ಉಪಚುನಾವಣೆ ಫಲಿತಾಂಶ  

(Search results - 36)
 • Yaga
  Video Icon

  Politics15, Dec 2019, 6:20 PM IST

  ಗೆದ್ದು ಬೀಗಿದರೂ ಬಿಎಸ್‌ವೈ ಮನೆಯಲ್ಲಿ ಯಾಗ, 12 ಪೆನ್ ಪೂಜಾ ರಹಸ್ಯ!

  ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಜೆಪಿ 12 ಸ್ಥಾನ ಗೆಲ್ಲಲಿದೆ ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು.

  ಅಲ್ಲದೇ ಫಲಿತಾಂಶಕ್ಕೂ ಮುನ್ನ 12 ಬಣ್ಣದ ಪೆನ್ ಗಳನ್ನು ಯಡಿಯೂರಪ್ಪಗೆ ವಿನಯ್ ಗುರೂಜಿ ನೀಡಿದ್ದರು. ಇಂದು ನಡೆದ ಯಾಗದಲ್ಲಿ 12 ಪೆನ್ ಗಳಿಗೂ ಬಿಎಸ್‌ವೈ ಪೂಜೆ ಮಾಡಿದ್ದಾರೆ.

 • 12 top10 stories

  News12, Dec 2019, 4:53 PM IST

  3 ಡಿಸಿಎಂಗಳಿಗೆ ಕೊಕ್?, ಭಾರತ ತಂಡದಲ್ಲಿ ಕನ್ನಡಿಗರಿಬ್ಬರ ಫೈಟ್; ಡಿ.12ರ ಟಾಪ್ 10 ಸುದ್ದಿ!

  ಕರ್ನಾಟಕ ಉಪಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಬಿಎಸ್ ವೈ ಸರ್ಕಾರ ಸಂಪುಟ ವಿಸ್ತರಣೆಗೆ ಸರ್ಕಸ್ ನಡೆಸುತ್ತಿದೆ. ಇದರ ಬೆನ್ನಲ್ಲೇ ಮೂವರು ಡಿಸಿಂ ಕೈಬಿಡಲು ಪಕ್ಷದಿಂದಲೇ ಸಲಹೆ ಬಂದಿದೆ. ಅತ್ತ ಪೌರತ್ವ ಮಸೂದೆ ವಿರೋಧಿಸಿ ಕೇಂದ್ರದ ವಿರುದ್ದ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ. ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕೆ ಕನ್ನಡಿಗರಿಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಭಾರತ ಸೆಕ್ಸಿ ಗರ್ಲ್, ಅಂಬಾನಿ 3 ವರ್ಷದ ಪ್ಲಾನ್ ಸೇರಿದಂತೆ ಡಿಸೆಂಬರ್ 12ರ ಟಾಪ್ 10 ಸುದ್ದಿ ಇಲ್ಲಿವೆ. 

 • zameer ahmed
  Video Icon

  Politics11, Dec 2019, 5:54 PM IST

  ಸೆಕ್ಯೂರಿಟಿ ಗಾರ್ಡ್ ಆಗ್ತಿದ್ದೆ ಎಂದಿದ್ದ ಜಮೀರ್ BSY ಇದ್ದ ವೇದಿಕೆ ಏರದೆ ಕಾಲ್ಕಿತ್ತರು!

  ವಿಕ್ಟೋರಿಯಾ ಆಸ್ಪತ್ರೆಯ ನೂತನ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮದಿಂದ ಜಮೀರ್ ವಾಕ್ ಔಟ್ ಮಾಡಿದ್ದಾರೆ.

  ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಬಂದರೂ ನಂತರ ಬ್ಯಾನರ್ ಮತ್ತು ಫ್ಲೆಕ್ಸ್ ಗಳಲ್ಲಿ ತಮ್ಮ ಪೋಟೋ ಇರದ ಕಾರಣ ವೇದಿಕೆ ಏರದೆ ಕಾರ್ಯಕ್ರಮದಿಂದ ಹೊರನಡೆದರು.

 • KPCC

  Politics10, Dec 2019, 9:17 PM IST

  KPCC ಕುರ್ಚಿ ಮೇಲೆ ಕಾಂಗ್ರೆಸ್ ಹಿರಿಯ ನಾಯಕನಿಂದ ಬಿತ್ತು ಮೊದಲ ಟವೆಲ್

  ಶಾಸಕಾಂಗ ನಾಯಕ  ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಬಳಿಕ ರಾಜ್ಯ ಕಾಂಗ್ರೆಸ್ ಖಾಲಿಯಾಗಿದಂತಿದೆ. ಈ ನಡುವೆ ಕೆಪಿಸಿಸಿ ಸಾರಥ್ಯ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಕೈ ಕಾರ್ಯಕರ್ತರಲ್ಲಿ ಜೋರಾಗಿದ್ದು, ಕಪಿಸಿಸಿ ಕುರ್ಚಿ ಮೇಲೆ ಹಿರಿಯ ನಾಯಕ ಟವೆಲ್ ಹಾಕಿದ್ದಾರೆ.
   

 • Troll

  Politics9, Dec 2019, 10:21 PM IST

  ಉಪಚುನಾವಣೆ ಫಲಿತಾಂಶ, ಹೌದೋ ಹುಲಿಯಾ, ಅಬ್ಬಬ್ಬಾ ಎಂತೆಂಥಾ ಟ್ರೋಲ್!

  ಉಪಚುನಾವಣಾ ಫಲಿತಾಂಶ ಹೊರಬಂದಿದೆ. ಬಿಜೆಪಿಗೆ ದಿಗ್ವಿಜಯ ಸಾಧಿಸಿ ಬೀಗುತ್ತಿದ್ದರೆ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ. ಮೌನಕ್ಕೆ ಶರಣಾದ ಜೆಡಿಎಸ್. ಸೋಶಿಯಲ್ ಮೀಡಿಯಾ ಈ ಸಂದರ್ಭದಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದೆಯೇ? ಹೌದು ಹುಲಿಯಾ ಡೈಲಾಗ್ ಇಟ್ಟುಕೊಂಡು ಟ್ರೋಲ್ ಮಾಡಲಾಗಿದೆ. ನೋಡಿ ಸಿರಿಯಸ್ಸಾಗಿ ತಗೋಬೇಡಿ.. ನಕ್ಕು ಸುಮ್ಮನಾಗಿ... 

 • By Election 2019

  Politics9, Dec 2019, 8:34 PM IST

  2018ಕ್ಕೂ ಉಪಚುನಾವಣೆಗೂ ಅಜಗಜಾಂತರ: ದಿಗ್ಭ್ರಮೆ ಮೂಡಿಸಿದ ಅಭ್ಯರ್ಥಿಗಳ ವಿನ್ನಿಂಗ್ ಅಂತರ

  ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ 15 ವಿಧಾನಸಭೆಯ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಗೆದ್ದು ಬೀಗಿದ್ರೆ, ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಗೆದ್ದಿದ್ಯಾರು..? ಗೆಲುವಿನ ಅಂತರ ಎಷ್ಟು..? ನೋಡುವುದಾದರೆ 2018ಕ್ಕೂ ಉಪಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದ್ದು,  ಅಭ್ಯರ್ಥಿಗಳ ಗೆಲುವಿನ ಅಂತರ ದಿಗ್ಭ್ರಮೆ ಮೂಡಿಸಿದೆ.  ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ. 

 • BSY

  Politics9, Dec 2019, 6:18 PM IST

  ಬಪ್ಪರೇ..! ಅಪ್ಪನ ಸರ್ಕಾರ ಉಳಿವಿಗೆ ಹೆಗಲು ಕೊಟ್ಟ ಮಕ್ಕಳು, ತಂದೆಗೆ ಗೆಲುವಿನ ಉಡುಗೊರೆ

  ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವಿನ ನಿರ್ಣಾಯ ಉಪ ಕದನದಲ್ಲಿ ಕಮಲ ಕಲಿಗಳು ವಿಜಯಪತಾಕೆ ಹಾರಿಸಿದ್ದಾರೆ. ಬೈ ಎಲೆಕ್ಷನ್ ಬ್ಯಾಟೆಲ್​ನಲ್ಲಿ ಬಿಜೆಪಿ ಸರ್ಕಾರ ಸೇಫಾಗಲು ಬಿಎಸ್​ವೈ ಪುತ್ರ ರತ್ನರು ಸಹ ನಿರ್ಣಾಯಕ ಪಾತ್ರ ವಹಿಸಿದ್ದು, ತಂದೆಗೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲ ಯಡಿಯೂರಪ್ಪನವರ ಬಹುಕಾಲದ  ಕನವರಿಕೆಗೆ ಮುಕ್ತಿ ನೀಡಿ ಸಹಿ ಹಂಚಿ ಸಂಭ್ರಮಿಸಿದ್ದಾರೆ.

 • 09 top10 stories

  News9, Dec 2019, 4:55 PM IST

  12 ಅನರ್ಹರು ಪಾಸ್, ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪಾಲಿಟಿಕ್ಸ್; ಡಿ.9ರ ಟಾಪ್ 10 ಸುದ್ದಿ!

