ಕರ್ನಾಟಕ ಬಜೆಟ್ 2020  

(Search results - 50)
 • DEVE

  Karnataka Districts6, Mar 2020, 2:58 PM

  ಬಜೆಟ್‌ಗೂ ನನಗೂ ಸಂಬಂಧ ಇಲ್ಲ: ದೇವೇಗೌಡ

  ಯಡಿಯೂರಪ್ಪ ಬಜೆಟ್ ಮಂಡನೆ ಬಗ್ಗೆ ಮಾತ‌ನಾಡಲು ಅವರಿದ್ದಾರೆ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌. ಡಿ. ದೇವೇಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಬಜೆಟ್ ಕುರಿತ ಪ್ರಶ್ನೆಗೆ ಅವರು ಏನು ಹೇಳಿದ್ರು..? ಇಲ್ಲಿ ಓದಿ

 • budget blog

  BUSINESS6, Mar 2020, 2:42 PM

  'ನಾಮ್‌ಕೇವಾಸ್ತೆ ಬಜೆಟ್, ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಅನ್ಯಾಯ'

  ರಾಜ್ಯ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮೊದಲು 371 (ಜೆ) ತಿರಸ್ಕರಿಸುವ ಮೂಲಕ ಅನ್ಯಾಯವೆಸಲಾಗಿತ್ತು. ಮತ್ತೆ ಈಗ ಬಜೆಟ್‌ನಲ್ಲಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಕೇವಲ ಹೆಸರು ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು ಎಂದು ಟೀಕಿಸಿದ್ದಾರೆ. 
   

 • BSY

  BUSINESS6, Mar 2020, 2:24 PM

  ಹಸಿರು ಶಾಲು ಹಾಕಿಕೊಂಡಾಕ್ಷಣ ರೈತ ಪರ ಆದಂತಲ್ಲ: BSYಗೆ ಕಲಬುರಗಿ ಜನರ ಪ್ರಶ್ನೆ?

  ‘ಹೆಸರು ಬದಲಾದದ್ದೇ ಬಂತು, ಕಲ್ಯಾಣ ಕರ್ನಾಟಕದ ಬಗೆಗಿರುವ ಬಜೆಟ್ ದೃಷ್ಟಿಕೋನ ಮಾತ್ರ ಬದಲಾಗಲಿಲ್ಲ’ ಬಿಎಸ್‌ವೈ ಮಂಡಿಸಿರುವ ಬಜೆಟ್ ಕುರಿತಂತೆ ಸಾಮಾನ್ಯ ಜನರ ನೋವಿನ ಸ್ಪಂದನೆ ಇದು. 
   

 • mysore

  Karnataka Districts6, Mar 2020, 2:12 PM

  'ಮೈಸೂರಿಗೆ ಮೂರು ನಾಮ ಹಾಕಿದ ಬಜೆಟ್‌'

  ಹಳೇ ಮೈಸೂರು ಭಾಗದ 8 ಜಿಲ್ಲೆಗಳಿಗೂ ಶೂನ್ಯಯೋಜನೆ ಘೋಷಿಸಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಮೈಸೂರು ಜಿಲ್ಲೆ ಮತ್ತು ನಗರಕ್ಕೆ ಕನಿಷ್ಠ 3 ಕೋಟಿ ರು. ಯೋಜನೆ ಯನ್ನೂ ಘೋಷಿಸದೇ ಮೂರು ನಾಮ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಟೀಕಿಸಿದ್ದಾರೆ.

 • siddaramaiah

  BUSINESS6, Mar 2020, 1:27 PM

  'ಸಿದ್ದರಾಮಯ್ಯ ಕೇಳಿದ್ದು 1500 ಕೋಟಿ, ಯಡಿಯೂರಪ್ಪ ಕೊಟ್ಟಿದ್ದು ಬರೀ 25 ಕೋಟಿ'

  ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್ ಬಾಗಲಕೋಟೆ ಜಿಲ್ಲೆಗೆ ಸಂಪೂರ್ಣ ನಿರಾಶದಾಯಕ ಬಜೆಟ್ ಆಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ರೈತರ ಹಾಗೂ ಸಂತ್ರಸ್ತರ ಧ್ವನಿಯಾಗಬೇಕಿದ್ದ ಬಜೆಟ್‌ನಲ್ಲಿ ಯಾವುದೇ ರೀತಿಯಲ್ಲಿ ಯೋಜನೆಯ ಅನುಷ್ಠಾನದ ಪ್ರಸ್ತಾವ ಇಲ್ಲದಿರುವುದು ಸಹಜವಾಗಿ ಜಿಲ್ಲೆಯ ಸಂತ್ರಸ್ತರಲ್ಲಿ ಅಸಮಾಧಾನ ಮೂಡಿಸಿದೆ. 
   

