ಕರ್ನಾಟಕ ರಣಜಿ ಟೀಂ  

(Search results - 29)
 • Video Icon

  SPORTS21, Aug 2019, 4:41 PM

  ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗೋದು ಅಷ್ಟು ಕಷ್ಟನಾ..?

  ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ. ಸಾಕಷ್ಟು ಬೆವರು ಹರಿಸಿದರೂ ಒಂದು ರಾಜ್ಯದಿಂದ ಒಬ್ಬರೋ-ಇಬ್ಬರೋ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯುವುದು ಈಗ ಸುಲಭದ ಮಾತಾಗಿ ಉಳಿದಿಲ್ಲ. ಹೀಗಾಗಿ ರಾಜ್ಯದ ಮೂವರು ಕ್ರಿಕೆಟಿಗರು ಇದೀಗ ಗುಳೆ ಹೊರಟಿದ್ದಾರೆ. ಇದರಲ್ಲಿ ದಾವಣಗೆರೆ ಎಕ್ಸ್’ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಕೂಡಾ ಇದ್ದಾರೆ ಎನ್ನುವುದು ಮಾತ್ರ ವಿಪರ್ಯಾಸ...

 • mayank-agarwal

  SPORTS15, Mar 2019, 9:37 AM

  ರಾಜ್ಯಕ್ಕೆ ಚೊಚ್ಚಲ ಮುಷ್ತಾಕ್ ಅಲಿ ಕಿರೀಟ

  ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ ಅಭಿಮನ್ಯು ಮಿಥುನ್‌, ಕೆ.ಸಿ.ಕರಿಯಪ್ಪ ಅವರ ಅತ್ಯಾಕರ್ಷಕ ಬೌಲಿಂಗ್‌ ನೆರವಿನಿಂದ ಮಹಾರಾಷ್ಟ್ರ ತಂಡವನ್ನು 4 ವಿಕೆಟ್‌ ನಷ್ಟಕ್ಕೆ 155 ರನ್‌ಗಳಿಗೆ ಕಟ್ಟಿಹಾಕಿತು.

 • SPORTS13, Mar 2019, 9:50 AM

  ಮುಷ್ತಾಕ್‌ ಅಲಿ ಟ್ರೋಫಿ: ಚೊಚ್ಚಲ ಬಾರಿಗೆ ಟಿ20 ಫೈನಲ್‌ಗೆ ಕರ್ನಾಟಕ!

  ಗುಂಪು ಹಂತದಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿದ್ದ ರಾಜ್ಯ ತಂಡ, ಸೂಪರ್‌ ಲೀಗ್‌ನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಜಯಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಮತ್ತೊಂದೆಡೆ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ 21 ರನ್‌ ಗೆಲುವು ಸಾಧಿಸಿದ ಮಹಾರಾಷ್ಟ್ರ, 4 ಪಂದ್ಯಗಳಿಂದ 16 ಅಂಕ ಗಳಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

 • SPORTS12, Mar 2019, 9:14 AM

  ಮುಷ್ತಾಕ್ ಅಲಿ ಟ್ರೋಫಿ: ಫೈನಲ್ ಹೊಸ್ತಿಲಲ್ಲಿ ಕರ್ನಾಟಕ

  ಸೂಪರ್ ಲೀಗ್ ಹಂತದ ‘ಬಿ’ ಗುಂಪಿನಲ್ಲಿರುವ ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದು 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ನೆಟ್ ರನ್‌ರೇಟ್ (+1.602) ಹೊಂದಿದೆ. ಇತ್ತ ವಿದರ್ಭ ತಂಡ ಕೂಡ 3 ಪಂದ್ಯಗಳನ್ನಾಡಿದ್ದು 2 ರಲ್ಲಿ ಗೆದ್ದು 1 ರಲ್ಲಿ ಸೋಲು ಕಂಡಿದೆ. ವಿದರ್ಭ ರನ್ ರೇಟ್(+1.166) ಪಡೆದಿದೆ.

