ಆರೋಪಿ  

(Search results - 639)
 • jagadesh Shettar

  Karnataka Districts21, Sep 2019, 9:33 AM IST

  ಬೆಳಗಾವಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಕಾರಿಗೆ ಮುತ್ತಿಗೆ ಹಾಕಿದ ರೈತರು

  ಭಾರಿ ಮಳೆ ಸುರಿದ ಪರಿಣಾಮ ಉತ್ತರ ಕರ್ನಾಟಕ ಭಾಗದ ಹಲವೆಡೆ ಜನರು ತಮ್ಮ ಮನೆ ಜಮೀನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಆದರೆ, ರಾಜ್ಯ ಸರಕಾರ ಮಹಾಪ್ರವಾಹದಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ಕುರಿತು ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸಲಿಲ್ಲ ಎಂದು ಆರೋಪಿಸಿ ರೈತ ಮುಖಂಡರು ಸಚಿವ ಜಗದೀಶ ಶೆಟ್ಟರ್‌ ಕಾರಿಗೆ ಮುತ್ತಿಗೆ ಹಾಕಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು. 

 • Karnataka Districts21, Sep 2019, 9:02 AM IST

  ಬೇರೆಯವರ ಕೈಗೆ ನಿಮ್ಮ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ!

  ಗೇಮ್‌ ಆಡುವ ನೆಪದಲ್ಲಿ ಮೊಬೈಲ್‌ ಪಡೆದುಕೊಂಡು ಗೂಗಲ್‌ ಪೇ ಮೂಲಕ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದ ಮೂವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಗೂಗಲ್‌ ಪೇ ಮೂಲಕ ಖಾತೆಯಲ್ಲಿದ್ದ 20 ಸಾವಿರ ರೂ. ಹಣವನ್ನು ವರ್ಗಾಯಿಸಿದ್ದ ಆರೋಪಿಗಳು. 

 • pailwan sudeep kannada movie

  News20, Sep 2019, 10:40 PM IST

  ಪತ್ತೆಯಾಗ್ತಿದೆ ಪೈರಸಿ ಜಾಲ, ಫೈಟ್ ಮುಂದುವರಿಯಲಿದೆ; ಪೈಲ್ವಾನ್ ಶಪಥ

  ಪೈಲ್ವಾನ್ ಚಿತ್ರ  ಪೈರಸಿಯಾಗಿದ್ದು ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ಆತಂಕ ತಂದ ಸಂಗತಿ. ಬೆಂಗಳೂರು ಪೊಲೀಸರು ಪೈರಸಿ ಮಾಡಿದ್ದ ಆರೋಪಿಯ ಮೂಲ ಪತ್ತೆ ಹಚ್ಚಿದ್ದು ತನಿಖೆ ಪ್ರಗತಿಯಲ್ಲಿದೆ. ಇದೆಲ್ಲದರ ನಡುವೆ ಪೊಲೀಸರ ಕಾರ್ಯ ಶ್ಲಾಫಿಸಿರುವ ಕಿಚ್ಚ ಸುದೀಪ್ ಪೈರಸಿ ವಿರುದ್ಧ ಹೋರಾಟ ನಿರಂತರ ಎಂದಿದ್ದಾರೆ.

 • pailwan sudeep kannada movie
  Video Icon

  ENTERTAINMENT20, Sep 2019, 3:52 PM IST

  ‘ಪೈಲ್ವಾನ್’ ಪೈರಸಿ ಆರೋಪಿ ರಾಕೇಶ್ ಬಂಧನ

  ಪೈಲ್ವಾನ್ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆಯುವ ಮೂಲಕ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಪೈಲ್ವಾನ್ ಗೆ ಪೈರಸಿ ಕಂಟಕ ಎದುರಾಗಿತ್ತು. ಪೈರಸಿ ಮಾಡಿದ ಆರೋಪಿ ರಾಕೇಶ್ ರನ್ನು ಪೊಲಿಸರು ಬಂಧಿಸಿದ್ದಾರೆ. ರಾಕೇಶ್ ನಿಜವಾಗ್ಲೂ ದರ್ಶನ್ ಅಭಿಮಾನಿನಾ? ತನಿಖೆ ನಡೆಯುತ್ತಿದೆ. ಆರೋಪಿ ಬಂಧನದ ಬಗ್ಗೆ ನಿರ್ಮಾಪಕಿ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. 

 • dowry
  Video Icon

  NEWS20, Sep 2019, 12:17 AM IST

  ಉತ್ತರ ಪ್ರದೇಶದಲ್ಲಿ ಬೆಂಕಿ ಹಚ್ಚಿ ತಾಯಿ ಮತ್ತು 3 ತಿಂಗಳ ಮಗುವಿನ ಹತ್ಯೆ

   ಉತ್ತರ ಪ್ರದೇಶದ ರಾಂಪುರದಲ್ಲಿ ಸೊಸೆ ಮತ್ತು 3 ತಿಂಗಳ ಮಗುವನ್ನು ಗಂಡನ ಕಡೆಯವರು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವರದಕ್ಷಿಣೆ ವಿಚಾರವಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 • Karnataka Districts19, Sep 2019, 10:46 AM IST

  ಜೆಡಿಎಸ್ ಅಭ್ಯರ್ಥಿಗೆ ನೋಟಿಸ್ : ಹುದ್ದೆಯಿಂದ ವಜಾಗೊಳಿಸಲು ರಾಜಕೀಯ ತಂತ್ರ

  ನಿರ್ದೇಶಕರಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ವಜಾ ಮಾಡಲು ರಾಜಕೀಯ ಪ್ರೇರಿತವಾಗಿ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. 

 • ASTROLOGY19, Sep 2019, 7:17 AM IST

  ಸೆ.24ಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಜನಾಂದೋಲನ

  ನೆರೆ ಮತ್ತು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಕೇಂದ್ರ ಸರ್ಕಾರದಿಂದ ಪರಿಹಾರ ವಿಳಂಬವಾಗಿದೆ ಮತ್ತು ರಾಜ್ಯಕ್ಕೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್‌ ಬೃಹತ್‌ ಜನಾಂದೋಲನ ಸಂಘಟಿಸಲು ನಿರ್ಧರಿಸಿದೆ.

 • dk shivakumar 2
  Video Icon

  NEWS18, Sep 2019, 2:18 PM IST

  ಪ್ರಭಾವಿ ಸ್ವಾಮೀಜಿಯ ನಕಲಿ ‘ಮರಣ’: ಡಿಕೆಶಿ ವಿರುದ್ಧ ಹೊರಬಿತ್ತು ಮತ್ತೊಂದು ‘ಫ್ರಾಡ್’ಪುರಾಣ!

  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಪ್ರಭಾವಿ ಮಠದ ಸ್ವಾಮೀಜಿಯೊಬ್ಬರ ಸಾವಿನ ಸುಳ್ಳು ದಾಖಲೆ ಸೃಷ್ಟಿಸುವವರ ಬೆಂಬಲಕ್ಕೆ ಡಿಕೆಶಿ ನಿಂತಿದ್ದರು ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ. ಏನಿದು ಪ್ರಕರಣ? ಯಾವ ಮಠ? ಯಾರು ಆ ಸ್ವಾಮೀಜಿ? ಇಲ್ಲಿದೆ ಡೀಟೆಲ್ಸ್..    

 • Video Icon

  NEWS15, Sep 2019, 2:30 PM IST

  ಹನಿಟ್ರಾಪ್ ಮಾಡಿ ಪತ್ರಕರ್ತನಿಗೆ ಬ್ಲಾಕ್ ಮೇಲ್, ಇಬ್ಬರು ಅರೆಸ್ಟ್!

  ಸಿಲಿಕಾನ್ ಸಿಟಿಯಲ್ಲಿ ಮತ್ತೆ ತಲೆ ಎತ್ತಿದೆ ಹನಿಟ್ರಾಪ್ ಕರ್ನಕಾಂಡ. ಹನಿಟ್ರಾಪ್ ಮಾಡಿ ಪತ್ರಕರ್ತನಿಗೆ ಬ್ಲಾಕ್ ಮೇಲ್ ಮಾಡಲು ಹೋಗಿ ಇಬ್ಬರು ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಕಗ್ಗಲೀಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗೆಳೆತನದ ನೆಪದಲ್ಲಿ ಫೇಸ್ ಬುಕ್ ನಲ್ಲಿ ಶಿವಕುಮಾರ್ ಎಂಬುವವರನ್ನು ಯುವತಿ ಸಂಪರ್ಕಿಸಿದ್ದರು. ನಂತರ ಸಿಯಾನ್ ರೆಸ್ಟೋ ಕೆಫೆಗೆ ಕರೆಸಿ ಹನಿಟ್ರಾಪ್ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡು ಬಿದ್ದಿದ್ದಾರೆ. 

   

 • ravish

  NEWS14, Sep 2019, 1:04 PM IST

  Fact Check| ಚಂದ್ರಯಾನದಿಂದ ಪ್ರಯೋಜನ ಏನು ಎಂದರಾ ರವೀಶ್‌ ಕುಮಾರ್‌?

  ಪತ್ರಕರ್ತ ರವೀಶ್‌ ಕುಮಾರ್‌ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೇಲ್ವರ್ಗದ್ದು ಎಂದು ಆರೋಪಿಸಿ ಹೇಳಿಕೆ ನೀಡಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯಾ ಸತ್ಯತೆ

 • Gauri Lankesh
  Video Icon

  NEWS14, Sep 2019, 11:26 AM IST

  ಗೌರಿ ಹತ್ಯೆ: ಅಬ್ಬಬ್ಬಾ... ಒಂದು ಪಿಸ್ತೂಲ್‌ಗಾಗಿ 1 ಕೋಟಿ ಖರ್ಚು! ಅಂಥದ್ದೇನಿದೆ ಅದರಲ್ಲಿ?

  ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ವರ್ಷಗಳು ಕಳೆದಿವೆ. ಹಲವು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡವು (SIT) ತನಿಖೆಯನ್ನು ಮುಂದುವರಿಸಿದೆ. ಈಗ, ಒಂದು ಪಿಸ್ತೂಲ್‌ಗಾಗಿ ಒಂದು ಕೋಟಿ ರೂ.ವನ್ನು ಖರ್ಚು ಮಾಡಲು ಮುಂದಾಗಿದೆ. ಮೂರ್ನಾಲ್ಕು ಸಾವಿರ ಮೌಲ್ಯದ ಪಿಸ್ತೂಲ್‌ಗಾಗಿ ಒಂದು ಕೋಟಿ ಹಣ ಸುರಿಯೋದಾ? ಏನಿದೆ ಅದರಲ್ಲಿ? ಈ ಸುದ್ದಿ ನೋಡಿ...

 • BJP leader murder

  Karnataka Districts14, Sep 2019, 7:37 AM IST

  ಗಣೇಶೋತ್ಸವ ವೇಳೆ ತಂದೆಯನ್ನು ಬೈದನೆಂದು ಕೊಚ್ಚಿ ಕೊಂದ

  ತಂದೆಯನ್ನು ಬೈದನೆಂದು ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆ ಮಾಡಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿ ಈಗ ತಲೆ ಮರೆಸಿಕೊಂಡಿದ್ದಾರೆ. 

 • Karnataka Districts13, Sep 2019, 9:02 AM IST

  ಬಿಎಸ್‌ವೈ ರಾಜೀನಾಮೆ ಕೊಡಲಿ: ತವರಲ್ಲೇ ಸಿಎಂ ವಿರುದ್ಧ ಆಕ್ರೋಶ

  ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ನೆರೆ ಪರಿಹಾರ ಹಣ ತರುವ ತಾಕತ್ತಿಲ್ಲ ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ಬಿಎಸ್‌ವೈ ತಕ್ಷಣ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರೆಹಾನಿಗೆ ಸಂಬಂಧಪಟ್ಟಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

 • Yediyurappa

  Karnataka Districts13, Sep 2019, 8:46 AM IST

  'ಬಿಜೆಪಿ ಸರ್ಕಾರಕ್ಕೆ ದಂಡ ವಸೂಲಿಯಲ್ಲಿರೋ ಆಸಕ್ತಿ ಪರಿಹಾರ ನೀಡೋದ್ರಲಿಲ್ಲ'..!

  ಬಿಜೆಪಿ ಸರ್ಕಾರಕ್ಕೆ ದಂಡ ವಸೂಲಿ ಮಾಡೋದ್ರಲ್ಲಿರೋ ಆಸಕ್ತಿ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸೋದ್ರಲಿಲ್ಲ ಎಂದು ಶಿವಮೊಗ್ಗ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ. ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

 • areca nut

  Karnataka Districts13, Sep 2019, 8:14 AM IST

  ಅಡಕೆ ಕೊಳೆ: 70ವರ್ಷಗಳಿಂದಲೂ ಅದೇ ಔಷಧ, ಸಂಶೋಧಕರೇನ್ಮಾಡ್ತಿದ್ದಾರೆ..?

  ಮಲೆನಾಡಿನಲ್ಲಿ ಕೊಳೆರೋಗದಿಂದ ಅಡಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಪರಿಹಾರ ಕಂಡುಹಿಡಿಯಬೇಕಾದ ಸಂಶೋಧಕರು, ಯಾವುದೇ ಔಷಧಿಯನ್ನೂ ಕಂಡುಹಿಡಿದಿಲ್ಲ. 70 ವರ್ಷ ಹಳೆಯ ಔಷಧಿಯನ್ನೇ ಇಂದಿಗೂ ಬಳಸಲಾಗ್ತಿದೆ. ಅಧಿಕಾರಿಗಳು ಸಂಶೋಧನೆ ಹೆಸರಲ್ಲಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆಂದು ಸಾಗರ ತಾಲೂಕಿನ ಚಿಪ್ಪಳಿ-ಲಿಂಗದಹಳ್ಳಿ ನವೋದಯ ಯುವಕ ಸಂಘ ಆರೋಪಿಸಿದೆ.