ಆಸ್ಟ್ರೇಲಿಯನ್ ಓಪನ್

(Search results - 50)

Naomi Osaka

OTHER SPORTSFeb 24, 2021, 9:57 AM IST

ಟೆನಿಸ್‌ ರ‍್ಯಾಂಕಿಂಗ್‌‌: 2ನೇ ಸ್ಥಾನಕ್ಕೇರಿದ ನವೊಮಿ ಒಸಾಕ

ಜೆನಿಫರ್‌ ಬ್ರಾಡಿ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ನವೊಮಿ ಒಸಾಕ 4ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಇದರೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಒಸಾಕ ಆಸ್ಟ್ರೇಲಿಯನ್‌ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

Naomi Osaka

OTHER SPORTSFeb 21, 2021, 8:52 AM IST

ಆಸ್ಟ್ರೇಲಿಯಾ ಓಪನ್‌: ಒಸಾಕಗೆ ಒಲಿದ 4ನೇ ಗ್ರ್ಯಾನ್‌ ಸ್ಲಾಂ

ಒಸಾಕ ಗ್ರ್ಯಾನ್‌ಸ್ಲಾಂಗಳಲ್ಲಿ ಕ್ವಾರ್ಟರ್‌ ಫೈನಲ್‌ನಿಂದ ಮುಂದಕ್ಕೆ ತಮ್ಮ ಗೆಲುವು-ಸೋಲಿನ ದಾಖಲೆಯನ್ನು 12-0ಗೆ ಏರಿಸಿಕೊಂಡಿದ್ದಾರೆ. ಅಲ್ಲದೇ ಸತತ 21ನೇ ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದಾರೆ. ಚೊಚ್ಚಲ ಬಾರಿಗೆ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದ ಬ್ರಾಡಿ, ಪ್ರಶಸ್ತಿ ಗೆಲ್ಲಲು ವಿಫಲರಾಗಿ ನಿರಾಸೆ ಅನುಭವಿಸಿದರು.

Daniil Medvedev

OTHER SPORTSFeb 20, 2021, 7:56 AM IST

ಆಸ್ಪ್ರೇಲಿಯನ್‌ ಓಪನ್: ಫೈನಲ್‌ಗೆ ರಷ್ಯಾದ ಮೆಡ್ವೆಡೆವ್‌

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ರಷ್ಯಾದ ಆಟಗಾರ, ವಿಶ್ವ ನಂ.1 ಹಾಗೂ ಹಾಲಿ ಚಾಂಪಿಯನ್‌ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ವಿರುದ್ಧ ಚೊಚ್ಚಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲ್ಲಲು ಸೆಣಸಲಿದ್ದಾರೆ.

Novak Djokovic

OTHER SPORTSFeb 19, 2021, 8:50 AM IST

ಆಸ್ಟ್ರೇಲಿಯನ್ ಓಪನ್: 9ನೇ ಬಾರಿ ಫೈನಲ್‌ಗೇರಿದ ಜೋಕೋವಿಚ್‌

ಜೋಕೋವಿಚ್‌ ಈ ಹಿಂದೆ 8 ಬಾರಿ ಫೈನಲ್‌ ಪ್ರವೇಶಿಸಿದಾಗಲೂ ಪ್ರಶಸ್ತಿ ಜಯಿಸಿದ್ದಾರೆ. ದಾಖಲೆಯ 9ನೇ ಆಸ್ಪ್ರೇಲಿಯನ್‌ ಓಪನ್‌ ಗೆದ್ದು ಒಟ್ಟು ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 18ಕ್ಕೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅತಿಹೆಚ್ಚು ಗ್ರ್ಯಾನ್‌ ಸ್ಲಾಂ (20) ಗೆದ್ದಿರುವ ಫೆಡರರ್‌ ಹಾಗೂ ನಡಾಲ್‌ಗಿಂತ ಕೇವಲ 2 ಪ್ರಶಸ್ತಿ ಹಿಂದುಳಿಯಲಿದ್ದಾರೆ.

Rafael Nadal

OTHER SPORTSFeb 18, 2021, 8:26 AM IST

ಆಸ್ಟ್ರೇಲಿಯನ್‌ ಓಪನ್‌: ನಡಾಲ್‌ 21ನೇ ಗ್ರ್ಯಾನ್‌ ಸ್ಲಾಂ ಕನಸು ಭಗ್ನ

ಗ್ರ್ಯಾನ್‌ ಸ್ಲಾಂಗಳಲ್ಲಿ 225ನೇ ಬಾರಿಗೆ ಮೊದಲೆರಡು ಸೆಟ್‌ಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದ ನಡಾಲ್‌, ಕೇವಲ 2ನೇ ಬಾರಿಗೆ ಕೊನೆಯ 3 ಸೆಟ್‌ಗಳಲ್ಲಿ ಸೋಲು ಕಂಡು ಹೊರಬಿದ್ದರು. ರೋಜರ್‌ ಫೆಡರರ್‌ರ 20 ಗ್ರ್ಯಾನ್‌ ಸ್ಲಾಂಗಳ ದಾಖಲೆ ಮುರಿಯಲು ನಡಾಲ್‌, ಮುಂಬರುವ ಫ್ರೆಂಚ್‌ ಓಪನ್‌ ವರೆಗೂ ಕಾಯಬೇಕಿದೆ.

