ಕಾವೇರಿ ನದಿ  

(Search results - 61)
 • cauvery Flood

  News9, Oct 2019, 10:42 AM IST

  ಕಾವೇರಿ-ಗೋದಾವರಿ ಜೋಡಣೆಗೆ ಸಿದ್ಧತೆ

  ಆಂಧ್ರಪ್ರದೇಶ-ತೆಲಂಗಾಣದಲ್ಲಿ ಹರಿಯುವ ಗೋದಾವರಿ ಹಾಗೂ ಕರ್ನಾಟಕ-ತಮಿಳುನಾಡಿನಲ್ಲಿ ಹರಿಯುವ ಕಾವೇರಿ ನದಿಗಳನ್ನು ಜೋಡಿಸಲು ಕೇಂದ್ರ ಸರ್ಕಾರ ವಿಸ್ತೃತ ಯೋಜನಾ ವರದಿ ಸಿದ್ಧ ಮಾಡುತ್ತಿರುವುದಾಗಿ ತಮಿಳುನಾಡು ಸಿಎಂ ತಿಳಿಸಿದ್ದಾರೆ. 

 • pitru paksha 2

  Karnataka Districts28, Sep 2019, 12:17 PM IST

  ಕಾವೇರಿ ನದಿ ತಟದಲ್ಲಿ ಆಸ್ತಿಕರಿಂದ ಪಿತೃಪಕ್ಷ ಪೂಜೆ

  ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಕಾವೇರಿ ತಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಜನ ತಮ್ಮ ಪೂರ್ವಜರಿಗಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ತಿಲತರ್ಪಣಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಶ್ರೀರಂಗಪಟ್ಟಣಕ್ಕೆ ಜನ ಆಗಮಿಸಿದ್ದಾರೆ.

 • Sadguru - Jaggi Vasudev
  Video Icon

  NEWS8, Sep 2019, 12:09 PM IST

  ಕಾವೇರಿ ಕೂಗು ; ಸುವರ್ಣ ನ್ಯೂಸ್ ಜೊತೆ ಸದ್ಗುರು ಮಾತುಕತೆ

  ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌  ‘ಕಾವೇರಿ ಕೂಗು’ ಎಂಬ ವಿಶಿಷ್ಟ ಆಂದೋಲನವನ್ನು ಹುಟ್ಟು ಹಾಕಿದ್ದಾರೆ.  ಇದು ಕಾವೇರಿ ಕೂಗು ಮಾತ್ರವಲ್ಲ. ಇದು ಎಲ್ಲ ನದಿಗಳ ಕೂಗು ಹೌದು. ನದಿ ನೀರಿಗಾಗಿ ರೈತರ ಕೂಗೂ ಹೌದು. ಕುಡಿವ ನೀರಿಗಾಗಿ ಪಟ್ಟಣದ ಜನರ ಕೂಗು ಹೌದು. ಬೆಳೆದ ಬೆಳೆಗೆ ಬೆಲೆಯಿಲ್ಲದೇ ಕಂಗಾಲಾಗಿರುವ ರೈತರ ದಯನೀಯ ಕೂಗೂ ಹೌದು. ದೇಶಾದ್ಯಂತ ನದಿಗಳು ಬತ್ತುತ್ತಿವೆ. ಕಾವೇರಿ ನದಿಯಂತೂ ವರ್ಷದ ಆರು ತಿಂಗಳು ಒಣಗಿ ಸಮುದ್ರವನ್ನೇ ಸೇರುವುದಿಲ್ಲ. ಈ ನದಿ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕದನಗಳಾಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಬಗ್ಗೆ ಜಗ್ಗಿ ವಾಸುದೇವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿ ಸದ್ಗುರು - ಸುವರ್ಣ ನ್ಯೂಸ್ ಮಾತುಕತೆ. 

 • planting

  Karnataka Districts7, Sep 2019, 8:22 AM IST

  ಕಾವೇರಿ ನದಿ ತಟದಲ್ಲಿ ಸಸಿ ನೆಡಲು ನೀಲನಕ್ಷೆ

  ಮಂಡ್ಯ ಜಿಲ್ಲೆಯ ಕಾವೇರಿ ನದಿ ಸೇರಿ ಇತರ ಉಪನದಿಗಳ ತಟದಲ್ಲಿ ಗಿಡನೆಡುವ ಬಗ್ಗೆ ನೀಲನಕ್ಷೆ ತಯಾರಿಸಲು ಮಂಡ್ಯ ಜಿಲ್ಲಾಡಳಿತ ನಿರ್ಧರಿಸಿದೆ. ಕಾವೇರಿ ನದಿಯೂ ಸೇರಿದಂತೆ ಉಪನದಿಗಳ ತಟದಲ್ಲಿ ಹಾಗೂ ಕೋರಿಕೆ ಇರುವ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲು ಜಿಲ್ಲಾಡಳಿತ ನೀಲನಕ್ಷೆಯೊಂದನ್ನು ತಯಾರಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ

 • Kaveri River

  Karnataka Districts6, Sep 2019, 12:04 PM IST

  ಕೊಡಗು: ಅಪಾಯ ಮಟ್ಟ ಮೀರಿದ ಕಾವೇರಿ ಹರಿವು

  ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ಅಪಾಯದ ಮಟ್ಟಮೀರಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಈಗಾಗಲೇ ಮಡಿಕೇರಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜನರು ಜಾಗೃತೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

 • CMB order to open additional water

  Karnataka Districts6, Sep 2019, 8:24 AM IST

  KRS ಒಳಹರಿವು ಹೆಚ್ಚಳ: ತ. ನಾಡಿಗೆ ಮತ್ತೆ 43 ಸಾವಿರ ಕ್ಯುಸೆಕ್ ನೀರು

  ಕೃಷ್ಣ ರಾಜಸಾಗರ ಆಣೆಕಟ್ಟೆಭರ್ತಿಯಾದ ನಂತರವೂ ಭಾರಿ ಪ್ರಮಾಣದ ನೀರು ಆಣೆಕಟ್ಟೆಗೆ ಹರಿದು ಬಂದಿದೆ. ಹೀಗಾಗಿ ಆಣೆಕಟ್ಟೆಹೆಚ್ಚುವರಿ ನೀರನ್ನು ಮತ್ತೆ ಕಾವೇರಿ ನದಿಗೆ ಬಿಡಲಾಗಿದೆ. ಕೊಡಗಿನಲ್ಲಿ ಬಿರುಸಿನ ಮಳೆಯಾಗುತ್ತಿರುವ ಪರಿಣಾಮ ಕಾವೇರಿ ಪ್ರವಾಹ ಹೆಚ್ಚಾಗಿದ್ದು, KRS ಒಳ ಹರಿವು ಹೆಚ್ಚಾಗಿದೆ.

 • Harangi Reservoir

  Karnataka Districts5, Sep 2019, 1:20 PM IST

  ಮಡಿಕೇರಿ: ಕಾವೇರಿ ನೀರಿನ ಮಟ್ಟ ಹೆಚ್ಚಳ, ನದಿತಟದ ಜನರೇ ಜೋಪಾನ

  ಕರಾವಳಿ ಸೇರಿ ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರ ಹೆಚ್ಚಾಗಿದ್ದು, ಕಾವೇರಿ ನದಿಯಲ್ಲಿ ನೀರಿನ ಪ್ರವಾಹವೂ ಹೆಚ್ಚಾಗಿದೆ. ಹಾರಂಗಿ ಜಲಾಶಯದಿಂದ 15000 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದು, ತಗ್ಗು ಪ್ರದೇಶಗಳಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ.

 • jaggi vasudev

  NEWS28, Aug 2019, 10:47 AM IST

  ಮರ ನೆಟ್ಟು 3 ಪಟ್ಟು ಲಾಭ ಗಳಿಸಿ, ಕಾವೇರಿ ಉಳಿಸಿ

   ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು ‘ಕಾವೇರಿ ಕೂಗು’ ಎಂಬ ವಿಶಿಷ್ಟಆಂದೋಲನದ ಮೂಲಕ ಒಂದೇ ಏಟಿಗೆ ಮೂರು ಗುರಿಯನ್ನು ಹೊಡೆಯುತ್ತಿದ್ದಾರೆ. ಆ ಗುರಿಗಳೇನು ಎನ್ನುವುದನ್ನು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 • Belagavi panthers

  SPORTS22, Aug 2019, 12:33 PM IST

  KPL ಕ್ರಿಕೆಟ್: ನೆರೆ ಸಂತ್ರಸ್ತರಿಗೆ ಬೆಳಕಾದ ಬೆಳಗಾವಿ ಪ್ಯಾಂಥರ್ಸ್!

  ಬೆಂಗಳೂರು(ಆ.22): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಈ ಬಾರಿ ಹಲವು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದೆ. ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿ ನದಿ ಪುನಶ್ಚೇತನ ಹಾಗೂ ಪ್ರವಾಹದಲ್ಲಿ ಕೊಚ್ಚಿ ಹೋದ ಜನರ ಬದುಕನ್ನು ಮತ್ತೆ ಕಟ್ಟಿ ಕೊಡಲು ಮುಂದಾಗಿದೆ. ಫ್ರಾಂಚೈಸಿ ಕೂಡ ತಮ್ಮದೇ ಆದ ರೀತಿಯಲ್ಲಿ ನೆರ ಸಂತ್ರಸ್ತರಿಗೆ ನೆರವು ನೀಡುತ್ತಿದೆ. ಈ ಬಾರಿ ರಣಭೀಕರ ಮಳೆಗೆ ಬೆಳಗಾವಿ ತತ್ತರಿಸಿದೆ. ಪ್ರವಾಹದಲ್ಲಿ ಬೆಳಗಾವಿ ಜನತೆ ಮನೆಗಳು ಕೊಚ್ಚಿ ಹೋಗಿವೆ. ಇದೀಗ KPL ಟೂರ್ನಿಯ ಬೆಳಗಾವಿ ಪ್ಯಾಂಥರ್ಸ್ ತಂಡ ನೆರ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸೋ ಮೂಲಕ ನೆರವು ನೀಡಿದೆ.

 • Kaveri River

  Karnataka Districts21, Aug 2019, 8:53 AM IST

  ಮಂಡ್ಯ: ಕಾವೇರಿ ನದಿ ತಡೆಗೋಡೆಗೆ ಪ್ರಸ್ತಾವನೆ ಸಲ್ಲಿಕೆ

  ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯ ಎರಡೂ ಬದಿಗೂ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ನದಿಯ ಎರಡೂ ಬದಿಯಲ್ಲಿ ಸುಮಾರು ಎರಡು ಕಿ.ಮೀ ಉದ್ದ ತಡೆಗೋಡೆ ನಿರ್ಮಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. 75 ಕೋಟಿ ರು. ಅಂದಾಜು ಯೋಜನಾ ವರದಿಯೂ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಯೋಗೇಶ್‌ ತಿಳಿಸಿದ್ದಾರೆ.

 • KRS

  Karnataka Districts19, Aug 2019, 11:35 AM IST

  ಕನ್ನಂಬಾಡಿಯ ಭದ್ರತೆಗೆ ಆತಂಕ : ಬಿತ್ತು ಬೀಗ ಮುದ್ರೆ

  ಆರ್‌ಎಸ್‌ ಅಣೆ ಕಟ್ಟೆ ಭದ್ರತೆ ಒದಗಿಸುವ ಉದ್ದೇಶದಿಂದ ಬೇಬಿ ಬೆಟ್ಟದ ಕಾವಲ್ ಪ್ರದೇಶದ ಗಣಿಗಾರಿಕೆ ಮತ್ತು ಕ್ರಷರ್‌ಗಳಿಗೆ ಬೀಗ ಹಾಕಲಾಗಿದೆ. 

 • KRS

  Karnataka Districts17, Aug 2019, 11:21 AM IST

  ಕೆಆರ್‌ಎಸ್‌ನಲ್ಲಿ ಭಾರಿ ಶಬ್ಧ : ಎದುರಾಗಿದೆ ಆತಂಕ

  ಮಂಡ್ಯದ KRS ಡ್ಯಾಂನಲ್ಲಿ ಭಾರೀ ಶಬ್ದವೊಂದು ಕೇಳಿ ಬಂದಿದ್ದು ಇದರಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ. ಈ ಶಬ್ಧ ಹಲವು ದಿನಗಳಿಂದಲೂ ಕೇಳುತ್ತಿದ್ದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 

 • KRS

  Karnataka Districts16, Aug 2019, 1:09 PM IST

  ಕೆಆರ್‌ಎಸ್‌ ಸಂಪೂರ್ಣ ಭರ್ತಿ, ನಾಲೆಗೂ ನೀರು

  ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾವೇರಿ ನದಿ ಹಾಗೂ, ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ನಾಲೆಗಳಿಗೆ ನೀರು ಹರಿಸದೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದ್ದು, ಇದನ್ನು ರೈತರು ತೀವ್ರವಾಗಿ ಖಂಡಿಸಿದ್ದರು. ಇದೀಗ ಜಲಾಶಯ ಭರ್ತಿಯಾಗಿದ್ದು, ಕಾವೇರಿ ನದಿಗೂ, ನಾಲೆಗಳಿಗೂ ನೀರು ಬಿಡಲಾಗಿದೆ.

 • cauvery river

  Karnataka Districts15, Aug 2019, 8:16 AM IST

  ಮಂಡ್ಯ: ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖ

  ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಸಂಪೂರ್ಣ ಇಳಿಮುಖವಾಗಿದೆ. ಕಳೆದ ಮೂರು - ನಾಲ್ಕು ದಿನಗಳಿಂದ ಪ್ರವಾಹ ಪರಿಸ್ಥಿತಿಯಿಂದ ನದಿ ಪಾತ್ರದ ಹಳ್ಳಿಗಳು ಜಲಾವೃತಗೊಂಡು ಸಾಕಷ್ಟುಹಾನಿ ಸಂಭವಿಸಿತ್ತು. ಈಗ ಪರಿಸ್ಥಿತಿ ತಿಳಿಗೊಂಡಿದೆ. ಜನ ಜೀವನ ಕೂಡ ತಹಬದಿಗೆ ಬಂದಿದೆ.

 • Sumalatha vs DC Thammanna

  Karnataka Districts11, Aug 2019, 1:16 PM IST

  ಮುಖ್ಯಮಂತ್ರಿಗಳಿಂದ ಸಿಕ್ಕಿದೆ ಅಭಯ : ಮಂಡ್ಯ ಸಂಸದೆ ಸುಮಲತಾ

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ಸ್ವ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಜನರ ಸಮಸ್ಯೆ ಆಲಿಸಲು ಜಿಲ್ಲಾ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ.