ಕೆಕೆಆರ್

(Search results - 239)

Pat Cummins

CricketMay 31, 2021, 9:06 AM IST

ಐಪಿಎಲ್‌ ಭಾಗ-2ಕ್ಕೆ ಕೆಕೆಆರ್ ವೇಗಿ ಪ್ಯಾಟ್‌ ಕಮಿನ್ಸ್‌ ಅಲಭ್ಯ?

ಬಹುಕೋಟಿ ಗುತ್ತಿಗೆ ಹೊಂದಿದ್ದರೂ, ಕಮಿನ್ಸ್‌ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಟಿ20 ವಿಶ್ವಕಪ್‌, ಆ್ಯಷಸ್‌ ಸರಣಿಗೆ ಫಿಟ್‌ ಆಗಿರಬೇಕು ಎನ್ನುವ ಕಾರಣಕ್ಕೆ ಅವರು ಐಪಿಎಲ್‌ಗೆ ಗೈರಾಗಲಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಪತ್ರಿಕೆ ವರದಿ ಮಾಡಿದೆ.

KKR

CricketMay 26, 2021, 6:22 PM IST

ಮೆಗಾ ಹರಾಜಿನಲ್ಲಿ ಕೆಕೆಆರ್ ಈ ಮೂವರನ್ನು ರೀಟೈನ್ ಮಾಡಿಕೊಳ್ಳಬೇಕು ಎಂದ ಆಕಾಶ್ ಚೋಪ್ರಾ

ನವದೆಹಲಿ: ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಇನ್ನು 2022ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಕೆಕೆಆರ್ ತಂಡ ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.

ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಕೆಕೆಆರ್ ತಂಡವು ಈ ಮೂವರು ಆಟಗಾರರನ್ನು ಹರಾಜಿಗೂ ಮುನ್ನ ತಮ್ಮ ತಂಡದಲ್ಲೇ ಉಳಿಸಿಕೊಳ್ಳುವುದು ಬೆಸ್ಟ್ ಎನ್ನುವ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಯಾರು ಆ ಮೂವರು ಬ್ಯಾಟ್ಸ್‌ಮನ್‌ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Harry Gurney

CricketMay 15, 2021, 9:00 AM IST

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ವೇಗಿ ಹ್ಯಾರಿ ಗರ್ನಿ ವಿದಾಯ

ಕಳೆದ ವರ್ಷ ಭುಜದ ನೋವಿಗೆ ಒಳಗಾಗಿದ್ದ ಗರ್ನಿ, 13ನೇ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ತಂಡವನ್ನು ಪ್ರತಿನಿಧಿಸುವ ಅವಕಾಶದಿಂದ ವಂಚಿತರಾಗಿದ್ದರು. ಗಾಯದ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ 34 ವರ್ಷದ ಗರ್ನಿ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

Varun Chakravarthy

CricketMay 11, 2021, 8:58 AM IST

ಗುಡ್‌ ನ್ಯೂಸ್‌: ಕೋವಿಡ್‌ನಿಂದ ವರುಣ್‌, ಸಂದೀಪ್‌ ಗುಣಮುಖ

ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ ಇಬ್ಬರು ಮನೆಗೆ ಹೋಗಿದ್ದಾರೆ. ಅವರಿಬ್ಬರು 10 ದಿನಗಳ ಖಡ್ಡಾಯ ಐಸೋಲೇಷನ್‌ ಮುಗಿಸಿ ಮನೆಗೆ ತೆರಳಿದ್ದಾರೆ. ಹೀಗಿದ್ದೂ ಕೆಕೆಆರ್ ಫ್ರಾಂಚೈಸಿ ಇವರಿಬ್ಬರ ಆರೋಗ್ಯದ ಮೇಲೆ ನಿಗಾ ಇಡಲಿದೆ ಎಂದು ಬಿಸಿಸಿಐ ಉನ್ನತ ಮೂಲಗಳು ಪಿಟಿಐ ಸುದ್ದಿ ಸಂಸ್ಥಗೆ ಖಚಿತ ಪಡಿಸಿವೆ.

Pat Cummins

CricketMay 10, 2021, 2:09 PM IST

IPL 2021: ಮದುವೆಗೂ ಮುನ್ನ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಈ ಸ್ಟಾರ್ ಕ್ರಿಕೆಟಿಗ..!