 • Karnataka Ranji

  SPORTS11, Mar 2019, 9:55 AM

  ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಸತತ 10ನೇ ಗೆಲುವು

  ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟ ಮುಂದುವರಿದಿದೆ. ಲೀಗ್'ನಲ್ಲಿ 7 ಹಾಗೂ ಸೂಪರ್ ಲೀಗ್‌ನಲ್ಲಿ ಆಡಿದ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಕರ್ನಾಟಕ ತಂಡ, ಸತತ 10 ಜಯ ದಾಖಲಿಸಿದೆ.

 • Shreyas Gopal

  CRICKET3, Mar 2019, 11:46 AM

  ಮುಷ್ತಾಕ್‌ ಅಲಿ ಟಿ20: ಕರ್ನಾಟಕಕ್ಕೆ ಸಪ್ತ ಜಯದ ಸಂಭ್ರಮ!

  ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 42 ರನ್‌ ಜೊತೆಯಾಟ ಪಡೆದರೂ, ಬೃಹತ್‌ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

 • CRICKET25, Feb 2019, 10:48 AM

  ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ

  ದೊಡ್ಡ ಗುರಿ ಬೆನ್ನತ್ತಿದ ಅರುಣಾಚಲ ತಂಡ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಬ್ಯಾಟ್ಸ್‌ಮನ್ ಸಮರ್ಥ್ ಸೇಥ್ (49) ರನ್ ಹೊರತುಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತ ದಾಟಲಿಲ್ಲ. ಹೀಗಾಗಿ ಕರ್ನಾಟಕ ಅನಾಯಾಸವಾಗಿ ಗೆಲುವಿನ ಜಯ ದಾಖಲಿಸಿತು.

 • Vinay Kumar R

  CRICKET23, Feb 2019, 9:30 AM

  ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ 9 ವಿಕೆಟ್‌ ಗೆಲುವು

  ಸುಲಭ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಆರಂಭಿಕರಾದ ರೋಹನ್‌ ಕದಂ ಹಾಗೂ ಬಿ.ಆರ್‌.ಶರತ್‌ ಆಸರೆಯಾದರು. ಈ ಜೋಡಿ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 117 ರನ್‌ ಜೊತೆಯಾಟವಾಡಿ, ಗೆಲುವನ್ನು ಖಚಿತ ಪಡಿಸಿತು.

 • Pujara

  CRICKET28, Jan 2019, 11:20 AM

  ರಣಜಿ ಟ್ರೋಫಿ: ಕರ್ನಾಟಕದ ಫೈನಲ್ ಕನಸು ಭಗ್ನಗೊಳಿಸಿದ ಪೂಜಾರ

  ಚೇತೇಶ್ವರ್ ಪೂಜಾರ ಬರೋಬ್ಬರಿ 266 ಎಸೆತಗಳನ್ನು ಎದುರಿಸಿ 17 ಬೌಂಡರಿ ಸಹಿತ ಅಜೇಯ 131 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಲವು ಕೆಟ್ಟ ತೀರ್ಪುಗಳು ಕರ್ನಾಟಕಕ್ಕೆ ಮುಳುವಾಗಿ ಪರಿಣಮಿಸಿತು. ಫೈನಲ್ ಪಂದ್ಯವು ಫೆಬ್ರವರಿ 03ರಿಂದ ವಿದರ್ಭ ಹಾಗೂ ಸೌರಾಷ್ಟ್ರ ನಡುವೆ ನಡೆಯಲಿದ್ದು, ನಾಗ್ಪುರ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

 • pujara batting in ranji

  CRICKET28, Jan 2019, 9:01 AM

  ಅಂಪೈರ್ ಕೃಪಾಕಟಾಕ್ಷ: ಫೈನಲ್’ನತ್ತ ಸೌರಾಷ್ಟ್ರ; ಚೀಟಿಂಗ್ ಪೂಜಾರ..!

  ರಣಜಿ ಋುತುವಿನುದ್ದಕ್ಕೂ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಳಪೆ ಅಂಪೈರಿಂಗ್‌, ಸೆಮೀಸ್‌ನಲ್ಲೂ ಮುಂದುವರಿದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಔಟಾಗಿದ್ದರೂ ಅಂಪೈರ್‌ ಕೃಪಾಕಟಾಕ್ಷದಿಂದ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದ ಪೂಜಾರ, 2ನೇ ಇನ್ನಿಂಗ್ಸ್‌ನಲ್ಲೂ ಜೀವದಾನ ಪಡೆದರು. 

