ಆರ್‌ಸಿಬಿ  

(Search results - 144)
 • ab de villiers dale steyn rcb

  Cricket8, Oct 2019, 5:55 PM IST

  ABD ಬಳಿಕ ಹೊಸ ತಂಡ ಸೇರಿದ RCB ವೇಗಿ ಡೇಲ್ ಸ್ಟೇನ್..!

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಡೇಲ್ ಸ್ಟೇನ್ 2 ಪಂದ್ಯಗಳನ್ನು ಆಡಿದ್ದರು. ಆಡಿದ 2 ಪಂದ್ಯಗಳಲ್ಲೂ RCB ಗೆಲುವಿನಲ್ಲಿ ಸ್ಟೇನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರ ಬಿದ್ದಿದ್ದರು.

 • SPORTS20, Sep 2019, 2:10 PM IST

  RCB ಬ್ರ್ಯಾಂಡ್ ಮೌಲ್ಯ ಕುಸಿತ..! ಆದರೆ ಕೊಹ್ಲಿ ನಾಯಕತ್ವಕ್ಕಿಲ್ಲ ಕುತ್ತು..!

  ವಿಶ್ವದ ಶ್ರೀಮಂತ ಕ್ರಿಕೆ​ಟಿಗ ವಿರಾಟ್‌ ಕೊಹ್ಲಿ ತಂಡದ ನಾಯ​ಕ​ನಾ​ಗಿ​ದ್ದರೂ, ಬ್ರ್ಯಾಂಡ್‌ ಮೌಲ್ಯ ಕುಸಿ​ದಿ​ರು​ವುದು ಅಚ್ಚರಿ ಮೂಡಿ​ಸಿದೆ. ಆರ್‌ಸಿಬಿ ಮಾತ್ರವಲ್ಲ, ಬಾಲಿ​ವುಡ್‌ ತಾರೆ ಶಾರುಖ್‌ ಖಾನ್‌ ಒಡೆತನದ ಕೋಲ್ಕತಾ ನೈಟ್‌ ರೈಡ​ರ್ಸ್(ಕೆ​ಕೆ​ಆರ್‌), ರಾಜ​ಸ್ಥಾನ ರಾಯಲ್ಸ್‌ ತಂಡದ ಬ್ರ್ಯಾಂಡ್‌ ಮೌಲ್ಯಕ್ಕೂ ಹೊಡೆತ ಬಿದ್ದಿ​ದೆ.

 • RCB

  SPORTS23, Aug 2019, 3:55 PM IST

  RCB ತಂಡಕ್ಕೆ ಹೊಸ ಕೋಚ್, ಹೊಸ ಡೈರೆಕ್ಟರ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ಕೋಚ್ ಕೋಚ್ ಹಾಗೂ ಡೈರೆಕ್ಟರ್ ನೇಮಕ ಮಾಡಲಾಗಿದೆ. ಹಲವರು ರೇಸ್‌ನಲ್ಲಿದ್ದರೂ ಟೀಂ ಮ್ಯಾನೇಜ್ಮೆಂಟ್ ಅಚ್ಚರಿ ಆಯ್ಕೆ ಪ್ರಕಟಿಸಿದೆ. 2020ರ ಐಪಿಎಲ್ ಟೂರ್ನಿಯಲ್ಲಿ RCB ತಂಡ ಹೊಸ ಕೋಚ್ ಹಾಗೂ ಹೊಸ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ.

 • abd kohli sad

  SPORTS18, May 2019, 5:48 PM IST

  ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ; ಎಬಿ ಡಿವಿಲಿಯರ್ಸ್!

  ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕಾಂಬಿನೇಷನ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ. ಈ ಜೋಡಿ ಹಲವು ದಾಖಲೆಗಳನ್ನು ಬರೆದಿದೆ. RCB ತಂಡದಲ್ಲಿ ಜೊತೆಯಾಗಿ ಆಡುವ ಈ ಸ್ಟಾರ್ ಕ್ರಿಕೆಟಿಗರು ಆತ್ಮೀಯ ಗೆಳೆಯರು ಕೂಡ ಹೌದು. ಇದೀಗ ಎಬಿಡಿ ಸಂದರ್ಶನವೊಂದರಲ್ಲಿ ಕೊಹ್ಲಿ ಮುಂದೆ ಮಾತನಾಡಲು ಭಯವಾಗುತ್ತೆ ಎಂದಿದ್ದಾರೆ. ಅಷ್ಟಕ್ಕೂ ಎಬಿಡಿ ಹೀಗೆ ಹೇಳಿದ್ದು ಯಾಕೆ? ಇಲ್ಲಿದೆ ವಿವರ.

