ಈರುಳ್ಳಿ  

(Search results - 197)
 • <p>Ballari</p>
  Video Icon

  Karnataka Districts2, Aug 2020, 9:46 PM

  ತನ್ನದೆ ಹೊಲದ ಅಪಾರ ಈರುಳ್ಳಿ ಬೆಳೆ ನಾಶ ಮಾಡಿದ ಬಳ್ಳಾರಿ ರೈತ

  ಈರುಳ್ಳಿ ಬೆಳೆಗೆ ವಿಚಿತ್ರ ರೋಗ  ಕಂಡು ಬೇಸರಗೊಂಡ ರೈತ ಬೆಳೆ ನಾಶ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಡಗಾರನಹಳ್ಳಿಯಲ್ಲಿ  ರೈತರೊಬ್ಬರು ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ.

 • Food14, Jul 2020, 4:48 PM

  ಮಳೆಗಾಲದ ಸಂಜೆಗಳನ್ನು ಮಜವಾಗಿಸುವ ಪಕೋಡಾ

  ಬರೀ ಈರುಳ್ಳಿ, ಹೀರೇಕಾಯಿ ಪಕೋಡಾವಲ್ಲ, ಚಿಕನ್, ಮೊಟ್ಟೆ, ಮೀನು, ಸೋಯಾ, ಪನ್ನೀರ್‌ನಿಂದಲೂ ಪಕೋಡಾ ಮಾಡಬಹುದು. ಒಮ್ಮೆ ಟ್ರೈ ಮಾಡಿ ನೋಡಿ. 

 • <p>fox</p>

  International8, Jul 2020, 6:22 PM

  ಇದು ಈರುಳ್ಳಿ ಸಿಪ್ಪೆಯಲ್ಲ, ಜೀವಂತವಾಗಿ ಚರ್ಮ ಸುಲಿದ ಪ್ರಾಣಿಗಳು: ರಹಸ್ಯ ಕ್ಯಾಮರಾದಲ್ಲಿ ಸೆರೆ!

  ವಿಶ್ವದೆಲ್ಲೆಡೆ ಕೊರೋನಾದಂತಹ ಮಹಾಮಾರಿ ಹಬ್ಬಿಕೊಂಡಿದೆ. ಈ ಜೀವ ಹಾನಿ ವೈರಸ್‌ನಿಂದಾಗಿ ಜನರೆಲ್ಲಾಚಿಂತೆಗೀಡಾಗಿದ್ದಾರೆ. ಹೀಗಿರುವಾಗ ಕಾಡು ಪ್ರಾಣಿಗಳಿಂದ ದೂರವಿರುವಂತೆ ಜನರ ಬಳಿ ಮನವಿ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ ಚೀನಾದಲ್ಲಿ ಪ್ಲೇಗ್‌ ಹರಡಿರುವ ಸುದ್ದಿ ಜನರನ್ನು ಮತ್ತಷ್ಟು ಕಂಗಾಲುಗೊಳಿಸಿದೆ. ಇವೆಲ್ಲದರ ನಡುವೆ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸೀಕ್ರೆಟ್ ಫೂಟೆಜ್ ಒಂದು ಶೇರ್ ಮಾಡಿಕೊಳ್ಲಲಾಗುತ್ತದೆ.  ಈ ವಿಡಿಯೋದಲ್ಲಿ ಟ್ರಕ್‌ ಒಂದರಲ್ಲಿ ಸಾವಿರಾರು ಮೃತ ನರಿ ಹಾಗೂ ನಾಯಿಗಳ ಚರ್ಮ ಸುಲಿದ ದೇಹ ಕಂಡು ಬಂದಿದೆ. ಈ ಪ್ರಾಣಿಗಳನ್ನು ಜೀವಂತವಾಗಿದ್ದಾಗಲೇ ಮೊದಲು ಕಬ್ಬಿಣದ ರಾಡ್‌ಗಳಲ್ಲಿ ಹೊಡೆದು ಬಳಿಕ ಚರ್ಮ ಸುಲಿಯಲಾಗಿದೆ. ಈ ದೃಶ್ಯಾವಳಿಗಳನ್ನು HSI ಇನ್ವೆಸ್ಟಿಗೇಟರ್ಸ್ ರೆಕಾರ್ಡ್ ಮಾಡಿ ವಿಶ್ವದೆದುರು ಇಟ್ಟಿದ್ದಾರೆ. ಆದರೆ ಇದು ಎಲ್ಲಿ ನಡೆದ ಘಟನೆ ಎಂಬುವುದು ಈವರೆಗೂ ಸ್ಪಷ್ಟವಾಗಿಲ್ಲ. ಆದರೆ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಟ್ಟೆಗಳಿಗಾಗಿ ಇವುಗಳ ಚರ್ಮ ಸುಲಿಯಲಾಗುತ್ತಿದೆ ಎನ್ನಲಾಗಿದೆ.
   

