ಕಟಾವು  

(Search results - 18)
 • undefined

  Karnataka Districts20, Jan 2020, 8:08 AM IST

  ಕಾರ್ಖಾನೆ ಬೇಜವಾಬ್ದಾರಿ: ಕಟಾವು ಮಾಡದೆ ಒಣಗಿದ 10 ಲಕ್ಷದ ಕಬ್ಬು!

  ಮುಂಡರಗಿ ಸಕ್ಕರೆ ಕಾರ್ಖಾನೆಯವರು ಸಕಾಲದಲ್ಲಿ ಕಬ್ಬು ಕಟಾವು ಮಾಡದೆ ಪ್ರತಿ ವರ್ಷವೂ ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಾರೆ. ಇದೇ ಕಾರಣಕ್ಕಾಗಿ ಕಳೆದ ವರ್ಷ ತಿಗರಿ ಗ್ರಾಮದ ರೈತನೋರ್ವ ಸಕ್ಕರೆ ಕಾರ್ಖಾನೆಯ ಎದುರಲ್ಲೇ ಸಾವಿಗೀಡಾದ ಘಟನೆಯನ್ನು ಯಾರೂ ಮರೆತಿಲ್ಲ. ಈಗಲೂ ರೈತರ ಕಬ್ಬು ಕಟಾವು ಮಾಡದೆ ಸತಾಯಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
   

 • Crop

  Karnataka Districts18, Jan 2020, 12:02 PM IST

  ಹೆದ್ದಾರಿ ಕಾಮಗಾರಿಗಾಗಿ ಫಸಲು ತುಂಬಿದ್ದ ಜಮೀನು ತೆರವು

  ಇನ್ನೇನು ಕಟಾವು ಮಾಡಿ ಬೆಳೆ ಕೈಗೆ ಬರಬೇಕಿತ್ತು ಎನ್ನುವಷ್ಟರಲ್ಲಿ ಜಮೀನನ್ನೇ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಹೆದ್ದಾರಿ ಕಾಮಗಾರಿಗೆ ತೊಡಕಾಗಿದ್ದ ಆರು ಮಂದಿ ರೈತರ ಜಮೀನನ್ನು ಶುಕ್ರವಾರ ಭೂಸ್ವಾಧೀನ ವಿಶೇಷ ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್‌ ಹಾಗೂ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ನ್ಯಾಯಾಯದ ಆದೇಶದ ಹಿನ್ನೆಲೆ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು.

 • Crop

  Karnataka Districts3, Jan 2020, 11:05 AM IST

  ಇಂಧನ ಬೇಡ, ಕೂಲಿಗಾರರೂ ಬೇಡ; ದಿನಕ್ಕೆ 1 ಎಕರೆ ಕಟಾವು ಮಾಡುತ್ತೆ ಈ ಕೊಯ್ಲುಗತ್ತಿ..!

  ಬೆಳೆ ಬೆಳೆಯುವುದೊಂದು ಕಷ್ಟವಾದರೆ ಫಸಲು ಬಂದಾಗ ಕೊಯ್ಲು ಮಾಡುವುದು ಇನ್ನೊಂದು ಕಷ್ಟ. ಆಳುಗಳು ಸಿಗುವುದು ಕಷ್ಟ. ಆಳುಗಳ ಜಾಗಕ್ಕೆ ಯಂತ್ರಗಳು ಬಂದರೂ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ಆದರೆ ನಿವೃತ್ತ ಸೈನಿಕರೊಬ್ಬರು ಪರಿಚಯಸಿದ ಕೊಯ್ಲುಗತ್ತಿ ದಿನಕ್ಕೆ 1 ಎಕರೆಯಷ್ಟು ಫಸಲು ಕಟಾವು ಮಾಡುವ ಯಂತ್ರವನ್ನು ಪರಿಚಯಿಸಿದ್ದಾರೆ.

 • suger cane

  Karnataka Districts19, Dec 2019, 9:01 AM IST

  ರೈತರಿಗೆ ಸಂಸತದ ಸುದ್ದಿ: ಕಬ್ಬಿನ ಬಿಲ್ ರೈತರ ಖಾತೆಗೆ ಜಮಾ

  ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿಗೆ ಪೂರೈಸುವ ಪ್ರತಿ ಟನ್‌ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಹೊರತುಪಡಿಸಿ ಮೊದಲನೇ ಕಂತು 2500 ದ್ವಿತೀಯ ಕಂತು 200 ಸೇರಿ ಒಟ್ಟು 2700 ಬೆಲೆ ನೀಡಲಾಗುವುದು ಎಂದು ನಿರಾಣಿ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಘೋಷಣೆ ಮಾಡಿದರು.

 • paddy field

  Karnataka Districts12, Dec 2019, 2:20 PM IST

  ಮಂಡ್ಯ: ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ದರ 1,815..!

  ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರಿನ ಕೆಲ ಭಾಗಗಳಲ್ಲಿ ರೈತರು ಭತ್ತ ಬೆಳೆದು ಕಟಾವು ಮತ್ತು ಒಕ್ಕಣೆ ಕಾರ್ಯ ಆರಂಭಿಸಿದ್ದಾರೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

 • Murder

  Karnataka Districts9, Dec 2019, 9:31 AM IST

  ರಜೆ ಕೊಡಲು ನಿರಾಕರಿಸಿದ ಮಾಲೀಕನನ್ನೇ ಕೊಂದ ಕೆಲಸಗಾರರು!

  ಊರಿಗೆ ಕಳಿಸದ ಕಾರಣ ಕಬ್ಬು ಕಟಾವು ಗ್ಯಾಂಗ್‌ ಮಾಲೀಕನನ್ನೇ ಕೆಲಸಗಾರರು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ತಾಲೂಕಿನ ಆನಿಗೋಳ ಗ್ರಾಮದ ಹದ್ದಿನಲ್ಲಿ ನಡೆದಿದೆ.
   

 • suger cane

  Karnataka Districts7, Dec 2019, 11:01 AM IST

  ರೈತರಿಗೆ ಸಂತಸದ ಸುದ್ದಿ: ಶೀಘ್ರವೇ ಕಬ್ಬಿನ ಬಿಲ್ ಪಾವತಿ

  ಸ್ಥಳೀಯ ಲೈಲಾ ಶುಗರ್ಸ್ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ರೈತರಿಗೆ ಕಾರ್ಖಾನೆಯಿಂದ ಮೊದಲ ಕಂತಿನ ರೂಪದಲ್ಲಿ 2200 ರು. ಮತ್ತು ಕಬ್ಬು ಕಟಾವು ವೆಚ್ಚ 283 ರು. ಸೇರಿದಂತೆ ಪ್ರತಿ ಟನ್ ಕಬ್ಬಿಗೆ ಒಟ್ಟು 2483 ದರದ ಪ್ರಕಾರ ಬಿಲ್‌ನ್ನು ಎರಡು ದಿನಗಳಲ್ಲಿ ಪಾವತಿಸಲಾಗುತ್ತದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಹೇಳಿದ್ದಾರೆ. 
   

 • delta farmers advise to edappadi palanisamy

  Karnataka Districts29, Nov 2019, 8:26 AM IST

  ಕೊಪ್ಪಳ: ಶಾಲಾ ಆವರಣದಲ್ಲಿ ಆಣೆವಾರಿ, ಸಾವಿರಕ್ಕೂ ಅಧಿಕ ರೈತರಿಗೆ ದೋಖಾ

  ಬೆಳೆ ಇರುವ ರೈತರ ಭೂಮಿಯಲ್ಲಿ ‘ಆಣೆವಾರಿ’ (ಬೆಳೆ ಕಟಾವು ಸಮೀಕ್ಷೆ) ಮಾಡುವುದು ನಿಯಮ. ಆದರೆ, ಸರ್ಕಾರಿ ಶಾಲಾ ಆವರಣದಲ್ಲಿ ಆಣೆವಾರಿ ಮಾಡುವ ಮೂಲಕ ಇಲ್ಲಿನ ಅಧಿಕಾರಿಗಳು ಅನ್ನದಾತರಿಗೆ ಮುಂಗಾರಿ ಹಂಗಾಮಿನ ಬೆಳೆವಿಮೆ ಕೈಗೆ ದಕ್ಕದಂತೆ ಮಾಡಿದ್ದಾರೆ.
   

 • undefined

  Bengaluru-Urban13, Nov 2019, 8:05 AM IST

  ನಮ್ಮ ಮೆಟ್ರೋ ಕಾಮಗಾರಿಗೆ 265 ಮರಗಳ ಕಟಾವು

  ನಮ್ಮ ಮೆಟ್ರೋ ಕಾಮಗಾರಿಗಾಗಿ ನೂರಾರು ಮರಗಳ ಮಾರಣಹೋಮ ನಡೆಯುತ್ತಿದೆ. ಎರಡನೇ ಹಂತರ ಕಾಮಗಾರಿಗಾಗಿ ಮರಗಳನ್ನು ಕಡಿಯಲಾಗುತ್ತಿದೆ.

 • কুমিরের ছবি

  Koppal3, Nov 2019, 8:24 AM IST

  ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷ: ಎದ್ನೊ ಬಿದ್ನೊ ಅಂತ ಓಡಿದ ರೈತರು!

  ಗಂಗಾವತಿ ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಉಮೇಶ ಭೈರಿ ಅವರ ಭತ್ತದ ಹೊಲದಲ್ಲಿ ಕಟಾವು ಮಾಡುವಾಗ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೆಚ್ಚಿಬಿದ್ದು ಓಡಿ ಹೋದ ಘಟನೆ ಶನಿವಾರ ಸಂಭವಿಸಿದೆ.