 • RCB Fans
  Video Icon

  SPORTS9, May 2019, 1:00 PM IST

  ಟೂರ್ನಿಯಿಂದ ಹೊಬಿದ್ದರೂ ಕಡಿಮೆಯಾಗಿಲ್ಲ RCB ಹವಾ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಹಂತದಿಂದಲೇ ಹೊರಬಿದ್ದಿದೆ. ಆದರೆ RCB ಪಂದ್ಯ ಸೋತರೂ, ಗೆದ್ದರೂ ಅಭಿಮಾನಿಗಳು ಮಾತ್ರ ತಂಡವನ್ನು ಕೈಬಿಟ್ಟಿಲ್ಲ. ಇದೀಗ ಬೆಂಗಳೂರು  ತಂಡದ ಹೋರಾಟ ಅಂತ್ಯಗೊಂಡಿದ್ದರೂ, ಸಾಮಾಜಿಕ ಜಾಲತಾದಲ್ಲಿ RCB ಇನ್ನೂ ಸದ್ದು ಮಾಡುತ್ತಿದೆ.
   

 • Umpire Nigel Llong

  SPORTS7, May 2019, 3:13 PM IST

  RCB ಮೇಲಿನ ಸಿಟ್ಟಿಗೆ ಬಾಗಿಲು ಮುರಿದ ಅಂಪೈರ್- ನಿಗೆಲ್‌ಗೆ ಬಿತ್ತು ಬರೆ!

  IPL ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅಂಪೈರ್‌ಗೆ ದಂಡ ಹಾಕಲಾಗಿದೆ. ಇಷ್ಟು  ನಿಯಮ ಉಲ್ಲಂಘನೆಗೆ ಕಾರಣದಿಂದ ಆಟಗಾರರು ದಂಡ ಕಟ್ಟುತ್ತಿದ್ದರು. ಇದೀಗ ಅನುಚಿತ ವರ್ತನೆ ತೋರಿದ ಅಂಪೈರ್ ದಂಡ ಕಟ್ಟಿದ ಘಟನೆ ನಡೆದಿದೆ. 

 • RCB Mallya

  SPORTS6, May 2019, 8:39 PM IST

  RCB ಸೋಲಿಗೆ ಕಾರಣ ತಿಳಿಸಿದ ವಿಜಯ್ ಮಲ್ಯ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ತಂಡದ ಮಾಜಿ ಮಾಲೀಕ ಹಾಗೂ ಚೇರ್ಮೆನ್ ವಿಜಯ್ ಮಲ್ಯ ಕಾರಣ ನೀಡಿದ್ದಾರೆ. ಮಲ್ಯ ನೀಡಿರುವ ಕಾರಣವೇನು? ಇಲ್ಲಿದೆ ವಿವರ.

 • virat kohli

  SPORTS5, May 2019, 8:22 PM IST

  RCB ಅಭಿಮಾನಿಗಳಿಗೆ ಕನ್ನಡದಲ್ಲಿ ವಿರಾಟ್ ಕೊಹ್ಲಿ ಟ್ವೀಟ್!

  ಸೋಲು -ಗೆಲುವಿನಲ್ಲಿ ತಂಡವನ್ನು ಬೆಂಬಲಿಸಿದ RCB ಅಭಿಮಾನಿಗಳಿಗೆ ನಾಯಕ ವಿರಾಟ್ ಕೊಹ್ಲಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಟ್ವೀಟ್ ಕುರಿತ ವಿವರ ಇಲ್ಲಿದೆ.
   

 • Hetmyer

  SPORTS4, May 2019, 11:43 PM IST

  ಗೆಲುವಿನೊಂದಿಗೆ 2019ರ IPL ಟೂರ್ನಿಗೆ ವಿದಾಯ ಹೇಳಿದ RCB

  12ನೇ ಆವೃತ್ತಿಯಲ್ಲಿ ಅಂತಿಮ ಪಂದ್ಯವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಸತತ ಸೋಲು, ಹಿನ್ನಡೆಗಳಿಂದ ನಿರಾಸೆ ಅನುಭವಿಸಿದ್ದ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್ ನೀಡಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • RCB Vs SRH

  SPORTS4, May 2019, 9:44 PM IST

  ವಿಲಿಯಮ್ಸನ್ ಹಾಫ್ ಸೆಂಚುರಿ-RCBಗೆ 176 ರನ್ ಗುರಿ

  ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ RCB ಅಂತಿಮ ಲೀಗ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು RCB 175 ರನ್‌ಗಳಿಗೆ ಕಟ್ಟಿಹಾಕಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

 • RCB

  SPORTS4, May 2019, 7:33 PM IST

  IPL 2019: ಟಾಸ್ ಗೆದ್ದ RCB ಫೀಲ್ಡಿಂಗ್ - ತಂಡದಲ್ಲಿ 3 ಬದಲಾವಣೆ!

  12ನೇ ಆವೃತ್ತಿಯಲ್ಲಿ ಅಂತಿಮ ಲೀಗ್ ಪಂದ್ಯ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ SRH ವಿರುದ್ಧ ಟಾಸ್ ಗೆದ್ದು  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.  ಇಂದಿನ ಪಂದ್ಯಕ್ಕೆ ಉಭಯ ತಂಡದ ಬದಲಾವಣೆ ಏನು?

