ಇಳಕಲ್  

(Search results - 7)
  • govind karjol
    Video Icon

    NEWS21, Sep 2019, 11:54 AM IST

    ಕಾರ್ ಬಿಟ್ಟು ಸರ್ಕಾರಿ ಬಸ್ ಏರಿದ ಉಪಮುಖ್ಯಮಂತ್ರಿ!

    ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ನಿನ್ನೆ  ರಾತ್ರಿ ಇಳಕಲ್ ಪಟ್ಟಣದಲ್ಲಿ ಸರ್ಕಾರಿ ಬಸ್ ಏರಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಇಂದು ಬೆಳಗ್ಗೆ ಮೆಜೆಸ್ಟಿಕ್ ಗೆ ಬಂದಿಳಿದರು.  ಅವರೊಂದಿಗೆ ಇಬ್ಬರು ಗನ್ ಮ್ಯಾನ್, ಓರ್ವ ಆಪ್ತಸಹಾಯಕ ಇದ್ದರು.  ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ವಿಮಾನ ಮೂಲಕ ಹುಬ್ಬಳ್ಳಿಗೆ ಹೋಗಿ ಗದಗ, ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ ಅರ್ಜೆಂಟ್ ಬೆಂಗಳೂರಿಗೆ ತೆರಳಬೇಕಿದ್ದರಿಂದ ಸರ್ಕಾರಿ ಕಾರು ಬಿಟ್ಟು ಸರ್ಕಾರಿ ಬಸ್ ಏರಿ ಸರಳತೆ ಮೆರೆದರು.
     

  • Abhi Baby
    Video Icon

    state3, Mar 2019, 10:01 PM IST

    ಈ ಪುಟಾಣಿ ಹೆಸರು ಅಭಿನಂದನಾ: ಅಭಿನಂದನ್ ಗೌರವಿಸಿದ ಇಳಕಲ್ ದಂಪತಿ!

    ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೀಸೆ ಫೇಮಸ್ ಆಗಿದೆ. ಅಭಿನಂದನ್ ಅವರ ಹೇರ್‌ ಸ್ಟೈಲ್ ಫೇಮಸ್ ಆಗಿದೆ. ಅಷ್ಟೇ ಏಕೆ ಸ್ವತಃ ಅಬಿನಂಧನ್ ಅವರ ಹೆಸರೇ ಫೇಮಸ್ ಆಗಿದೆ.

  • Siddaramaiah

    state25, Jan 2019, 3:37 PM IST

    ಲೋಕಸಭೆಗೆ ಸಿದ್ದರಾಮಯ್ಯ?: ಅಂದ್ರು ಇಲ್ಲ ಕಣ್ರಯ್ಯ!

    ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಖುದ್ದು ಸಿದ್ದರಾಮಯ್ಯ ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಕೇಳಿ ಬರುತ್ತಿರುವ ಮಾತುಗಳು ಕೇವಲ ಊಹಾಪೋಹ ಎಂದು ಹೇಳಿದರು.

  • Ningayya

    state15, Dec 2018, 5:58 PM IST

    ವಯಸ್ಸು 76, 4ನೇ ಪದವಿಗಾಗಿ ಪರೀಕ್ಷೆ: ಈಡೇರಲಿ ಅಜ್ಜನ ಅಪೇಕ್ಷೆ!

    ಕಲಿಯುವಿಕೆ ಕೂಡ ನಿರಂತರ. ಅದಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುತ್ತಾರೆ. ಅದನ್ನು 76 ವರ್ಷದ ಈ ಅಜ್ಜನೋರ್ವ ನಿಜ ಮಾಡಿ ತೋರಿಸುತ್ತಿದ್ದಾರೆ. ಈಗಾಗಲೇ 3 ಸ್ನಾತಕೋತ್ತರ ಪದವಿ ಪಡೆದಿದ್ದರೂ, 4ನೇ ಪಿಜಿಗಾಗಿ ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಬಿಎಡ್‌ ಕಾಲೇಜ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಬಾಗಲಕೋಟ ಜಿಲ್ಲೆ ಇಳಕಲ್‌ ತಾಲೂಕು ಕೆಲೂರ ಗ್ರಾಮದ ಹಿರಿಯ ನಿಂಗಯ್ಯ ಬಸಯ್ಯ ಒಡೆಯರ್.

