ಕಲಬುರಗಿ  

(Search results - 202)
 • Siddu

  Kalaburagi20, Oct 2019, 1:20 PM IST

  'ಸಿದ್ದರಾಮಯ್ಯಗೆ ಆತ್ಮವೂ ಇಲ್ಲ. ಆತ್ಮಸಾಕ್ಷಿಯೂ ಇಲ್ಲ'

  ವೀರಸಾವರ್ಕರ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಗುಲಗಂಜಿಯಷ್ಟೂ ಗೊತ್ತಿಲ್ಲ. ಅವರಿಗೆ ಸ್ವತಂತ್ರ ಹೋರಾಟದ ಗಾಳಿ ಗಂಧ ಗೊತ್ತಿಲ್ಲ. ಇನ್ನೊಮ್ಮೆ ಸ್ವಾತಂತ್ರ ಹೋರಾಟದ ಬಗ್ಗೆ ಓದಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.  

 • Kharge

  Kalaburagi19, Oct 2019, 1:13 PM IST

  ಮರಾಠಿಗರು ಬಿಜೆಪಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ'

  ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಮಹಾರಾಷ್ಟ್ರದಲ್ಲಿ ಒಳ್ಳೆಯ ಸ್ಥಿತಿ ಇದೆ, ನಾನು ಸಾಧ್ಯವಾದಷ್ಟು ಪ್ರಮುಖ ಸ್ಥಳದಲ್ಲಿ ಪ್ರಚಾರ ಮಾಡಿದ್ದೇನೆ. ರೈತರು ಸೇರಿದಂತೆ ಜನರು ಮಹಾರಾಷ್ಟ್ರದ ಬಿಜೆಪಿ ಸರ್ಕಾರ ವಿರುದ್ಧ ರೊಚ್ಚಿಗೆದ್ದಿದ್ದಾರೆ ಎಂದು ಕಾಂಗ್ರಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. 
   

 • Munnar road

  Kalaburagi18, Oct 2019, 1:04 PM IST

  ಚಿಂಚೋಳಿಯಲ್ಲಿ ಹದಗೆಟ್ಟ ರಸ್ತೆ: ವಾಹನ ಸಂಚಾರಕ್ಕೆ ಅಡ್ಡಿ

  ತಾಲೂಕಿನ ಭಾಲ್ಕಿ-ಹುಮನಾಬಾದ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕಕ್ಕಾಗಿ ಕಳೆದ ಒಂದು ವರ್ಷದ ಹಿಂದೆ ಕೋಟ್ಯಂತರ ರುಪಾಯಿಗಳಲ್ಲಿ ನಿರ್ಮಿಸಿದ ಡಾಂಬರೀಕರಣ ರಸ್ತೆ ಇದೀಗ ತುಂಬಾ ಹದಗೆಟ್ಟಿದೆ. 
   

 • BSY

  Kalaburagi18, Oct 2019, 11:33 AM IST

  ಗಾಣಗಾಪೂರದಲ್ಲಿ ದತ್ತಾತ್ರೇಯನ ದರ್ಶನ ಪಡೆದ ಯಡಿಯೂರಪ್ಪ

  ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ರಾಜ್ಯದ ಐತಿಹಾಸಿಕ ಯಾತ್ರಾ ಸ್ಥಳ ಅಫಜಲ್ಪುರದ ದೇವಲ್‌ ಗಾಣಗಾಪೂರಕ್ಕೆ ಭೇಟಿ ನೀಡಿ ದತ್ತಾತ್ರೇಯನ ದರ್ಶನ ಪಡೆದರು. 
   

 • govind karjol

  Kalaburagi18, Oct 2019, 11:07 AM IST

  ಬೆಂಗಳೂರಲ್ಲೇ ಸಭೆ ನಡೆಸಿದ್ರೆ ಹ್ಯಾಂಗ್ರಿ ಕಾರಜೋಳ ಸಾಹೇಬರೆ!

  ಕಲಬುರಗಿ ಕೆಡಿಪಿ ಸಭೆಗೆ ಕೊನೆಗೂ ಮುಹೂರ್ತ ಕೂಡಿ ಬರಲಿಲ್ಲ. 3 ತಿಂಗಳಿಗೊಮ್ಮೆ ನಡೆಯಬೇಕಿದ್ದ ಕರ್ನಾಟಕ ಪ್ರಗತಿ ಯೋಜನೆಗಳ ಪರಿಶೀಲನೆಯ ಈ ಸಭೆ ಆಡಳಿತ ಚುರುಕಿಗೆ ತುಂಬಾ ಮಹತ್ವದ್ದು. ಆದರೇನು ಮಾಡುವುದು ಕಲಬುರಗಿ ಮಂದಿ ದೌರ್ಭಾಗ್ಯ, ಬರೋಬ್ಬರಿ ವರ್ಷದ ನಂತರ ಕೆಡಿಪಿ ಸಭೆಗೆ ನಿಗದಿಯಾಗಿದ್ದ ದಿನಾಂಕವೂ ರದ್ದಾಗಿದ್ದರಿಂದ ಈ ಸಭೆ ಅನಿರ್ದಿಷ್ಟಾವಧಿವರೆಗೂ ಮುಂದೂಡಲ್ಪಟ್ಟಿದೆ.
   

