ಕವಲುದಾರಿ  

(Search results - 13)
 • Actor rishi wedding
  Video Icon

  Sandalwood22, Nov 2019, 4:42 PM

  'ಕವಲುದಾರಿ' ರಿಷಿ ಮದುವೆಗೆ ಬಂದಿದ್ರು ಇವರು..

   

  'ಆಪರೇಷನ್ ಅಲಮೇಲಮ್ಮ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಿಷಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ನವೆಂಬರ್ 10ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದಾಂಪತ್ಯಕ್ಕೆ ಕಾಲಿಟ್ಟವರು, ನವೆಂಬರ್ 20ರಂದು ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಈ ವೇಳೆ ಸ್ಯಾಂಡಲ್‌ವುಡ್ ಗಣ್ಯರು ಪಾಲ್ಗೊಂಡು ಕಾಣಿಸಿಕೊಂಡಿದ್ದು ಹೀಗೆ....

 • Rishi wedding

  Sandalwood11, Nov 2019, 12:25 PM

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕವಲುದಾರಿ' ರಿಷಿ!

   

  'ಆಪರೇಷನ್ ಅಲಮೇಲಮ್ಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟ ರಿಷಿ ಬಹುದಿನಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 • Kavaludaari Anant Nag

  ENTERTAINMENT27, Apr 2019, 10:02 AM

  ಕವಲುದಾರಿ ಗಳಿಸಿದ್ದು 6 ಕೋಟಿ: ಅನಂತ್‌ನಾಗ್‌

  - ಹೀಗೊಂದು ಪ್ರಶ್ನೆ ಎದುರಾಗಿದ್ದು ನಿರ್ದೇಶಕ ಹೇಮಂತ್‌ರಾವ್‌ ಅವರಿಗೆ. ಅದು ‘ಕವಲುದಾರಿ’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಟಿ. ಇಡೀ ಚಿತ್ರತಂಡ ಹಾಜರಿತ್ತು. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾಗಿ ಹೇಳಿಕೊಳ್ಳುತ್ತಿರುವಾಗಲೇ, ‘ಹಾಗಾದರೆ ಇಷ್ಟುದಿನದಲ್ಲಿ ಸಿನಿಮಾ ಮಾಡಿರುವ ಗಳಿಕೆ ಎಷ್ಟು’ ಎನ್ನುವುದಕ್ಕೆ ‘ವಿತರಕರಿಂದ ಇನ್ನೂ ಲೆಕ್ಕ ತೆಗೆದುಕೊಳ್ಳುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಕರೆಕ್ಟ್ ಲೆಕ್ಕ ಸಿಗುತ್ತದೆ. ಆದರೆ, ನಿರ್ಮಾಪಕರು ಹಾಗೂ ವಿತರಕರು ಫುಲ್‌ ಖುಷಿಯಾಗಿದ್ದಾರೆ’ ಎಂದಿದ್ದು ಹೇಮಂತ್‌

 • Rishi

  ENTERTAINMENT20, Apr 2019, 11:15 AM

  ಸ್ಯಾಂಡಲ್‌ವುಡ್ ನಟ ರಿಷಿ Engaged!

  ಸ್ಯಾಂಡಲ್ ವುಡ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ ನಟ ರಿಷಿ ತನ್ನ ಗರ್ಲ್ ಫ್ರೆಂಡ್ ಜೊತೆ ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 • undefined
  Video Icon

  Sandalwood16, Apr 2019, 2:03 PM

  ’ಕವಲುದಾರಿ’ ಯಶಸ್ಸಿನ ಬಗ್ಗೆ ಅನಂತ್‌ನಾಗ್ ಮಾತುಗಳನ್ನು ಕೇಳಲೇಬೇಕು!

  ’ಕವಲುದಾರಿ ’ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ ಹೇಮಂತ್‌ರಾವ್ ಅವರ ಎರಡನೆಯ ಸಿನಿಮಾ ಕವಲುದಾರಿ. ಮಹಾನಗರದ ಪರಿಸರದಲ್ಲಿ ತಂದೆ-ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮೊದಲ ಸಿನಿಮಾದಲ್ಲಿ ಅನ್ವೇಷಿಸಿದ ಹೇಮಂತ್, ಕವಲುದಾರಿ ಚಿತ್ರದಲ್ಲಿ ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹೇಮಂತ್‌ರಾವ್ ಈ ಸಿನಿಮಾವನ್ನು ಸವಿವರವಾಗಿ ಕಟ್ಟಿಕೊಡುತ್ತಾರೆ. 

