ಕರ್ನಾಟಕ ಪ್ರವಾಹ  

(Search results - 451)
 • Basanagouda Patil Yatnal
  Video Icon

  Politics19, Oct 2019, 4:00 PM IST

  ಶೋಕಾಸ್ ನೋಟಿಸ್‌ಗೆ ಯತ್ನಾಳ್ ಖಡಕ್ ಆನ್ಸರ್: ಉತ್ತರ ಪತ್ರಿಕೆಯಲ್ಲೇನಿದೆ?

  ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್ ನೋಟಿಸ್‌ಗೆ ಕೊನೆಗೂ ಉತ್ತರಿಸಿದ್ದಾರೆ.

 • big3
  Video Icon

  state19, Oct 2019, 1:37 PM IST

  ಗುರಿ ತಲುಪಿತು BIG 3 ಪಯಣ; ಮಕ್ಕಳ ಮೊಗದಲ್ಲಿ ಹರ್ಷದ ಕಿರಣ!

  ನೆರೆ ಪೀಡಿತ ಪ್ರದೇಶಗಳ ಶಾಲಾ ಮಕ್ಕಳ ನೋವಿಗೆ BIG 3 ಸ್ಪಂದಿಸಿದೆ. BIG 3 ಶುರುಮಾಡಿದ ಅಭಿಯಾನಕ್ಕೆ ದಾನಿಗಳು ಪ್ರತಿಕ್ರಿಯಿಸಿರುವ ರೀತಿ ನಿಜಕ್ಕೂ ಅಭಿನಂದನೀಯ. ಸುವರ್ಣನ್ಯೂಸ್ ಕಚೇರಿಗೆ ಬಂದು ತಲುಪಿದ ಸ್ಕೂಲ್ ಕಿಟ್‌ಗಳನ್ನು BIG 3 ತಂಡ ಖುದ್ದು ಹೋಗಿ ತಲುಪಿಸಿದೆ.  

 • Big 3
  Video Icon

  News19, Oct 2019, 12:20 AM IST

  ಬಿಗ್ 3 ಕರೆಗೆ ಓಗೊಟ್ಟ ಮನಗಳು..NRIಗಳಿಂದಲೂ ಹರಿದು ಬಂತು ನೆರವು

  ಉತ್ತರ ಕರ್ನಾಟಕ ಮಕ್ಕಳ ನೋವಿಗೆ ಕರ್ನಾಟಕ, ಭಾರತ ಮಾತ್ರವಲ್ಲದೆ ಜರ್ಮನಿ ಅಮೆರಿದಲ್ಲಿ ಇದ್ದವರ ಮನ ಮಿಡಿದಿದೆ. ಮಕ್ಕಳಿಗೆ ಬ್ಯಾಗ್ ನೀಡಬೇಕು ಎಂಬ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.

  ಶಾಲಾ ಮಕ್ಕಳಗಿಗೆ ಬ್ಯಾಗ್, ಪುಸ್ತಕ ನೀಡಬೇಕು ಎನ್ನುವುದರ ಜತೆಗೆ ಅಂಧ ಮಕ್ಕಳ ಶಾಲೆಯ ಯೋಗ ಪಟುಗಳು ಹರಿದು ಹಂಚಿಹೋಗಿದ್ದಾರೆ ಎಂಬ ವರದಿಯೂ ಪ್ರಸಾರವಾಗಿತ್ತು. ಹಾಗಾದರೆ ಇದಕ್ಕೆಲ್ಲ ಜನ ನೀಡಿದ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ ಉತ್ತರ..

 • Bagalkot18, Oct 2019, 10:07 AM IST

  ಬಾಗಲಕೋಟೆ: ಸಂತ್ರಸ್ತರ ಬದುಕು ಕಟ್ಟಿಕೊಡಲು ಎಲ್ಲ ನೆರವು

  ಪ್ರವಾಹ ನಂತರದ ಬದುಕು ಕಟ್ಟಿಕೊಳ್ಳುವಲ್ಲಿ ಸಹಾಯ ಸಹಕಾರ ಮಾಡುವ ಸಂಘ-ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಜಿಲ್ಲಾ​ಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಅವರು ತಿಳಿಸಿದ್ದಾರೆ. 
   

 • Bagalkot18, Oct 2019, 9:37 AM IST

  ಬಾದಾಮಿ: ನೆರೆಗೆ ನಲುಗಿದರೂ ಪ್ರವಾಸಿಗರಿಲ್ಲ ಕೊರತೆ

  ಶಿಲ್ಪಕಲೆಗಳ ತವರೂರು, ಐತಿಹಾಸಿಕ ತಾಣಗಳಲ್ಲಿ ಕಳೆದ ಮೂರು ತಿಂಗಳ ಹಿಂದೆ ಬಂದ ಪ್ರವಾಹ ತನ್ನ ಅಬ್ಬರವನ್ನು ಪ್ರದರ್ಶಿಸಿತ್ತು. ಈ ವೇಳೆ ತಾಲೂಕಿನ ಐತಿಹಾಸಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿ ಹೋಗಿವೆ. ಆದರೂ ಇಲ್ಲಿನ ತಾಣ ವೀಕ್ಷಿಸಲು ಪ್ರವಾಸಿಗರ ಉತ್ಸಾಹ ಮಾತ್ರ ಕುಗ್ಗಿಲ್ಲ. ಏಕೆಂದರೆ ನೆರೆ ಹೊರತಾಗಿಯೂ ಪ್ರವಾಸಿಗರ ದಂಡು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುತ್ತಲೇ ಇದೆ.
   

 • Big 3
  Video Icon

  Gadag17, Oct 2019, 8:07 PM IST

  ಗದಗ: ಅಂಧ ಮಕ್ಕಳನ್ನು ಸಲಹುತ್ತಿದ್ದ ತಾಯಿಯನ್ನು ಮತ್ತೆ ಮಕ್ಕಳ ಜತೆ ಸೇರಿಸಬೇಕಿದೆ

  ಉತ್ತರ ಕರ್ನಾಟಕದ ನೆರೆ ಹಾವಳಿಗೆ ಅದೆಷ್ಟೂ ಜನರ ಬದುಕು ಕೊಚ್ಚಿ ಹೋಗಿದೆಯೋ ಗೊತ್ತಿಲ್ಲ. ಸುವರ್ಣ ನ್ಯೂಸ್ ಬಿಗ್ 3  ಒಂದೊಂದೇ ಕಣ್ಣೀರ ಕತೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

  ತನ್ನ ಅಂಧ ಮಗನ ಜತೆ ಉಳಿದ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿ ಸಲಹುತ್ತಿದ್ದ ತಾಯಿ ತುಳಸಮ್ಮ. ಮಕ್ಕಳಿದ್ದ ಶಾಲೆಗೆ ಪ್ರವಾಹ ಬಂದೆರೆಗಿತ್ತು. ಆಗ ನಾವು ನೋಡಿಕೊಳ್ಳುತ್ತದ್ದ ಮಕ್ಕಳು ಈಗ ನಮ್ಮ ಜತೆ ಇಲ್ಲ. ಮಕ್ಕಳನ್ನು ಮತ್ತೆ ತಾಯಿಯೊಂದಿಗೆ ಸೇರಿಸುವ ಕೆಲಸ ಮಾಡಲೇಬೇಕಿದೆ.

 • school flood karnataka
  Video Icon

  state17, Oct 2019, 1:46 PM IST

  ನೆರೆ ಪೀಡಿತ ಮಕ್ಕಳ ಶಿಕ್ಷಣ; BIG 3 ಅಭಿಯಾನಕ್ಕೆ ಕನ್ನಡಿಗರ ಪಣ!

  ‘ಗಾಯದ ಮೇಲೆ ಬರೆ’ ಎಂಬಂತೆ ‘ಬರದ ಮೇಲೆ ನೆರೆ’ - ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ. ಪ್ರತಿ ವರ್ಷ ಬೆಂಬಿಡದೆ ಕಾಡುವ ಬರದ ನಡುವೆ ಶಿಕ್ಷಣ ಪಡೆಯಲು ಹೋರಾಡುವ ಇಲ್ಲಿನ ಶಾಲಾ ಮಕ್ಕಳು, ಈ ಬಾರಿ ನೆರೆಯ ವಿರುದ್ಧ ಹೋರಾಡುತ್ತಿದ್ದಾರೆ. ಶಾಲಾ ಮಕ್ಕಳಿಗಾಗಿಯೇ ಸುವರ್ಣನ್ಯೂಸ್ ಅಭಿಯಾನವೊಂದನ್ನು ಆರಂಭಿಸಿದೆ.  

 • Karnataka Flood
  Video Icon

  state17, Oct 2019, 1:04 PM IST

  ಶಾಲಾ ಮಕ್ಕಳಿಗಾಗಿ ಮಿಡಿಯಲಿ ಮನ; ನೆರೆ ಪೀಡಿತರಿಗಾಗಿ BIG 3 ಹೊಸ ಅಭಿಯಾನ

  ಉತ್ತರ ಕರ್ನಾಟಕದಲ್ಲಿ ಈ ಹಿಂದೆ ಕಂಡು ಕೇಳರಿಯದಂತಹ ನೆರೆ ಬಂತು, ಜನಜೀವನ ಅಸ್ತವ್ಯಸ್ತವಾಯ್ತು, ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡ್ರು. ಪ್ರಕೃತಿ ವಿಕೋಪದ ವೇಳೆ  ಕನ್ನಡನಾಡಿನ ಜನತೆ ಸಾಧ್ಯವಾದಷ್ಟು ಪ್ರವಾಹ ಪೀಡಿತರಿಗೆ ನೆರವು ನೀಡಿದರು. ಸುವರ್ಣನ್ಯೂಸ್ ಅದಕ್ಕಾಗಿಯೇ ಸಮರೋಪಾದಿಯಲ್ಲಿ ಕೆಲಸ ಮಾಡಿತ್ತು. ಪ್ರವಾಹ ಸಂತ್ರಸ್ತರು ಮತ್ತು ನೆರವು ನೀಡುವವರ ನಡುವೆ ಸೇತುವೆಯಾಗಿ ಕೆಲಸ ಮಾಡಿತ್ತು. ಅಲ್ಲಿಗೆ ಸಮಸ್ಯೆ ಮುಗಿದಿಲ್ಲ...ಬಹಳಷ್ಟು ಕೆಲಸ ಬಾಕಿ ಇದೆ... 

 • Govind Karjol

  Kalaburagi17, Oct 2019, 12:04 PM IST

  'ಕೇಂದ್ರದಿಂದ ಮತ್ತಷ್ಟು ಪರಿಹಾರ ಬರುತ್ತೆ, ಆದರೆ ಕಾಯಬೇಕಷ್ಟೆ'

  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಇದು ಮಧ್ಯಂತರ ಪರಿಹಾರವಷ್ಟೆ, ಹೆಚ್ಚಿನ ಪರಿಹಾರ ಬರುತ್ತೆ, ಕಾಯಬೇಕಷ್ಟೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. 
   

 • school students

  Haveri17, Oct 2019, 7:55 AM IST

  ನೆರೆ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ: ಡಾ. ಶಿವಮೂರ್ತಿ ಶಿವಾಚಾರ್ಯರು

  ರಾಜ್ಯದಲ್ಲಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶದ 1 ಸಾವಿರ ಬಡ ವಿದ್ಯಾರ್ಥಿಗಳಿಗೆ ಶ್ರೀಮಠದ ವಿದ್ಯಾಸಂಸ್ಥೆಯಲ್ಲಿ ಉಚಿತ ಊಟ, ವಸತಿ ಸೇರಿ ಶಿಕ್ಷಣ ನೀಡುವುದಾಗಿ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಹೇಳಿದ್ದಾರೆ. 
   

 • NRI

  NRI17, Oct 2019, 12:02 AM IST

  ನೈಜೀರಿಯಾ NRIಗಳಿಂದ ನೆರೆ ಸಂತ್ರಸ್ತರಿಗೆ ದೇಣಿಗೆ

  ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಂಘ ಸಂಸ್ಥೆಗಳು, ಮಾಧ್ಯಮಗಳು, ಕರ್ನಾಟಕದ ನಾಗರಿಕರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಲ್ಲರೂ ಪರಿಹಾರ ನೀಡುತ್ತಲೇ ಬಂದಿದ್ದಾರೆ. ಆದರೆ ಅವರ ನೋವು ಮಾಗಿಲ್ಲ. ಇದೆಲ್ಲದ ಮಧ್ಯೆ ನೈಜೀರಿಯಾದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ದೇಣಿಗೆ ನೀಡಿದ್ದಾರೆ.