• undefined

CricketFeb 17, 2021, 8:20 AM IST

ಆಸ್ಟ್ರೇಲಿಯನ್ ಓಪನ್‌: ಸೆಮೀಸ್‌ಗೇರಿದ ಜೋಕೋವಿಚ್‌, ಸೆರೆನಾ ವಿಲಿಯಮ್ಸ್‌

ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ಬಿಯಾದ ಜೋಕೋವಿಚ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 6-7, 6-2, 6-4, 7-6 ಸೆಟ್‌ಗಳಲ್ಲಿ ಜಯಗಳಿಸಿದರು. ಸೆಮೀಸ್‌ನಲ್ಲಿ ಜೋಕೋವಿಚ್‌ಗೆ ರಷ್ಯಾದ ಆಸ್ಲನ್‌ ಕರಟ್ಲೆವ್‌ ವಿರುದ್ಧ ಸೆಣಸಲಿದ್ದಾರೆ.

Rafael Nadal

OTHER SPORTSFeb 16, 2021, 9:04 AM IST

ಆಸ್ಟ್ರೇಲಿಯನ್ ಓಪನ್‌ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಸನಿಹಕ್ಕೆ ನಡಾಲ್‌

4ನೇ ಸುತ್ತಿನ ಪಂದ್ಯದಲ್ಲಿ ನಡಾಲ್‌, ಇಟಲಿಯ ಫ್ಯಾಬಿಯೋ ಫೋಗ್ನಿನಿ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು. ಅಂತಿಮ 8ರ ಸುತ್ತಿನಲ್ಲಿ ನಡಾಲ್‌ಗೆ ಗ್ರೀಸ್‌ನ ಸ್ಟೆಫಾನೋಸ್‌ ಟಿಟ್ಸಿಪಾಸ್‌ ಎದುರಾಗಲಿದ್ದಾರೆ. 43ನೇ ಬಾರಿಗೆ ನಡಾಲ್‌ ಗ್ರ್ಯಾನ್‌ ಸ್ಲಾಂ ಕ್ವಾರ್ಟರ್‌ಗೇರಿದ ಹಿರಿಮೆಗೆ ಪಾತ್ರರಾಗಿದ್ದಾರೆ.

Novak Djokovic

OTHER SPORTSFeb 15, 2021, 8:07 AM IST

ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ಜೋಕೋ, ಸೆರೆನಾ

23 ಗ್ರ್ಯಾನ್‌ಗಳ ಒಡತಿ ಸೆರೆನಾ ವಿಲಿಯಮ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಬೆಲಾರುಸ್‌ನ ಆಯ್ರ್ನಾ ಸಬಲೆನ್ಕಾ ವಿರುದ್ಧ 6-4, 2-6, 6-4 ಸೆಟ್‌ಗಳಲ್ಲಿ ಜಯಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾಗೆ 2ನೇ ಶ್ರೇಯಾಂಕಿತೆ ಸಿಮೋನಾ ಹಾಲೆಪ್‌ ಎದುರಾಗಲಿದ್ದಾರೆ.

Novak Djokovic

OTHER SPORTSFeb 13, 2021, 8:59 AM IST

ಆಸ್ಟ್ರೇಲಿಯನ್ ಓಪನ್‌: ಜೋಕೋಗೆ ಪ್ರಯಾಸದ ಜಯ

ಅಮೆರಿಕದ ಟೇಲರ್‌ ಫ್ರಿಟ್ಜ್ ವಿರುದ್ಧ ನಡೆದ ಪಂದ್ಯದಲ್ಲಿ ಜೋಕೋವಿಚ್‌ 7-6, 6-4, 3-6, 4-6, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲೆರಡು ಸೆಟ್‌ ಜಯಿಸಿದ್ದ ಜೋಕೋವಿಚ್‌, 3 ಹಾಗೂ 4ನೇ ಸೆಟ್‌ನಲ್ಲಿ ಸೋಲುಂಡು ಹೊರಬೀಳುವ ಆತಂಕಕ್ಕೀಡಾದರು. ಆದರೆ 5ನೇ ಸೆಟ್‌ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ಜೋಕೋವಿಚ್‌ 6-2 ಗೇಮ್‌ಗಳಲ್ಲಿ ಗೆದ್ದು, ಮುನ್ನಡೆದರು.

Sofia Kenin

OTHER SPORTSFeb 12, 2021, 9:30 AM IST

ಆಸ್ಟ್ರೇಲಿಯನ್ ಓಪನ್: ಹಾಲಿ ಚಾಂಪಿಯನ್‌ ಕೆನಿನ್‌ಗೆ ಆಫಾತ..!

