ಇಂದೋರ್ ಟೆಸ್ಟ್
(Search results - 11)CricketNov 16, 2019, 7:03 PM IST
ಇಂದೋರ್ ಟೆಸ್ಟ್ ಗೆದ್ದು ಇತಿಹಾಸ ಬರೆದ ವಿರಾಟ್ ಕೊಹ್ಲಿ..!
ರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 10ನೇ ಬಾರಿಗೆ ಇನಿಂಗ್ಸ್ ಜಯ ದಾಖಲಿಸಿದ ಸಾಧನೆ ಮಾಡಿದೆ. ಈ ಮೂಲಕ ಟೀಂ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಈ ಮೊದಲು ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 9 ಇನಿಂಗ್ಸ್ ಜಯ ತಂದಿತ್ತ ನಾಯಕ ಎನಿಸಿದ್ದರು.
CricketNov 15, 2019, 12:55 PM IST
ಇಂದೋರ್ ಟೆಸ್ಟ್: ಮಯಾಂಕ್ ಅಗರ್ವಾಲ್ ಖಾತೆಗೆ ಮತ್ತೊಂದು ಶತಕ
ಮೊದಲ ದಿನದಾಟದ ಅಂತ್ಯಕ್ಕೆ 37 ರನ್ ಬಾರಿಸಿದ್ದ ಅಗರ್ವಾಲ್ ಎರಡನೇ ದಿನ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ದಿನದಾಟದ ಆರಂಭದಿಂದಲೇ ಪೂಜಾರ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಮಯಾಂಕ್ ಅಗರ್ವಾಲ್ ಆಸರೆಯಾದರು. 183 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಶತಕ ಪೂರೈಸಿದರು.
CricketNov 15, 2019, 10:35 AM IST
ಇಂದೋರ್ ಟೆಸ್ಟ್: 2ನೇ ದಿನ ಟೀಂ ಇಂಡಿಯಾಗೆ ಬಿಗ್ ಶಾಕ್..!
ಒಂದು ವಿಕೆಟ್ ಕಳೆದುಕೊಂಡು 86 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಪೂಜಾರ 2 ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಬಾರಿಸಿದರು. ಇದಾದ ಕೆಲ ಹೊತ್ತಿನಲ್ಲೇ ಅಬು ಜಾಯೆದ್ ಬೌಲಿಂಗ್’ನಲ್ಲಿ ಸೈಫ್ ಹುಸೇನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
CricketNov 14, 2019, 5:19 PM IST
INDvBAN ಇಂದೋರ್ ಟೆಸ್ಟ್; ಮೊದಲ ದಿನ ಭಾರತಕ್ಕೆ ಭರ್ಜರಿ ಮೈಲುಗೈ!
ಸೌತ್ ಆಫ್ರಿಕಾ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶ ವಿರುದ್ಧದ ಇಂದೋರ್ ಟೆಸ್ಟ್ ಪಂದ್ಯದಲ್ಲೂ ಪರಾಕ್ರಮ ಮುಂದುವರಿಸಿದೆ. ಮೊದಲ ದಿನ ಬಾಂಗ್ಲಾ ತಂಡವವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ, ದಿಟ್ಟ ತಿರುಗೇಟು ನೀಡಿದೆ. ಮೊದಲ ದಿನದಾಟದ ಹೈಲೈಟ್ಸ್ ಇಲ್ಲಿದೆ.
CricketNov 14, 2019, 4:48 PM IST
ಇಂದೋರ್ ಟೆಸ್ಟ್: ಮತ್ತೆ ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್..!
ಬಾಂಗ್ಲಾದೇಶ ನಾಯಕ ಮೊಮಿನುಲ್ ಹಕ್ ವಿಕೆಟ್ ಪಡೆಯುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ತವರಿನಲ್ಲಿ 250 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ತವರಿನಲ್ಲಿ ಅತಿವೇಗವಾಗಿ 250+ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು.
CricketNov 14, 2019, 3:16 PM IST
ಇಂದೋರ್ ಟೆಸ್ಟ್: ಅಪರೂಪದ ದಾಖಲೆ ಬರೆಯಲು ರೆಡಿಯಾದ ಕಿಂಗ್ ಕೊಹ್ಲಿ..!
