ಎಟಿಕೆ
(Search results - 30)ISLDec 12, 2020, 9:07 AM IST
ಎಟಿಕೆ-ಹೈದ್ರಾಬಾದ್ ಪಂದ್ಯ 1-1ರ ರೋಚಕ ಡ್ರಾನಲ್ಲಿ ಅಂತ್ಯ
ಮೊದಲಾರ್ಧದಲ್ಲೊ ಎಟಿಕೆ ಮೋಹನ್ ಬಗಾನ್ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಪಂದ್ಯದ 55ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಆಕರ್ಷಕ ಗೋಲು ಬಾರಿಸುವ ಮೂಲಕ ಎಟಿಕೆ ತಂಡದ ಪರ ಗೋಲಿನ ಖಾತೆ ತೆರೆದರು. ಆದರೆ ಪಂದ್ಯದ 65ನೇ ನಿಮಿಷದಲ್ಲಿ ನಿಕಿಲ್ ಪೂಜಾರಿ ಹಾಗೂ ಜಾವ ವಿಕ್ಟರ್ ಕಾಂಬಿನೇಷನ್ನಲ್ಲಿ ರೋಚಕ ಗೋಲು ದಾಖಲಾಗುವ ಮೂಲಕ ಉಭಯ ತಂಡಗಳು ತಲಾ 1-1 ಗೋಲು ದಾಖಲಿಸಿದವು.
FootballDec 3, 2020, 9:58 PM IST
ಕೃಷ್ಣನ ಕೃಪೆ; ಮೋಹನ್ ಬಾಗನ್ಗೆ ಅಂತಿಮ ಕ್ಷಣದಲ್ಲಿ ಒಲಿದ ಗೆಲುವು!
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಎಟಿಕೋ ಮೋಹನ್ ಬಾಗನ್ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಪಂದ್ಯದ ಬಹುತೇಕ ಭಾಗದಲ್ಲಿ ಒಡಿಶಾ ಹಿಡಿತ ಸಾಧಿಸಿತ್ತು. ಆದರೆ ಅಂತಿಮ ಹಂತದಲ್ಲಿ ಎಟಿಕೆ ಪಂದ್ಯದ ಗತಿಯನ್ನೇ ಬದಲಿಸಿತು.
FootballDec 3, 2020, 3:12 PM IST
ISL 7: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಮೋಹನ್ ಬಾಗನ್!
ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಎಟಿಕೆ ಮೋಹನ್ ಬಾಗನ್ ಹಾಗೂ ಕೊನೆಯ(10ನೇ ಸ್ಥಾನ)ದಲ್ಲಿರುವ ಒಡಿಶಾ ಎಫ್ಸಿ ಹೋರಾಟಕ್ಕೆ ಸಜ್ಜಾಗಿದೆ. ಎಟಿಕೆ ಎರಡೂ ಪಂದ್ಯದಲ್ಲಿ ಗೆಲುವು ಕಂಡಿದ್ದರೆ, ಒಡಿಶಾ ಎರಡಲ್ಲೂ ಸೋಲು ಕಂಡಿದೆ. ಇದೀಗ ಉಭಯ ತಂಡಗಳು ಮಹತ್ವದ ಅಗ್ನಿಪರೀಕ್ಷೆಗೆ ಸಜ್ಜಾಗಿದೆ
FootballDec 1, 2020, 9:51 PM IST
ISL 7: ಮುಂಬೈ ಸಿಟಿ ವಿರುದ್ಧ ಕಂಗಾಲಾದ ಈಸ್ಟ್ ಬೆಂಗಾಲ್ !
ಈಸ್ಟ್ ಬೆಂಗಾಲ್ ವಿರುದ್ಧ ಮುಂಬೈ ಸಿಟಿ ಆರ್ಭಟಿಸಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಬೆಂಗಾಲ್ ಮತ್ತೆ ನಿರಾಸೆ ಅನುಭವಿಸಿದೆ. ಎಟಿಕೆ ವಿರುದ್ಧ ಮುಗ್ಗರಿಸಿದ ಬೆಂಗಾಲ್ ಇದೀಗ ಕಂಗಾಲಾಗಿದೆ.
FootballNov 27, 2020, 2:15 PM IST
SC ಈಸ್ಟ್ ಬೆಂಗಾಲ್ vs ATK ಮೋಹನ್ ಬಾಗನ್; ಕುತೂಹಲ ಮೂಡಿಸಿದೆ ಕೋಲ್ಕತಾ ಡರ್ಬಿ
ಐಎಸ್ಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಕೋಲ್ಕತಾ ಡರ್ಬಿ ಹೋರಾಟ ಏರ್ಪಟ್ಟಿದೆ. ಈಸ್ಟ್ ಬೆಂಗಾಲ್ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ.