 • CRICKET27, Jan 2019, 8:14 AM

  ರಣಜಿ ಟ್ರೋಫಿ: ಸೌರಾಷ್ಟ್ರ ಮೇಲೆ ಬಿಗಿ ಹಿಡಿತ ಸಾಧಿಸಿದ ಕರ್ನಾಟಕ

  2ನೇ ದಿನದಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿದ್ದ ಸೌರಾಷ್ಟ್ರ, 3ನೇ ದಿನವಾದ ಶನಿವಾರ ಆ ಮೊತ್ತಕ್ಕೆ ಕೇವಲ 9 ರನ್‌ ಸೇರಿಸಲಷ್ಟೇ ಶಕ್ತವಾಯಿತು. ಧರ್ಮೇಂದ್ರ ಜಡೇಜಾ (3) ಹಾಗೂ ಜಯ್‌ದೇವ್‌ ಉನಾದ್ಕತ್‌ (0)ಗೆ ಮಿಥುನ್‌ ಪೆವಿಲಿಯನ್‌ ದಾರಿ ತೋರಿಸಿದರೆ, ಅರ್ಪಿತ್‌ ವಾಸವಾದ (30) ರೋನಿತ್‌ ಮೋರೆಗೆ ಬಲಿಯಾದರು

 • CRICKET26, Jan 2019, 10:43 AM

  ರಣಜಿ ಟ್ರೋಫಿ: ಕರ್ನಾಟಕಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ

  ಕರ್ನಾಟಕ ಪರ ರೋನಿತ್ ಮೋರೆ 6 ವಿಕೆಟ್ ಕಬಳಿಸಿದರೆ, ಮಿಥುನ್ 3 ಹಾಗೂ ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಆರ್ ಸಮರ್ಥ್ ವಿಕೆಟ್ ಕಳೆದುಕೊಂಡಿದೆ. 

 • Manish Pandey

  CRICKET24, Jan 2019, 5:18 PM

  ರಣಜಿ ಟ್ರೋಫಿ: ರಾಜ್ಯಕ್ಕೆ ಆಸರೆಯಾದ ಶ್ರೇಯಸ್-ಮನೀಶ್-ಶರತ್

  ಮೊದಲ 15 ಓವರ್’ಗಳಾಗುವಷ್ಟರಲ್ಲೇ ನಾಲ್ವರು ಬ್ಯಾಟ್ಸ್’ಮನ್’ಗಳು ಪೆವಲಿಯನ್ ಸೇರಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಜತೆಯಾದ ನಾಯಕ ಮನೀಶ್ ಪಾಂಡೆ ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ 106 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು.

 • mayank

  CRICKET22, Jan 2019, 11:28 AM

  ರಣಜಿ ಸೆಮೀಸ್‌: ರಾಜ್ಯ ತಂಡಕ್ಕೆ ಮಯಾಂಕ್‌ ಆಯ್ಕೆ

  ಕ್ವಾರ್ಟರ್’ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 6 ವಿಕೆಟ್’ಗಳಿಂದ ಮಣಿಸಿದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿತ್ತು.

 • karun nair

  CRICKET18, Jan 2019, 2:19 PM

  ರಣಜಿ ಟ್ರೋಫಿ: ಪಾಂಡೆ-ಕರುಣ್ ಭರ್ಜರಿ ಅರ್ಧಶತಕ: ಸೆಮೀಸ್’ಗೇರಿದ ಕರ್ನಾಟಕ

  ಮಹತ್ವದ ಪಂದ್ಯದಲ್ಲಿ ಜವಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕರುಣ್ ನಾಯರ್ 129 ಎಸೆತಗಳಲ್ಲಿ 6 ಬೌಂಡರಿ ಸಹಿತ ಅಜೇಯ 61 ರನ್ ಬಾರಿಸಿದರು. ಇನ್ನು ಸ್ಫೋಟಕ ಬ್ಯಾಟಿಂಗ್ ನಡೆಸಿದ ನಾಯಕ ಮನೀಷ್ ಪಾಂಡೆ ಕೇವಲ 75 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 87 ರನ್ ಬಾರಿಸಿ ಅಜೇಯರಾಗುಳಿದರು.