 • Karnataka Districts21, May 2020, 10:51 AM

  ಆತ್ಮಹತ್ಯೆಗೆ ಯತ್ನಿಸಿದ ರೈತ: ಈರುಳ್ಳಿ ಖರೀದಿಸಿ ಮಾನವೀಯತೆ ಮೆರೆದ ತಾಲೂಕಾಡಳಿತ

  ಲಾಕ್‌ಡೌನ್‌ದಿಂದಾಗಿ ಈರುಳ್ಳಿ ಬೆಲೆ ನೆಲಕಚ್ಚಿದೆ, ಮನೆಯಲ್ಲಿ ಮಗ, ಮಗಳ ಮದುವೆಗೆ ಹಣ ಜೋಡಿಸಲು ದಿಕ್ಕು ಕಾಣದೇ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಜರುಗಿದ್ದು, ಈ ಕುಟುಂಬಕ್ಕೆ ಆಸರೆಯಾಗಲು ತಾಲೂಕಾಡಳಿತ ಮುಂದಾಗಿ ಈರುಳ್ಳಿ ಖರೀದಿಸಿ ಸಂಕಟದಲ್ಲಿದ್ದ ಕುಟುಂಬಕ್ಕೆ ಧೈರ್ಯ ತುಂಬಿದೆ.
   

 • onion

  Karnataka Districts3, May 2020, 9:10 AM

  ಲಾಕ್‌ಡೌನ್‌ ಎಫೆಕ್ಟ್‌: ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ನೀರು, ನಿಲ್ಲದ ಸಂಕಷ್ಟ..!

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅವರ ಸಾಲಿಗೆ ಈಗ ಈರುಳ್ಳಿ ಬೆಳೆದ ರೈತರು ಸೇರ್ಪಡೆಯಾಗಿದ್ದು, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದಿರುವ ಗುಣಮಟ್ಟದ ಈರುಳ್ಳಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ರೈತರು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವಂತಾಗಿದೆ.
   

 • <p>Onion</p>

  Karnataka Districts2, May 2020, 11:39 AM

  ಲಾಕ್‌ಡೌನ್‌ ನಡುವೆಯೇ ಡಿಸಿ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ, ಈರುಳ್ಳಿ ಖರೀದಿಗೆ ಒತ್ತಾಯ

  ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು, ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಖುದ್ದು ಖರೀದಿಸುವಂತೆ ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

 • Udupi1, May 2020, 9:51 AM

  ಚಿತ್ರದುರ್ಗದ ಮಹಿಳೆಯಿಂದ 172 ಚೀಲ ಈರುಳ್ಳಿ ಖರೀದಿಸಿದ ಉಡುಪಿಯ ರೈತ

  ಚಿತ್ರದುರ್ಗದ ರೈತ ಮಹಿಳೆ ವಸಂತ ಕುಮಾರಿ ಅವರು ಈರುಳ್ಳಿ ಬೆಳೆದಿದ್ದು, ಲಾಕ್‌ಡೌನ್‌ ಮಧ್ಯೆ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೆ ಕಂಗಾಲಾಗಿ ನೆರವು ನೀಡುವಂತೆ ಮಾಡಿದ್ದ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

 • Karnataka Districts1, May 2020, 9:44 AM

  150ರ ಬದಲು 550 ಕೊಟ್ಟು ಚಿತ್ರದುರ್ಗದ ಮಹಿಳೆಯಿಂದ ಈರುಳ್ಳಿ ಖರೀದಿಸಿದ ಉಡುಪಿಯ ರೈತ

  ಚಿತ್ರದುರ್ಗದಲ್ಲಿ ಮಹಿಳೆಯೊಬ್ಬರು ಬೆಳೆದ ಈರುಳ್ಳಿ ಮೂಟೆಗೆ 150 ರು.ಗೂ ಕೊಳ್ಳುವವರಿಲ್ಲದೆ ಕೊಳೆತು ಹೋಗುತಿದ್ದಾಗ ಉಡುಪಿಯ ರೈತರೊಬ್ಬರು ಮೂಟೆಗೆ 550 ಕೊಟ್ಟು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

 • <p>bsy</p>

  Karnataka Districts30, Apr 2020, 3:52 PM

  ಈರುಳ್ಳಿ ಬೆಳೆದಾಕೆಗೆ ಸಿಎಂ ಕರೆ ಮಾಡಲು ಕಾರಣ ಜಾಲತಾಣ..! ತಡೆರಹಿತ ರಹ'ದಾರಿ'

  ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಪ್ರಕರಣ ಎಲ್ಲರಿಗೂ ಗೊತ್ತಿದೆ. ಇದು ಸಾಧ್ಯವಾಗುವುದು ಹೇಗೆ..? ಸಾಮಾಜಿಕ ಜಾಲತಾಣ ಹೇಳಬೇಕಾದ್ದನ್ನು ಕೇಳಬೇಕಾದವರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿದೆ.

