Search results - 2370 Results
 • NEWS12, Nov 2018, 8:39 PM IST

  ಸ್ವಂತ ವೆಬ್‌ಸೈಟ್ ಪ್ರಾರಂಭಿಸಿದ ಮೊದಲ ರಾಜಕಾರಣಿ ಅನಂತ್ ಕುಮಾರ್!

  ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅನಂತ್ ಕುಮಾರ್ ಎಬಿವಿಪಿ ಸಂಘಟನೆ ಮೂಲಕ ನಾಯಕತ್ವದ ಗುಣಗಳನ್ನು ಬೆಳಸಿಕೊಂಡವರು. ಕರ್ನಾಟಕದಲ್ಲಿ  ಅನಂತಕುಮಾರ್ ಅವರು ಪಕ್ಷದ ಹಿರಿಯ ನಾಯಕ  ಯಡಿಯೂರಪ್ಪನವರ ಜೊತೆಗೂಡಿ ತಳಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ರಾಜ್ಯದಲ್ಲಿ ಶ್ರಮಿಸಿದ್ದರು. 

 • NEWS12, Nov 2018, 5:20 PM IST

  ಸ್ನೇಹಿತ ಅಗಲಿರುವುದು ನಂಬಲು ಸಾಧ್ಯವಾಗುತ್ತಿಲ್ಲ: ಡಿಸಿಎಂ ಪರಂ

  ನಮ್ಮಿಬ್ಬರ ರಾಜಕೀಯ ಸಿದ್ಧಾಂತ ಬೇರೆ ಬೇರೆಯಾಗಿದ್ದರೂ, ನಾವಿಬ್ಬರೂ ಆತ್ಮೀಯ ಸ್ನೇಹಿತರು. ವಾಜಪೇಯಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಟ್ಟೊಟ್ಟಿಗೆ ಕುಳಿತಿದ್ದೆವು, ಆದರೆ ಅವರು ಯಾವುದೇ ಅನಾರೋಗ್ಯದ ಲಕ್ಷಣಗಳನ್ನು ತೋರಿಸಿಲ್ಲ. ಅನಂತ್ ಸಾವನ್ನು ನಂಬುವುದು ಕಷ್ಟವಾಗಿದೆ, ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.   

 • 2014ರಲ್ಲಿ ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಔಷದ ಇಲಾಖೆ ಸಚಿವ

  NEWS12, Nov 2018, 5:06 PM IST

  ಅದೊಂದು ದಿಟ್ಟ ತೀರ್ಮಾನ, ಔಷಧ ಮಾಫಿಯಾಕ್ಕೆ ಬಗ್ಗದ ಅನಂತ

  ಅನಂತ ಕುಮಾರ್ ಎಂದರೆ ಅದೊಂದು ಶಕ್ತಿ, ಅದೊಂದು ಸಂಘಟನೆ, ಅಲ್ಲೊಂದು ಪ್ರೇರಣೆ, ಅಲ್ಲೊಂದು ಹೊಸ ಚಿಂತನೆ. ಅಲ್ಲೊಂದು ಮಾರ್ಗದರ್ಶನ,, ಕೇಂದ್ರದಲ್ಲಿ ಎನ್ ಡಿಎ ಅಧಿಕಾರ ಅವಧಿಯಲ್ಲಿ ಅನಂತ್ ಕುಮಾರ್ ವಿವಿಧ ಖಾತೆ ನಿಭಾಯಿಸಿದರು. ಅವರು ನಿಭಾಯಿಸಿದರು ಎನ್ನುವುದಕ್ಕಿಂತ ಅದಕ್ಕೊಂದು ಹೊಸ  ಅರ್ಥ ತಂದು ಕೊಟ್ಟವರು. ಔಷಧ ಮತ್ತು ಸ್ಟಂಟ್ ವಿಚಾರದ ಬಗ್ಗೆ ಹೇಳಲೇಬೇಕು.

 • NEWS12, Nov 2018, 3:54 PM IST

  ಔಷಧವಿದ್ದರೂ ಕೊಡಿಸಲಾಗಲಿಲ್ಲ, ಅನಂತ್ ನೆನೆದು ಭಾವುಕರಾದ ಸದಾನಂದ ಗೌಡ

  ಕರ್ನಾಟಕದಲ್ಲಿ ಒಟ್ಟಾಗಿ ಪಕ್ಷ ಕಟ್ಟಿದ್ದ ಗೆಳೆಯನ ನೆನೆದು ಕೇಂದ್ರ ಸಚಿವ ಸದಾನಂದ ಗೌಡ ಕಣ್ಣೀರಾಗಿದ್ದಾರೆ. ಅನಂತ ಕುಮಾರ್ ಅವರ ಅಂತಿಮ ದರ್ಶನ ಪಡೆದ ಸದಾನಂದ ಗೌಡ ತಮ್ಮ ಗೆಳೆತನ ನೆನಪು ಮಾಡಿಕೊಂಡರು.