ಕೊಹ್ಲಿ 5000 ರನ್ ಮೈಲಿಗಲ್ಲು ತಲುಪಿದ ಭಾರತದ ಮೊದಲ ನಾಯಕ ಎನಿಸಿಕೊಳ್ಳಲಿದ್ದಾರೆ. ಜತೆಗೆ ತಮ್ಮ 85ನೇ ಇನ್ನಿಂಗ್ಸ್ನಲ್ಲಿ 32ಕ್ಕಿಂತ ಹೆಚ್ಚಿಗೆ ರನ್ ಗಳಿಸಿದರೆ ಅತಿವೇಗವಾಗಿ 5000 ರನ್ ಗಳಿಸಿದ ನಾಯಕ ಎನ್ನುವ ದಾಖಲೆಗೂ ಪಾತ್ರರಾಗಲಿದ್ದಾರೆ.
CricketNov 14, 2019, 3:09 PM IST
ಭಾರತೀಯ ಬೌಲರ್ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!
ಬಾಂಗ್ಲಾದೇಶ ವಿರುದ್ಧ ಮಾರಕ ದಾಳಿ ಸಂಘಟಿಸಿದ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಇಂದೋರ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರ ಬೌಲರ್ಗಳ ಪ್ರದರ್ಶನ ಹೇಗಿದೆ? ಇಲ್ಲಿದೆ ವಿವರ.
CricketNov 14, 2019, 2:36 PM IST
ಇಂದೋರ್ ಟೆಸ್ಟ್: ಹ್ಯಾಟ್ರಿಕ್ ಹೊಸ್ತಿಲಲ್ಲಿ ಶಮಿ
ಮೊಹಮ್ಮದ್ ಶಮಿ ಮತ್ತೊಂದು ಹ್ಯಾಟ್ರಿಕ್ ಹೊಸ್ತಿಲಲ್ಲಿದ್ದಾರೆ. ಈಗಾಗಲೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧಿಸಿದ್ದ ಶಮಿ, ಇದೀಗ ಟೆಸ್ಟ್ ಕ್ರಿಕೆಟ್’ನಲ್ಲೂ ಹ್ಯಾಟ್ರಿಕ್ ಸಾಧಿಸಲು ಇನ್ನೊಂದು ವಿಕೆಟ್ ಅವಶ್ಯಕತೆಯಿದೆ. ಈ ಸಾಧನೆ ಮಾಡುತ್ತಾರಾ ಕಾದು ನೋಡಬೇಕಿದೆ...
CricketNov 14, 2019, 12:04 PM IST
ಇಂದೋರ್ ಟೆಸ್ಟ್: ಬಾಂಗ್ಲಾಗೆ ಶಾಕ್ ಕೊಟ್ಟ ಟೀಂ ಇಂಡಿಯಾ ವೇಗಿಗಳು
ಟಾಸ್ ಸೋತರೂ ಧೃತಿಗೆಡದ ಟೀಂ ಇಂಡಿಯಾ ಬೌಲರ್’ಗಳು ಮಿಂಚಿನ ದಾಳಿ ಸಂಘಟಿಸಿದರು. ಪಂದ್ಯದ ಆರನೇ ಓವರ್’ನಲ್ಲಿ ವೇಗಿ ಉಮೇಶ್ ಯಾದವ್ ಬಾಂಗ್ಲಾ ಆರಂಭಿಕ ಇಮ್ರುಲ್ ಕಯೀಸ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು.
CricketNov 14, 2019, 9:33 AM IST
12ನೇ ಸರಣಿ ಜಯಕ್ಕೆ ಭಾರತ ತವಕ!
ಟಿ20 ಸರಣಿಯಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದರೂ, ಪುಟಿದೆದ್ದ ಭಾರತ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಟೆಸ್ಟ್ ಮಾದರಿಯಲ್ಲಿ ಭಾರತ ಎಲ್ಲರಿಗಿಂತಲೂ ಬಲಿಷ್ಠ. ಸದೃಢ ತಂಡವನ್ನು ಹೊಂದಿರುವ ಭಾರತ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
CricketNov 14, 2019, 9:14 AM IST
ಮೊದಲ ಟೆಸ್ಟ್ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ
ಬಾಂಗ್ಲಾದೇಶ ತಂಡವನ್ನು ಮೊಮಿನುಲ್ ಹಕ್ ಮುನ್ನಡೆಸಲಿದ್ದು, ಭಾರತಕ್ಕೆ ಕಠಿಣ ಪ್ರತಿರೋಧ ನೀಡುವ ನಿರೀಕ್ಷೆಯಲ್ಲಿದೆ. ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಶಹಬಾಜ್ ನದೀಮ್ ಅವರನ್ನು ಕೈಬಿಟ್ಟು, ಇಶಾಂತ್ ಶರ್ಮಾಗೆ ಮಣೆ ಹಾಕಲಾಗಿದೆ.