ಕನ್ನಡ ರಾಜ್ಯೋತ್ಸವ  

(Search results - 88)
 • Upendra
  Video Icon

  NRI1, Dec 2019, 11:43 PM IST

  ಮೆಲ್ಬೋರ್ನ್‌ನಲ್ಲಿ ರಾಜ್ಯೋತ್ಸವ, ದಂಪತಿ ಸಮೇತ ಉಪ್ಪಿ ಡೈಲಾಗ್ ಅಬ್ಬರ

  ಮೆಲ್ಬೋರ್ನ್ ಕನ್ನಡ ಸಂಘ ಹಮ್ಮಿಕೊಂಡಿದ್ದ ಕನ್ನ ಡ ರಾಜ್ಯೋತ್ಸವಕ್ಕೆ ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಸಾಕ್ಷಿಯಾದರು.

  ಕಾರ್ಯಕ್ರಮದಲ್ಲಿ ಎಲ್ಲೆಲ್ಲೂ ಉಪ್ಪಿ, ಉಪ್ಪಿ..ಉಪ್ಪಿ ಹರ್ಷ-ಉದ್ಘಾರಗಳು ಕೇಳಿಬಂದವು. ಡೈಲಾಗ್ ಮೂಲಕ ರಂಜಿಸಿದ  ಉಪೇಂದ್ರ ಹಾಡು ಹೇಳಲು ಮರೆಯಲಿಲ್ಲ.

 • karnataka sangha qatar

  News20, Nov 2019, 12:29 PM IST

  ದೋಹಾ, ಕತಾರ್‌ನಲ್ಲಿ ಕನ್ನಡ ಕಲರವ

  ಕತಾರ್ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ಎಸ್. ಎಲ್. ಭೈರಪ್ಪನವರು ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

 • Kumble - vijay

  Sandalwood18, Nov 2019, 12:01 PM IST

  #poetryreadingchallenge: ಜಂಬೋ ಸವಾಲು ಸ್ವೀಕರಿಸಿದ ವಿಜಯ್, ಸುದೀಪ್, ಪುನೀತ್!

  ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಒಂದೊಂದು ಅಭಿಯಾನ ಟ್ರೆಂಡ್ ಆಗ್ತಾ ಇರುತ್ತದೆ. ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಈಗ #poetryreadingchallenge ಎಲ್ಲಾ ಕಡೆ ಟ್ರೆಂಡ್ ಆಗ್ತಾಯಿದೆ. ಒಬ್ಬರು ಅವರಿಷ್ಟದ ಕವಿಯ ಕವನಗಳನ್ನು ವಾಚಿಸಿ ಅದನ್ನು ಇನ್ನೊಬ್ಬರಿಗೆ ಕೋ ಕೊಡ್ತಾ ಹೋಗುವುದೇ ಇದರ ವಿಶೇಷ.  

 • Nikhil

  Karnataka Districts18, Nov 2019, 11:57 AM IST

  ನನ್ನ ಸೋಲಿಸೋಕೆ ಊಟ, ನಿದ್ದೆ ಬಿಟ್ಟು ಷಡ್ಯಂತ್ರ ಮಾಡಿದ್ರು: ನಿಖಿಲ್ ಕುಮಾರಸ್ವಾಮಿ

  ಲೋಕಸಭಾ ಚುನಾವಣೆ ಸಂದರ್ಭ ನನ್ನನ್ನು ಸೋಲಿಸೋದಕ್ಕೆ ಕೆಲವರು ಊಟ, ತಿಂಡಿ, ನಿದ್ದೆ ಬಿಟ್ಟು ಷಡ್ಯಂತ್ರ ಮಾಡಿದ್ರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತೆ. ಆದರೆ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ ಎಂದಿದ್ದಾರೆ.

 • Kannada
  Video Icon

  NRI17, Nov 2019, 11:52 PM IST

  ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

  ನವೆಂಬರ್   2ರಂದು ಅಮೆರಿಕಾದ ನ್ಯೂಯಾರ್ಕ್ ರಾಜ್ಯದ  ಆಲ್ಬನಿಯಲ್ಲಿ ಕನ್ನಡ-ರಾಜ್ಯೋತ್ಸವವನ್ನು  ಅದ್ದೂರಿಯಿಂದ ಆಚರಿಸಲಾಯಿತು.  ಇಲ್ಲಿಯ ಕನ್ನಡ-ಕಲಿ ಶಾಲೆಯ ಪುಟಾಣಿ ಮಕ್ಕಳು, ಲತಾ ಮೇಡಂ ನಿರ್ದೇಶನದ  "ಕನ್ನಡ-ವೈಭವ"  ಎಂಬ ಕಾರ್ಯಕ್ರಮದಲ್ಲಿ  ನಮ್ಮ ನಾಡಿನ ಚರಿತ್ರೆಯನ್ನು ಶರಣರು, ಸಂತರು, ಕವಿಗಳು, ಮಹಾರಾಜರು, ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು, ಕ್ರಿಕೆಟ್ ಆಟಗಾರರು, ವಿಜ್ಞಾನಿಗಳು, ಮುಂತಾದವವ ರೂಪದಲ್ಲಿ  ಪ್ರಸ್ತುತ ಪಡಿಸಿದರು.

