ಇಂದಿರಾ ಕ್ಯಾಂಟೀನ್‌  

(Search results - 42)
 • Indira Canteen
  Video Icon

  state24, Mar 2020, 11:35 AM IST

  ಕೊರೋನಾ ಭೀತಿ ಹೆಚ್ಚಳ: ಇಂದಿರಾ ಕ್ಯಾಂಟೀನ್‌ ಬಂದ್‌ಗೆ ಸಿಎಂ ಸೂಚನೆ

  ಕೊರೋನಾ ಭಯದಿಂದ ಇಂದಿರಾ ಕ್ಯಾಂಟೀನನ್ನು ಬಂದ್ ಮಾಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ನಿನ್ನೆ ತೆಗೆದುಕೊಂಡ ನಿರ್ಧಾರದಲ್ಲಿ ಬಡವರಿಗೆ ಉಚಿತವಾಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ನೀಡಲಾಗುತ್ತದೆ ಎಂದಿದ್ದರು. ಅದೂ ಕೂಡಾ ಅಪಾಯಕಾರಿ ಎಂದು ಇದೀಗ ಇಂದಿರಾ ಕ್ಯಾಂಟೀನನ್ನು ಮುಚ್ಚಲು ಆದೇಶ ನೀಡಿದ್ದಾರೆ. ಜೊತೆಗೆ ಹಬ್ಬದ ಆಡಂಬರ ಬೇಡ, ಮಾರ್ಕೆಟ್‌ಗೆ ಬರಬೇಡಿ ಎಂದು ಸಿಎಂ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

 • Indira Canteen

  Karnataka Districts23, Mar 2020, 8:38 AM IST

  ಕೊರೋನಾ ಆತಂಕದ ಮಧ್ಯೆಯೂ ಇಂದಿರಾ ಕ್ಯಾಂಟೀನ್ ಓಪನ್!

  ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಕ್ಯಾಂಟೀನ್‌ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿರುವುದರಿಂದ ಬಿಬಿಎಂಪಿಯ ಎಲ್ಲ 198 ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳು ಎಂದಿನಂತೆ ಊಟ, ತಿಂಡಿ ಪೂರೈಸಲಿವೆ ಎಂದು ಬಿಬಿಎಂಪಿಯ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌ ತಿಳಿಸಿದ್ದಾರೆ.
   

 • Indira Canteen

  Karnataka Districts19, Feb 2020, 8:44 AM IST

  ಇಂದಿರಾ ಕ್ಯಾಂಟೀನ್‌ ಅಡುಗೆ ಮನೆ ಸ್ಥಳಾಂತರಕ್ಕೆ BBMP ನಿರ್ಧಾರ

  ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ ಜಾಗದಲ್ಲಿರುವ ನಾಯಂಡಹಳ್ಳಿಯಲ್ಲಿ ಇರುವ ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಯನ್ನು ಸ್ಥಳಾಂತರಿಸಲು ಬಿಬಿಎಂಪಿ ತೀರ್ಮಾನಿಸಿದೆ.
   

 • Indira Canteen

  state18, Feb 2020, 8:47 AM IST

  ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ 1,675 ನಿರ್ಗತಿಕರಿಂದ ಊಟ, ಸಮೀಕ್ಷೆಯಲ್ಲಿ ಬಹಿರಂಗ!

  ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುವ 1,675 ನಿರ್ಗತಿಕರು| ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಮೀಕ್ಷೆಯಲ್ಲಿ ಬಹಿರಂಗ

 • Indira Canteen

  Karnataka Districts10, Feb 2020, 8:17 AM IST

  ಇಂದಿರಾ ಕ್ಯಾಂಟೀನ್‌ ಊಟಕ್ಕೆ ಬ್ರೇಕ್ ಹಾಕಿದ BBMP!

  ಬಿಬಿಎಂಪಿಯ ಮಾಸಿಕ ಹಾಗೂ ವಿಷಯಾಧಾರಿತ ಸಭೆಗಳಿಗೆ ಉಪಹಾರ ಮತ್ತು ಊಟವನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ‘ಖಾಸಗಿ ಹೋಟೆಲ್‌’ನಿಂದ ಪೂರೈಕೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

 • Indira Canteen

  Karnataka Districts5, Feb 2020, 8:09 AM IST

  ಆಹಾರ ಪೂರೈಕೆ: ಅದಮ್ಯ ಚೇತನ ಸಂಸ್ಥೆಗೆ ಇಂದಿರಾ ಕ್ಯಾಂಟೀನ್‌ ಗುತ್ತಿಗೆ?

  ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭದಿಂದ ಈವರೆಗೆ ಆಹಾರ ಸರಬರಾಜು ಗುತ್ತಿಗೆ ಪಡೆದುಕೊಂಡಿದ್ದ ಚೇಫ್‌ಟಾಕ್‌ ಮತ್ತು ರಿವಾರ್ಡ್ಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪ ಹಾಗೂ ಪೊಲೀಸ್‌ ತನಿಖೆ ನಡೆಯುತ್ತಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡುವ ಗುತ್ತಿಗೆ ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಟ್ರಸ್ಟ್‌ (ಅದಮ್ಯಚೇತನ) ಪಾಲಾಗುವುದು ಬಹುತೇಕ ನಿಚ್ಚಳವಾಗಿದೆ.
   

 • Indira Canteen

  Karnataka Districts28, Dec 2019, 9:48 AM IST

  ಇಂದಿರಾ ಕ್ಯಾಂಟೀನ್‌ಗೆ ಸ್ಥಳೀಯರ ಹೆಸರು?

  ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಲು ಹಲವು ಸಮಯದಿಂದಲೂ ಚರ್ಚೆ ನಡೆದಿದ್ದು ಇದೀಗ ಮತ್ತೊಮ್ಮೆ ಹೆಸರು ಬದಲಾವಣೆ ವಿಚಾರ ಚರ್ಚೆಗೆ ಬಂದಿದೆ. 

 • Indira Canteen

  state19, Dec 2019, 8:22 AM IST

  ಬದಲಾಗುತ್ತಾ ಇಂದಿರಾ ಕ್ಯಾಂಟೀನ್‌ ಹೆಸರು : ಸಿಎಂ ನಿರ್ಧಾರವೇನು?

  ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಯ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಈ ಬಗ್ಗೆ ಇದೀಗ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಬದಲಾಗುತ್ತಾ ಹೆಸರು? 

 • undefined

  Karnataka Districts17, Dec 2019, 9:48 AM IST

  3 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ, ಇಂದಿರಾ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ

  ರಾಜ್ಯದ ಹಲವು ಕಡೆ ಜನರು ಇಂದಿರಾ ಕ್ಯಾಂಟೀನ್ ಬಳಸುತ್ತಿದ್ದರೂ ಮಡಿಕೇರಿಯಲ್ಲಿ ಮಾತ್ರ ಇನ್ನು ಉದ್ಘಾಟನೆಯಾಗಬೇಕಷ್ಟೆ. ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕ್ಯಾಂಟೀನ್ ಕಾಮಗಾರಿ ಮುಗಿದು ಕೊನೆಗೂ ಉದ್ಘಾಟನೆ ಭಾಗ್ಯ ದೊರೆಯಲಿದೆ.

 • indira canteen shivakumara swamiji
  Video Icon

  state15, Nov 2019, 4:02 PM IST

  ‘ಇಂದಿರಾ ಕ್ಯಾಂಟೀನ್‌’ಗೆ ಡಾ. ಶಿವಕುಮಾರ ಸ್ವಾಮೀಜಿ ಹೆಸರು: ಯಾವಾಗಿಂದ?

  ಕಾಂಗ್ರೆಸ್‌ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷಿ ‘ಇಂದಿರಾ ಕ್ಯಾಂಟೀನ್‌’ ಹೆಸರು ಬದಲಾಯಿಸಿ ‘ಸಿದ್ದಗಂಗಾದ ಡಾ. ಶಿವಕುಮಾರ್ ಸ್ವಾಮೀಜಿ’ ಎಂದು ಮರು ನಾಮಕರಣಕ್ಕೆ ಬಿಬಿಎಂಪಿ ಚಿತನೆ ನಡೆಸಿದೆ.

 • Indira Canteen

  Bengaluru-Urban15, Nov 2019, 8:02 AM IST

  ಇಂದಿರಾ ಕ್ಯಾಂಟೀನ್‌ ಹೆಸರು ಬದಲು : ಹೊಸ ಹೆಸರೇನು ?

  ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಬಿಬಿಎಂಪಿ ಆಡಳಿತಾರೂಡ ಬಿಜೆಪಿ ಚಿಂತನೆ ನಡೆಸಿದೆ. ಹಾಗಾದ್ರೆ ಕ್ಯಾಂಟೀನ್ ಹೊಸ ಹೆಸರೇನು ? 

