Search results - 45 Results
 • INDIA5, Nov 2018, 11:39 AM IST

  ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ

  2019ರ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟಕ್ಕೆ ಗೆಲುವು ಶತಸಿದ್ಧ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. 

 • NEWS29, Oct 2018, 11:33 AM IST

  ಪ್ರಾಣ ಬಿಡುವುದರೊಳಗೆ ನನ್ನ ಆಸೆ ಈಡೇರಲಿ : ಎಚ್.ಡಿ. ದೇವೇಗೌಡ

  ನನ್ನ ಜೀವನದ ಅಂತ್ಯದಲ್ಲಿ ನೆಮ್ಮದಿಯಿಂದ ಪ್ರಾಣ ಬಿಡಬೇಕೆಂಬುದು ಕೊನೆಯ ಆಸೆ. ಅಷ್ಟರೊಳಗೆ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಬಿಜೆಪಿ ಬೆಳೆಯಲು ಅವಕಾಶ ನೀಡಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

 • BSY House

  NEWS28, Oct 2018, 3:00 PM IST

  ನವೆಂಬರ್ ಬಳಿಕ ಬಿಎಸ್ ವೈ ಸಿಎಂ : ಬಾಬುರಾವ್ ಚಿಂಚನಸೂರ್

  ದೇಶ ಕಂಡ ಅತ್ಯಂತ ಕೆಟ್ಟ ಸಿಎಂ ಸಿದ್ದ ರಾಮಯ್ಯ ಎಂದು ದೇವೇಗೌಡರು ಜರಿದಿದ್ದರು. ರಾಜಕೀಯ ಕುತಂತ್ರದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ದೂರಿದ್ದರು. ಹೀಗಿರುವಾಗ ಸರ್ಕಾರದಲ್ಲಿ ಹೊಂದಾಣಿಕೆ ಸಾಧ್ಯವೇ - ಬಾಬುರಾವ್ ಚಿಂಚನಸೂರ್

 • NEWS23, Oct 2018, 10:34 AM IST

  ನಾನು ಗೌಡ ಕುಟುಂಬದ ವಿರೋಧಿ, ಮೈತ್ರಿಗೆ ಬೆಂಬಲವಿಲ್ಲ : ಕಾಂಗ್ರೆಸ್ ಮುಖಂಡ

   ಉಪಚುನಾವಣೆಯಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿಗೆ ತಮ್ಮ ಬೆಂಬಲವಿಲ್ಲಎಂದು ಕಾಂಗ್ರೆಸ್ ಮುಖಂಡ ಎ ಮಂಜು ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ವಿರೋಧಿಯಾಗಿದ್ದು, ಈಗಲೂ ಅದನ್ನೇ ಮುಂದುವರಿಸುತ್ತೇನೆ ಎಂದು ಈ ವೇಳೆ ಹೇಳಿದ್ದಾರೆ. 

 • NEWS10, Oct 2018, 6:28 PM IST

  ದೇವೇಗೌಡ್ರ ರಾಜಕೀಯ ನಡೆಗೆ ಕಾಂಗ್ರೆಸ್ ನಾಯಕರು ಕಂಗಾಲು!

  ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಇನ್ನೊಂದು ಕಡೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ತಲೆನೋವಾಗಿ ಪರಿಣಮಿಸಿದೆ. ಈ ಕ್ಷೇತ್ರದಿಂದ ಯಾವ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುವುದು ಇನ್ನೂ ಇತ್ಯರ್ಥವಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ರಾಜಕೀಯ ನಡೆಗೆ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ.  

 • NATIONAL9, Oct 2018, 11:05 AM IST

  ಮೋದಿ, ಶಾರನ್ನು ರಹಸ್ಯ ಭೇಟಿಯಾಗಿದ್ದ ಎಚ್‌ಡಿಕೆ, ಗೌಡ

  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ಅವರು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿಯಾಗಿದ್ದರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಆರೋಪ ನಿಜ ಎಂದು ಬಿಜೆಪಿ ಮುಖಂಡ ಎಂ.ರುದ್ರೇಶ್‌ ಹೇಳಿದ್ದಾರೆ.

 • state8, Oct 2018, 10:56 AM IST

  ಮಂಡ್ಯ ಲೋಕಸಭಾ ಅಭ್ಯರ್ಥಿ ಯಾರು : ದೇವೇಗೌಡರು ಹೇಳಿದ್ದೇನು..?

  ಈಗಾಗಳೇ ರಾಜ್ಯದ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆ ಈಗಷ್ಟೇ ಘೋಷಣೆಯಾಗಿರುವುದರಿಂದ ಅಭ್ಯರ್ಥಿ ಘೋಷಿಸಲು ಒಂದೆರಡು ದಿನ ಸಮಯ ಬೇಕಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ. 