2020ರಲ್ಲಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿದ್ದ ಕೆನಿನ್‌, ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು. ಯುಎಸ್‌ ಓಪನ್‌ನಲ್ಲಿ 4ನೇ ಸುತ್ತಿನಲ್ಲಿ ಸೋತಿದ್ದರು. ಇದೇ ವೇಳೆ 5ನೇ ಶ್ರೇಯಾಂಕಿತೆ ಸ್ವೀಡನ್‌ನ ಎಲೆನಾ ಸ್ವಿಟೋಲಿನಾ, ಅಮೆರಿಕದ ಕೊಕೊ ಗಾಫ್‌ ವಿರುದ್ಧ ಗೆದ್ದು 3ನೇ ಸುತ್ತಿಗೇರಿದರು.

Novak Djokovic

OTHER SPORTSFeb 11, 2021, 8:31 AM IST

ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ಸ್ಲಾಂ: 3ನೇ ಸುತ್ತಿಗೇರಿದ ಜೋಕೋ, ಸರೆನಾ

ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಸ್ಟೊವಾನೊವಿಚ್‌ ವಿರುದ್ಧ 6-3, 6-0ಯಲ್ಲಿ ಗೆದ್ದ ಸೆರೆನಾ ವಿಲಿಯಮ್ಸ್‌, ಆಸ್ಪ್ರೇಲಿಯಾದ ಆಲಾ ಟಾಮ್ಲಿಯೊನಿಚ್‌ ವಿರುದ್ಧ ಸೋಲುವ ಭೀತಿಯಲ್ಲಿದ್ದ ರೊಮೇನಿಯಾದ ಸಿಮೋನಾ ಹಾಲೆಪ್‌ 4-6, 6-4, 7-5 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು.

Djokovic serena

OTHER SPORTSFeb 9, 2021, 8:23 AM IST

ಆಸ್ಟ್ರೇಲಿಯನ್ ಓಪನ್‌: 2ನೇ ಸುತ್ತಿಗೆ ಸೆರೆನಾ, ಜೋಕೋ ಲಗ್ಗೆ

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ಜರ್ಮನಿಯ ಲಾರಾ ಸೀಜ್‌ಮಂಡ್‌ ವಿರುದ್ಧ 6-1, 6-1 ನೇರ ಸೆಟ್‌ಗಳಲ್ಲಿ ಜಯಿಸಿದರು. ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಜೋಕೋವಿಚ್‌, ಫ್ರಾನ್ಸ್‌ನ ಜೆರೆಮಿ ಚಾರ್ಡಿ ವಿರುದ್ಧ 6-3, 6-1, 6-2 ಸೆಟ್‌ಗಳಲ್ಲಿ ಗೆದ್ದರು.

Novak Djokovic Rafael Nadal

OTHER SPORTSFeb 8, 2021, 7:48 AM IST

ಆಸ್ಟ್ರೇಲಿಯನ್ ಓಪನ್‌: ದಾಖಲೆ ಹೊಸ್ತಿಲಲ್ಲಿ ಸೆರೆನಾ, ನಡಾಲ್, ಜೋಕೋವಿಚ್‌

23 ಗ್ರ್ಯಾನ್‌ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್‌, ತಾಯಿಯಾದ ಬಳಿಕ ಮೊದಲ ಗ್ರ್ಯಾನ್‌ಸ್ಲಾಂ ಗೆಲ್ಲಲು 2 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಸಾಧ್ಯವಾಗಿಲ್ಲ. ಈ ಬಾರಿ ಟ್ರೋಫಿ ಜಯಿಸಿ ದಿಗ್ಗಜ ಆಟಗಾರ್ತಿ ಮಾರ್ಗರೆಟ್‌ ಕೋರ್ಟ್‌ರ 24 ಗ್ರ್ಯಾನ್‌ ಸ್ಲಾಂ ಸಿಂಗಲ್ಸ್‌ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟುವ ತವಕದಲ್ಲಿದ್ದಾರೆ.

Paula Badosa

OTHER SPORTSJan 23, 2021, 12:26 PM IST

ಆಸ್ಪ್ರೇಲಿಯನ್‌ ಓಪನ್‌: ಸ್ಪೇನ್‌ ಆಟಗಾರ್ತಿ ಪೌಲಾ ಬಡೋಸಾಗೆ ವೈರಸ್‌!

ಪೌಲಾ ಅವರನ್ನು ಹೋಟೆಲ್‌ ಕೊಠಡಿಯಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಇವರೊಂದಿಗೆ ವಿಮಾನದಲ್ಲಿ ಆಗಮಿಸಿದ ಇತರ ಟೆನಿಸಿಗರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

Roger Federer

OTHER SPORTSDec 29, 2020, 1:32 PM IST

ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ಫೆಡರರ್

ಫೆಡರರ್‌ 2 ಬಾರಿ ಬಲಗಾಲಿನ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿರುವ ಕಾರಣದಿಂದ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುತ್ತಿಲ್ಲ ಎಂದು ವಕ್ತಾರರೊಬ್ಬರು ಹೇಳಿದ್ದಾರೆ. 2021ರಲ್ಲಿ ಫೆಡರರ್‌ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎನ್ನಲಾಗಿದೆ.