 • BSY

  Kalaburagi17, Oct 2019, 8:33 PM IST

  ಬೇಸಿಗೆಗೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ 4 TMC ನೀರು: ಬಿಎಸ್‌ವೈ ದಿಟ್ಟ ಹೆಜ್ಜೆ

  ಬೇಸಿಗೆ ಸಂದರ್ಭದಲ್ಲಿ ರಾಜ್ಯದ ಗಡಿ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಡ್ರದಿಂದ ರಾಜ್ಯದ ಕೃಷ್ಣಾ ಮತ್ತು ಭೀಮಾ ನದಿಗೆ 4 ಟಿ.ಎಂ.ಸಿ ನೀರು ಬಿಡುಗಡೆಗೆ ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತಂತೆ ಚರ್ಚೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

 • Govind Karjol

  Kalaburagi17, Oct 2019, 12:04 PM IST

  'ಕೇಂದ್ರದಿಂದ ಮತ್ತಷ್ಟು ಪರಿಹಾರ ಬರುತ್ತೆ, ಆದರೆ ಕಾಯಬೇಕಷ್ಟೆ'

  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಇದು ಮಧ್ಯಂತರ ಪರಿಹಾರವಷ್ಟೆ, ಹೆಚ್ಚಿನ ಪರಿಹಾರ ಬರುತ್ತೆ, ಕಾಯಬೇಕಷ್ಟೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. 
   

 • Wedding

  Kalaburagi17, Oct 2019, 11:08 AM IST

  ಅಫಜಲ್ಪುರದಲ್ಲಿ ಸಾಮೂಹಿಕ ವಿವಾಹ: ಹಸೆಮಣೆ ಏರಿದ 51 ಜೋಡಿಗಳು

  ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಬಸವಲಿಂಗ ಶ್ರೀ ಮಠದಲ್ಲಿ ಯಾವುದೇ ಜಾತಿ ಭೇದ ಎನ್ನದೆ ನಾವೆಲ್ಲರು ಒಂದೇ ಜಾತಿ ಎಂಬಂತೆ ಹಿಂದು, ಮುಸ್ಲಿಂ ಸಮಾಜದ ಬಾಂಧವರು ಈ ಮಠದಲ್ಲಿ ಭೇದ ಭಾವ ವಿಲ್ಲದೆ ಅಣ್ಣ ತಮ್ಮಂದಿರಂತೆ ಮಠದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾವೈಕ್ಯತೆ ಸಂದೇಶ ಸಾರುತ್ತಿದ್ದಾರೆ. 
   

 • Bus

  Kalaburagi17, Oct 2019, 10:54 AM IST

  ಸ್ವಾತಂತ್ರ್ಯ ಸಿಕ್ಕು 7 ದಶಕಗಳು ಗತಿಸಿದ್ರೂ ಈ ಗ್ರಾಮಕ್ಕೆ ಬಸ್ಸೇ ಬಂದಿಲ್ಲ!

  ಸ್ವಾತಂತ್ರ್ಯ ಸಿಕ್ಕು 73 ವರ್ಷಗಳಾದರೂ ತಾಲೂಕಿನ ಭೀಮಾ ತೀರದ ಕುಗ್ರಾಮ ಕುಡಿಗನೂರು ಬಸ್ ಸೇವೆ ಕಂಡಿಲ್ಲ. ಈ ಗ್ರಾಮಕ್ಕೆ ತೆರಳಬೇಕಾದರೆ ಮುಳ್ಳು ಕಂಟಿಗಳ ಮಧ್ಯೆ ಹಾಯ್ದು ದುರ್ಗಮ ರಸ್ತೆಯಲ್ಲಿ ಸಂಚರಿಸಿ ನೆರೆಪೀಡಿತ ಗ್ರಾಮಕ್ಕೆ ನಡೆದುಕೊಂಡೇ ತೆರಳಬೇಕಾದ ಪರಿಸ್ಥಿತಿ ಇಲ್ಲಿದೆ. 
   