 • Chikkamagalur28, Sep 2018, 3:53 PM IST

  ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪು ಸ್ವಾಗತಿಸಿದ ದೇವೇಗೌಡ

  ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

 • HDD

  NEWS24, Sep 2018, 7:42 AM IST

  ಸಮ್ಮಿಶ್ರ ಸರ್ಕಾರ ಉಳಿಸುವ ಭರವಸೆ ಇವರಿಂದ ಸಿಕ್ಕಿದೆ : ಎಚ್ ಡಿಡಿ

  ಸಮ್ಮಿಶ್ರ ಸರ್ಕಾರ ಉಳಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದು ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹಾಗಿದ್ದ ಮೇಲೆ ಸರ್ಕಾರಕ್ಕೆ ಕಿಂಚಿತ್ತೂ ಧಕ್ಕೆಯಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • NEWS15, Sep 2018, 10:03 AM IST

  ಇವರಿಗೆಲ್ಲಾ ಕಾದಿದೆ ಮಹಾ ನಿರಾಸೆ : ಎಚ್.ಡಿ.ದೇವೇಗೌಡ

   ‘ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಶಕ್ತಿಗಳು ಯತ್ನ ಮಾಡುತ್ತಿವೆ. ಮೂರು ತಿಂಗಳಿಂದ ಸರ್ಕಾರ ಬೀಳಲಿದೆ ಎಂದು ಮುಹೂರ್ತ ಫಿಕ್ಸ್ ಮಾಡಿದವರಿಗೆ ನಿರಾಸೆ ಕಾದಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. 

 • NEWS11, Sep 2018, 5:32 PM IST

  ನಿಮ್ಮ ಸಾಧನೆ ಏನು..? ಮೋದಿಗೆ ದೇವೇಗೌಡ ತಿರುಗೇಟು

  ಹೊಳೆನರಸೀಪುರದಲ್ಲಿ "ನಮ್ಮೂರ ದ್ಯಾವಪ್ಪ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೌಡರು, ನಾನು ಸಾಮಾನ್ಯ ರೈತನ ಮಗನಾಗಿ‌ ಹತ್ತು ಹಲವು ನೋವು ಉಂಡಿದ್ದೇನೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ನನ್ನ ಕ್ಷೇತ್ರದ ಜನರು, ತಂದೆ ತಾಯಿ ಆಶೀರ್ವಾದವೂ ಕಾರಣ ಎಂದು ಹೇಳಿದ್ದಾರೆ.

 • NEWS10, Sep 2018, 8:11 AM IST

  ಬಸ್ ನೀರು ಹಾಕಿ ಓಡಿಸಲು ಆಗುತ್ತಾ..?

  ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಗೌರಿ ಗಣೇಶ ಹಬ್ಬದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಮಾಡಲು ನಿರ್ಧಾರ ಮಾಡಿದ್ದು, ಇದನ್ನು ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಸಮರ್ಥಸಿಕೊಂಡಿದ್ದಾರೆ. 

 • POLITICS26, Aug 2018, 4:46 PM IST

  ಸಿದ್ದರಾಮಯ್ಯ ಹಣಿಯಲು ದೇವೇಗೌಡರ ಮಾಸ್ಟರ್ ಪ್ಲ್ಯಾನ್! ಗೊಂದಲದಲ್ಲಿ ಮೈತ್ರಿ ಸರ್ಕಾರ

  ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೊನೆಗೂ ಪೇಚಿಗೆ ಸಿಲುಕಿಸಿದ್ದಾರೆ. ಸಮನ್ವಯ ಸಮಿತಿಯಲ್ಲಿ ದಿನೇಶ್ ಗುಂಡೂರಾವ್‌ರನ್ನು ಸೇರಿಸುವ ಬೇಡಿಕೆಗೆ ಪ್ರತಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರನ್ನು ಸೇರಿಸಬೇಕೆಂಬ ಪಟ್ಟುಹಿಡಿದಿದ್ದಾರೆ.   

 • NEWS26, Aug 2018, 11:35 AM IST

  ಎಚ್‌ಡಿಕೆಯಿಂದ ಬೌನ್ಸರ್: ಅರಸುರನ್ನು ವಿರೋಧಿಸಿದ್ದ ದೇವೇಗೌಡ್ರು ಈಗ ಎನ್ಮಾಡ್ತಾರೆ?

  ಓಂದು ಕಾಲದಲ್ಲಿ ಅರಸುರವರ ಋಣಭಾರ ಮುಕ್ತ ನೀತಿಗೆ ಎಚ್.ಡಿ. ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಂಡಿದ್ದು ದೇವೇಗೌಡರು ಅದನ್ನು ಬೆಂಬಲಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. 
   

 • NEWS14, Aug 2018, 3:27 PM IST

  ಸಿಎಂಗೆ 100 ಕೆ.ಜಿ. ದ್ರಾಕ್ಷಿ, ಅಕ್ಕಿ ಬೆಲ್ಲದ ತುಲಾಭಾರ

  ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿ ಶ್ರೀ ಕ್ಷೇತ್ರ ಸುಬ್ರಮಣ್ಯಕ್ಕೆ ಭೇಟಿ ನೀಡಿರುವ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ಪ್ರಾಂಗಣದಲ್ಲಿ ತುಲಾಬಾರ ಸೇವೆ ನೆರವೇರಿಸಿದ್ದಾರೆ. ಪುತ್ರನ ಈ ಸೇವೆಗೆ ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ತಾಯಿ ಚೆನ್ನಮ್ಮ ಕೂಡಾ ಸಾಥ್ ನೀಡಿದ್ದಾರೆ.