ಮೆಲ್ಬರ್ನ್‌: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಮಾರಕ ವೇಗಿ ಪ್ಯಾಪ್ ಕಮಿನ್ಸ್‌ ಸದ್ಯದಲ್ಲಿಯೇ ತಂದೆಯಾಗಲಿದ್ದಾರೆ. ಕಮಿನ್ಸ್‌ ಭಾವಿ ಪತ್ನಿ ಬೆಕೆ ಬೋಸ್ಟನ್‌ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾನುವಾರವಷ್ಟೇ(ಮೇ.09) ಕಮಿನ್ಸ್ ಹಾಗೂ ಭಾವಿ ಪತ್ನಿ ಬೆಕೆ ಬೋಸ್ಟನ್‌ಗೆ ಕೋಲ್ಕತ ನೈಟ್‌ ರೈಡರ್ಸ್ ಫ್ರಾಂಚೈಸಿ ಟ್ವೀಟ್‌ ಮೂಲಕ ಶುಭಕೋರಿತ್ತು. ಕೆಲವು ದಿನಗಳ ಹಿಂದಷ್ಟೇ ಬೆಕೆ ಬೋಸ್ಟನ್‌ ಕಡಲ ಕಿನಾರೆಯಲ್ಲಿ ತಮ್ಮ ಬೇಬಿ ಬಂಪ್ಸ್‌ನೊಂದಿಗೆ ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಕಮಿನ್ಸ್‌ ಹಾಗೂ ಬೆಕೆ ಬೋಸ್ಟನ್‌ ಕುರಿತಾದ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ ನೋಡಿ.

Tim Seifert

CricketMay 8, 2021, 11:14 AM IST

ಐಪಿಎಲ್ 2021: ಕೆಕೆಆರ್‌ ವಿಕೆಟ್ ಕೀಪರ್ ಟಿಮ್‌ ಸೈಫರ್ಟ್‌ಗೆ ಕೊರೋನಾ ಪಾಸಿಟಿವ್..!

ಬಯೋ ಬಬಲ್‌ನೊಳಗೆ ಆಟಗಾರರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಕೆಕೆಆರ್ ತಂಡದ ಟಿಮ್ ಸೈಫರ್ಟ್‌ ಎದುರಿಸಿದ ಎರಡು ಪಿಸಿಆರ್ ಟೆಸ್ಟ್‌ನಲ್ಲೂ ಫೇಲ್ ಆಗಿದ್ದರಿಂದ ತವರಿಗೆ ಹೊರಡಲು ಸಾಧ್ಯವಾಗಿಲ್ಲ. ಹೀಗಾಗಿ ಸೈಫರ್ಟ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

sn Kolkata Knight Riders vs Royal Challengers

CricketMay 3, 2021, 12:24 PM IST

ಬ್ರೇಕಿಂಗ್ ನ್ಯೂಸ್: ಇಂದು ನಡೆಯಬೇಕಿದ್ದ ಆರ್‌ಸಿಬಿ-ಕೆಕೆಆರ್ ಪಂದ್ಯ ಮುಂದೂಡಿಕೆ..!

ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಕೆಆರ್ ತಂಡದ ಆಟಗಾರರೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸುವರ್ಣ ನ್ಯೂಸ್. ಕಾಂ ಸದ್ಯದಲ್ಲಿಯೇ ನಿಮ್ಮ ಮುಂದಿಡಲಿದೆ

sn Kolkata Knight Riders vs Royal Challengers

CricketMay 3, 2021, 10:23 AM IST

ಐಪಿಎಲ್ 2021: ಕೆಕೆಆರ್ ಎದುರು ಜಯದ ಕನವರಿಕೆಯಲ್ಲಿ ಆರ್‌ಸಿಬಿ

ಮೊದಲ 4 ಪಂದ್ಯಗಳ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್‌ಸಿಬಿ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದೆ. ಮೊಹಮದ್‌ ಸಿರಾಜ್‌ ಡೆಲ್ಲಿ ವಿರುದ್ಧ ಕೊನೆ ಓವರಲ್ಲಿ 14 ರನ್‌ ರಕ್ಷಿಸಿಕೊಳ್ಳದೆ ಹೋಗಿದ್ದರೆ ಸತತ 3 ಸೋಲುಗಳನ್ನು ಕಾಣುತ್ತಿತ್ತು.

• এখানেই অনুষ্ঠিত হচ্ছে 'হাউডি মোদী'র আদলে 'নমস্তে ট্রাম্প'।

CricketApr 29, 2021, 10:56 PM IST

ಪೃಥ್ವಿ ಶಾ-ಧವನ್ ಅಬ್ಬರಕ್ಕೆ KKR ಧೂಳೀಪಟ; ಡೆಲ್ಲಿ ತಂಡಕ್ಕೆ 7 ವಿಕೆಟ್ ಗೆಲುವು!

ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅತ್ಯುತ್ತಮ ಪ್ರದರ್ಶನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಗುರಿ ತಲುಪಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲೂ ಬಡ್ತಿ ಪಡೆದಿದೆ.

• undefined

CricketApr 29, 2021, 9:11 PM IST

ರಸೆಲ್ ಹೋರಾಟ; ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಕೆಕೆಆರ್!

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೃಹತ್ ಗುರಿ ನೀಡುವ ವಿಶ್ವಾಸದಲ್ಲಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಅಬ್ಬರಿಸಲು ಸಾಧ್ಯವಾಗಿಲ್ಲ. ಆದರೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ. ಕೆಕೆಆರ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

• গুজরাত ক্রিকেট সংস্থার এই 'ড্রিম প্রোজেক্ট' এবার গোটা দেশের কাছে গর্বের বিষয়।

CricketApr 29, 2021, 7:03 PM IST

ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಡೆಲ್ಲಿ; ತಂಡದಲ್ಲಿ 1 ಬದಲಾವಣೆ!

14ನೇ ಆವೃತ್ತಿ ಐಪಿಎಲ್ ಟೂರ್ನಿಯ 25ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು?

sn Delhi Capitals vs Kolkata Knight Riders

CricketApr 29, 2021, 12:25 PM IST

ಐಪಿಎಲ್ 2021: ಬಲಿಷ್ಠ ಡೆಲ್ಲಿಗಿಂದು ಕೆಕೆಆರ್‌ ಸವಾಲು

ಡೆಲ್ಲಿಗೆ ಹೋಲಿಕೆ ಮಾಡಿದರೆ ಕೆಕೆಆರ್‌ ದುರ್ಬಲ ಎನಿಸಿದರೂ, ಯಾವುದೇ ಕ್ಷಣದಲ್ಲಿ ತಿರುಗೇಟು ನೀಡುವ ಬಲವಿದೆ. ಇದೇ ಮೋದಿ ಅಂಗಳದಲ್ಲಿ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಪಂದ್ಯದ ಫಲಿತಾಂಶವೇ ಇದಕ್ಕೆ ಸಾಕ್ಷಿ. ಬ್ಯಾಟ್ಸ್‌ಮನ್‌ಗಳಿಂದ ಸಂಘಟಿತ ಪ್ರದರ್ಶನ ಕಂಡು ಬರದಿದ್ದರೂ, ಬೌಲರ್‌ಗಳ ಮಿಂಚಿನಾಟ ಕೆಕೆಆರ್‌ನ ಬಲ ಎನಿಸಿದೆ.

• undefined

CricketApr 26, 2021, 11:23 PM IST

ನಾಯಕ ಇಯಾನ್ ಮಾರ್ಗನ್ ಜವಾಬ್ದಾರಿಯುತ ಆಟ, ಕೆಕೆಆರ್‌ಗೆ 5 ವಿಕೆಟ್ ಗೆಲುವು!

ನಾಯಕ ಇಯಾನ್ ಮಾರ್ಗನ್ ಜವಾಬ್ದಾರಿಯುತ ಆಟ ಹಾಗೂ ರಾಹುಲ್ ತ್ರಿಪಾಠಿ ಹೋರಾಟದಿಂದ ಕೋಲ್ಕತಾ ನೈಟ್ ರೈಡರ್ಸ್ ಸುಲಭ ಗುರಿಯನ್ನು ಚೇಸ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

• undefined

CricketApr 26, 2021, 9:37 PM IST

ಕನ್ನಡಿಗನ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್; 121 ರನ್‌ಗೆ ಕುಸಿದ ರಾಹಲ್ ಸೈನ್ಯ!

ಕನ್ನಡಿಗ ಪ್ರಸಿದ್ ಕೃಷ್ಣ ಸೇರಿದಂತೆ ಕೋಲ್ಕತಾ ನೈಟ್ ರೈಡರ್ಸ್ ದಾಳಿಗೆ ಪಂಜಾಬ್ ಕಿಂಗ್ಸ್ ತತ್ತರಿಸಿದೆ. ಪರಿಣಾಮ ಕೆಎಲ್ ರಾಹುಲ್ ಸೈನ್ಯ 123 ರನ್‌ಗೆ ಕುಸಿದಿದೆ.

• undefined

CricketApr 26, 2021, 7:05 PM IST

IPL 2021: ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಕೆಕೆಆರ್!

14ನೇ ಆವೃತ್ತಿ ಐಪಿಎಲ್ ಟೂರ್ನಿ 21ನೇ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ KKR ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಇಲ್ಲಿದೆ.