ಕರ್ನಾಟಕ ಕ್ರಿಕೆಟ್  

(Search results - 51)
 • KscA Roger ninny

  Cricket29, Mar 2020, 2:36 PM IST

  COVID-19 ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದ ಕರ್ನಾಟಕ ಕ್ರಿಕೆಟ್ ಸಂಸ್ಥೆ!

  ಕೊರೋನಾ ವೈರಸ್ ಹೊಡೆತಕ್ಕೆ ಸಂಪೂರ್ಣ ಭಾರತವೇ ನಲುಗಿ ಹೋಗಿದೆ. ಇತ್ತ ವೈರಸ್ ತೊಲಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಟ ನಡೆಸುತ್ತಿದೆ. ಈಗಾಗಲೇ ಭಾರತವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ.  ಕೊವಿಡ್-19 ವಿರುದ್ಧದ ಸರ್ಕಾರದ ಹೋರಾಟಕ್ಕೆ ಇದೀಗ ಕ್ರಿಕೆಟಿಗರು, ಸೆಲೆಬ್ರೆಟಿಗಳು, ಸಂಘ ಸಂಸ್ಥಗಳು ಕೋಟಿ ಕೋಟಿ ರೂಪಾಯಿ ನೀಡುತ್ತಿದೆ. ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬರೋಬ್ಬರಿ 1 ಕೋಟಿ ರೂಪಾಯಿ ನೀಡಿದೆ.
   

 • undefined

  Cricket18, Mar 2020, 11:59 AM IST

  ಕೊರೋನಾ ನಡುವೆಯೇ ಜರುಗಿದ ಕೆಎಸ್‌ಸಿಎ ಕ್ರಿಕೆಟ್‌!

  ಈ ಪಂದ್ಯಗಳಲ್ಲಿ ಕರ್ನಾಟಕ ರಣಜಿ ಹಾಗೂ ಸೀಮಿತ ಓವರ್‌ ತಂಡಗಳ ಆಟಗಾರರಾದ ಕೆ.ಗೌತಮ್‌, ಆರ್‌.ಸಮರ್ಥ್, ಅನಿರುದ್ಧ್ ಜೋಶಿ, ಕೆ.ವಿ.ಸಿದ್ಧಾರ್ಥ್, ಕೌನೇನ್‌ ಅಬ್ಬಾಸ್‌, ಕೆ.ಸಿ.ಕಾರ್ಯಪ್ಪ, ಲುವ್ನಿತ್‌ ಸಿಸೋಡಿಯಾ, ಡಿ.ನಿಶ್ಚಲ್‌ ಪಾಲ್ಗೊಂಡಿದ್ದರು. ಬ್ಯಾಂಕ್‌ ಆಫ್‌ ಬರೋಡಾ, ಇಂಡಿಯನ್‌ ಏರ್‌ ಫೋರ್ಸ್‌, ಕೆನರಾ ಬ್ಯಾಂಕ್‌, ಎಜಿಒ ರಿಕ್ರಿಯೇಷನ್‌ ಕ್ಲಬ್‌, ರಿಸರ್ವ್ ಬ್ಯಾಂಕ್‌ ರಿಕ್ರಿಯೇಷನ್‌ ಕ್ಲಬ್‌, ಎಸ್‌ಬಿಐ, ಪ್ರೈಮ್‌ ಫೋಕಸ್‌ ಟೆಕ್ನಾಲಜಿಸ್‌ ಹಾಗೂ ಕಸ್ಟಮ್ಸ್‌-ಸೆಂಟ್ರಲ್‌ ಎಕ್ಸೈಸ್‌ ಕ್ಲಬ್‌ ತಂಡಗಳು ಸ್ಪರ್ಧಿಸಿದವು.

 • KSCA

  Cricket12, Mar 2020, 9:46 PM IST

  ಕ್ರಿಕೆಟ್‌ಗೆ ಕೊರೋನಾ ವೈರಸ್ ಬಿಸಿ; KSCA ಪ್ರಶಸ್ತಿ ಸಮಾರಂಭ ಮುಂದೂಡಿಕೆ!