  ಬೈ ಎಲೆಕ್ಷನ್ ಫಲಿತಾಂಶ ಹೊರಬಿದ್ದಿದ್ದು, 15 ವಿಧಾನಸಭಾ ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಮೂಲಕ ಬಿಎಸ್ ಯಡಿಯೂರಪ್ಪ ಸರ್ಕಾರ ಸೇಫ್ ಆಗಿದೆ. ಇತ್ತ ಹೀನಾಯ ಸೋಲು ಕಂಡ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ವಿಪಕ್ಷ ಹಾಗೂ CLP ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ಚುನಾವಣೆ ಫಲಿತಾಂಶ, ಯಡಿರೂಪ್ಪ, ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಸೇರಿದಂತೆ ಡಿಸೆಂಬರ್ 9ರ ಟಾಪ್ 10 ಸುದ್ದಿ ಇಲ್ಲಿವೆ.

 • Siddu

  Politics9, Dec 2019, 4:51 PM IST

  ಬೈ ಎಲೆಕ್ಷನ್ ಸೋಲಿಗೆ ಕಾರಣ ಕೇಳಿದ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದು ಗುದ್ದು..!

  ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣ ಕೇಳಿದ ಹೈಕಮಾಂಡ್‌ಗೆ ಖಡಕ್ ಉತ್ತರದೊಂದಿಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ದೂರವಾಣಿ ಕರೆಯಲ್ಲಿ ಸಿದ್ದರಾಮಯ್ಯ ಹೈಕಮಾಂಡ್ ವಿರುದ್ಧವೇ ಗುಡುಗಿದ್ದಾರೆ. ಹಾಗಾದ್ರೆ, ಹೈಕಮಾಂಡ್ ವಿರುದ್ಧ ಸಿದ್ದು ಗುಡುಗಿದ್ದೇನು..? ಕಾರಣ ಕೇಳಿದ ಹೈಕಮಾಂಡ್‌ಗೆ ಸಿದ್ದು ಕೊಟ್ಟ ಖಡಕ್ ಉತ್ತರವೇನು..? ಸಿದ್ದರಾಮಯ್ಯ ಆಪ್ತವಲಯದಿಂದ ತಿಳಿದುಬಂದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

 • Basavaraj Horatti

  Karnataka Districts9, Dec 2019, 4:38 PM IST

  ಬಿಜೆಪಿಗೆ ಬಹುಮತ ಸಿಗದಿದ್ರೆ ಜೆಡಿಎಸ್ ಇಬ್ಭಾಗವಾಗುತ್ತಿತ್ತು ಎಂದ ಹೊರಟ್ಟಿ

  ಮತದಾರರು ಅನರ್ಹರನ್ನು ಅರ್ಹರನ್ನಾಗಿ ಮಾಡಿದ್ದಾರೆ. ಮತದಾರರ ತೀರ್ಪಿಗೆ ನಾವು ಬದ್ಧರಾಗಿದ್ದೆವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತದಾರರು ತಿರಸ್ಕಾರ ಮಾಡಿದ್ದಾರೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ ಇಂತಹ ಪರಸ್ಥಿತಿ ಬರುತ್ತಿರಲಿಲ್ಲ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ. 
   

 • siddaramaiah

  Karnataka Districts9, Dec 2019, 4:00 PM IST

  ಸಿದ್ದರಾಮಯ್ಯಗೆ ಖಡಕ್ ಎಚ್ಚರಿಕೆ ನೀಡಿದ ನೂತನ ಅರ್ಹ ಶಾಸಕ!

  ಇನ್ನೂ 13 ರಿಂದ 15 ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪಿಲ್ಲ, ಸೋತ ಅನರ್ಹ ಶಾಸಕರ ಬಗ್ಗೆ ಸಿಎಂ ಯಡಿಯೂರಪ್ಪ, ಅಮಿತ್ ಶಾ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ವಿಜೇತ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. 
   

 • HDK on supreme court

  Politics9, Dec 2019, 3:05 PM IST

  ಬೈ ಎಲೆಕ್ಷನ್ ರಿಸಲ್ಟ್: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿ

  ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಳಿವು ಉಳಿವಿಗೆ ಕಾರಣವಾಗಿದ್ದ ಉಪ ಚುನಾವಣೆ ರಿಸಲ್ಟ್‌ ಪ್ರಕಟಗೊಂಡಿದ್ದು, ಬಿಜೆಪಿ ಸರ್ಕಾರ ಸೇಫ್ ಆಗಿದೆ. ಆದ್ರೆ, ಇದರ ಮಧ್ಯೆ ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಕೆ ಟ್ವೀಟ್ ಮಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾದರೂ ಏನು..? 

