ಕಿರಣ್ ರಿಜಿಜು

(Search results - 36)
• undefined

OTHER SPORTSJun 19, 2021, 3:43 PM IST

ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಆಗ್ರಹ; ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ!

• ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ನಿಧನಕ್ಕೆ ಮೋದಿ ಸೇರಿ ಗಣ್ಯರ ಸಂತಾಪ
• ದಿಗ್ಗಜ ಮಿಲ್ಕಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಒತ್ತಾಯ
• ಕ್ರೀಡಾಭಿಮಾನಿಗಳ ಆಗ್ರಹಕ್ಕೆ ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ

Olympic Jersey

OlympicsJun 4, 2021, 11:26 AM IST

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತದ ಜೆರ್ಸಿ ಅನಾವರಣ

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು, ‘ನಮ್ಮ ಅಥ್ಲೀಟ್‌ಗಳ ತಯಾರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದರು.  135 ಕೋಟಿ ಭಾರತೀಯರ ಹಾರೈಕೆ ನಮ್ಮ ಯುವ ಸ್ಪರ್ಧಾಳುಗಳ ಜತೆ ಇದೆ. ಇಡೀ ದೇಶದ ಜನರು ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ಅಥ್ಲೀಟ್‌ಗಳಿಗೆ ಮೋದಿ ಶುಭ ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.

Boxing Rijiju

OTHER SPORTSJun 1, 2021, 10:48 AM IST

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಸಂಜೀತ್‌ಗೆ ಒಲಿದ ಚಿನ್ನದ ಪದಕ

ಸೋಮವಾರ ನಡೆದ ಪುರುಷರ 91 ಕೆ.ಜಿ ವಿಭಾಗದ ಫೈನಲ್‌ನಲ್ಲಿ ರಿಯೋ ಓಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ, ಕಜಕಸ್ತಾನದ ವಾಸ್ಸಿಲಿ ವಿರುದ್ಧ ಸಂಜಿತ್ 3-2 ಅಂತರದಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

Pooja Rani

OTHER SPORTSMay 31, 2021, 11:41 AM IST

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: 10 ಪದಕ ಗೆದ್ದ ಭಾರತದ ಮಹಿಳಾ ಬಾಕ್ಸರ್‌ಗಳು

ಪೂಜಾ ರಾಣಿ ಸತತ ಎರಡನೇ ಬಾರಿಗೆ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಾಲ್ಡ್ವಾದ  ಮೊವಲ್ನೋವಾ ಅವರನ್ನು ಫೈನಲ್‌ನಲ್ಲಿ 5-0 ಅಂತರದಲ್ಲಿ ಅನಾಯಾಸವಾಗಿ ಮಣಿಸುವ ಮೂಲಕ ಪೂಜಾ ರಾಣಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಪೂಜಾ ರಾಣಿ ರಿಂಗ್‌ನಲ್ಲಿ ಮಾರಕ ಪಂಚ್‌ಗಳ ಮೂಲಕ ಎದುರಾಳಿ ಬಾಕ್ಸರ್‌ ಅವರನ್ನು ತಬ್ಬಿಬ್ಬುಗೊಳಿಸಿದರು.

Khelo India

OTHER SPORTSMay 26, 2021, 1:02 PM IST

ಕರ್ನಾಟಕ ರಾಜ್ಯದಲ್ಲಿ 31 ಖೇಲೋ ಇಂಡಿಯಾ ಕೇಂದ್ರ ಆರಂಭ: ಕಿರಣ್ ರಿಜಿಜು

ಕೇಂದ್ರ ಸರ್ಕಾರವು ಮಹಾರಾಷ್ಟ್ರ, ಮಿಜೋರಾಂ, ಗೋವಾ, ಕರ್ನಾಟಕ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಮಣಿಪುರದಲ್ಲಿ ಖೇಲೋ ಇಂಡಿಯಾ ಕ್ರೀಡಾ ಕೇಂದ್ರಗಳನ್ನು ತೆರೆಯುವುದಾಗಿ ರಿಜಿಜು ತಿಳಿಸಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ 3.10 ಕೋಟಿ ರು. ವೆಚ್ಚದಲ್ಲಿ 31 ಕೇಂದ್ರಗಳನ್ನು ತೆರೆಯಲಾಗುವುದು ಎಂದಿದ್ದಾರೆ.

Kiren Rijiju

OTHER SPORTSMay 21, 2021, 8:24 AM IST

13,000 ಕ್ರೀಡಾಪಟುಗಳಿಗೆ ಕೇಂದ್ರದಿಂದ ಆರೋಗ್ಯ ವಿಮೆ

ಈ ವರೆಗೂ ಕ್ರೀಡಾಪಟುಗಳು ರಾಷ್ಟ್ರೀಯ ಶಿಬಿರದಲ್ಲಿದ್ದಾಗ, ರಾಷ್ಟ್ರೀಯ ಇಲ್ಲವೇ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಮಾತ್ರ ವಿಮೆ ಚಾಲ್ತಿಯಲ್ಲಿ ಇರುತ್ತಿತ್ತು.