  ಕೊರೋನಾ ವೈರಸ್ ಆತಂಕ ಕ್ರಿಕೆಟ್‌ಗೂ ತಟ್ಟಿದೆ. ಈಗಾಗಲೇ ಐಪಿಎಲ್ ಆಯೋಜನೆಗೆ ಬಿಸಿಸಿಐ ಹೆಣಗಾಡುತ್ತಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೂ ಕೊರೋನಾ ವೈರಸ್ ತಟ್ಟಿದೆ. ವೈರಸ್ ಆತಂಕದಿಂದ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮುಂದೂಡಲಾಗಿದೆ.

 • chinnaswamy stadium kpl

  Cricket23, Jan 2020, 11:12 AM IST

  KPL ಫಿಕ್ಸಿಂಗ್: ಗೌಪ್ಯ ಸ್ಥಳದಲ್ಲಿ ಮಾಡೆಲ್ ವಿಚಾರಣೆ, ನಟಿಯರ ಹೆಸರು ಬಹಿರಂಗ!

  ಕರ್ನಾಟಕ ಪ್ರಿಮಿಯರ್ ಲೀಗ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಕೊಂಡಿದೆ. ಸಿಸಿಬಿ ಪೊಲೀಸರು ಈಗಾಗಲೇ ಕ್ರಿಕೆಟಿಗರು , ಫ್ರಾಂಚೈಸಿ ಮಾಲೀಕರು, ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪ್ರಮುಖ ಆಡಳಿತ ಮಂಡಳಿಯ ವಿಚಾರಣೆ ನಡೆಸಿದೆ. ಇದೀಗ ಕೆಎಸ್‌ಸಿ ಸದಸ್ಯರು ಹಾಗೂ ಕೆಪಿಎಲ್ ಜೊತೆ ಗುರುತಿಸಿಕೊಂಡಿರುವ ಮಾಡೆಲ್ ಹಾಗೂ ನಟಿಯರ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯಲ್ಲಿ ಹಲವು ನಟಿಯರ ಹೆಸರು ಬಹಿರಂಗಗೊಂಡಿದೆ. 

 • Vidyadhar Patil

  Cricket8, Dec 2019, 11:44 AM IST

  ರಾಯ​ಚೂರು ವೇಗಿ ವಿದ್ಯಾಧರ್ ಪಾಟೀಲ್‌ಗೆ ವಿಶ್ವ​ಕಪ್‌ ಗೆಲ್ಲು​ವ ಕನ​ಸು!

  ಅಂಡರ್‌-19 ತಂಡದ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌, ವಿದ್ಯಾ​ಧರ್‌ಗೆ ಅತ್ಯ​ಗತ್ಯ ಸಲಹೆ, ಮಾರ್ಗ​ದ​ರ್ಶನ ನೀಡಿ​ದ್ದಾರೆ. 

 • vidyadhar patil
  Video Icon

  Cricket7, Dec 2019, 12:41 PM IST

  ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಟೀಂ ಇಂಡಿಯಾ ಸೇರಿದ್ಹೇಗೆ..?

  ರಾಯಚೂರಿನ ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಕಠಿಣ ಪರಿಶ್ರಮದಿಂದ ಬೌಲಿಂಗ್ ಕಲಿತು, ಇದೀಗ ಇಂಡಿಯಾ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಅಲ್ಲದೇ ಅಸಂಖ್ಯಾತ ಗ್ರಾಮೀಣ ಪ್ರತಿಭೆಗಳ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

 • Krishnappa Gowtham

  Cricket7, Dec 2019, 9:57 AM IST

  ದಾಂಪತ್ಯ ಜೀವನಕ್ಕೆ ಕ್ರಿಕೆಟಿಗ ಕೃಷ್ಣಪ್ಪ ಗೌತಮ್‌

  ಇತ್ತೀಚೆಗೆ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌)ನ ಶಿವಮೊಗ್ಗ ಲಯನ್ಸ್‌ ವಿರುದ್ಧದ ಪಂದ್ಯ​ದಲ್ಲಿ ಬಳ್ಳಾರಿ ಟಸ್ಕರ್ಸ್‌ನ ಗೌತಮ್‌ ಅಜೇಯ 134 ರನ್‌ ಹಾಗೂ 15 ರನ್‌ಗಳಿಗೆ 8 ವಿಕೆಟ್‌ ಕಿತ್ತು ಟಿ20 ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದಿದ್ದರು.