  • Oil Tanker
    Video Icon

    NEWS16, Sep 2018, 12:12 PM IST

    ಎಣ್ಣೆ ತುಂಬ್ಕೊಳ್ರೋ: ಗಾಯಾಳು ಬಿಟ್ಟು ಎಣ್ಣೆಗಾಗಿ ಬಡಿದಾಟ!

    ನಿಂತಿದ್ದ ಎಣ್ಣೆ ತುಂಬಿದ್ದ ಕ್ಯಾಂಟೇನರ್ ಗೆ ಟಾಟಾ ಸುಮೋ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಇಡೀ ರಸ್ತೆಯಲ್ಲಿ ಅಡುಗೆ ಎಣ್ಣೆ ಸೋರಿಕೆಯಾಘಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಇಲ್ಲಿನ ಇಳಕಲ್-ಹುನಗುಂದ ನಡುವಿನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದ್ದು, ಸೋರುತ್ತಿರುವ ಅಡುಗೆ ಎಣ್ಣೆಯನ್ನು ತುಂಬಿಕೊಳ್ಳಲು ಜನ ಮುಗಿ ಬಿದ್ದಿದ್ದಾರೆ.

  • Shruthi Hariharan

    Sandalwood30, Aug 2018, 1:41 PM IST

    ’ಬ್ಯೂಟಿಫುಲ್’ ಮನಸಿನ ಹುಡುಗಿನ ಬ್ಯೂಟಿಫುಲ್ ಸೀರೆ ಫೋಟೋಗಳು

    ಶೃತಿ ಹರಿಹರನ್ ಕ್ರಿಯಾಶೀಲ ನಟಿ. ಓದುತ್ತಾರೆ. ಬರೆಯುತ್ತಾರೆ. ಕಳರಿ ಕ್ಲಾಸ್‌ಗೆ ಹೋಗುತ್ತಾರೆ. ಅಡುಗೆ ರೆಡಿ ಮಾಡುತ್ತಾರೆ. ಇದೀಗ ಇಳಕಲ್ ಸೀರೆಯ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಿತಾ ಪ್ರಸಾದ್ ಡೆಸೇನ್ ಮಾಡಿರುವ ಸೀರೆ ಇದು. ಫಟೋಶೂಟ್ ಮಾಡಿದ್ದು ಪ್ರಯೋಕ್.  ಈ ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಾರೆ ಶೃತಿ ಹರಿಹರನ್. 

  • pregnant lady
    Video Icon

    NEWS24, Jun 2018, 4:15 PM IST

    ವೈದ್ಯರ ನಿರ್ಲಕ್ಷ್ಯದಿಂದ ಗ್ಯಾಂಗ್ರೀನ್’ಗೆ ತುತ್ತಾದರಾ ಗರ್ಭಿಣಿ?

    ವಿಷಮಶೀತ ಜ್ವರಕ್ಕೆ ಒಳಗಾಗಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಬಂದಿದ್ದಾಗ ವೈದ್ಯರ ನಿರ್ಲಕ್ಷ್ಯದಿಂದ ಗ್ಯಾಂಗ್ರೀನ್’ಗೆ ತುತ್ತಾಗಿದ್ದಾರೆ ಎಂದು ಆಕೆಯ ಆರೋಪಿಸಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಗಲಕೋಟೆ ಜಿಲ್ಲೆಯ ಚಿಕ್ಕಕೊಡರ್ಗಿ ನಿವಾಸಿ ಶಿಲ್ಪಾ ಭಜಂತ್ರಿ ಇಳಕಲ್ ಶಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಶಿಲ್ಪಾ ಗ್ಯಾಂಗ್ರೀನ್’ಗೆ ಒಳಗಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.