 • Ashwathnarayan

  Karnataka Districts9, Dec 2019, 2:18 PM IST

  ಮಂಡ್ಯದಲ್ಲಿ BJP ಖಾತೆ ತೆರೆದದ್ದೇ ನಮ್ಮ ಗೆಲುವು: ಡಿಸಿಎಂ

  ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿರುವುದೇ ದೊಡ್ಡ ಗೆಲುವು ಎಂದು ಡಿಸಿಎಂ ಡಾ. ಸಿಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲಾಗದು ಎಂಬ ಮಾತನ್ನು ಬಿಜೆಪಿ ಸರ್ಕಾರ ಅಳಿಸಿ ಹಾಕಿದ್ದಾರೆ ಎಂದಿದ್ದಾರೆ.

 • Lakshmi Hebbalkar

  Karnataka Districts9, Dec 2019, 2:17 PM IST

  'ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ, ಅವಳಿಂದ ಕಾಂಗ್ರೆಸ್ ಪಕ್ಷ ಹಾಳಾಗಿದೆ'

  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಮುಖದ ಮೇಲೆ ಹೊಡೆದ ಹಾಗೇ ಜನ ತೀರ್ಮಾನ ಕೊಟ್ಟಿದ್ದಾರೆ. ನಮ್ಮ ವಿರುದ್ಧ ಹಲವರು ಸುಳ್ಳು ಪ್ರಚಾರ ಮಾಡಿದ್ದರು. ಮಹಾರಾಷ್ಟ್ರ ಹರಿಯಾಣದಲ್ಲಿ ಪಕ್ಷಾಂತರಿಗಳಿಗೆ ವಿರುದ್ಧ ಮತಗಳು ಬಂದಿದ್ದವು, ಆದರೆ, ನಮ್ಮ ರಾಜ್ಯದ ಜನ ಜನತಾ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ಕೊಟ್ಟಿದೆ ಎಂದು ಗೋಕಾಕ್ ಕ್ಷೇತ್ರದ ವಿಜೇತ ಅಭ್ಯರ್ಥಿ ರಮೇಶ ಜಾರಕಿಹೊಳಿ‌ ಹೇಳಿದ್ದಾರೆ. 
   

 • lakshman savadi

  Politics9, Dec 2019, 2:14 PM IST

  ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಸವದಿ ರಾಜಕೀಯ ಹಾದಿ ಸುಗಮ..?

  ಪರಿಷತ್ ಸ್ಥಾನವೂ ಖಾಲಿ ಇಲ್ಲ ಲಕ್ಷ್ಮಣ ಸವದಿಗೆ ವಿಧಾನಸಭೆ ಉಪ ಚುನಾವಣೆ ಟಿಕೆಟ್ ಇಲ್ಲ. ಅತ್ತ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಬಿಟ್ಟುಕೊಡಲು ಯಾರೂ ಒಪ್ಪುತ್ತಿಲ್ಲ. ಆದ್ದರಿಂದ, ಲಕ್ಷ್ಮಣ ಸವದಿ ಭವಿಷ್ಯ ಅತಂತ್ರವಾಗಿದೆ. ವಿಧಾನಸಭೆ, ಪರಿಷತ್ ಎಲ್ಲೂ ಸದಸ್ಯರಾಗಲಿಲ್ಲ ಎಂದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಮಾತುಗಳಿದ್ದವು. ಆದ್ರೆ, ಇದೀಗ ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಹಾಗೂ ಅಥಣಿಯಲ್ಲಿ ಅನರ್ಹ ಶಾಸಕ ಗೆದ್ದರೂ ಸಹ ಸವದಿ ರಾಜಕೀಯ ಹಾದಿ ಸುಗಮವಾಗಿದೆ ಎನ್ನುವ ಮಾತುಗಳು ರಾಜ್ಯ ರಾಜಕೀಯದಲ್ಲಿ ದಟ್ಟವಾಗಿದೆ. ಏನಿದು ಸುದ್ದಿ...? ಕಾಂಗ್ರೆಸ್ ಅಭ್ಯರ್ಥಿ ಸೋಲು ಸವದಿ ಹಾದಿಗೆ ಏನು ಸಂಬಂಧ..? ಇಲ್ಲಿದೆ ಸಂಪೂರ್ಣ ಮಾಹಿತಿ..