  ಹಿರಿಯ ನಟ ಅನಂತ್ ನಾಗ್, ನಿರ್ದೇಶಕ ಹೇಮಂತ್ ರಾವ್ ಚಿತ್ರದ ಯಶಸ್ಸಿನ ಬಗ್ಗೆ ಸುವರ್ಣ ನ್ಯೂಸ್ ನಲ್ಲಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

   

 • undefined
  Video Icon

  Sandalwood15, Apr 2019, 9:38 AM

  ’ಕವಲುದಾರಿ’ ಗೆ ಸಪೋರ್ಟ್ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಪುನೀತ್

  ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ನಿರ್ಮಾಣದಲ್ಲಿ ಮೂಡಿಬಂದ ಮೊದಲ ಚಿತ್ರ ಕವಲುದಾರಿ. ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಒಳ್ಳೆಯ ರಿವ್ಯೂ ಇದೆ. ಜನರ ರೆಸ್ಪಾನ್ಸ್ ನೋಡಿ ಪುನೀತ್ ಫುಲ್ ಖುಷ್ ಆಗಿದ್ದಾರೆ. ಸಪೋರ್ಟ್ ಮಾಡಿದ ಎಲ್ಲಾ ಸ್ಟಾರ್ ಗಳಿಗೆ ಪುನೀತ್ ಥ್ಯಾಂಕ್ಸ್ ಹೇಳಿದ್ದಾರೆ. ಸುವರ್ಣ ನ್ಯೂಸ್ ಪ್ರತಿನಿಧಿ ರೇವನ್ ಪಿ ಜೆವೂರ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ. 

 • Kavaludari

  Sandalwood14, Apr 2019, 12:44 PM

  ಮಸಾಲೆದೋಸೆ, ಮೈಸೂರು ಪಾಕ್ ತಿಂದು ಸಕ್ಸಸ್ ಸೆಲಬ್ರೇಟ್ ಮಾಡಿದ ’ಕವಲುದಾರಿ’

  ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ’ಕವಲುದಾರಿ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ. ಮಸಾಲೆ ದೋಸೆ, ಮೈಸೂರು ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಅನಂತ್ ನಾಗ್, ಪತ್ನಿ ಗಾಯತ್ರಿ, ನಿರ್ದೇಶಕ ಹೇಮಂತ್ ರಾವ್ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. 

 • Kavaludari

  Film Review12, Apr 2019, 5:29 PM

  ಈ ಕಾರಣಕ್ಕೆ ’ಕವಲುದಾರಿ’ ಅನಂತ್‌ನಾಗ್‌ಗೆ ಸ್ಪೆಷಲ್!

  ಹೇಮಂತ್ ರಾವ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ’ಕವಲುದಾರಿ’ ಚಿತ್ರ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಪ್ರೇಕ್ಷಕರ ಮನೆ ಗೆದ್ದಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 

 • Hemath Rao

  ENTERTAINMENT12, Apr 2019, 9:53 AM

  ಕವಲುದಾರಿಯಲ್ಲಿ ನಿರ್ದೇಶಕ ಹೇಮಂತ್ ರಾವ್ ಸಂದರ್ಶನ

  ಕನ್ನಡದ ಭರವಸೆಯ ನಿರ್ದೇಶಕ. ಹೆಸರು ಹೇಮಂತ್‌ ರಾವ್‌. ಇವರ ಪ್ರತಿಭೆಗೆ ಸಾಕ್ಷಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ. ಬಾಲಿವುಡ್‌ನ ಸೂಪರ್‌ಹಿಟ್‌ ಚಿತ್ರ ‘ಅಂಧಾದುನ್‌’ ಚಿತ್ರಕತೆಯಲ್ಲಿ ಇವರದೂ ಪಾಲಿಗೆ ಅನ್ನುವುದು ಇವರ ಹೆಗ್ಗಳಿಕೆ. ಇವರ ಬಹುನಿರೀಕ್ಷಿತ ‘ಕವಲುದಾರಿ’ ಇಂದು ಬಿಡುಗಡೆ. ಅವರ ಜತೆ ಮಾತುಕತೆ.

   

 • Kavaludari
  Video Icon

  Sandalwood9, Apr 2019, 1:59 PM

  ಡಿಫರೆಂಟ್ ಪ್ರಮೋಶನ್‌ನಲ್ಲಿ ’ಕವಲುದಾರಿ ’

  ವಿಭಿನ್ನ ರೀತಿಯ ಪ್ರಚಾರದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ  ಸಿನಿಮಾ. ಪವರ್ ಸ್ಟಾರ್ ಪುನೀತ್ ಅರ್ಪಿಸುತ್ತಿರುವ ಅವರ ಪತ್ನಿ ಅಶ್ವಿನಿ ನಿರ್ಮಾಣ ಕವಲುದಾರಿ ಸಿನಿಮಾ ಇದೇ ವಾರ ರಾಜ್ಯಾದ್ಯಂತ ರಿಲೀಸಾಗುತ್ತಿದೆ. ಇದರ ಪ್ರಚಾರವನ್ನು ಸ್ವಲ್ಪ ಡಿಫರೆಂಟಾಗಿ ಮಾಡಿದ್ದಾರೆ. ಏನಿದು ಡಿಫರೆಂಟ್? ನೀವೇ ನೋಡಿ. 

