕೊಂಡ ಈಶ್ವರಪ್ಪ'

  ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ ಪುತ್ರನ ಮದುವೆ ನಡೆಸಿದ ಹಡಗಲಿ ಶಾಸಕ ಹಾಗೂ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ನಡೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು, ಚುನಾಯಿತ ಜನಪ್ರತಿನಿಧಿಗಳ ಮಕ್ಕಳ ಮದುವೆ ಎಂದಾಗ ಜನ ನುಗ್ಗುವುದು ಸ್ವಾಭಾವಿಕ ಎಂದಿದ್ದಾರೆ.
   

 • Karnataka Districts6, Jun 2020, 11:39 AM

  ಬಿಜೆಪಿ ಶಾಸಕರು ಒಂದುಕಡೆ ಕೂಡೋದೇ ತಪ್ಪಾ?: ಸಚಿವ ಈಶ್ವರಪ್ಪ

  ಬಿಜೆಪಿ ಶಾಸಕರು ಪ್ರತ್ಯೇಕ ಸಭೆ ಮಾಡಿದರೆ ತಪ್ಪೇನು? ಸಭೆ ಮಾಡಿ ಚರ್ಚೆ ಮಾಡೋದರಲ್ಲಿ ಯಾವುದೇ ತಪ್ಪಿಲ್ಲ, ಹಲವು ಶಾಸಕರು ಸಭೆ ಮಾಡಿ ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಳ್ಳೋದರಲ್ಲಿ ತಪ್ಪೇನಿದೆ? ಪಕ್ಷದ ವಿರುದ್ಧ ತೀರ್ಮಾನ ತೆಗೆದುಕೊಂಡರೆ ತಪ್ಪಾಗುತ್ತದೆ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಇತ್ತೀಚೆಗೆ ಬಿಜೆಪಿಯಲ್ಲಿ ಬಿರುಗಾಳಿ ಹುಟ್ಟುಹಾಕಿರುವ ಅತೃಪ್ತ ಶಾಸಕರ ಸಭೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
   

 • KS Eshwarappa

  Karnataka Districts2, May 2020, 2:37 PM

  ಸಚಿವ ಈಶ್ವರಪ್ಪ ಕಾಲಿಗೆ ಅಡ್ಡಬಿದ್ದ ತಹಸೀಲ್ದಾರ್‌ ಅಮಾನತ್ತಿಗೆ ಕಾಂಗ್ರೆಸ್‌ ಆಗ್ರಹ

  ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರ್‌ ಸಚಿವರ ಕಾಲಿಗೆ ಸಾರ್ವಜನಿಕವಾಗಿ ಅಡ್ಡ ಬಿದ್ದು ನಮಸ್ಕರಿಸಿದ ಘಟನೆ ಶುಕ್ರವಾರ ಇಲ್ಲಿ ನಡೆದಿದ್ದು, ಈ ಪ್ರಸಂಗ ಸಾರ್ವಜನಿಕರ ತೀವ್ರ ಟೀಕೆಗೆ ಒಳಗಾಗಿದೆ. ಶಿವಮೊಗ್ಗ ತಹಶೀಲ್ದಾರ್‌ ಎನ್‌. ಜೆ.ನಾಗರಾಜ್‌ ಅವರೇ ಈ ರೀತಿ ಸಚಿವರ ಕಾಲಿಗೆ ಬಿದ್ದು ನಮಸ್ಕರಿಸಿದವರು.
   

 • KS Eshwarappa

  Karnataka Districts15, Apr 2020, 2:42 PM

  ಏ.20ರ ಬಳಿಕ ಲಾಕ್‌ಡೌನ್‌ ಸ್ಥಿತಿ ನಿರ್ಧಾರ: ಸಚಿವ ಈಶ್ವರಪ್ಪ

  ಲಾಕ್‌ಡೌನ್‌ ಆದೇಶ ಪಾಲಿಸುವುದರ ಮೂಲಕ ಕೊರೋನಾ ವೈರಸ್‌ ಹರಡದಂತೆ ತಡೆಯಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರಲ್ಲದೆ, ಜಿಲ್ಲೆ ಮತ್ತು ರಾಜ್ಯದ ವಿಚಾರದಲ್ಲಿ ಏ.20ರ ಬಳಿಕ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
   
 • siddaramaiah Eshwarappa

  Davanagere31, Oct 2019, 3:39 PM

  'ಮಹಾ ಸುಳ್ಳುಗಾರ ಸಿದ್ದುಗೆ ನೋಬೆಲ್‌ ಪ್ರಶಸ್ತಿ ನೀಡಲಿ'..!

  ನೆರೆ ಸಂತ್ರಸ್ತರಿಗೆ 10 ಸಾವಿರ ರು. ಪರಿಹಾರವನ್ನೂ ಕೊಟ್ಟಿಲ್ಲವೆಂಬ ಆರೋಪ ಮಾಡಿಸುವ ವಿಪಕ್ಷ ನಾಯಕ, ಮಹಾ ಸುಳ್ಳುಗಾರ ಸಿದ್ದರಾಮಯ್ಯಗೆ ನೋಬೆಲ್‌ ಪ್ರಶಸ್ತಿನೀಡಬೇಕಷ್ಟೇ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.  ಸಂತ್ರಸ್ಥರಿಗೆ ದುಡ್ಡನ್ನೇ ಕೊಟ್ಟಿಲ್ಲವೆಂಬ ಗಿನ್ನೆಸ್‌ ದಾಖಲೆಯ ಸುಳ್ಳುಗಾರ ಸಿದ್ದರಾಮಯ್ಯ. ರಾಜ್ಯವನ್ನು ಸುತ್ತಾಡಿದರೆ ಗೊತಾಗುತ್ತದೆ ಎಷ್ಟುಜನರಿಗೆ ಹತ್ತು ಸಾವಿರ ರು.ಗಳಂತೆ ನೀಡಿದ್ದೇವೆಂಬುದು ಎಂದು ತಿರುಗೇಟು ನೀಡಿದ್ದಾರೆ.

 • Chikkamagalur31, Oct 2019, 3:22 PM

  ಸಿದ್ದರಾಮಯ್ಯ ಪುನಃ ಸಿಎಂ ಆಗುವ ಪ್ರಶ್ನೆಯೇ ಇಲ್ಲ ಎಂದ್ರು ಈಶ್ವರಪ್ಪ

  ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನಡೆಸಿದ ಆಡಳಿತ ವೈಖರಿಯ ಪರಿಣಾಮ ರಾಜ್ಯದಲ್ಲಿ ಇಂದು ಕಾಂಗ್ರೆಸ್‌ ಪಕ್ಷ ಸತ್ತು ಹೋಗಿದ್ದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ ಲೇವಡಿ ಮಾಡಿದ್ದಾರೆ.

 • Karnataka Districts26, Sep 2019, 2:31 PM

  ಗಾಂಜಾ ಮಾಫಿಯಾ ನಿಯಂತ್ರಣಕ್ಕೆ ಸಚಿವ ಈಶ್ವರಪ್ಪ ಸೂಚನೆ

  ಜಿಲ್ಲೆಯ ಪಟ್ಟಣ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಾಂಜಾ ಮುಂತಾದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಬಗ್ಗೆ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬರುತ್ತಿವೆ.

 • Karnataka Districts24, Sep 2019, 2:43 PM

  ಶಿವಮೊಗ್ಗ: ಅಭ್ಯರ್ಥಿಗಳ ಆಯ್ಕೆಯಲ್ಲಿ ಅನರ್ಹರಿಗೆ ಆದ್ಯತೆ, ಈಶ್ವರಪ್ಪ ಸ್ಪಷ್ಟನೆ

  ಉಪಚುನಾವಣೆಯಲ್ಲಿ ಸ್ಪರ್ಧಿಗಳು ಯಾರು ಎಂಬ ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಬಿಜೆಪಿಯಲ್ಲಿ ಅನರ್ಹ ಶಾಸಕರಿಗೆ ಆಧ್ಯತೆ ನೀಡಲಾಗುತ್ತದೆ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಅನರ್ಹ ಶಾಸಕರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗುತ್ತದೆ ಎಂದು ಅವರು ಶಿವಮೊಗ್ಗದಲ್ಲಿ ಹೇಳಿದ್ದಾರೆ.

 • Siddaramaiah And Eshwarappa

  Karnataka Districts28, Aug 2019, 11:24 AM

  ಬೆಳಗಾವಿ: 'ಈಶ್ವರಪ್ಪಗೆ ಬ್ರೈನ್-ನಾಲಿಗೆಗೆ ಲಿಂಕ್ ಇಲ್ಲ'

  ಈಶ್ವರಪ್ಪ ಅವರಿಗೆ ಬ್ರೈನ್ ಮತ್ತು ನಾಲಿಗೆಗೆ ಲಿಂಕ್ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್‌ ಹೌಸ್‌ನಲ್ಲಿ ಮಾತನಾಡಿದ ಅವರು,  ಆಪರೇಶನ್ ಕಮಲದ ಜನಕ ಸಿದ್ದರಾಮಯ್ಯ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

 • Ishwarappa

  Karnataka Districts23, Aug 2019, 8:51 AM

  ಮಂಡ್ಯ: 'ಈಶ್ವರಪ್ಪ ತಮ್ಮ ಹಿರಿತನಕ್ಕೆ ತಕ್ಕಂತೆ ಮಾತನಾಡಲಿ'

  ಜೆಡಿಎಸ್‌ ಪಕ್ಷ ಸತ್ತು ಹೋಗಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ನೀಡಿದ ಹೇಳಿಕೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತ್ಯುತ್ತರ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಸತ್ತು ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸತ್ತಂತೆ ಎಂದಿದ್ದಾರೆ.

 • Bagina

  Karnataka Districts7, Aug 2019, 9:31 AM

  ತುಂಬಿದ ತುಂಗೆಗೆ ಈಶ್ವರಪ್ಪ ದಂಪತಿ ಬಾಗಿನ

  ತುಂಬಿ ಹರಿಯುತ್ತಿರುವ ತುಂಗಾನದಿಗೆ ಮಾಜಿ ಡಿಸಿಎಂ ಹಾಗೂ ಶಾಸಕ ಕೆ.ಎಸ್‌. ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮೀ ಹಾಗೂ ಕುಟುಂಬದವರೊಂದಿಗೆ ಮಂಗಳವಾರ ನಗರದ ಕೋರ್ಪಲಯ್ಯ ಛತ್ರ ಸಮೀಪದಲ್ಲಿ ಬಾಗಿನ ಅರ್ಪಿಸಿದರು. ಕಳೆದೆರೆಡು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾನದಿ ತುಂಬಿ ಹರಿಯುತ್ತಿದೆ.

 • state20, Jan 2019, 9:53 AM

  ಸಿದ್ದುಗೆ ಹುಚ್ಚು: ಈಶ್ವರಪ್ಪಗೆ ಬುದ್ಧಿ ಭ್ರಮಣೆ| ನಾಯಕರ ಕಚ್ಚಾಟ

  ಕರ್ನಾಟಕ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಈಗಾಗಲೇ ತಮ್ಮ ಪಕ್ಷದ ಶಾಸಕರನ್ನು ರೆಸಾರ್ಟ್‌ಗೆ ರವಾನಿಸಿದ್ದಾರೆ. ಆದರೆ ಈ ನಡುವೆ ಉಭಯ ಪಕ್ಷದ ನಾಯಕರು ಪರಸ್ಪರ ವಾಗ್ದಾಳಿ ಮುಂದುವರೆಸಿದ್ದಾರೆ.