 • Apollo Hospital
  Video Icon

  Bengaluru-Urban15, Nov 2019, 12:51 PM IST

  ಬೆಂಗಳೂರು: ಅಪೋಲೋ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

  ನವೆಂಬರ್ ಬಂತು ಎಂದರೆ ಎಲ್ಲೆಡೆ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ್ದೇ ಸಂಭ್ರಮ. ವಿಶೇಷವೆಂದರೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿಯೂ ವೈದ್ಯರು, ಸಿಬ್ಬಂದಿ ಕನ್ನಡ ಪ್ರೇಮವನ್ನು ಮರೆದರು. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಒಟ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದು ಪ್ರತಿಬಿಂಬಿತವಾಗಿದ್ದು ಹೀಗೆ...

 • Yash
  Video Icon

  Sandalwood10, Nov 2019, 9:12 PM IST

  ಜೋಗಿ ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಸಿದ ಯಶ್

  ಬೆಂಗಳೂರು[ನ. 10] ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕನ್ನಡ ಕವನ ವಾಚನ ಸವಾಲನ್ನು ನಾಯಕ ನಟ ಯಶ್ ಸ್ವೀಕರಿಸಿದ್ದಾರೆ.

  ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರು ನೀಡಿದ್ದ ಸವಾಲನ್ನು ಸ್ವೀಕರಿಸಿರುವ ಯಶ್ ಕುವೆಂಪು ಅವರ ‘ಓ ನನ್ನ ಚೇತನ’ ಕವನ ವಾಚನ ಮಾಡಿದ್ದಾರೆ. ಜತೆಗೆ ನಿರ್ದೇಶಕ ಟಿ.ಎಸ್, ನಾಗಾಭರಣ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್, ಗೌಸ್ ಫೀರ್ , ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಆರ್ಮುಗಂ ರವಿಶಂಕರ್ ಅವರಿಗೆ ಯಶ್ ಕವನ ಓದುವ ಸವಾಲು ಹಾಕಿದ್ದಾರೆ.

 • anushka shetty

  Cine World2, Nov 2019, 4:18 PM IST

  ಕನ್ನಡದಲ್ಲಿ ಕನ್ನಡಿಗರಿಗೆ ಶುಭಾಶಯ: ಎಷ್ಟು ಚೆಂದ ಅನುಷ್ಕಾ ಭಾಷಾ ಲಯ!

  ಕರಾವಳಿ ಬ್ಯೂಟಿ ಟಾಲಿವುಡ್‌ ಸ್ವೀಟಿ ಅನುಷ್ಕಾ ಶೆಟ್ಟಿಗೆ ಕನ್ನಡ ಭಾಷೆ ಮೇಲಿರುವ ಪ್ರೀತಿ ಹಾಗೂ ಗೌರವ ದೊಡ್ಡದು, ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ಹೇಳಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ..

 • BSY

  Kolar2, Nov 2019, 2:39 PM IST

  ಕೋಲಾರ: ಸಿಎಂ ಹಿಂದಿಯ ಗುಲಾಮ ಎಂದ ಕರವೇ..!

  ಕೋಲಾರ ಕರವೇ ಸಿಎಂ ಬಿ. ಎಸ್ ಯಡಿಯೂರಪ್ಪ ಅವರನ್ನು ಹಿಂದಿಯ ಗುಲಾಮ ಎಂದು ಕರೆದಿದೆ. ಶುಕ್ರವಾರ ರಾಜ್ಯೋತ್ಸವ ಸಂಭ್ರಮಾಚರಣೆ ಸಂದರ್ಭ ಸಂದರ್ಭ ಸಿಎಂ ಹಿಂದಿ ಹೇರಿಕೆ ಮಾಡುವ ಕುರಿತು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Bus

  Dakshina Kannada2, Nov 2019, 1:46 PM IST

  ಮಂಗಳೂರು: ಕರಾವಳಿಯ KSRTC ಕನ್ನಡದ ತೇರು..!