 • Puneeth rajkumar
  Video Icon

  Sandalwood30, Mar 2019, 5:03 PM

  ಪುನೀತ್ ಕಂಠಸಿರಿಯಲ್ಲಿ ಮೂಡಿ ಬಂದಿದೆ ಈ ಮೆಲೋಡಿಯಸ್ ಹಾಡು!

  ಅವರದ್ದೇ ಪ್ರೊಡಕ್ಷನ್ ನಲ್ಲಿ ಬರುತ್ತಿರುವ ಕವಲುದಾರಿ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ಹಾಡು ಹೇಳಿದ್ದಾರೆ. ಈ ಹಾಡಿನ ಮೇಕಿಂಗ್ ಎಲ್ಲಾ ಕಡೆ ವೈರಲ್ ಆಗ್ತಾಯಿದೆ. ಕಿರಿಕ್ ಕಾವೇರಪ್ಪ ಬರೆದ ಸಾಹಿತ್ಯಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಏಪ್ರಿಲ್ 12 ಕ್ಕೆ ಕವಲುದಾರಿ ಸಿನಿಮಾ ರಿಲೀಸಾಗುತ್ತಿದೆ. ಪುನೀತ್ ಹಾಡನ್ನು ನೀವೂ ಒಮ್ಮೆ ಕೇಳಿ. 

 • Suman Ranganathan

  ENTERTAINMENT26, Mar 2019, 8:51 AM

  ಕ್ಯಾಬರೆ ಹಾಡಿಗೆ ಸುಮನ್ ರಂಗನಾಥ್ ಸಖತ್ ಸ್ಟೆಪ್! ಅಭಿಮಾನಿಗಳು ಫುಲ್ ಫಿದಾ!

  ‘ಕವಲುದಾರಿ’ ಚಿತ್ರದ ಸುಮನ್‌ ರಂಗನಾಥ್‌ ನರ್ತಿಸಿರುವ ಕ್ಯಾಬರೆ ಶೈಲಿಯ ಹಾಡಿನ ಲಿರಿಕಲ್‌ವಿಡಿಯೋ ಸೋಮವಾರ ಸಂಜೆ ಸೋಷಲ್‌ ಮೀಡಿಯಾದಲ್ಲಿ ಬಿಡುಗಡೆ ಆಗಿದ್ದು, ಚಿತ್ರ ರಸಿಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಡುಗೆಂಪು ಬಣ್ಣದ ದಿರಿಸಿನಲ್ಲಿ ಮಿರಿಮಿರಿ ಮಿಂಚುತ್ತಿರುವ ಸುಮನ್‌ ರಂಗನಾಥ್‌, ‘ಖಾಲಿ ಖಾಲಿ ಅನಿಸೋ ಕ್ಷಣಕ್ಕೆ ..’ ಅಂತ ಹಾಡುತ್ತಾ ಭರ್ಜರಿ ಆಗಿ ಕುಣಿದಿದ್ದಾರಂತೆ.

 • Roshini Prakash

  ENTERTAINMENT25, Mar 2019, 9:58 AM

  ಸ್ಯಾಂಡಲ್‌ವುಡ್ ಗೆ ಕವಲುದಾರಿ ಮೂಲಕ ಬರುತ್ತಿದ್ದಾರೆ ರೋಶಿನಿ ಪ್ರಕಾಶ್!

  ಮೈಸೂರಿನ ಅಪ್ಪಟ ಕನ್ನಡದ ಪ್ರತಿಭಾವಂತ ನಟಿ ರೋಶಿನಿ ಪ್ರಕಾಶ್. ಆದರೂ ತೆಲುಗು, ತಮಿಳು ಚಿತ್ರಗಳಲ್ಲಿ ಓಡಾಡಿಕೊಂಡಿದ್ದವರು. ಸತೀಶ್ ನೀನಾಸಂ ಜತೆಗೆ ‘ಟೈಗರ್ ಗಲ್ಲಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಈ ಚಿತ್ರದ ನಂತರ ಅವರು ಒಪ್ಪಿಕೊಂಡ ಸಿನಿಮಾ ‘ಕವಲುದಾರಿ’. ಇನ್ನೇನು ಬಿಡುಗಡೆಯ ಹಂತಕ್ಕೆ ಬಂದಿರುವ ಈ ಚಿತ್ರದ ಮೇಲೆ ರೋಶಿನಿ ಪ್ರಕಾಶ್ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ.