ಆರ್ಬಿಐ ಗರ್ವನರ್
(Search results - 14)BUSINESSDec 12, 2018, 9:27 PM IST
ಮೋದಿಗೆ ಮತ್ತೆ ಬೈದ ಸ್ವಾಮಿ: ಇವರಾ ನಿಮ್ಮ ಆರ್ಬಿಐ ಗರ್ವನರ್?
ಆರ್ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಕ್ಕೆ ಆತಂಕ ವ್ಯಕ್ತಪಡಿಸಿದ್ದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಇದೀಗ ನೂತನ ಗರ್ವನರ್ ಆಯ್ಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕ್ತಿಕಾಂತ್ ದಾಸ್ ಅವರಿಗೆ ಆರ್ಬಿಐ ಗರ್ವನರ್ ಆಗುವ ಅರ್ಹತೆ ಇಲ್ಲ ಎಂದು ಸ್ವಾಮಿ ಹರಿಹಾಯ್ದಿದ್ದಾರೆ.
BUSINESSDec 12, 2018, 4:00 PM IST
'ಅರ್ಥ'ಶಾಸ್ತ್ರ ಓದಿಲ್ಲ ಗರ್ವನರ್ : 'ಹಿಸ್ಟರಿ'ಯಿಂದಾಗದಿರಲಿ ಅನರ್ಥ!
ಆರ್ಬಿಐ ಹೊಸ ಗರ್ವನರ್ ನೇಮಕದ ಕುರಿತಂತೆ ವಿಚಿತ್ರ ಸಂಗತಿಯೊಂದು ಇದೀಗ ಎಲ್ಲರ ಕುತೂಹಲ ಕೆರಳಿಸಿದೆ. ಹೌದು, ಆರ್ಬಿಐ ಇತಿಹಾಸದಲ್ಲಿ ಎರಡನೇ ಬಾರಿಗೆ ಅರ್ಥಶಾಸ್ತ್ರಜ್ಞರಲ್ಲದ ವ್ಯಕ್ತಿಯನ್ನು ಗರ್ವನರ್ ಆಗಿ ನೇಮಕ ಮಾಡಲಾಗಿದೆ.
BUSINESSDec 11, 2018, 3:08 PM IST
ಏನಾಗ್ತಿದೆ ದೇಶದಲ್ಲಿ?: ಆರ್ಬಿಐ ಡೆಪ್ಯೂಟಿ ರಾಜೀನಾಮೆ?
ನಿನ್ನೆಯಷ್ಟೇ ಆರ್ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಡುವಿನ ತಿಕ್ಕಾಟದಿಂದ ಬೇಸತ್ತು ಪಟೇಲ್ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
BUSINESSDec 11, 2018, 9:59 AM IST
ಮೋದಿ ಅಕ್ಷರಶ: ಏಕಾಂಗಿ: ಕೈ ಕೊಟ್ಟ ಮತ್ತೋರ್ವ ಸಹವರ್ತಿ!
ನಿನ್ನೆಯಷ್ಟೇ ಆರ್ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದರು. ಇದೀಗ ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯರಾಗಿದ್ದ ಸುರ್ಜಿತ್ ಭಲ್ಲಾ ರಾಜೀನಾಮೆ ನೀಡಿದ್ದಾರೆ.
BUSINESSDec 10, 2018, 7:30 PM IST
ಹೋಗ್ಬನ್ನಿ ಒಳ್ಳೆದಾಗ್ಲಿ: ಮೋದಿ ಬಿಚ್ಚಿಟ್ಟ ಊರ್ಜಿತ್ ರಹಸ್ಯ!
ಆರ್ಬಿಐ ಗರ್ವನರ್ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿರುವ ಊರ್ಜಿತ್ ಪಟೇಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಟ್ವಿಟ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಊರ್ಜಿತ್ ಪಟೇಲ್ ಅವರಿಗೆ ಶುಭಾಶಯ ಸಂದೇಶ ಕಳುಹಿಸಿದ್ದಾರೆ.
BUSINESSDec 10, 2018, 5:29 PM IST
ಮೋದಿಯನ್ನು ನಡುನೀರಲ್ಲಿ ಬಿಟ್ಟ ಊರ್ಜಿತ್: ಆರ್ಬಿಐ ಸ್ಥಾನಕ್ಕೆ ರಾಜೀನಾಮೆ!