 • Basanagouda Patil Yatnal
  Video Icon

  Politics16, Oct 2019, 9:20 PM IST

  ಬಿಜೆಪಿಯಲ್ಲಿ ಕಿತ್ತಾಟ: ಯತ್ನಾಳ್ ಗಂಡಸ್ತನ ಪ್ರಶ್ನಿಸಿದ ಸ್ವಪಕ್ಷದ ನಾಯಕ

  ವಿಜಯಪುರ, [ಅ.16]: ಬಿಜೆಪಿ ನಾಯಕರೊಬ್ಬರು ನೆರೆ ಸಂತ್ರಸ್ತರ ಪರ ಧ್ವನಿ ಎತ್ತಿದ್ದ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ಗಂಡಸ್ತನ ಪ್ರಶ್ನಿಸಿದ್ದಾರೆ.

  ನೆರೆ ಪರಿಹಾರ ವಿಳಂಬಕ್ಕೆ ರಾಜ್ಯ ಸಂಸದರ ವಿರುದ್ಧ ಗುಡುಗಿದ್ದ ಯತ್ನಾಳ್ ಅವರನ್ನು ಟಾರ್ಗೆಟ್ ಮಾಡಿದ್ರಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಒಬ್ಬರಿಂದೊಬ್ಬರು ಬಿಜೆಪಿ ನಾಯಕರು ಯತ್ನಾಳ್ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. 

 • Dharwad16, Oct 2019, 7:32 AM IST

  ಸಿಎಂ ಯಡಿಯೂರಪ್ಪ ಸೂಚನೆಗೂ ಕ್ಯಾರೆ ಅನ್ನದ ಗುತ್ತಿಗೆದಾರರು

  ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾದ ಪರಿಣಾಮ ಅತಿವೃಷ್ಟಿ ಉಂಟಾಗಿದ್ದರೂ, ‘ಮೋಡ ಬಿತ್ತನೆ’ ಮಾತ್ರ ಮುಂದುವರೆದಿದೆ. ಸ್ವತಃ ಸಿಎಂ ಯಡಿಯೂರಪ್ಪ ಅವರೇ ಕರೆ ಮಾಡಿ ಸೂಚಿಸಿದ್ದರೂ ಮೋಡ ಬಿತ್ತನೆ ಮಾಡುವುದನ್ನು ಗುತ್ತಿಗೆ ಪಡೆದ ಏಜೆನ್ಸಿ ನಿಲ್ಲಿಸುತ್ತಿಲ್ಲ ಎಂದು ತಿಳಿದು ಬಂದಿದೆ.

 • Bagalkot14, Oct 2019, 10:44 AM IST

  ಹಾವೇರಿ: ಎಲ್ಲೆಂದರಲ್ಲಿ ಒಡೆದಿರುವ ಕಾಲುವೆ, ಆತಂಕದಲ್ಲಿ ರೈತರು

  ಜಿಲ್ಲೆಯ ರೈತರ ಪಾಲಿಗೆ ವರವಾಗಿ ಬಂದಿದ್ದ ತುಂಗಾ ಮೇಲ್ದಂಡೆ ಯೋಜನೆ ಇದೀಗ ರೈತರಿಗೆ ಶಾಪವಾಗಿ ಕಾಡುವಂತಾಗಿದೆ. ಇತ್ತೀಚೆಗೆ ಸುರಿದ ಮಹಾಮಳೆಯಿಂದಾಗಿ ಕಾಲುವೆಗಳು ಎಲ್ಲೆಂದರಲ್ಲಿ ಒಡೆದು ಹೋಗಿದ್ದು, ಕಾಲುವೆಯ ಅಕ್ಕಪಕ್ಕದ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
   

 • Basangouda Patil Yatnal

  Politics13, Oct 2019, 8:59 PM IST

  ಯತ್ನಾಳ್‌ಗೆ ನೋಟಿಸ್: ಪತ್ರದ ಮೂಲಕ ಮೋದಿಗೆ ಶ್ರೀಶೈಲ ಜಗದ್ಗುರು ಪರೋಕ್ಷ ಎಚ್ಚರಿಕೆ

  ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೀಡಿರುವ ಶೋಕಾಸ್ ನೋಟಿಸ್ ವಾಪಾಸ್ ಪಡೆಯುವಂತೆ ಶ್ರೀಶೈಲ ಪೀಠದ ಪಂಚಪೀಠಾಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.