 • Ananth Kumar

  INDIA12, Nov 2018, 2:16 PM IST

  ಕರ್ನಾಟಕ ರಾಜಕೀಯದಲ್ಲಿ ಬಿಜೆಪಿಯ 'ಎವರ್‌ಗ್ರೀನ್' ನಾಯಕ ಅನಂತ್ ಕುಮಾರ್

  ಅನಂತ್ ಕುಮಾರ್ ವ್ಯಕ್ತಿತ್ವ ಅದೆಷ್ಟು ಸರಳವಾಗಿತ್ತೆಂದರೆ, ಯಾವುದೇ ಪಕ್ಷದ ರಾಜಕಾರಣಿ ದೆಹಲಿಗೆ ಆಗಮಿಸಿದರೆ ಯಾವುದೇ ಹಿಂಜರಿಕೆ ಇಲ್ಲದೆ ಅವರನ್ನು ಭೇಟಿಯಾಗಲು ತೆರಳುತ್ತಿದ್ದರು. ಅನಂತ್ ಕುಮಾರ್‌ರವರ ಸಾವು ಕರ್ನಾಟಕ ಹಾಗೂ ಬಿಜೆಪಿ ರಾಜಕೀಯಕ್ಕೆ ತುಂಬಲಾರದ  ನಷ್ಟವೆನ್ನಬಹುದು. ಕರ್ನಾಟಕದಲ್ಲಿ ಬಿಜೆಪಿಗೆ ಅವರಂತಹ ಚಾಣಾಕ್ಷ, ಶಕ್ತಿಶಾಲಿ ಹಾಗೂ ಮೇಧಾವಿ ನಾಯಕ ಸಿಗುವುದು ಕಷ್ಟವೆನ್ನಬಹುದು.

 • NEWS12, Nov 2018, 11:30 AM IST

  ‘ತನ್ನ ಕಪ್ಪು ಕೋಟನ್ನು ತೆಗೆದು ಬಿಳಿ ಖಾದಿ ತೊಟ್ಟವರು ಅನಂತ್ ಕುಮಾರ್’

  ನನ್ನ ಆತ್ಮೀಯ ಸ್ನೇಹಿತನ್ನು ಕಳೆದುಕೊಂಡಿದ್ದೇನೆ.ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಹಿರಿದು. ಅನಂತ್‌ ಅಗಲಿಕೆ ರಾಜ್ಯಕ್ಕೆ, ಬಿಜೆಪಿಗೆ ತುಂಬಲಾರದ ನಷ್ಟವೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ,  ಆನಂತ್ ಜೊತೆಗಿನ ಮೂವತ್ತು ವರ್ಷಗಳ ಸ್ನೇಹ-ಒಡನಾಟವನ್ನು ಸ್ಮರಿಸಿಕೊಂಡದ್ದು ಹೀಗೆ.... 

 • Karan acharya

  LIFESTYLE12, Nov 2018, 11:01 AM IST

  ಕರಣ್ ಆಚಾರ್ಯ ದೇವರ ಉಗ್ರ ರೂಪದ ಚಿತ್ರ ಬಿಡಿಸುವ ಹಿಂದಿನ ಕಾರಣವೇನು..?

  ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ‘ಅಯೋಧ್ಯೆ ಆರ್ಟ್ ಫೆಸ್ಟ್ 2018’ ಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಕಲಾವಿದ ಕರಣ್ ಆಚಾರ್ಯ. ಅಲ್ಲಿ ಅವರು ಬಿಡಿಸಿದ ರಾಮಾಯಣದ ಕತೆ ಸಾರುವ ಚಿತ್ರ ಜಗತ್ತಿನಾದ್ಯಂತ ಮೆಚ್ಚುಗೆಗಳಿಸಿತ್ತು. ಈ ಕುರಿತು ಕರಣ್ ಜತೆ ಮಾತುಕತೆ.

 • CRICKET12, Nov 2018, 9:44 AM IST

  ರಣಜಿ ಕದನ: ವಿದರ್ಭದ ಎದುರಿನ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

  ನಾಯಕನಾಗಿ ಮತ್ತೆ ವಿನಯ್ ಕುಮಾರ್ ಆರ್ ತಂಡವನ್ನು ಮುನ್ನಡೆಸಲಿದ್ದು, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್ ಅಗರ್’ವಾಲ್, ಕೆ. ಗೌತಮ್, ಟೀಂ ಇಂಡಿಯಾ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕೆ.ಎಲ್ ರಾಹುಲ್ ಅನುಪಸ್ಥಿತಿ ತಂಡವನ್ನು ಕಾಡಬಹುದು. 

 • NEWS11, Nov 2018, 8:34 PM IST

  'ಮಗನ ಸೋಲಿನ ಭಯದಿಂದ ಯಡಿಯೂರಪ್ಪ ಶಿವಮೊಗ್ಗ ಬಿಟ್ಟು ಎಲ್ಲೂ ಹೋಗ್ಲಿಲ್ಲ'

  ಶಿವಮೊಗ್ಗ ಲೋಕಸಭೆ ಉಪ ಚುನಾವಣೆ  ಫಲಿತಾಂಶದ  ಬಳಿಕ ಬಿಎಸ್ ವೈ ಮಕಾಡೆ ಮಲಗಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ  ವ್ಯಂಗ್ಯವಾಡಿದ್ದಾರೆ.