  ರಾಜ್ಯೋತ್ಸವಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗ ಕೂಡ ವಿಶೇಷ ಮೆರುಗು ನೀಡಿದೆ. ನಿಗಮದ ಬಸ್‌ವೊಂದರಲ್ಲಿ ಕನ್ನಡ ರಾಜ್ಯೋತ್ಸವದ ಸಲುವಾಗಿ ವಿಶೇಷ ಬಣ್ಣ ಹಾಗೂ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರವನ್ನು ಪ್ರದರ್ಶಿಸಿರುವುದು ವಿಶೇಷ ಗಮನ ಸೆಳೆಯಿತು.

 • undefined

  Kalaburagi2, Nov 2019, 12:55 PM IST

  ಕಲಬುರಗಿ: ಪ್ರತ್ಯೇಕ ರಾಜ್ಯದ ಬೇಡಿಕೆ, 30 ಜನರು ಅರೆಸ್ಟ್

  ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಮಹಾದೇವಪ್ಪ ಗೌಡ ಪಾಟೀಲ್‌ ನರಿಬೋಳ್ ಸೇರಿದಂತೆ 30 ಕ್ಕೂ ಹೆಚ್ಚುಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.
   

 • undefined

  Ballari2, Nov 2019, 11:14 AM IST

  ಕನ್ನಡ ರಾಜ್ಯೋತ್ಸವ: ಗಣಿ ನಾಡು ಬಳ್ಳಾರಿಯಲ್ಲಿ 64 ಅಡಿಯ ಕನ್ನಡಧ್ವಜ

  ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಐತಿಹಾಸಿಕ ಕೋಟೆಯ ಮೇಲೆ ನವ ಕರ್ನಾಟಕ ಯುವಶಕ್ತಿ ಸಂಘಟನೆಯ ಕಾರ್ಯಕರ್ತರು 64  ಅಡಿ ಎತ್ತರದ ಬೃಹತ್ ಕನ್ನಡ ಧ್ವಜಾರೋಹಣ ಮಾಡಿದ್ದಾರೆ . 

 • Rajyotsava new

  OTHER SPORTS2, Nov 2019, 11:11 AM IST

  ಮೂವರು ಕ್ರೀಡಾ ಸಾಧಕರಿಗೆ ರಾಜ್ಯೋತ್ಸವ ಗರಿ

  ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವನಾಥ್, 2 ಚಿನ್ನ, 2 ಬೆಳ್ಳಿಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದರು. ಭಾರತ ಬಾಕ್ಸಿಂಗ್ ತಂಡದ ಕೋಚ್ ಆಗಿರುವ ಚೇನಂಡ ಅಚ್ಚಯ್ಯ ಕುಟ್ಟಪ್ಪ ಹಾಗೂ ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿರುವ ಅತಿ ಎತ್ತರದ ಶಿಖರಗಳ ತುತ್ತ ತುದಿಯಲ್ಲಿ ಭಾರತದ ಧ್ವಜವನ್ನು ಹಾರಿಸಿರುವ ಪರ್ವತಾರೋಹಿ ಹುಬ್ಬಳ್ಳಿಯ ನಂದಿತಾ ನಾಗನಗೌಡರ ಅವರ ಕ್ರೀಡಾ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಯಿತು.

   

 • Flag

  Dakshina Kannada2, Nov 2019, 10:12 AM IST

  ಕನ್ನಡ ರಾಜ್ಯೋತ್ಸವದಂದು ಬೆಳ್ತಂಗಡಿಯಲ್ಲಿ ತುಳು ಧ್ವಜ ಹಾರಾಟ

  ತುಳುನಾಡ ಧ್ವಜ ಎಂದು ಹೇಳಲಾಗುತ್ತಿರುವ ಬಾವುಟವೊಂದನ್ನು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ಹಾರಿಸಿರುವ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ವರದಿಯಾಗಿದೆ. 
   

 • undefined

  Chamarajnagar2, Nov 2019, 9:10 AM IST

  ಯಳಂದೂರು: ಕನ್ನಡ ರಾಜ್ಯೋತ್ಸವದಲ್ಲಿ ಹಾರಾಡಿದ ಎರಡು ನಾಡಧ್ವಜ!

  ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಶೀತಲ ಸಮರ ರಾಜ್ಯೋತ್ಸವ ಸಂದರ್ಭದಲ್ಲೂ ಮುಂದುವರಿದಿದೆ. ಇಷ್ಟು ವರ್ಷ ಒಟ್ಟಿಗೆ ರಾಜ್ಯೋತ್ಸವ ಆಚರಿಸುತ್ತಿದ್ದವರು ಈ ಬಾರಿ ಪ್ರತ್ಯೇಕ ಧ್ವಜಾರೋಹಣ ನೆರವೇರಿಸಿದ್ದಾರೆ.