 • kl rahul and mayank agarwal

  Cricket1, Dec 2019, 10:50 AM IST

  ಮುಷ್ತಾಕ್‌ ಅಲಿ ಟ್ರೋಫಿ ಫೈನಲ್: ಕರ್ನಾಟಕಕ್ಕಿಂದು ತಮಿಳುನಾಡು ಚಾಲೆಂಜ್‌

  ದೇಶಿಯ ಕ್ರಿಕೆಟ್‌ ಟೂರ್ನಿಗಳಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿರುವ ಕರ್ನಾಟಕ ಇತ್ತೀಚೆಗಷ್ಟೇ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲೂ ಫೈನಲ್‌ಗೇರಿ ತಮಿಳುನಾಡು ತಂಡವನ್ನು ಬಗ್ಗು ಬಡಿದು 4ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

 • Abhimanyu Mithun

  Cricket29, Nov 2019, 4:30 PM IST

  ಮುಷ್ತಾಕ್ ಅಲಿ ಟ್ರೋಫಿ: ಮಿಥುನ್ ಹ್ಯಾಟ್ರಿಕ್, ಆದರೂ ಕರ್ನಾಟಕಕ್ಕೆ ಕಠಿಣ ಗುರಿ

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹರ್ಯಾಣ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಚೈತನ್ಯ ಬಿಷ್ಣೋಯಿ ಹಾಗೂ ಹರ್ಷಲ್ ಪಟೇಲ್ 6.4 ಓವರ್’ಗಳಲ್ಲಿ 67 ರನ್’ಗಳ ಜತೆಯಾಟವಾಡಿದರು. 

 • ksca

  Cricket29, Nov 2019, 11:31 AM IST

  ಮುಷ್ತಾಕ್‌ ಅಲಿ ಟ್ರೋಫಿ: ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕಿಂದು ಹರ್ಯಾಣ ಚಾಲೆಂಜ್‌

  ಇತ್ತೀಚೆಗೆ ನಡೆದಿದ್ದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ಇದೀಗ ಭಾರತದ ಟಿ20 ಚಾಂಪಿಯನ್‌ ಪಟ್ಟಕ್ಕಾಗಿ ಕರ್ನಾಟಕ-ತಮಿಳುನಾಡು ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿವೆ.

 • undefined

  Cricket27, Nov 2019, 10:29 PM IST

  ಮುಷ್ತಾಕ್ ಅಲಿ ಟ್ರೋಫಿ: ಸೆಮೀಸ್ ಪ್ರವೇಶಿಸಿದ ಕರ್ನಾಟಕ

  ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಗಿಲ್ ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 78 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಗುರುಕಿರತ್ ಸಿಂಗ್ ಮನ್ 21 ಎಸೆತದಲ್ಲಿ 40 ರನ್ ಚಚ್ಚಿದ್ದರು.

 • KL Rahul

  Cricket25, Nov 2019, 10:40 AM IST

  ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈ ಎದುರು ಕರ್ನಾಟಕಕ್ಕೆ ಆರಂಭಿಕ ಆಘಾತ

  ಸೂಪರ್‌ ಲೀಗ್‌ ಹಂತದ 3ನೇ ಪಂದ್ಯ​ದಲ್ಲಿ ಹಾಲಿ ಚಾಂಪಿ​ಯನ್‌ ತಂಡ ಪಂಜಾಬ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿ​ಸಿತು. ತಂಡ ಆಡಿ​ರುವ 3 ಪಂದ್ಯ​ಗ​ಳ​ಲ್ಲೂ ಗೆದ್ದಿದ್ದು, ‘ಬಿ’ ಗುಂಪಿ​ನಲ್ಲಿ ಅಗ್ರ​ಸ್ಥಾನ ಕಾಯ್ದು​ಕೊಂಡಿದೆ. ತಂಡಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಸೆಮಿ​ಫೈ​ನಲ್‌ ಪ್ರವೇಶ ಬಹು​ತೇಕ ಖಚಿತ ಎನಿ​ಸಿ​ದೆ.