 • Indira Canteen

  Koppal3, Nov 2019, 8:48 AM IST

  ಕೊಪ್ಪಳದ ಇಂದಿರಾ ಕ್ಯಾಂಟೀನ್‌ಗೆ 1 ವರ್ಷ: ಹಸಿವು ನೀಗಿಸಿಕೊಂಡ 5 ಲಕ್ಷ ಜನ

  ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿರುವ ಏಕೈಕ ಇಂದಿರಾ ಕ್ಯಾಂಟೀನನಲ್ಲಿ ವರ್ಷವೊಂದರಲ್ಲಿ ಉಂಡವರ ಸಂಖ್ಯೆ ಬರೋಬ್ಬರಿ 5 ಲಕ್ಷ! ಇನ್ನು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಿದ್ದರೆ ಈ ಸಂಖ್ಯೆ ಹತ್ತು ಲಕ್ಷವಾಗುತ್ತಿತ್ತು. ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಪಾಲಿಗಂತೂ ಇಂದಿರಾ ಕ್ಯಾಂಟೀನ್ ದೇವರೇ ತೆರೆದಿರುವ ಪ್ರಸಾದ ನಿಲಯದಂತೆ ಆಗಿದೆ. ಬಹುತೇಕ ಇಲ್ಲಿಯೇ ಹಸಿವು ಇಂಗಿಸಿಕೊಂಡು ನಿತ್ಯವೂ ನೆಮ್ಮದಿಯ ಜೀವನನ ಡೆಸುತ್ತಿದ್ದಾರೆ. ದುಡಿಯಲು ಬರುವ ಕಾರ್ಮಿಕರು ಹಾಗೂ ಓದಲು ಬರುವ ವಿದ್ಯಾರ್ಥಿಗಳಿಗೆ ಆಹಾರಕ್ಕೆ ಇದುವೆ ಆಸರೆಯಾಗಿದೆ. ಲಕ್ಷಾಂತರ ಜನರ ಹಸಿವು ನೀಗಸಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ. 
   

 • Meal

  state29, Oct 2019, 8:39 AM IST

  ಪೌರ ಕಾರ್ಮಿಕರಿಗೆ ಕೊಟ್ಟಬಿಸಿಯೂಟದಲ್ಲಿ ಹುಳು! ​

  ಸೋಮವಾರ ರಾಮಮೂರ್ತಿ ನಗರ ವಾರ್ಡ್‌ ವ್ಯಾಪ್ತಿಯ ಕಲ್ಕೆರೆ ಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್‌ ವತಿಯಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ಬೆಳಗಿನ ಬಿಸಿಯೂಟ ವಿತರಣೆ ಮಾಡಲಾಯಿತು. ಈ ವೇಳೆ ನೀಡಲಾಗಿದ್ದ ‘ರೈಸ್‌ ಬಾತ್‌’ (ಪಲಾವ್‌)ನಲ್ಲಿ ಹುಳ ಕಂಡು ಬಂದಿದ್ದು, ಹುಳುಮಿಶ್ರಿತ ಪಲಾವ್‌ ಸೇವಿಸಿದ ಹಲವು ಕಾರ್ಮಿಕರು ವಾಂತಿ ಮಾಡಿಕೊಂಡಿದ್ದಾರೆ.

 • Indira Canteen

  News17, Oct 2019, 8:58 AM IST

  ಬಿಬಿಎಂಪಿಯ ಮಾಸಿಕ ಸಭೆಗೆ ಇಂದಿರಾ ಕ್ಯಾಂಟೀನ್‌ ಊಟ?

  ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಆಡಳಿತದಲ್ಲಿ ಮಾಸಿಕ ಸಭೆಯಲ್ಲಿ ಸದಸ್ಯರಿಗೆ ಇಂದಿರಾ ಕ್ಯಾಂಟೀನ್‌ ಊಟ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಈಗ ಮುಂಬರುವ ಮಾಸಿಕ ಸಭೆಯಲ್ಲಿ ಕ್ಯಾಂಟೀನ್‌ ಊಟ ಮುಂದುವರೆಸಬೇಕೆ, ಬೇಡವೇ ಎಂಬುದನ್ನು ನಿರ್ಧರಿಸಲು ಮೂರು ಪಕ್ಷಗಳ ಮುಖಂಡರ ಸಭೆ ಕರೆದಿದೆ.

 • undefined

  state13, Oct 2019, 2:56 PM IST

  ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗೆ ಹಣ ನಿಲ್ಲಿಸಬೇಡಿ: ಸಿದ್ದರಾಮಯ್ಯ ಮನವಿ

  ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು | ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗೆ ಹಣ ನಿಲ್ಲಿಸಬೇಡಿ| ರಾಜ್ಯದ ಅರ್ಥಿಕ ಸ್ಥಿತಿ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕಡಿತ ಮಾಡುವ ಅಗತ್ಯ ಇಲ್ಲ ಸಿದ್ದು|