ಮಹತ್ವದ ಬೆಳವಣಿಗೆಯೊಂದರಲ್ಲಿ ಆರ್ಬಿಐ ಗರ್ವನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಊರ್ಜಿತ್ ಪಟೇಲ್ ರಾಜೀನಾಮೆ ನೀಡುತ್ತಾರೆ ಎಂಬ ಅನುಮಾನ ಕಳೆದ ಹಲವು ದಿನಗಳಿಂದ ವ್ಯಕ್ತವಾಗುತ್ತಲೇ ಇತ್ತು.
BUSINESSNov 28, 2018, 12:22 PM IST
ನೋಟ್ ಬ್ಯಾನ್ ಒಂದು ಅವಾಂತರ: ಊರ್ಜಿತ್ ಪಟೇಲ್ ದಿಢೀರ್ ಪಕ್ಷಾಂತರ?
ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ದೇಶದ ಆರ್ಥಿಕತೆ ಅಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ. 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಪನಗದೀಕರಣ ಆರ್ಥಿಕತೆಯನ್ನು ಅಸ್ಥಿರವಾಗಿಸಿದೆ ಎಂದು ಪಟೇಲ್ ಸಂಸದೀಯ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ.
BUSINESSNov 27, 2018, 5:25 PM IST
ನೋಟ್ ಬ್ಯಾನ್: ಸಿಂಗ್ ಮುಂದೆ ಕೈಕಟ್ಟಿ ನಿಂತ ಉರ್ಜಿತ್!
ನೋಟು ನಿಷೇಧ, ಎನ್ಪಿಎ ಕುರಿತಂತೆ ವಿವರಣೆ ನೀಡಲು ಆರ್ಬಿಐ ಗರ್ವನರ್ ಉರ್ಜಿತ್ ಪಟೇಲ್, ಸಂಸತ್ ಸಮಿತಿ ಎದುರು ಹಾಜರಾಗಿದ್ದಾರೆ. ಕೇಂದ್ರ ಸರ್ಕಾರ-ಆರ್ಬಿಐ ನೊಂದಿಗಿನ ತಿಕ್ಕಾಟದ ನಂತರ ಇಂದು ಸಂಸತ್ ಸಮಿತಿ ಎದುರು ಅವರು ಹಾಜರಾಗಿದ್ದಾರೆ.
BUSINESSNov 2, 2018, 2:57 PM IST
ಆರ್ಬಿಐ ಮಾತು ಕೇಳೋದು ಒಳಿತು: ಮೋದಿ ಸರ್ಕಾರಕ್ಕೆ ಕುತ್ತು?
ಆರ್ಬಿಐ ಮತ್ತು ಸರ್ಕಾರದ ನಡುವಿನ ಆಂತರಿಕ ಸಂಘರ್ಷ ತಾರಕಕ್ಕೇರಿದೆ. ಈ ಬಗ್ಗೆ ಆರ್ಬಿಐ ಮಾಜಿ ಡೆಪ್ಯುಟಿ ಗವರ್ನರ್ ಬ್ಲೂಮ್ಬರ್ಗ್ಕ್ವಿಂಟ್ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಒಳನೋಟಗಳನ್ನು ನೀಡಿದ್ದಾರೆ. ಆಯ್ದ ಭಾಗ ಇಲ್ಲಿದೆ.
BUSINESSOct 31, 2018, 12:28 PM IST
ಊರ್ಜಿತ್ ಪಟೇಲ್ ರಿಸೈನ್?: ಶುರುವಾಯ್ತು ಟೆನ್ಷನ್!
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಆರ್ಬಿಐ ಗರ್ವನರ್ ಊರ್ಜಿತ್ ಪಟೇಲ್ ಕೇಂದ್ರ ಸರ್ಕಾರದ ಒತ್ತಡದಿಂದ ರೋಸಿ ಹೋಗಿದ್ದು, ಇಂದು ತಮ್ಮ ಸ್ಥಾನಕ್ಕೆ ರಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
BUSINESSOct 7, 2018, 2:52 PM IST
ನಮ್ ರೂಪಾಯಿ ಸದೃಢ: ಊರ್ಜಿತ್ ಹೇಳೊದು ನಿಜಾನಾ?
