ಕಿಮ್ಸ್‌

(Search results - 43)

KIMS,Hubli, hospital

Video Icon

state1, Aug 2020, 12:31 PM

ಕಿಮ್ಸ್‌ನಲ್ಲಿ ವೆಂಟಿಲೇಟರ್ ಸಂಪೂರ್ಣ ಭರ್ತಿ; ಮುಂದುವರೆದ ರೋಗಿಗಳ ಪರದಾಟ

ಒಂದು ಕಡೆ ಕೊರೊನಾ ಆರ್ಭಟವಾದರೆ ಇನ್ನೊಂದು ಕಡೆ ರೋಗಿಗಳ ಸಂಕಟ ಹೇಳ ತೀರದು. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೆಂಟಿಲೇಟರ್ ಸಂಪೂರ್ಣವಾಗಿ ಭರ್ತಿ ಆಗಿದೆ. 32  ವೆಂಟಿಲೇಟರ್‌ ಭರ್ತಿಯಾಗಿದ್ದು, ವೆಂಟಿಲೇಟರ್ ಭರ್ತಿಯಾಗಿದೆ ಅಂತ ಆಸ್ಪತ್ರೆ ಬೋರ್ಡ್ ಹಾಕಿದೆ. 40 ವೆಂಟಿಲೇಟರ್‌ಗೆ ಕಿಮ್ಸ್ ಬೇಡಿಕೆ ಇಟ್ಟಿದ್ದು ಆ ಪೈಕಿ 32 ವೆಂಟಿಲೇಟರ್‌ಗಳನ್ನು ಆರೋಗ್ಯ ಇಲಾಖೆ ನೀಡಿದೆ. ತೀವ್ರ ಉಸಿರಾಟದ ಸಮಸ್ಯೆ ಎದುರಾದರೆ ವೆಂಟಿಲೇಟರ್ ಮಾತ್ರ ಇಲ್ಲದಂತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

Karnataka Districts1, Aug 2020, 11:16 AM

ಕೊರೋನಾದಿಂದ ಸಾವು ಹೆಚ್ಚಳಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ..?

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವ ಜತೆಗೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಿಂದ ಈಚೆಗೆ ನಿತ್ಯ 5 ರಿಂದ 8 ಜನರು ಬಲಿಯಾಗುತ್ತಿದ್ದಾರೆ. ಸಾವಿನ ಸಂಖ್ಯೆಯಲ್ಲಿನ ಏರಿಕೆಗೆ ರಾಜ್ಯ ಸರ್ಕಾರದ ನಿಷ್ಕಾಳಜಿಯೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

• Karnataka Districts26, Jul 2020, 12:28 PM

ಹುಬ್ಬಳ್ಳಿ: 13 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ, ಗುಣಮುಖ

ಇಲ್ಲಿನ ಕಿಮ್ಸ್‌ನಲ್ಲಿ ಈ ವರೆಗೆ 13 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ಈಗಾಗಲೇ ಐವರು ಗುಣಮುಖ ಹೊಂದಿದ್ದಾರೆ.

swab

Karnataka Districts24, Jul 2020, 10:01 AM

ಹುಬ್ಬಳ್ಳಿ: KIMSನಲ್ಲಿ ಕೊರೋನಾ ಟೆಸ್ಟ್‌ ಸ್ಥಗಿತ, ಮುಂದುವರಿದ ಪರದಾಟ

ಇಲ್ಲಿನ ಕಿಮ್ಸ್‌ ಹಾಗೂ ಚಿಟಗುಪ್ಪಿಯಲ್ಲಿ ಸ್ವ್ಯಾಬ್‌ ಟೆಸ್ಟ್‌ ಜು. 26ರ ವರೆಗೆ ಸ್ಥಗಿತಗೊಳಿಸಿರುವುದರಿಂದ ಕೊರೋನಾ ಭೀತಿಗೆ ಒಳಗಾದವರ ಆತಂಕ ಮುಂದುವರಿದಿದೆ. ಸ್ಯಾನಿಟೈಸಿಂಗ್‌ ಮಾಡಬೇಕಿರುವ ನೆಪ ಹೇಳಿಕೊಂಡು ಗಂಟಲು ದ್ರವ ಸಂಗ್ರಹಣೆಯನ್ನು ಇವೆರಡು ಕಡೆಗಳಲ್ಲಿ ಕಳೆದ ಜು. 20ರಿಂದ ನಿಲ್ಲಿಸಲಾಗಿದೆ.

Coronavirus

Karnataka Districts16, Jul 2020, 7:12 AM

ಹುಬ್ಬಳ್ಳಿ: ಕೊರೋನಾ ಚಿಕಿತ್ಸೆ ಫಲಿಸದೆ ಎಎಸ್‌ಐ ಸಾವು

ಕಳೆದ ಒಂದು ವಾರದಿಂದ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಲ್ಲಿನ ವಿದ್ಯಾನಗರ ಪೊಲೀಸ್‌ ಅಧಿಕಾರಿಯೊಬ್ಬರು ಕೋವಿಡ್‌-19ನಿಂದ ಮೃತಪಟ್ಟಿದ್ದು, ಇದು ಧಾರವಾಡ ಜಿಲ್ಲೆಯಲ್ಲಿ ಕೊರೋನಾ ವಾರಿಯರ್‌ ಒಬ್ಬರು ಬಲಿಯಾದ ಮೊದಲ ಪ್ರಕರಣ ಎನಿಸಿದೆ.

Coronavirus

Karnataka Districts29, Jun 2020, 7:09 AM

ಹುಬ್ಬಳ್ಳಿ: ಕೊರೋನಾ ಪಾಸಿಟಿವ್‌ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!

ಕೋವಿಡ್‌ ಪಾಸಿಟಿವ್‌ ಸೋಂಕು ಕಾಣಿಸಿಕೊಂಡಿರುವ, ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ತುಂಬು ಗರ್ಭಿಣಿಗೆ (ಪಿ-10800, 25 ವರ್ಷ) 39 ವಾರಗಳು ಹಾಗೂ 4 ದಿನಗಳು ಪೂರ್ಣಗೊಂಡಿದ್ದರೂ ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದುದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್‌ ವೈದ್ಯರ ತಂಡ ಯಶಸ್ವಿಯಾಗಿದೆ.

Coronavirus

Video Icon

state22, Jun 2020, 1:04 PM

ವಾರಿಯರ್ಸ್‌ಗೆ ಕೋವಿಡ್ 19 ಕಾಟ; ಇಬ್ಬರು ವೈದ್ಯರಿಗೆ ಪಾಸಿಟೀವ್

ಕೊರೊನಾ ವಾರಿಯರ್ಸ್‌ಗೂ ಕೋವಿಡ್ 19 ಬೆನ್ನತ್ತಿದೆ. ಜಯದೇವ ಆಸ್ಪತ್ರೆಯ ಒಬ್ಬ ವೈದ್ಯರಿಗೆ, ಕಿಮ್ಸ್‌ನ ಇಬ್ಬರು ವೈದ್ಯರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಅವರ ಬಳಿ ಚಿಕಿತ್ಸೆ ಪಡೆದವರಿಗೆ ಆತಂಕ ಶುರುವಾಗಿದೆ. ಒಂದು ಕಡೆ ಹೆಚ್ಚಾಗುತ್ತಿರುವ ಕೊರೊನಾ ಕೇಸ್‌ಗಳು, ಇನ್ನೊಂದು ಕಡೆ ಕೊರೊನಾ ವಾರಿಯರ್ಸ್‌ಗೆ ಸೋಂಕು ತಗುಲುತ್ತಿರುವುದು ಆತಂಕ ಹೆಚ್ಚಿಸಿದೆ.

Coronavirus

Karnataka Districts21, Jun 2020, 7:08 AM

ಹುಬ್ಬಳ್ಳಿ: KIMS ಡಾಕ್ಟರ್‌ಗೂ ಅಂಟಿದ ಮಹಾಮಾರಿ ಕೊರೋನಾ ಸೋಂಕು

ಕೊರೋನಾ ವಾರಿಯರ್ಸ್‌ ಆಗಿರುವ ಕಿಮ್ಸ್‌ನ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ದೃಢವಾಗಿದ್ದು, ನಿನ್ನೆಯಿಂದಲೇ ಅವರನ್ನು ಕಿಮ್ಸ್‌ ಕೋವಿಡ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Coronavirus

Karnataka Districts18, Jun 2020, 7:22 AM

ಹುಬ್ಬಳ್ಳಿ: ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಸಕ್ಸಕ್‌, ಕೊರೋನಾ ರೋಗಿ ಡಿಸ್ಚಾರ್ಜ್‌

ಕೊರೋನಾ ಸೋಂಕಿತನನ್ನು ಪ್ಲಾಸ್ಮಾ ಥೆರಪಿ ಮೂಲಕ ಗುಣಪಡಿಸಿದ ರಾಜ್ಯದ ಮೊದಲ ಪ್ರಕರಣಕ್ಕೆ ಇದೀಗ ಕಿಮ್ಸ್‌ ಸಾಕ್ಷಿಯಾಗಿದೆ. ಇಲ್ಲಿ ಪ್ಲಾಸ್ಮಾ ಚಿಕಿತ್ಸೆ ಪ್ರಾರಂಭಿಸಿದ ಬಳಿಕ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡಿದ್ದ 64 ವರ್ಷದ ಕೊರೋನಾ ಸೋಂಕಿತ ವೃದ್ಧ(ಪಿ 2710) ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಯಿತು. ಈ ಸಂದರ್ಭ ಧಾರವಾಡ ಜಿಲ್ಲಾ ಉಸ್ತುವಾರಿರೂ ಆಗಿರುವ ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೂಗುಚ್ಛ ನೀಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು.

Koppal

Karnataka Districts6, Jun 2020, 7:47 AM

ಕೋವಿಡ್‌ ವಿರುದ್ಧ ಹೋರಾಟ: ಕೊಪ್ಪಳದಲ್ಲಿ ಕೊರೋನಾ ಲ್ಯಾಬ್‌ ಆರಂಭ

ಇಲ್ಲಿ​ನ ಕಿಮ್ಸ್‌ನಲ್ಲಿ ಕೋವಿಡ್‌-19 ಸ್ಕ್ರೀನಿಂಗ್‌ ಪರೀಕ್ಷೆ ಹಾಗೂ ಆರ್‌ಟಿಪಿಸಿಆರ್‌ ಪ್ರಯೋಗಾಲಯದಿಂದ ಕೋವಿಡ್‌ ನೆಗೆಟಿವ್‌ ಮತ್ತು ಇತರೆ ಲಕ್ಷಣಗಳನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ್‌ ಹೇಳಿದರು.

Coronavirus

Karnataka Districts3, Jun 2020, 7:12 AM

ಧಾರವಾಡ: ಮಹಾಮಾರಿ ಕೊರೋನಾದಿಂದ 16 ಜನ ಗುಣಮುಖ, ಬಿಡುಗಡೆ

ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಜೂ. 1ರಂದು 5 ಜನ ಹಾಗೂ ಜೂ. 2ರಂದು 11 ಜನ ಸೇರಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 16 ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್‌ನಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

Plasma Therapy

Karnataka Districts2, Jun 2020, 12:58 PM

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಕೊರೋನಾ ಸೋಂಕಿತ ಗುಣಮುಖ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕೊರೊನಾ ಸೊಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ ವೈದ್ಯರು ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆದಿದ್ದಾರೆ.

Coronavirus

Karnataka Districts1, Jun 2020, 7:25 AM

ಹುಬ್ಬಳ್ಳಿ: ಕೊರೋನಾ ರೋಗಿಗೆ ಗ್ಯಾಂಗ್ರಿನ್‌, ಯಶಸ್ವಿ ಶಸ್ತ್ರಚಿಕಿತ್ಸೆ

ಕೊರೋನಾ ತಗುಲಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಗ್ಯಾಂಗ್ರಿನ್‌ ಕಾಣಿಸಿಕೊಂಡಿದ್ದ ರೋಗಿಯೊಬ್ಬರಿಗೆ ಇಲ್ಲಿನ ಕಿಮ್ಸ್‌ನಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

KIMS

Karnataka Districts30, May 2020, 7:39 AM

ಹುಬ್ಬಳ್ಳಿ: ಆಕ್ಸಿಜನ್‌ ಅಳವಡಿಸಿದ ಮಗು ಹೊತ್ತು ನಡೆದ ತಂದೆ, ಮನಕಲಕುವ ದೃಶ್ಯ ವೈರಲ್‌

ಇಲ್ಲಿನ ಕಿಮ್ಸ್‌ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಿದರ್ಶನ ಎಂಬಂತೆ ಇನ್ನೊಂದು ಚಿತ್ರಣ ಹೊರಬಂದಿದೆ. ಆಕ್ಸಿಜನ್‌ ಅಳವಡಿಸಿದ ಮಗುವನ್ನು ಸ್ಟ್ರೆಚರ್‌ ಸೌಲಭ್ಯ ಇಲ್ಲದ ಕಾರಣ ತಂದೆಯೇ ಹೊತ್ತುಕೊಂಡು ಮಕ್ಕಳ ವಾರ್ಡ್‌ಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

• Karnataka Districts30, May 2020, 7:25 AM

ಹುಬ್ಬಳ್ಳಿ: ನರ್ಸ್‌ಗಳ ಮೇಲೆ ದರ್ಪ, KIMS ಸಿಇಒ ವಿರುದ್ಧ ದೂರು

ಕೊರೋನಾ ವಾರಿಯರ್ಸ್‌ಗಳಾದ ದಾದಿಯರ ಮೇಲೆ ಕಿಮ್ಸ್‌ ಸಿಇಒ ರಾಜಶ್ರೀ ಜೈನಾಪುರ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಸರ್ಕಾರಿ ಶುಶ್ರೂಷಕರ ಸಂಘದ ಧಾರವಾಡ ವಿಭಾಗ ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅವರಿಗೆ ದೂರು ನೀಡಿದೆ.