Kiren Rijiju

SportsApr 18, 2021, 10:20 AM IST

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಗೆ ಕೊರೋನಾ ಪಾಸಿಟಿವ್‌

49 ವರ್ಷದ ಕಿರಣ್ ರಿಜಿಜು, ನನ್ನ ಕೊರೋನಾ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದ್ದು, ವೈದ್ಯರ ಸಲಹೆ ಪಡೆಯುತ್ತಿದ್ದೆನೆ. ನಾನು ದೈಹಿಕವಾಗಿ ಫಿಟ್‌ ಆಗಿದ್ದೇನೆ. ನನ್ನ ಜೊತೆ ಸಂರ್ಪಕಕ್ಕೆ ಬಂದಿರುವವರು ಕೂಡಲೇ ಕ್ವಾರಂಟೈನ್‌ ಆಗಿ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಕೋರಿದ್ದಾರೆ.

Yoga

OTHER SPORTSMar 26, 2021, 9:26 AM IST

ಖೇಲೋ ಇಂಡಿಯಾಗೆ ಯೋಗಾಸನ ಸೇರ್ಪಡೆ: ಕಿರಣ್ ರಿಜಿಜು

ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯನ್ನಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಈ ಯೋಜನೆ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೇಷನ್‌(ಎನ್‌ವೈಎಸ್‌ಎಫ್‌)ಗೆ ದೇಶದಲ್ಲಿ ಯೋಗಾಸನವನ್ನು ಅಭಿವೃದ್ಧಿಪಡಿಸಲು ಕ್ರೀಡಾ ಸಚಿವಾಲಯದಿಂದ ಮಾನ್ಯತೆ ನೀಡಿರುವುದಾಗಿ ರಿಜಿಜು ಹೇಳಿದ್ದಾರೆ.

Kiren Rijiju

OTHER SPORTSMar 6, 2021, 9:39 AM IST

‘ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜಿಸುವ ಗುರಿ’: ರಿಜಿಜು

‘ಕ್ರೀಡಾ ಕ್ಷೇತ್ರದಲ್ಲಿ ಭಾರತ ತಾನು ಗಳಿಸಬೇಕಿದ್ದ ಸ್ಥಾನವನ್ನು ಇನ್ನೂ ಗಳಿಸಿಲ್ಲ. ಒಲಿಂಪಿಕ್ಸ್‌ ಅತಿದೊಡ್ಡ ಕ್ರೀಡಾಕೂಟ. ಲಂಡನ್‌ 3 ಬಾರಿ ಒಲಿಂಪಿಕ್ಸ್‌ ಆಯೋಜಿಸಿದೆ. ಈ ಬಾರಿ ಒಲಿಂಪಿಕ್ಸ್‌ಗೆ ವೇದಿಕೆಯಾಗಲಿರುವ ಟೋಕಿಯೋ ಈ ಹಿಂದೆ 1964ರ ಕ್ರೀಡಾಕೂಟದ ಆತಿಥ್ಯ ವಹಿಸಿತ್ತು. ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ವರೆಗೂ ಒಲಿಂಪಿಕ್ಸ್‌ ಅಭಿಯಾನ ಪೂರ್ಣಗೊಳ್ಳುವುದಿಲ್ಲ’ ಎಂದರು.

Kiren Rijiju

SportsFeb 23, 2021, 9:00 AM IST

ಒಲಿಂಪಿಕ್ಸ್‌ ಸ್ಪರ್ಧಿಗಳಿಗೆ ಶೀಘ್ರದಲ್ಲೇ ಲಸಿಕೆ: ಕಿರಣ್‌ ರಿಜಿಜು

ಮೂರು ಕಿಲೋ ಮೀಟರ್‌ ನಷ್ಟುದೂರ ಓಟ, 2 ಕಿಲೋ ಮೀಟರ್‌ ಸೈಕ್ಲಿಂಗ್‌ ಮಾಡಿ ಬಳಿಕ ಬಸವನಗುಡಿ ಈಜು ಕೊಳದಲ್ಲಿ ಈಜು ಧಿರಿಸಿನಲ್ಲೇ ನೀರಿಗಿಳಿದು ಕೆಲಕಾಲ ಈಜಿ ಗಮನ ಸೆಳೆದರು. ‘ಫಿಟ್‌ ಇಂಡಿಯಾ’ದ ಭಾಗವಾಗಿ ನಡೆದ ಟ್ರಯಥ್ಲಾನ್‌ನಲ್ಲಿ ಸಚಿವರು, ಸಂಸದರು ಸೇರಿದಂತೆ ಅನೇಕ ಹಿರಿಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು

Kiren Rijiju

SportsFeb 21, 2021, 3:00 PM IST

ಶಿವಮೊಗ್ಗ ದೇಶದ ಕ್ರೀಡಾ ಹಬ್‌ ಆಗಲಿದೆ: ಕಿರಣ್‌ ರಿಜಿಜು ವಿಶ್ವಾಸ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದ ವೇಳೆಗೆ ಭಾರತ ಪದಕ ಪಟ್ಟಿಯಲ್ಲಿ ಟಾಪ್‌ 10 ಒಳಗೆ ಇರಬೇಕು ಎನ್ನುವುದು ನನ್ನ ಗುರಿಯಾಗಿದೆ. ದೇಶದಲ್ಲಿ ಶೇ.30ಕ್ಕೂ ಅಧಿಕ ಮಂದಿ ಯುವ ಜನತೆ ಇದೆ. ಆದರೆ ಒಲಿಂಪಿಕ್ಸ್‌ನಲ್ಲಿ ಮಾತ್ರ ನಮಗೆ ನಿರೀಕ್ಷಿತ ಪದಕಗಳು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Hima Das

OTHER SPORTSFeb 12, 2021, 11:10 AM IST

ದೇಶದ ಅಥ್ಲೀಟ್‌ ಸ್ಟಾರ್ ಅಥ್ಲೀಟ್‌ ಹಿಮಾದಾಸ್‌ ಈಗ ಅಸ್ಸಾಂನಲ್ಲಿ ಡಿಎಸ್‌ಪಿ!

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸುತ್ತ ಚಿತ್ತ ನೆಟ್ಟಿರುವ ಹಿಮದಾಸ್‌ಗೆ ಡಿಎಸ್‌ಪಿ ಹುದ್ದೆ ನೀಡಿರುವ ಕುರಿತಂತೆ, ಓಟದ ರಾಣಿಗೆ ಅಸ್ಸಾಂ ಸರ್ಕಾರದ ನಿರ್ಧಾರ ಎಲ್ಲರೂ ಮೆಚ್ಚುವಂತಹದ್ದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kiren Rijiju

OTHER SPORTSDec 23, 2020, 12:25 PM IST

ಬೆಂಗ್ಳೂರಲ್ಲಿ ಖೇಲೋ ಇಂಡಿಯಾ ಉತ್ಕೃಷ್ಟತಾ ಕೇಂದ್ರ

ಬೆಂಗಳೂರಿನ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರ ಸೇರಿದಂತೆ ಭಾರತದ 8 ರಾಜ್ಯಗಳ ಕ್ರೀಡಾ ಕೇಂದ್ರಗಳಿಗೆ ಈ ಮಾನ್ಯತೆ ನೀಡಿರುವುದನ್ನು ಘೋಷಿಸಲಾಯಿತು. ಜಯ ಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಈಜು, ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳ ತರಬೇತಿ ನೀಡಲಾಗುವುದು.

Kiren Rijiju

OTHER SPORTSDec 9, 2020, 9:05 AM IST

ದೇಶದಲ್ಲಿ 1000 ಖೇಲೋ ಇಂಡಿಯಾ ಸ್ಥಾಪನೆ: ರಿಜಿಜು

‘ನಿವೃತ್ತ ಕ್ರೀಡಾಪಟುಗಳು ಕೋಚ್‌ ಇಲ್ಲವೇ ಇತರ ಹುದ್ದೆಗಳನ್ನು ನಿರ್ವಹಿಸುವ ಮೂಲಕ ದೇಶದಲ್ಲಿ ಕ್ರೀಡಾ ಸಂಸ್ಕೃತಿ ರೂಪುಗೊಳ್ಳಲು ನೆರವು ನೀಡಲು ಈ ಯೋಜನೆ ಅನುಕೂಲವಾಗಲಿದೆ. ಕ್ರೀಡಾಪಟುಗಳು ಸಂಕಷ್ಟದಲ್ಲಿರುವುದನ್ನು ಕಂಡು ಯುವ ಪೀಳಿಗೆ ಕ್ರೀಡೆಯತ್ತ ಆಸಕ್ತಿ ತೋರುವುದಿಲ್ಲ. ಹೀಗಾಗಿ ಕ್ರೀಡಾಪಟುಗಳಿಗೆ ಘೋಷಣೆಯಾಗುವ ಆರ್ಥಿಕ ನೆರವು ನೇರವಾಗಿ ಅವರಿಗೇ ತಲುಪುವಂತೆ ಮಾಡಲು ಸಚಿವಾಲಯ ಶ್ರಮಿಸುತ್ತಿದೆ’ ಎಂದು ರಿಜಿಜು ಹೇಳಿದ್ದಾರೆ.

• Kiren Rijiju

IndiaSep 11, 2020, 11:15 PM IST

ಬಗ್ಗಲೇಬೇಕು ಚೀನಾ, ನಾಪತ್ತೆಯಾಗಿದ್ದ ಯುವಕರು ಸುರಕ್ಷಿತವಾಗಿ ತವರಿಗೆ!

ನಾಪತ್ತೆಯಾಗಿ ಚೀನಾದ ಒಳಕ್ಕೆ ಸೇರಿಕೊಂಡಿದ್ದ ಭಾರತದ ಐವರು ಯುವಕರು ಶನಿವಾರ ಸುರಕ್ಷಿತವಾಗಿ ತಾಯಿನಾಡಿಗೆ ಹಿಂದಿರುಗಲಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟ್ ಮಾಡಿ ಮಾಹಿತಿ ನೀಡಿದ್ದಾರೆ.