 • Gaja cyclone

  NEWS11, Nov 2018, 7:41 PM IST

  ಅಪ್ಪಳಿಸಲಿದ್ದಾನೆ ಗಜ, ಕರ್ನಾಟಕಕ್ಕೂ ಇದೆಯಾ ಸಜಾ?

  ಕರ್ನಾಟಕ ಸೇರಿದಂತೆ ಸುತ್ತಲಿನ ರಾಜ್ಯಗಳು ಮತ್ತೊಂದು ನಿಸರ್ಗದ ವಿಕೋಪ ಎದುರಿಸಲು ಸಿದ್ಧವಾಗಬೇಕಿದೆ.  ಗಜ ಹೆಸರಿನ ಚಂಡಮಾರುತ ತನ್ನ ಆರ್ಭಟ ತೋರಿಸಲು ಆಗಮಿಸುತ್ತಿದೆ.

 • Fishes

  INDIA11, Nov 2018, 9:25 AM IST

  ಕರ್ನಾಟಕ ಮೀನಿಗೆ ಗೋವಾ ನಿಷೇಧ!

  ಮೀನು ಕೆಡದಂತೆ ರಕ್ಷಿಸಲು ಹೊರರಾಜ್ಯದ ಮೀನುಗಾರರು ಫಾರ್ಮಾಲಿನ್‌ ರಾಸಾಯನಿಕ ಸಿಂಪಡಿಸಿ, ಗೋವಾಕ್ಕೆ ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ಗೋವಾ ಸರ್ಕಾರ ಆರು ತಿಂಗಳ ಕಾಲ ಮೀನು ಆಮದಿಗೆ ನಿಷೇಧ ಹೇರಿದೆ. ನ.12ರ ಸೋಮವಾರದಿಂದ ಈ ನಿಷೇಧ ಜಾರಿಗೆ ಬರಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಮೀನುಗಾರರ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ.

 • NEWS11, Nov 2018, 8:46 AM IST

  ಹುಸಿಯಾಯ್ತು ರೈತರಿಗೆ ಕೊಟ್ಟ ಭರವಸೆ?

  ಎಕ್ಸಿಸ್ ಬ್ಯಾಂಕ್ ನಿಂದ ರೈತರಿಗೆ ವಾರೆಂಟ್ ಜಾರಿ ಮಾಡಿದ್ದು ಅದಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರೂ ಕೂಡ ಆತಂಕ ತಪ್ಪಿಲ್ಲ. 

 • paytm

  TECHNOLOGY10, Nov 2018, 6:23 PM IST

  ಬೆಂಗಳೂರು ಒನ್, ಕರ್ನಾಟಕ ಒನ್‌ಗಳಲ್ಲಿ ಪೇಟಿಎಂ ಪಾವತಿ-ಪಡೆಯಿರಿ ಕ್ಯಾಶ್‌ಬ್ಯಾಕ್!

  ಇನ್ಮುಂದೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್‌ಗಳಲ್ಲಿ ಪೇಟಿಎಂ ಮೂಲಕ ಬಿಲ್ ಪಾವತಿಸಲು ಸಾಧ್ಯವಿದೆ. ಇಷ್ಟೇ ಅಲ್ಲ ಶೇಕಡಾ 10 ರಷ್ಟು ಹಣವನ್ನ ಕ್ಯಾಶ್ ಬ್ಯಾಕ್ ಪಡೆಯುವ ಆಫರ್ ಕೂಡ ಇದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
   

 • state10, Nov 2018, 8:07 AM IST

  ಸಿಎಂ ಕುಮಾರಸ್ವಾಮಿ ಅವರಿಂದ ಮತ್ತೊಂದು ಮಹತ್ವದ ಯೋಜನೆ

  ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಇದೀಗ ರಾಜ್ಯದಲ್ಲಿ ಮತ್ತೊಂದು ಮಹತ್ವದ ಯೋಜನೆಯೊಂದನ್ನು ಜಾರಿ ಮಾಡುತ್ತಿದ್ದಾರೆ. ಇದೇ ನವೆಂಬರ್ 22 ರಂದು ಬಡವರ ಬಂಧು ಯೋಜನೆಗೆ ಚಾಲನೆ ನೀಡಲಿದ್ದಾರೆ. 

 • state10, Nov 2018, 7:31 AM IST

  ಟಿಪ್ಪು ಜಯಂತಿ ದಳ್ಳುರಿ! 5 ಜಿಲ್ಲೆಗಳಲ್ಲಿ ನಿಷೇಧಾಜ್ಞೆ

  ರಾಜ್ಯದಾದ್ಯಂತ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.