 • ಕನ್ನಡದ ಆಟಗಾರರನ್ನು ಖರೀದಿಸಲು ಬೇರೆ ಫ್ರಾಂಚೈಸಿಗಳು ನಾ ಮುಂದೆ, ತಾ ಮುಂದೆ ಎಂದು ಹಾತೊರೆಯುತ್ತವೆ. ಆದರೆ RCBಗೆ ಮಾತ್ರ ಕನ್ನಡದ ಆಟಗಾರರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತೆ ಕಾಣುತ್ತಿದೆ. ರಾಹುಲ್, ಅಗರ್‌ವಾಲ್, ಮನೀಶ್, ಗೋಪಾಲ್, ಗೌತಮ್, ಸುಚಿನ್ ಅವರು ಬೇರೆ-ಬೇರೆ ತಂಡದಲ್ಲಿ ಮಿಂಚುತ್ತಿದ್ದಾರೆ. ಇನ್ನು ಕಾಟಾಚಾರಕ್ಕೆ ಎಂಬಂತೆ 2018ನೇ ಆವೃತ್ತಿಯಲ್ಲಿ ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿಯನ್ನು ಖರೀದಿಸಿತ್ತು, 2019ರಲ್ಲಿ ದೇವದತ್ ಪಡಿಕ್ಕಲ್’ರನ್ನು ಖರೀದಿಸಿತ್ತಾದರೂ, ಆಡುವ ಹನ್ನೊಂದರ ಬಳಗದಲ್ಲಿ ಮಾತ್ರ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿಯ ಹರಾಜಿನಲ್ಲಾದರೂ ಕನ್ನಡಿಗರನ್ನು RCB ಖರೀದಿಸುತ್ತಾ ಕಾದು ನೋಡಬೇಕಿದೆ.

  Cricket24, Nov 2019, 11:16 AM IST

  ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯದ ತವ​ಕ

  ಬಲಿಷ್ಠ ತಂಡ​ಗಳ ನಡು​ವಿನ ಪೈಪೋಟಿ ಅಭಿ​ಮಾ​ನಿ​ಗ​ಳಲ್ಲಿ ಕುತೂ​ಹಲ ಮೂಡಿ​ಸಿದ್ದು. ಪಂಜಾಬ್‌ ವಿರುದ್ಧ ಗೆಲುವು ಸಾಧಿ​ಸಿ​ದರೆ, ಕರ್ನಾ​ಟ​ಕದ ಸೆಮಿ​ ಫೈ​ನಲ್‌ ಹಾದಿ ಸುಗ​ಮ​ಗೊ​ಳ್ಳಲಿದೆ. ಇದೀಗ ಪಂಜಾಬ್ 10 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 61 ರನ್’ಗಳನ್ನಷ್ಟೇ ಬಾರಿಸಿದೆ.

 • Karnataka vijay hazare

  Cricket23, Nov 2019, 10:14 AM IST

  ಮುಷ್ತಾಕ್‌ ಅಲಿ: ಜಾರ್ಖಂಡ್‌ ವಿರುದ್ಧ ಕರ್ನಾಟಕ ಜಯಭೇರಿ

  ದೇಶಿ ಟೂರ್ನಿಯಲ್ಲಿ ಮಿಂಚುತ್ತಿರುವ ಎಡಗೈ ಬ್ಯಾಟ್ಸ್’ಮನ್ ದೇವದತ್ ಪಡಿಕ್ಕಲ್, 2019-20ನೇ ಆವೃತ್ತಿಯಲ್ಲಿ ಭಾರತದ ನೆಲದಲ್ಲಿ ಒಂದು ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್’ಮನ್ ಎನಿಸಿದ್ದಾರೆ. 

 • kl rahul

  Cricket22, Nov 2019, 11:05 AM IST

  ಮು​ಷ್ತಾಕ್‌ ಅಲಿ ಟ್ರೋಫಿ: ತಮಿಳುನಾಡನ್ನು ಮಣಿಸಿದ ಕರ್ನಾಟಕ

  ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊಂಡ ಕರ್ನಾ​ಟಕ, ತಮಿ​ಳು​ನಾಡು ತಂಡ​ವನ್ನು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158 ರನ್‌ಗಳಿಗೆ ನಿಯಂತ್ರಿ​ಸಿತು. ಸುಲಭ ಗುರಿ ಬೆನ್ನ​ತ್ತಿದ ಹಾಲಿ ಚಾಂಪಿ​ಯನ್‌ ತಂಡ, ಕೆ.ಎಲ್‌. ರಾ​ಹುಲ್‌ ಹಾಗೂ ನಾಯಕ ಮನೀಶ್‌ ಪಾಂಡೆ ಅವರ ಅಜೇಯ ಅರ್ಧ​ಶ​ತ​ಕ​ಗಳ ನೆರ​ವಿ​ನಿಂದ 16.2  ಓವರಲ್ಲಿ ಗೆಲು​ವಿನ ದಡ ಸೇರಿತು.