 • budget blog

  BUSINESS6, Mar 2020, 1:11 PM

  'ದುಡ್ಡಿಲ್ಲದ ಸರ್ಕಾರ ಎಂಬಂತೆ ಸಾಬೀತುಪಡಿಸಿದ BSY ಬಜೆಟ್‌'

  ರಾಜ್ಯ ಬಜೆಟ್‌ ಮೇಲಿದ್ದ ಜಿಲ್ಲೆಯ ನೂರಾರು ನಿರೀಕ್ಷೆಗಳು ನುಚ್ಚು ನೂರಾಗಿವೆ. ಅಭಿವೃದ್ಧಿಗೆ ಪೂರಕ ಚಿಂತನೆಗಳು ಶೂನ್ಯ ಸಂಪಾದಿಸಿವೆ. ಬಿಎಸ್‌ವೈ ಹೊಗಳಿ ಅಟ್ಟಕ್ಕೇರಿಸಿದ್ದ ಜಿಲ್ಲೆಯ ಕಮಲ ಪಾಳಯಕ್ಕೆ ಹೇಳಿಕೊಳ್ಳಲು ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅನುಭವ ಮಂಟಪಕ್ಕೆ ಅನುದಾನ ಘೋಷಿಸಿ ಮೂಗಿಗೆ ತುಪ್ಪ ಸವರಲಾಗಿದೆ. ದುಡ್ಡಿಲ್ಲದ ಸರ್ಕಾರ ಎಂಬಂತೆ ಸಾಬೀತುಪಡಿಸಿದಂತಿರುವ ಈ ಬಜೆಟ್‌ ಸ್ವರೂಪ.
   

 • undefined

  BUSINESS6, Mar 2020, 12:58 PM

  ವಿಜಯಪುರ: 'ಜನರ ಕನಸು ನುಚ್ಚು ನೂರು ಮಾಡಿದ BSY ಬಜೆಟ್'

  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಹಿಂದುಳಿದ ವಿಜಯಪುರ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡದೆ ಇರುವುದರಿಂದಾಗಿ ಜಿಲ್ಲಾ ಜನರ ಕನಸು ನುಚ್ಚು ನೂರಾಗಿವೆ.
   

 • BSY

  BUSINESS6, Mar 2020, 12:31 PM

  ಕರ್ನಾಟಕ ಬಜೆಟ್‌: 2 ದಶಕದ ಹೋರಾಟಕ್ಕೆ ಸಿಗದ ಬೆಲೆ, ಚಿಕ್ಕೋಡಿಗಿಲ್ಲ ಪ್ರತ್ಯೇಕ ಜಿಲ್ಲೆಯ ಭಾಗ್ಯ

  ಜಿಲ್ಲೆಯ ವಿಭಜನೆ ನಿರೀಕ್ಷೆ ಹೊಂದಿದ್ದ ಚಿಕ್ಕೋಡಿ ಭಾಗದ ಜನತೆಗೆ ರಾಜ್ಯ ಸರ್ಕಾರ 2020-21 ನೇ ಸಾಲಿನ ಬಜೆಟ್‌ನಲ್ಲಿ ಹುಸಿಗೊಳಿಸಿದೆ. ಇದರಿಂದಾಗಿ ಜಿಲ್ಲೆಯ ವಿಭಜನೆಯ ಕನಸು ಕಂಡಿದ್ದ ಹೋರಾಟಗಾರರು ತೀವ್ರ ನಿರಾಸೆಗೊಳಿಸಿದೆ. 
   

 • budget karnataka

  BUSINESS6, Mar 2020, 12:17 PM

  ಕರ್ನಾಟಕ ಬಜೆಟ್ 2020: ಹುಸಿಯಾದ ನಿರೀಕ್ಷೆ, ಬೆಳಗಾವಿಗೆ ದಕ್ಕಿದ್ದೇನು?

  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-21 ನೇ ಸಾಲಿಗಾಗಿ ಗುರುವಾರ ಮಂಡಿಸಿದ ಮುಂಗಡ ಪತ್ರದಲ್ಲಿ ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದ್ದಾರೆ. ರಾಜ್ಯ ಬಜೆಟ್ ಬಗ್ಗೆ ಜಿಲ್ಲೆ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ಬಜೆಟ್ ಜಿಲ್ಲೆಯ ಪಾಲಿಗೆ ಬಕಾಸು ರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. 
   