ಇತರ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಅತ್ಯಂತ ಸದೃಢವಾಗಿದೆ ಎಂದು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಮರ್ಥಿಸಿಕೊಂಡಿದ್ದಾರೆ. ಇತರ ಉದ್ಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ರೂಪಾಯಿ ಸದೃಢವಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು.
BUSINESSSep 5, 2018, 11:23 AM IST
ಮೋದಿ ಮಾತು ಕೇಳ್ತಿಲ್ಲಾ ಆರ್ಬಿಐ ಗವರ್ನರ್: ದಾರಿ ಬದಲಿಸಿದ ಪಟೇಲ್?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್ಬಿಐ ಗರ್ವನರ್ ಆಗಿದ್ದ ರಘುರಾಮ್ ರಾಜನ್ ಅವರನ್ನು ಬದಲಿಸಿ ಊರ್ಜಿತ್ ಪಟೇಲ್ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದೇಕೆ ಎಂಬ ಪ್ರಶ್ನೆ ಈಗಲೂ ಚಾಲ್ತಿಯಲ್ಲಿದೆ. ಮೋದಿ ಮಾತು ಕೇಳದ ರಾಜನ್ ಅವರನ್ನು ಬದಲಿಸಿ ಮೋದಿ ಮಾತು ಕೇಳುವ ಊರ್ಜಿತ್ ಅವರನ್ನು ಕರೆತರಲಾಗಿತ್ತು ಎಂಬುದು ಸಾಮಾನ್ಯ ನಂಬಿಕೆ. ಆದರೆ ಆರ್ಬಿಐ ಗರ್ವನರ್ ಊರ್ಜಿತ್ ಪಟೇಲ್ ಇದೀಗ ರಾಜನ್ ಅವರ ಹಾದಿಯನ್ನೇ ತುಳಿಯುವ ಸೂಚನೆ ನೀಡಿದ್ದು, ಮೋದಿ ಸರ್ಕಾರದ ಕೆಲವು ನೀತಿಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
BUSINESSSep 4, 2018, 11:18 AM IST
‘ಎಲ್ಲಾ ಹದಗೆಡಸಿದ್ದು ರಾಜನ್, ಮೋದಿ ಅಲ್ವೇ ಅಲ್ಲ’!
ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ದೇಶದ ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದರು ಎಂಬುದು ಹಲವರ ಆರೋಪ. ಇವರ ಸಾಲಿಗೆ ಇದೀಗ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಕೂಡ ಸೇರಿದ್ದಾರೆ. ದೇಶದ ಅರ್ಥ ವ್ಯವಸ್ಥೆ ಹಿನ್ನಡೆಗೆ ರಘುರಾಮ್ ರಾಜನ್ ಆರ್ಬಿಐ ಗರ್ವನರ್ ಆಗಿದ್ದಾಗ ತೆಗೆದುಕೊಂಡಿದ್ದ ನಿರ್ಣಯಗಳೇ ಹೊರತು ನೋಟು ಅಮಾನ್ಯೀಕರಣ ಅಲ್ಲ ಎಂದು ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.
BUSINESSAug 19, 2018, 6:01 PM IST
ಎನ್ಪಿಎ ಕ್ಲಾಸ್ ಹೇಳ್ಕೊಡ್ತಿರಾ?: ರಾಜನ್ಗೆ ಮನವಿ!
ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ(ಎನ್ಪಿಎ)ಕುರಿತಂತೆ ಕೇಂದ್ರ ಸರ್ಕಾರ ಚಿಂತೆಗೀಡಾಗಿದೆ. ಎನ್ಪಿಎ ಮೇಲೆ ನಿಯಂತ್ರಣ ಹೇಗೆ ಎಂಬುದರ ಕುರಿತು ಚಿಂತನೆ ನಡೆಸುತ್ತಿದೆ. ಇದೇ ಕಾರಣಕ್ಕೆ ಎನ್ಪಿಎ ಕುರಿತು ವಿವರಣೆ ನೀಡುವಂತೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರಿಗೆ ಸಂಸದೀಯ ಸಮಿತಿ ಕೇಳಿಕೊಂಡಿದೆ.