 • Karnataka Districts29, Apr 2020, 9:56 AM

  ಈರುಳ್ಳಿ ನೀವೇ ಕೊಂಡುಕೊಳ್ಳಿ ಎಂದ ಮಹಿಳೆ: ತಕ್ಷಣ ಸ್ಪಂದಿಸಿದ ಸಿಎಂ

  ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

 • Video Icon

  Karnataka Districts28, Apr 2020, 3:07 PM

  ಈರುಳ್ಳಿ ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ ರೈತ ಮಹಿಳೆ; ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ

  ಲಾಕ್‌ಡೌನ್‌ನಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಆಗುತ್ತಿದೆ. ಒಬ್ಬೊಬ್ಬರದು ಒಂದೊಂದು ಕಷ್ಟ.  ಮುಖ್ಯಮಂತ್ರಿಯವರಲ್ಲಿ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈರುಳ್ಳಿ ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ ಹಿರಿಯೂರು ತಾಲೂಕಿನ ಕಾಟನಾಯಕನ ಹಳ್ಳಿ ರೈತ ಮಹಿಳೆಯೊಬ್ಬರು ಸಿಎಂ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ. ಇವರ ಮನವಿಗೆ ಸಿಎಂ ಸ್ಪಂದಿಸಿದ್ದಾರೆ. ನೀವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿಎಂ ಅವರ ಮಾತುಕತೆ ಆಡಿಯೋ ಇಲ್ಲಿದೆ ನೋಡಿ! 

 • Egypt Onion

  India27, Apr 2020, 10:22 AM

  ನಿರ್ಬಂಧದಿಂದ ಪಾರಾಗಲು 25 ಟನ್‌ ಈರುಳ್ಳಿ ಖರೀದಿಸಿ ಉ.ಪ್ರ.ಕ್ಕೆ ಪ್ರಯಾಣ!

  25 ಟನ್‌ ಈರುಳ್ಳಿ ಖರೀದಿಸಿ ಮುಂಬೈನಿಂದ ಉ.ಪ್ರ.ಕ್ಕೆ ಹೋದ!| ಲಾಕ್‌ಡೌನ್‌ ನಿರ್ಬಂಧ ತಪ್ಪಿಸಲು ಉಪಾಯ

 • Bava

  Karnataka Districts12, Apr 2020, 3:18 PM

  ಲಾಕ್‌ಡೌನ್: ಬಡ ಜನರಿಗೆ ಆಹಾರ ಕಿಟ್ ವಿತರಿಸಿದ ಕಾಂಗ್ರೆಸ್ ಮಾಜಿ ಶಾಸಕ

  ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಮೊಯ್ದಿನ್‌ ಬಾವಾ ಅವರು ಲಾಕ್‌ಡೌನ್‌ ಸಂದರ್ಭ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ. ಚಹಾ ಪುಡಿ, ಈರುಳ್ಳಿ, ಅಕ್ಕಿ ಸೇರಿ ಹಲವು ಆಹಾರ ವಸ್ತುಗಳನ್ನು ಜನರಿಗೆ ಹಂಚಿದ್ದಾರೆ. ಇಲ್ಲಿವೆ ಫೋಟೋಸ್.

   

 • Kudachi

  Karnataka Districts10, Apr 2020, 9:01 AM

  ಈರುಳ್ಳಿ ಮಾರಾಟಗಾರರಿಗೆ ಕೊರೋನಾ ಸೋಂಕು ದೃಢ: ಗ್ರಾಮಸ್ಥರಲ್ಲಿ ಆತಂಕ

  ಜಿಲ್ಲೆಯಲ್ಲಿ 10 ಜನರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. 10 ಜನರ ಪೈಕಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ನಾಲ್ವರಿಗೆ ಕೊರೊನಾ ಸೋಂಕು ದೃಢವಾಗಿದೆ. ಹೀಗಾಗಿ ಬೆಳಗಾವಿ ಹಿರೇಬಾಗೇವಾಡಿ ಗ್ರಾಮದ ಜನ ಆತಂಕದಲ್ಲಿದ್ದಾರೆ. 
   

 • Karnataka Districts20, Mar 2020, 8:34 AM

  ಕೊರೋನಾ ಕಾಟ: ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ..!

  ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗ ಕೊರೋನಾ ದಾಳಿಗೆ ಪಾತಾಳಕ್ಕೆ ಕುಸಿದಿದೆ. ಮಾರುಕಟ್ಟೆಯತ್ತ ಜನ ಆಗಮಿಸದಿರುವುದರಿಂದ ಈರುಳ್ಳಿ ಬೆಲೆಯಲ್ಲಿ ಹೆಚ್ಚಿನ ಇಳಿಕೆಯಾಗಿದೆ.