ಐಪಿಎಲ್ 2021
(Search results - 23)CricketJan 21, 2021, 6:29 PM IST
ಆಟಗಾರರನ್ನು ರಿಲೀಸ್ ಮಾಡಿದ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ..?
ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗುತ್ತಿದ್ದು, ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಬೇಡವಾದ ಆಟಗಾರರನ್ನು ರಿಲೀಸ್ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10 ಆಟಗಾರರನ್ನು ರಿಲೀಸ್ ಮಾಡಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು ಸ್ಟೀವ್ ಸ್ಮಿತ್ ಅವರಿಗೆ ಗೇಟ್ ಪಾಸ್ ನೀಡಿದೆ. ಸದ್ಯ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಯಾವ ಫ್ರಾಂಚೈಸಿಯ ಬಳಿ ಎಷ್ಟು ಹಣವಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..
CricketJan 21, 2021, 4:49 PM IST
RCB ವಿರುದ್ದ ಮತ್ತೆ ಕಿಡಿಕಾರಿದ ಗೌತಮ್ ಗಂಭೀರ್..!
ಬೆಂಗಳೂರು ಮೂಲದ ಫ್ರಾಂಚೈಸಿಯ ಈ ಹಿಂದಿನ ರೆಕಾರ್ಡ್ಗಳನ್ನು ಗಮನಿಸಿದರೆ ಮೈಕ್ ಹೆಸನ್ ಹಾಗೂ ಸೈಮನ್ ಕ್ಯಾಟಿಚ್ ಅವರು ತಮ್ಮ ಹುದ್ದೆ ಉಳಿಸಿಕೊಂಡಿದ್ದೇ ಅವರ ಅದೃಷ್ಟ ಎಂದು ಗೌತಮ್ ಗಂಭೀರ್ ವ್ಯಂಗ್ಯವಾಡಿದ್ದಾರೆ.
CricketJan 20, 2021, 8:05 PM IST
ಮಲಿಂಗ ಸೇರಿ 7 ಕ್ರಿಕೆಟಿಗರ ಕೈಬಿಟ್ಟ ಮುಂಬೈ; ತಂಡದಲ್ಲಿ ಉಳಿದುಕೊಂಡವರ್ಯಾರು?
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 2021ರ ಐಪಿಎಲ್ ಟೂರ್ನಿಗೆ ಆಟಗಾರರ ರಿಟೈನ್ ಹಾಗೂ ರಿಲೀಸ್ ಪಟ್ಟಿ ಬಿಡುಗಡೆ ಮಾಡಿದೆ. ಐಪಿಎಲ್ ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್, ಮುಂಬೈ ತಂಡದ ಕೀ ಬೌಲರ್ ಲಸಿತ್ ಮಲಿಂಗರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ. ಮಲಿಂಗ ಜೊತೆ 7 ಕ್ರಿಕೆಟಿಗರಿಗೂ ಗೇಟ್ ಪಾಸ್ ನೀಡಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
CricketJan 20, 2021, 5:19 PM IST
IPL 2021: ಈ ಐವರಿಗೆ ಗೇಟ್ಪಾಸ್ ನೀಡುತ್ತಾ ಆರ್ಸಿಬಿ..?
ಬೆಂಗಳೂರು: ಕಳೆದ 13 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಾದರೂ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಹೀಗಾಗಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟಲು ಬೆಂಗಳೂರು ಮೂಲದ ಫ್ರಾಂಚೈಸಿ ಮುಂದಾಗಿದೆ.
ಇದರ ಬೆನ್ನಲ್ಲೇ ಆಟಗಾರರ ರೀಟೈನ್ ಹಾಗೂ ರಿಲೀಸ್ಗೆ ಇಂದು(ಜ.20) ಕಡೆಯ ದಿನವಾಗಿದ್ದು, ಆರ್ಸಿಬಿ ಫ್ರಾಂಚೈಸಿ ಈ ಐವರು ಆಟಗಾರರಿಗೆ ಗೇಟ್ಪಾಸ್ ನೀಡುವ ಸಾಧ್ಯತೆಯಿದೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.CricketJan 20, 2021, 4:47 PM IST
ಐಪಿಎಲ್ 2021: ಸ್ಟಾರ್ ಸ್ಪಿನ್ನರ್ಗೆ ಸಿಎಸ್ಕೆ ತಂಡದಿಂದ ಗೇಟ್ಪಾಸ್..!
ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಈಗಾಗಲೇ ಸಿದ್ದತೆಗಳು ಆರಂಭವಾಗಿದ್ದು, ಫೆಬ್ರವರಿ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಮಿನಿ ಹರಾಜು ನಡೆಯುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೂ ಜನವರಿ 20ರೊಳಗಾಗಿ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಹಾಗೂ ತಂಡದಿಂದ ಕೈಬಿಡುವ ಹೆಸರನ್ನು ಅಂತಿಮಗೊಳಿಸಲು ಸೂಚಿಸಿದೆ.
ಇದರ ಭಾಗವಾಗಿ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿ ತಮ್ಮ ಅನುಭವಿ ಸ್ಪಿನ್ನರ್ಗೆ ಗೇಟ್ ಪಾಸ್ ನೀಡಿದೆ. ಯಾರು ಆ ಸ್ಪಿನ್ನರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
CricketJan 18, 2021, 4:20 PM IST
ಐಪಿಎಲ್ 2021: ಆಟಗಾರರ ಗೇಟ್ಪಾಸ್ಗೆ ಮೂರೇ ದಿನ ಬಾಕಿ; ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ..?
ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿ ಕೆಲವೇ ತಿಂಗಳುಗಳು ಕಳೆದಿದ್ದು, ಮತ್ತೊಂದು ಚುಟುಕು ಕ್ರಿಕೆಟ್ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಒಂದು ಮಿನಿ ಹರಾಜು ಕೂಡಾ ನಡೆಯಲಿದೆ.
ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಹಾಗೂ ಗೇಟ್ಪಾಸ್ ನೀಡಲು ಜನವರಿ 21 ಕೊನೆಯ ದಿನವಾಗಿದೆ. ಎಲ್ಲಾ ಫ್ರಾಂಚೈಸಿಗಳು 85 ಕೋಟಿ ರುಪಾಯಿಯೊಳಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಈ ಪೈಕಿ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದುಕೊಂಡಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
CricketJan 17, 2021, 12:34 PM IST
ಆರ್ಸಿಬಿಯಿಂದ ದುಬೆ, ಯಾದವ್, ಅಲಿ ಔಟ್?
2021ರ ಐಪಿಎಲ್ಗೆ ಮುಂದಿನ ತಿಂಗಳು ಆಟಗಾರರ ಹರಾಜು| ತಂಡಗಳು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಜ.20ರ ಗಡುವು| ಕೆಲ ದುಬಾರಿ ಆಟಗಾರರನ್ನು ಕೈಬಿಡುವ ನಿರೀಕ್ಷೆ
CricketJan 16, 2021, 10:01 AM IST
ಈ ವರ್ಷ ಐಪಿಎಲ್ಗೆ ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್?
ಹಿರಿಯರ ತಂಡದಲ್ಲಿ ಆಡಿದ ಕಾರಣ, ಅರ್ಜುನ್ ಐಪಿಎಲ್ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಅರ್ಜುನ್ ಯಾವುದಾದರೂ ಒಂದು ತಂಡದ ಪಾಲಾಗುವ ನಿರೀಕ್ಷೆ ಇದೆ.
CricketJan 8, 2021, 3:01 PM IST
ಫೆಬ್ರವರಿ 11ಕ್ಕೆ ಐಪಿಎಲ್ ಆಟಗಾರರ ಹರಾಜು..?
ಉಳಿಸಿಕೊಳ್ಳಲು ಇಚ್ಛಿಸುವ ಹಾಗೂ ಕೈಬಿಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಎಲ್ಲ 8 ತಂಡಗಳಿಗೆ ಜ.21ರ ಗಡುವು ನೀಡಲಾಗಿದೆ. ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರನ್ನು ಬದಲಿಸಿಕೊಳ್ಳಲು ಫೆ.4ರ ವರೆಗೂ ಸಮಯ ನೀಡಲಾಗಿದೆ ಎಂದು ಗುರುವಾರ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದರು.
CricketJan 3, 2021, 11:12 AM IST
RCB ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ ಡೇಲ್ ಸ್ಟೇನ್..!
ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪರ ಆಡಿದ್ದ ಸ್ಟೇನ್, ಮುಂದಿನ ಆವೃತ್ತಿಯಲ್ಲಿ ಮತ್ತ್ಯಾವುದೇ ತಂಡದ ಪರವೂ ಆಡುವುದಿಲ್ಲ ಎನ್ನುವುದನ್ನೂ ಖಚಿತಪಡಿಸಿದ್ದಾರೆ.
CricketDec 25, 2020, 4:58 PM IST
ಸುರೇಶ್ ರೈನಾ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸಿಎಸ್ಕೆ..!
ಸುರೇಶ್ ರೈನಾ ಅವರು ಮುಂಬೈನ ವಿಮಾನ ನಿಲ್ದಾಣದ ಸಮೀಪವಿರುವ ಕ್ಲಬ್ನಲ್ಲಿ ತಡರಾತ್ರಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು, ಈ ವೇಳೆ ಕೆಲ ಸೆಲಿಬ್ರಿಟಿಗಳನ್ನು ಸೇರಿದಂತೆ 34 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.
CricketDec 24, 2020, 5:17 PM IST
2022ರ ಐಪಿಎಲ್ಗೆ 10 ತಂಡಗಳು ಎಂಟ್ರಿ
ಈ ಹಿಂದಿನಿಂದಲೂ ಕ್ರೀಡಾ ಮಹಾಜಾತ್ರೆ ಎನಿಸಿಕೊಂಡಿರುವ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ರಾಹುಲ್ ದ್ರಾವಿಡ್ ಸಹ ಈ ವಾದಕ್ಕೆ ಧ್ವನಿಗೂಡಿಸಿದ್ದರು. ಇದೇ ವೇಳೆ ಸಾಮಾನ್ಯ ಸಭೆಯಲ್ಲಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಟಿ20 ಮಾದರಿಯ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸಬೇಕು ಎನ್ನುವ ಮಹತ್ವದ ತೀರ್ಮಾನವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ.
CricketDec 22, 2020, 8:15 AM IST
2021ರ ಐಪಿಎಲ್: ಎಂಟೇ ತಂಡಗಳು ಕಣಕ್ಕೆ?
ಮುಂದಿನ ವರ್ಷ 2021ರ ಐಪಿಎಲ್ನಲ್ಲಿ 10 ತಂಡಗಳು ಆಡುತ್ತಿಲ್ಲ. ಬದಲಾಗಿ 8 ತಂಡಗಳೇ ಪ್ರಶಸ್ತಿಗಾಗಿ ಫೈಟ್ ನಡೆಸಲಿವೆ. ಆದರೆ 2022ಕ್ಕೆ 2 ಹೆಚ್ಚುವರಿ ತಂಡಗಳು ಸೇರಿ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸುವುದನ್ನು ನಿರೀಕ್ಷಿಸಲಾಗಿದೆ.
CricketDec 4, 2020, 11:28 AM IST
2021ರ ಐಪಿಎಲ್ಗೆ 2 ಹೊಸ ತಂಡ ಸೇರ್ಪಡೆ..?
2016-17ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು 2 ವರ್ಷ ಅಮಾನತುಗೊಂಡಿದ್ದಾಗ ರೈಸಿಂಗ್ ಪುಣೆ ಮತ್ತು ಗುಜರಾತ್ ಲಯನ್ಸ್ ತಂಡಗಳು ಆಡಿದ್ದವು. ಇದೀಗ ಈ ಎರಡೂ ತಂಡಗಳು ಅಖಾಡ ಪ್ರವೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
IPLNov 24, 2020, 11:32 AM IST
ಐಪಿಎಲ್ ತಂಡಕ್ಕೆ ಕೋಚ್ ಆಗೋದು ನನ್ನ ಕನಸು; ವಿನೋದ್ ಕಾಂಬ್ಳಿ
48 ವರ್ಷದ ವಿನೋದ್ ಕಾಂಬ್ಳಿ 1991ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಕಾಂಬ್ಳಿ ಭಾರತ ಪರ 17 ಟೆಸ್ಟ್, 104 ಏಕದಿನ ಪಂದ್ಯವನ್ನಾಡಿದ್ದಾರೆ. ಸದ್ಯ ಕಾಂಬ್ಳಿ ಸಚಿನ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.