 • Kalaburagi16, Oct 2019, 1:26 PM IST

  ‘ಕೊನೆಗೂ ಕಲಬುರಗಿಗೆ ಬರಲು ಮನಸ್ಸು ಮಾಡಿದ ಕಾರಜೋಳ ಸಾಹೇಬರು’

   ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ಹೊತ್ತ ನಂತರ ಬರೋಬ್ಬರಿ 29  ದಿನಗಳ ನಂತರ ಡಿಸಿಎಂ ಗೋವಿಂದ ಕಾರಜೋಳ ಸಾಹೇಬರ ಚಿತ್ತ ಕಲಬುರಗಿ ಜಿಲ್ಲೆಯತ್ತ ನೆಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ (ಕಳೆದ ಸೆ.19 ರಂದು ಘೋಷಣೆ) ಇವರು ಒಮ್ಮೆಯೂ ಕಲಬುರಗಿ ಭೇಟಿ ನೀಡಿರಲಿಲ್ಲ. ಆದರೆ ಈಗ ಗೋವಿಂದ ಕಾರಜೋಳ ಅವರ ಜಿಲ್ಲಾ ಭೇಟಿ ಪ್ರವಾಸ ವಿವರ ಬಿಡುಗಡೆಯಾಗಿದ್ದು, ಅದರಂತೆ ಅವರು ಅ.17 ರಂದು ಕಲಬುರಗಿಗೆ ಭೇಟಿ ನೀಡುತ್ತಿದ್ದಾರೆ.

 • kanhaiya kumar

  Kalaburagi15, Oct 2019, 5:04 PM IST

  ಕಲಬುರಗಿಯಲ್ಲಿ ಮೋದಿ ವಿರುದ್ಧ ಗುಡುಗಿದ ಕನ್ಹಯ್ಯ ಕುಮಾರ್

  ಜೆ.ಎನ್.ಯು. ಮಾಜಿ ವಿದ್ಯಾರ್ಥಿ ಮುಖಂಡ, ಸಿಪಿಐ ನಾಯಕ ಕನ್ಹಯ್ಯ ಕುಮಾರ್, ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

 • Video Icon

  Kalaburagi15, Oct 2019, 3:53 PM IST

  ಕನ್ಹಯ್ಯ ಬರೋದು ಬೇಡ! 'ಕೃಷ್ಣ'ನ ಉಪನ್ಯಾಸಕ್ಕೆ 'ಶ್ರೀರಾಮ' ವಿರೋಧ!

  ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ನೀಡಲಾಗಿದ್ದ ಅನುಮತಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ ಹಿಂಪಡೆದಿದೆ. ನಿನ್ನೆಯಷ್ಟೇ  ಗುಲಬರ್ಗಾ ವಿಶ್ವವಿದ್ಯಾಲಯ ಷರತ್ತು ಬದ್ದ ಅನುಮತಿ ನೀಡಿತ್ತು, ಆದರೆ, ಕಳೆದ ಮಧ್ಯರಾತ್ರಿ ಏಕಾಏಕಿ ಅನುಮತಿ ನಿರಾಕರಿಸಿದೆ.

 • Kanhaiya Kumar

  Kalaburagi15, Oct 2019, 11:07 AM IST

  ಕಲಬುರಗಿ: ಕನ್ಹಯ್ಯ ಕುಮಾರ್ ಉಪನ್ಯಾಸ ದಿಢೀರ್ ರದ್ದು

  ಇಂದು ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎಡಪಂಥೀಯಧಾರೆಯ ಹೋರಾಟಗಾರ ಕನ್ಹಯ್ಯ ಕುಮಾರ್ ಅವರ ಉಪನ್ಯಾಸ ದಿಢೀರ್ ರದ್ದಾಗಿದೆ. 
   

 • baburao chinchansur

  Politics12, Oct 2019, 10:36 PM IST

  ಖರ್ಗೆ ಸೋಲಿಸಲು ಪಣತೊಟ್ಟು ಯಶಸ್ವಿಯಾದ ಚಿಂಚನಸೂರ್‌ಗೆ ಜಾಕ್ ಪಾಟ್

  ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆ ಸೋಲಿಸಲು ಪಣತೊಟ್ಟು ಕೊನೆಗೂ ಯಶಸ್ವಿ ಕಂಡ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರಿಗೆ ಬಿಎಸ್ ವೈ ನೇತೃತ್ವದ ಬಿಎಸ್ ವೈ ಸರ್ಕಾರ ಬಿಗ್ ಆಫರ್ ನೀಡಿದೆ. 

 • Kalaburagi11, Oct 2019, 12:39 PM IST

  'ಕೇಂದ್ರ ಪದೇ ಪದೇ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ'

  ಜನಪ್ರತಿನಿಧಿಗಳ ಮೇಲೆ ಉದ್ದೇಶಪೂರ್ವಕವಾಗಿ ಐಟಿ(ಆದಾಯ ತೆರಿಗೆ ಇಲಾಖೆ) ದಾಳಿ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಕಾಂಗ್ರೆಸ್‌ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿ ದ್ವೇಷದ ರಾಜಕಾರಣ ನಡಿಯುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.