 • village ragi cleaning in road

  Haveri31, Oct 2019, 4:19 PM IST

  ಹಾವೇರಿ: ಕಣವಾಗಿವೆ ಗ್ರಾಮೀಣ ರಸ್ತೆಗಳು, ಸವಾರರಿಗೆ ಸಂಕಷ್ಟ

  ಕಳೆದ ಕೆಲ ದಿನಗಳ ಬಳಿಕ ಜಿಲ್ಲೆಯಲ್ಲಿ ಬಿಸಿಲು ಮೂಡಿದೆ. ನಿರಂತರವಾಗಿ ಹೊಯ್ದ ಮಳೆಯಿಂದ ಕಟಾವು ಮಾಡಿದ್ದ ಬೆಳೆಗಳನ್ನು ಒಣಗಿಸಲಾಗದೇ ಪರದಾಡುತ್ತಿದ್ದ ರೈತರು ಈಗ ಎಲ್ಲೆಡೆ ರಸ್ತೆಯನ್ನೇ ಕಣವಾಗಿಸಿಕೊಂಡಿದ್ದಾರೆ. ಮಳೆ ನೀರಿಗೆ ಸಿಲುಕಿದ್ದ ಬೆಳೆಯನ್ನು ಒಣಗಿಸಲು ಹರಸಾಹಸ ಪಡುತ್ತಿದ್ದಾರೆ.
   

 • suger cane

  Vijayapura23, Oct 2019, 12:31 PM IST

  ವಿಜಯಪುರ: ಪ್ರತಿ ಟನ್‌ ಕಬ್ಬಿಗೆ 2525: ನಂದಿ ಕಾರ್ಖಾನೆ ಘೋಷಣೆ

  ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸ್ತಕ ಸಾಲಿನಲ್ಲಿ ಪೂರೈಕೆಯಾಗುವ ಪ್ರತಿ ಟನ್‌ ಕಬ್ಬಿಗೆ 2525 ಬಿಲ್‌ ನೀಡಲಾಗುವುದು. ಕಬ್ಬು ಕಟಾವು, ಸಾರಿಗೆ ಬಿಲ್‌ ಹೊರತುಪಡಿಸಿ ನೀಡಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಶಿರಬೂರ ಘೋಷಿಸಿದ್ದಾರೆ.
   

 • Autostand

  Dakshina Kannada22, Oct 2019, 8:22 AM IST

  ಮಂಗಳೂರು: ಆಟೋ ನಿಲ್ದಾಣದ ಬಳಿ ಪೈರು ಕಟಾವಿಗೆ ಸಿದ್ಧ!

  ಮಂಗಳೂರಿನ ಆಟೋ ನಿಲ್ದಾಣದ ಹತ್ತಿರ ಪೈರು ಕಟಾವಿಗೆ ಸಿದ್ಧವಾಗಿದೆ. ಹಚ್ಚ ಹಸಿರಾಗಿ ಕಂಗೊಳಿಸ್ತಿರೋ ತೆನೆ ಭರಿತ ಪೈರನ್ನು ಇನ್ನೇನು ಕಟಾವು ಮಾಡಬಹುದು. ಹಾಗಿದ್ರೆ ಈ ಆಟೋ ನಿಲ್ದಾಣ ಎಷ್ಟು ಕೆಸರುಮಯವಿರಬಹುದು ನೀವೇ ಯೋಚಿಸಿ.

 • delta farmers advise to edappadi palanisamy

  Karnataka Districts6, Oct 2019, 9:03 AM IST

  ಮಳೆ ಬಂದ್ರೂ ಕಷ್ಟ, ಬರದಿದ್ರೂ ಕಷ್ಟ: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತರು

  ಆಗ ನೆರೆ ಹಾವಳಿಗೆ ಸಿಲುಕಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿತ್ತು. ಪ್ರವಾಹದಿಂದ ಬಚಾವಾಗಿದ್ದ ಬೆಳೆಯನ್ನು ಈಗ ಕಟಾವು ಮಾಡುತ್ತಿದ್ದು, ಮಳೆ ಕಾಟ ಆರಂಭವಾಗಿದೆ. ಇದರಿಂದ ಅಳಿದುಳಿದ ಅಲ್ಪಸ್ವಲ್ಪ ಬೆಳೆಯೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ.
   

 • suicide attempt

  NEWS16, Dec 2018, 7:22 AM IST

  ಸಕ್ಕರೆ ಕಾರ್ಖಾನೆ ಎದುರೇ ರೈತ ಆತ್ಮಹತ್ಯೆ

  ಕಬ್ಬನ್ನು ಕಟಾವು ಮಾಡಿ ತಂದರೂ ಖರೀದಿಸಲು ಕಾರ್ಖಾನೆಯವರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರೈತನೊಬ್ಬ ಕಾರ್ಖಾನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.