ಉಲ್ಕಾಶಿಲೆ  

(Search results - 3)
 • <p>Meteorite-like Object Falls From Sky In Rajasthan</p>

  India20, Jun 2020, 2:51 PM

  ಆಗಸದಿಂದ ಭೂಮಿಗೆ ಅಪ್ಪಳಿಸಿತು ಉಲ್ಕಾಶಿಲೆ; ಬೆಚ್ಚಿ ಬಿದ್ದ ಗ್ರಾಮಸ್ಥರು!

  ಸೂರ್ಯನ ಹೊಂಬೆಳಕಿನ ಪ್ರವೇಶಕ್ಕೆ ಗ್ರಾಮಸ್ಥರು ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಅಷ್ಟರಲ್ಲೇ ಬಾಂಬ್ ಸ್ಫೋಟದಂತ ಶಬ್ದ ಕೇಳಿ ಜನ ಬೆಚ್ಚಿ ಬಿದ್ದಿದ್ದರು. ಕೇವಲ ಶಬ್ದ ಮಾತ್ರವಲ್ಲ. ಬೆಳಗ್ಗೆ 7 ಗಂಟೆ ಸುಮಾರಿಗೆ ಮಧ್ಯಾಹ್ನದ ಉರಿಬಿಸಿಲಿನ ಬೆಳಕು ಹಾಗೂ ಅನುಭವವಾಗಿತ್ತು. ಹಲವು ಮನೆಯೊಳಗೆ ಸೇರಿಕೊಂಡರೆ, ಕೆಲವರು ಶಬ್ದ ಹಾಗೂ ಬೆಳಕು ಬಂದ ಕಡೆ ಧಾವಿಸಿದ್ದರು. ಕಾರಣ ಆಗಸಿಂದ ಉಲ್ಕಾಶಿಲೆಯೊಂದು ಭೂಮಿಗೆ ಅಪ್ಪಳಿಸಿತ್ತು. 

 • <p>ಳೊಚಕ</p>

  International23, Apr 2020, 5:52 PM

  ಇಂದು ರಾತ್ರಿಯಾಗುತ್ತೆ ಉಲ್ಕಾಪಾತ: 27 ವರ್ಷದ ಬಳಿಕ ಆಗಸದಲ್ಲಿ ಬೆಳಕಿನಾಟ!

  ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಉಳಿದಿದ್ದಾರೆ. ಪ್ರಾಣಹಾನಿ ವೈರಸ್ ನಿಯಂತ್ರಿಸುವ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಹೀಗಿರುವಾಗ ಇದರಿಂದ ಕಾಪಾಡಿಕೊಳ್ಳಲು ಮನೆಯಲ್ಲಿರುವುದೇ ಏಕಮಾತ್ರ ಉಪಪಾಯ. ಇನ್ನು ಸಾಮಾಜಿಕ ಅಂತರದಿಂದಲೂ ಇದರಿಂದ ರಕ್ಷಿಸಿಕೊಳ್ಳಬಹುದು. ಈ ನಿಟ್ಟಿನಲ್ಲೇ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಇವುಗಳಲ್ಲಿ ಮಲೇಷ್ಯಾ ಕೂಡಾ ಒಂದು. ಇಂತ ಪರಿಸ್ಥಿತಿಯಲ್ಲಿ ಇಂದು, ಗುರುವಾರ ರಾತ್ರಿ ಇಲ್ಲಿ ಬರೋಬ್ಬರಿ 27 ವರ್ಷಗಳ ಹಿಂದೆ ಕಂಡು ಬಂದ ಬೆಳಕಿನಾಟ ಮತ್ತೆ ಕಂಡು ಬರಲಿದೆ. ಇದಕ್ಕೆಲ್ಲಾ ಕಾರಣ ಲಾಕ್‌ಡೌನ್. ಲಾಕ್‌ಡೌನ್ ಘೋಷಣೆಯಿಂದ ಇಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಇಳಿದಿದ್ದು, ವಾತಾವರಣ ಸ್ವಚ್ಛಗೊಂಡಿದೆ. ಇದರ ಪರಿಣಾಮ ಉಲ್ಕಾ ಮಳೆ ಸ್ಪಷ್ಣವಾಗಿ ಗೋಚರಿಸಲಿದೆ. ಇಂದು ರಾತ್ರಿ ಯಾವ ರೀತಿಯ ದೃಶ್ಯ ಕಂಡು ಬರಲಿದೆ ಇಲ್ಲಿದೆ ಕೆಲ ಫೋಟೋಗಳು.

 • Meteoroid

  SCIENCE25, Jun 2019, 4:39 PM

  ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದಿನ ಉಲ್ಕೆಯ ತುಣುಕು ಪತ್ತೆ!

  ತಮಿಳುನಾಡಿನ ಕೊಯಂಬತ್ತೂರು ಬಳಿ ಲಕ್ಷ್ಮೀ ನಾರಾಯಣ್ ಎಂಬುವವರ ಫಾರ್ಮಹೌಸ್’ನಲ್ಲಿ 35 ವರ್ಷದ ಹಿಂದೆ ಬಿದ್ದಿದ್ದ ಉಲ್ಕಾಶಿಲೆಯ ತುಣುಕು ದೊರೆತಿದೆ. ಲಕ್ಷ್ಮೀ ನಾರಾಯಣ್ ಈ ತುಣುಕನ್ನು ಜಿಲ್ಲಾಧಿಕಾರಿ ಕಚೇರಿಯ ಭಾರತೀಯ ಭೂವೈಜ್ಞಾನಿಕ ಸಂಸ್ಥೆಯ ಸುಪರ್ದಿಗೆ ಒಪ್ಪಿಸಿದ್ದಾರೆ.