FootballNov 23, 2020, 8:14 PM IST
ಕೋಲ್ಕತಾ ಡರ್ಬಿ ಹೋರಾಟಕ್ಕೆ ಸಜ್ಜಾದ ಸಂದೇಶ್ ಜಿಂಗನ್!
ಈಸ್ಟ್ ಬೆಂಗಾಲ್ ಹಾಗೂ ಎಟಿಕೆ ಮೋಹನ್ ಬಗಾನ್ ಹೋರಾಟ ಇದೀಗ ಐಎಸ್ಎಲ್ ಟೂರ್ನಿಯ ಹೊಸ ಡರ್ಬಿ ಹೋರಾಟ ಉದಕ್ಕೆ ಕಾರಣವಾಗಿದೆ. ಬಂಗಾಳ ಡರ್ಬಿ ಕುರಿತು ಸಂದೇಶ್ ಜಿಂಗನ್ ಮೌನ ಮುರಿದಿದ್ದಾರೆ.
FootballNov 20, 2020, 10:49 PM IST
ISL 7: ಕೇರಳ ಬ್ಲಾಸ್ಟರ್ಸ್ ಮಣಿಸಿ ಶುಭಾರಂಭ ಮಾಡಿದ ATK ಮೋಹನ್ ಬಗಾನ್!
8 ತಿಂಗಳ ಬಳಿಕ ಭಾರತದಲ್ಲಿ ಕ್ರೀಡಾ ಹಬ್ಬ ಆರಂಭಗೊಂಡಿದೆ. ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಹಾಗೂ ಕೇರಳ ಹೋರಾಟ ನಡೆಸಿತ್ತು. ಉದ್ಘಾಟನಾ ಪಂದ್ಯದ ವಿವರ ಇಲ್ಲಿದೆ.
FootballNov 19, 2020, 8:47 PM IST
ISL 7: ಕೊರೋನಾದಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆ ಮತ್ತೆ ಆರಂಭ!
ಕೊರೋನಾ ವೈರಸ್ ಕಾರಣ ಕಳೆದ ಆವೃತ್ತಿ ಫೈನಲ್ ಪಂದ್ಯ ಅಭಿಮಾನಿಗಳಿಲ್ಲದೆ ಆಯೋಜಿಸಲಾಗಿತ್ತು. ಇದೇ ಕೊನೆಯ ಪಂದ್ಯವಾಗಿತ್ತು. ಬಳಿಕ ಕೊರೋನಾ, ಲಾಕ್ಡೌನ್ ಕಾರಣ ಎಲ್ಲಾ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿತು. ಇದೀಗ 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಕ್ರೀಡಾ ಹಬ್ಬ ನಡೆಯುತ್ತಿದೆ.
FootballNov 19, 2020, 8:24 PM IST
ಶುರುವಾಗುತ್ತಿದೆ ISL ಟೂರ್ನಿ, 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಕ್ರೀಡಾ ಸಂಭ್ರಮ!
8 ತಿಂಗಳ ಬಳಿಕ ಭಾರತದಲ್ಲಿ ಆಯೋಜನೆಯಾಗುತ್ತಿರುವ ಮೊದಲ ಕ್ರೀಡಾ ಸಂಭ್ರಮ ಅನ್ನೋ ಹೆಗ್ಗಳಿಕೆಗೆ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಪಾತ್ರವಾಗಿದೆ. ನವೆಂಬರ್ 20 ರಿಂದ 7ನೇ ಆವೃತ್ತಿ ಐಎಸ್ಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಉದ್ಘಟನಾ ಪಂದ್ಯದಲ್ಲಿ ಬಲಿಷ್ಠ ತಂಡ ಹೋರಾಟ ನಡೆಸಲಿದೆ.
FootballMar 15, 2020, 11:50 AM IST
ಐಎಸ್ಎಲ್ ಫುಟ್ಬಾಲ್: ಕೋಲ್ಕತಾ ಚಾಂಪಿಯನ್
ಖಾಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. 10ನೇ ನಿಮಿಷದಲ್ಲೇ ಸ್ಪೇನ್ ಆಟಗಾರ ಜಾವಿ ಹರ್ನಾಂಡೆಜ್ ಆಕರ್ಷಕ ಗೋಲು ಬಾರಿಸಿ ಖಾತೆ ತೆರೆದರು. ರಾಯ್ ಕೃಷ್ಣ ನೀಡಿದ ಪಾಸ್ ಅನ್ನು ಹರ್ನಾಂಡೆಜ್ ಗೋಲಾಗಿ ಪರಿವರ್ತಿಸಿದರು. ಇದು ಈ ಆವೃತ್ತಿಯಲ್ಲಿ ಅವರು ಬಾರಿಸಿದ ಮೊದಲ ಗೋಲು.
FootballMar 13, 2020, 7:51 PM IST
ಅಭಿಮಾನಿಗಳಿಗೆ ನಿರ್ಬಂಧ; ಖಾಲಿ ಕ್ರೀಡಾಂಗಣದಲ್ಲಿ ISL ಫೈನಲ್!
ಕೊರೋನಾ ವೈರಸ್ನಿಂದ ಐಪಿಎಲ್ ಟೂರ್ನಿ ಹಾಗೂ ತವರಿನ ಏಕದಿನ ಸರಣಿ ರದ್ದಾಗಿದೆ. ಇದೀಗ ಐಎಸ್ಎಲ್ ಫುಟ್ಬಾಲ್ ಫೈನಲ್ ಪಂದ್ಯಕ್ಕೂ ತಟ್ಟಿದೆ. ನಾಳೆ(ಮಾ.14) ನಡೆಯಲಿರುವ ಫೈನಲ್ ಪಂದ್ಯ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಭಿಮಾನಿಗಳಿಗೆ ಪ್ರವೇಶ ನಿಷೇಧಿಸಿದೆ.
FootballMar 9, 2020, 11:06 AM IST
ಐಎಸ್ಎಲ್ ಟೂರ್ನಿ: ಬೆಂಗಳೂರು ಎಫ್ಸಿ ಫೈನಲ್ ಕನಸು ಭಗ್ನ
ಭಾನುವಾರ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ 2ನೇ ಚರಣದ ಪಂದ್ಯದಲ್ಲಿ ಬಿಎಫ್ಸಿ, ಅಟ್ಲೆಟಿಕೊ ಡಿ ಕೋಲ್ಕತಾ ಎದುರು 3-1 ಗೋಲುಗಳಿಂದ ಸೋಲು ಅನುಭವಿಸಿತು. ಒಟ್ಟಾರೆ 2 ಗೋಲುಗಳ ಅಂತರದಲ್ಲಿ ಚಾಂಪಿಯನ್ ಬಿಎಫ್ಸಿಯನ್ನು 2-3 ಗೋಲುಗಳಿಂದ ಬಗ್ಗುಬಡಿದ ಎಟಿಕೆ ಫೈನಲ್ ಪ್ರವೇಶಿಸಿತು.
FootballMar 1, 2020, 10:09 PM IST
ISL 2020: ಎಟಿಕೆ ಮಣಿಸಿ ಫೈನಲ್ಗೆ ಒಂದು ಹೆಜ್ಜೆ ಇಟ್ಟ BFC!
ISL 2020 ಫುಟ್ಬಾಲ್ ಲೀಗ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. 2ನೇ ಸೆಮಿಫೈನಲ್ ಪಂದ್ಯದ ಮೊದಲ ಚರಣದಲ್ಲಿ ಬೆಂಗಳೂರು FC ಗೆಲುವು ಸಾಧಿಸಿದೆ. ಮಾಜಿ ಚಾಂಪಿಯನ್ ಎಟಿಕೆ ವಿರುದ್ಧ ಅಬ್ಬರಿಸಿದ ಚೆಟ್ರಿ ಪಡೆ ಫೈನಲ್ ಹಾದಿಯನ್ನು ಸುಗಮಗೊಳಿಸಿದೆ.
FootballMar 1, 2020, 4:24 PM IST
ಐಎಸ್ಎಲ್ ಫುಟ್ಬಾಲ್: ಇಂದು ಬಿಎಫ್ಸಿ-ಎಟಿಕೆ ಸೆಮೀಸ್ ಕದನ
ಸೆಮೀಸ್ ಮೊದಲ ಚರಣದ ಹಣಾಹಣಿ ಇದಾಗಿದ್ದು, ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ತವರಿನಲ್ಲಿ ಬಿಎಫ್ಸಿಗೆ ಇದು ಕೊನೆಯ ಪಂದ್ಯ, ಹೀಗಾಗಿ ಬಿಎಫ್ಸಿ ಅತ್ಯುತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿ ಕಣಕ್ಕಿಳಿಯಲಿದೆ.
FootballFeb 21, 2020, 8:38 PM IST
ತವರಿನಲ್ಲಿ ತಿರುಗೇಟು ನೀಡಲು ಬೆಂಗಳೂರು FC ರೆಡಿ!
ಕಂಠೀರವ ಕ್ರೀಡಾಂಗಣದಲ್ಲಿ ಫೆ.22(ಶನಿವಾರ) ಸಂಜೆ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಆತಥೆೇಯ ಬೆಂಗಳೂರು ಹಾಗೂ ಎಟಿಕೆ ತಂಡ ಮುಖಾಮುಖಿಯಾಗುತ್ತಿದೆ. ಈ ಪಂದ್ಯ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.