 • budget blog

  BUSINESS6, Mar 2020, 10:35 AM

  'ಉತ್ತರ ಕರ್ನಾಟಕದ 4 ದಶಕದ ಕನಸು ನನಸು ಮಾಡಿದ ಯಡಿಯೂರಪ್ಪ'

  ಕಳೆದ 4 ದಶಕಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿರುವ ಮಹದಾಯಿ ಯೋಜನೆಗೆ ಇದ್ದ ಅಡ್ಡಿ ಎಲ್ಲವೂ ನಿವಾರಣೆಯಾಗಿದ್ದು, ಸದ್ಯ ರಾಜ್ಯ ಬಜೆಟ್‌ನಲ್ಲಿ ಯೋಜನೆಗೆ 500 ಕೋಟಿ ಕಾಯ್ದಿರಿಸುವ ಮೂಲಕ ಉತ್ತರ ಕರ್ನಾಟಕದ ಬಹುವರ್ಷಗಳ ಕನಸು ನನಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ. 
   

 • undefined

  Karnataka Districts6, Mar 2020, 10:09 AM

  ಕೊಡಗಿಗೆ ನಿರಾಸೆ ತಂದ ಬಜೆಟ್: ಕಾಫಿ ಬೆಳೆಗಾರರ ಸಾಲ ಮನ್ನಾ ಇಲ್ಲ

  ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿಲ್ಲ. ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆ, ಕಾಡಾನೆಗಳ ಹಾವಳಿಯ ನಡುವೆಯೂ ಬೆಳೆಗಾರರು ಕಾಫಿ ಕೃಷಿ ಮಾಡುತ್ತಿದ್ದಾರೆ. ಆದರೆ ಈ ಬಜೆಟ್‌ನಲ್ಲಿ ಯಾವುದೇ ವಿಷಯದ ಪ್ರಸ್ತಾಪ ಮಾಡದಿರುವುದು ಬೆಳೆ​ಗಾ​ರ​ರಿಗೆ ಬೇಸರ ತರಿಸಿದೆ.

 • BC Patil

  BUSINESS6, Mar 2020, 9:47 AM

  'ನುಡಿದಂತೆ ಹಿರೇಕೆರೂರಿಗೆ ಯಡಿಯೂರಪ್ಪ ಕೋಟ್ಯಂತರ ಅನುದಾನ'

  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಾಲೂಕಿನ ಅಭಿವೃದ್ಧಿಗೆ ಕೋಂಟ್ಯತರ ರುಪಾಯಿ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.
   

 • undefined

  BUSINESS6, Mar 2020, 9:37 AM

  ಗೃಹ ಸಚಿವ ಬೊಮ್ಮಾಯಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ!

  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಮಂಡಿಸಿದ ಬಜೆಟ್‌ ಜಿಲ್ಲೆಯ ಮಟ್ಟಿಗೆ ಅಲ್ಪ ಕೊಡುಗೆ ನೀಡಿ ಬಾಕಿ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಮೆಗಾ ಡೈರಿ, ಪ್ರತ್ಯೇಕ ಡಿಸಿಸಿ ಬ್ಯಾಂಕ್‌, ನೀರಾವರಿ ಯೋಜನೆಗಳ ಪ್ರಸ್ತಾಪವೇ ಇಲ್ಲದೇ ನಿರಾಸೆ ಮೂಡಿಸಿದೆ.
   

 • সেই প্রথম ভারত দেখেছিল রিসর্ট রাজনীতি। কংগ্রেস, বিজেপি,জেডিএস নিজেদের দলের সব বিধায়কদেরই রেখেছিল রিসর্ট বন্দি করে।

  Karnataka Districts6, Mar 2020, 8:55 AM

  ಮಹದಾಯಿಗೆ 500 ಕೋಟಿ: ಹುಬ್ಬಳ್ಳಿ, ನವಲಗುಂದದಲ್ಲಿ ಸಂಭ್ರಮಾಚರಣೆ

  ಮಹದಾಯಿ, ಕಳಸಾ-ಬಂಡೂರಿ 500 ಕೋಟಿ ಮೀಸಲಿಟ್ಟಿರುವುದಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿಯಲ್ಲಿ ಹೋರಾಟಗಾರರು ಹಾಗೂ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಭ್ರಮಾಚರಣೆ ಮಾಡಿದ್ದಾರೆ. 
   

 • sslc results

  Karnataka Districts6, Mar 2020, 8:35 AM

  ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 1 ಲಕ್ಷ ರು. ಬಹುಮಾನ

  SSLC ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 1 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.