 • Kohli ABD

  SPORTS4, May 2019, 4:20 PM IST

  ಲಾಸ್ಟ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್‌ಗೆ ಕೊಹ್ಲಿ ಮೆಸೇಜ್!

  ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ RCB ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ ನಡೆಯಲಿದೆ. ಇದು ಬೆಂಗಳೂರು ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶ ನೀಡಿದ್ದಾರೆ. 

 • RCB

  SPORTS2, May 2019, 12:30 PM IST

  ಆರ್‌ಸಿಬಿ ಪ್ಲೇ-ಆಫ್ ಕನಸು ಛಿದ್ರಗೊಳ್ಳಲು ಈ ಮೂವರು ಕಾರಣ!

  ಆರ್‌ಸಿಬಿ ಪ್ಲೇ ಆಫ್ ಕನಸು ಭಗ್ನಗೊಳಿಸಿದ 3 ಕಾರಣಗಳು!

 • RCB

  SPORTS1, May 2019, 12:35 AM IST

  ಮಳೆಗೆ ರದ್ದಾಯ್ತು RCB Vs RR ಮ್ಯಾಚ್- ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಬಾಯ್ಸ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ 5 ಓವರ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಗೆಲುವಿಗೆ 63 ರನ್ ಟಾರ್ಗೆಟ್ ಪಡೆದ ರಾಜಸ್ಥಾನಕ್ಕೆ ಮಳೆ ಅಡ್ಡಪಡಿಸಿತು. ಹೀಗಾಗಿ ಪಂದ್ಯ ರದ್ದುಗೊಂಡಿತು. 

 • Shreyas Gopal

  SPORTS30, Apr 2019, 11:58 PM IST

  5 ಓವರ್ ಪಂದ್ಯ: ರಾಜಸ್ಥಾನಕ್ಕೆ 63 ರನ್ ಟಾರ್ಗೆಟ್ ನೀಡಿದ RCB!

  ಮಳೆಯಿಂದಾಗಿ 5 ಓವರ್ ಸೀಮಿತಗೊಳಿಸಲಾಗಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 62 ರನ್ ಸಿಡಿಸಿದೆ. ಈ ಮೂಲಕ ರಾಜಸ್ಥಾನಕ್ಕೆ 63 ರನ್ ಟಾರ್ಗೆಟ್ ನೀಡಿದೆ.

  ಬೆಂಗಳೂರು(ಏ.30): ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯಕ್ಕೂ ಅಡ್ಡಿಯಾಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧದ 5 ಓವರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ ನಷ್ಟಕ್ಕೆ 62 ರನ್ ಸಿಡಿಸಿದೆ. 

  ಮಳೆಗೂ ಮೊದಲೇ ನಡೆದ ಟಾಸ್‌ ಪ್ರಕ್ರಿಯೆ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್ ಇಳಿದ RCB, ಈ ಆವೃತ್ತಿಯಲ್ಲಿ ಕಾಣದಂತ ಆರಂಭ ಪಡೆಯಿತು. ಆದರೆ ಅಷ್ಟೇ ವೇಗದಲ್ಲಿ ಕುಸಿತ ಕಂಡಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೊದಲ ಎಸೆತದಿಂದಲೇ ಸಿಕ್ಸರ್ ಅಬ್ಬರ ಆರಂಭಿಸಿದರು. ಕೊಹ್ಲಿ 7 ಎಸೆತದಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 25 ರನ್ ಸಿಡಿಸಿ ಔಟಾದರು.

  ಕೊಹ್ಲಿ ಔಟಾದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ 10 ರನ್ ಸಿಡಿಸಿ ನಿರ್ಗಮಿಸಿದರು. ಮರು ಎಸೆತದಲ್ಲೇ ಮಾರ್ಕಸ್ ಸ್ಟೊಯ್ನಿಸ್ ವಿಕೆಟ್ ಕಬಳಿಸೋ ಮೂಲಕ ಕನ್ನಡಿಗ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ 12ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

  ಗುರಕೀರತ್ ಸಿಂಗ್ ಮಾನ್ 6 ರನ್ ಸಿಡಿಸಿ ಔಟಾದರು. ಪಾರ್ಥೀವ್ ಪಟೇಲ್ 8 ರನ್ ಸಿಡಿಸಿ ನಿರ್ಗಮಿಸಿದರು. ಪವನ್ ನೇಗಿ 4 ರನ್ ಸಿಡಿಸಿ ಔಟಾದರು. ಈ  ಮೂಲಕ ನಿಗಧಿತ 5 ಓವರ್‌ಗಳಲ್ಲಿ  RCB  7 ವಿಕೆಟ್ ನಷ್ಟಕ್ಕೆ 62 ರನ್ ಸಿಡಿಸಿತು.