ಆರೋಗ್ಯ ಕೇಂದ್ರ  

(Search results - 11)
 • Mysuru

  Karnataka Districts1, Jan 2020, 10:22 AM IST

  ಮೈಸೂರು: ಆರೋಗ್ಯ ಕೇಂದ್ರದ ಮುಂದೆಯೇ ತುಂಬಿ ನಿಲ್ಲುತ್ತೆ ಕೊಳಚೆ..!

  ಪಿರಿಯಾಪಟ್ಟಣ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಶೇಖರಣೆಗೊಂಡಿರುವ ಕೊಳಚೆ ಚರಂಡಿ ನೀರಿನಿಂದಾಗಿ ರೋಗಿಗಳು ಮೂಗು ಮುಚ್ಚಿ ಓಡಾಡುವ ಸ್ಥಿತಿ ಉಂಟಾಗಿದೆ.

 • medical officer posts in odisha

  Karnataka Districts7, Dec 2019, 8:34 AM IST

  ಆರೋಗ್ಯ ಕೇಂದ್ರ ಬಂದ್‌: ತಮಿಳುನಾಡಿಗೆ ಅಲೆಯುತ್ತಿದ್ದಾರೆ ರೋಗಿಗಳು..!

  ಹನೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಚ್ಚಾಗಿದ್ದು, ರೋಗಿಗಳು ತಮಿಳುನಾಡಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದಿದೆ. ಸರ್ಕಾರಿ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್‌ ಆಗಿರುವುದರಿಂದ ಇಲ್ಲಿನ ಜನತೆ ಸ್ಥಿತಿ ನೂರಾರು ಕೀಲೋ ಮೀಟರ್‌ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿರುವುದು ಚಿಂತೆಗೀಡು ಮಾಡುವಂತಾಗಿದೆ.

 • newborn baby

  Karnataka Districts24, Sep 2019, 11:50 AM IST

  ಸತ್ತ ಮಗುವಿಗೆ ಹೆಚ್ಚಿನ ಚಿಕಿತ್ಸೆ ಕೊಡ್ಸಿ ಎಂದ ಎಡವಟ್ಟು ಡಾಕ್ಟರ್..!

  ವೈದ್ಯರ ಎಡವಟ್ಟಿನಿಂದ ಆಗುವ ಅನಾಹುತಗಳು ಒಂದೆರಡಲ್ಲ. ವೈದ್ಯರು ಮಾಡುವ ಎಡವಟ್ಟುಗಳಿಂದ ರೋಗಿಗಳು ಪಡುವ ಪಾಡು ಹೇಳತೀರದು. ಇದೀಗ ಯಾದಗಿರಿಯಲ್ಲಿ ಸತ್ತಿರುವ ಮಗುವನ್ನೇ ಹೆಚ್ಚಿನ ಚಿಕಿತ್ಸೆಗೆ ರೆಫರ್ ಮಾಡಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಎಡವಟ್ಟು ಮಾಡಿದ್ದಾರೆ.

 • hospital

  Karnataka Districts6, Sep 2019, 9:55 AM IST

  ದಾವಣಗೆರೆ ಜಿಲ್ಲೆ ಆರೋಗ್ಯ ಕೇಂದ್ರಕ್ಕೆ ಸ್ವಚ್ಛತಾ ಪ್ರಶಸ್ತಿ

  ದಾವಣಗೆರೆ ಜಿಲ್ಲೆಯ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇಂದ್ರ ಸರ್ಕಾರದ ‘ಸ್ವಚ್ಛ ಮಹೋತ್ಸವ ಪ್ರಶಸ್ತಿ’ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಲಭಿಸಿದೆ. 

 • medicine

  NEWS31, Aug 2019, 7:58 AM IST

  ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಔಷಧ ಸಿಗುತ್ತಿಲ್ಲ; ರೋಗಿಗಳ ಪರದಾಟ ಕೇಳುವವರ್ಯಾರು?

  ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಔಷಧ ಪೂರೈಸುವ ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿಯ (ಕೆಡಿಎಲ್‌ಡಬ್ಲ್ಯುಎಸ್‌) ಉಗ್ರಾಣಗಳಲ್ಲಿ ಔಷಧಿಗಳ ಕೊರತೆ ಎದುರಾಗಿದೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭ್ಯವಾಗದೆ ಬಡ ರೋಗಿಗಳು ಪರದಾಡುವಂತಾಗಿದೆ.

 • D C Thammanna

  Karnataka Districts25, Aug 2019, 10:14 AM IST

  ಮಂಡ್ಯ: ಆರೋಗ್ಯ ಕೇಂದ್ರಕ್ಕೆ ಶಾಸಕ ತಮ್ಮಣ್ಣ ದಿಢೀರ್ ಭೇಟಿ

  ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಶಾಸಕ ತಮ್ಮಣ್ಣನವರು ಕ್ಷೇತ್ರದ ಕಡೆ ಹೆಚ್ಚಿನ ಗಮನ ನೀಡಿದ್ದಾರೆ. ಭಾರತೀನರಗದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಮ್ಮಣ್ಣ ಶನಿವಾರ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕ್ಷೇತ್ರದ ಕಡೆಗೆ ಶಾಸಕರ ಒಲವು ಹೆಚ್ಚಿದ್ದಕ್ಕೆ ನಿದರ್ಶನದಂತಿದೆ.

 • doctors

  Karnataka Districts24, Aug 2019, 2:58 PM IST

  ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ರೋಗಿಗಳ ಪರದಾಟ

  ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಸಮರ್ಪಕ ಆರೋಗ್ಯ ಸೇವೆ ಸಿಗದೇ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಪರಿಣಾಮ ಔಷಧಿ ಹಾಗೂ ಆರೋಗ್ಯ ಸೇವೆಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

 • medicines

  Karnataka Districts21, Aug 2019, 12:31 PM IST

  ರಾಮನಗರ: ಅವಧಿ ಮೀರಿದ ಔಷಧಿ ಸುರಿದು ಗ್ರಾಮಸ್ಥರ ಪ್ರತಿಭಟನೆ

  ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಲು ಜನ ಹಿಂಜರಿಯುತ್ತಾರೆ. ಬಡವರಾದರೂ ಖಾಸಗಿ ಆಸ್ಪತ್ರೆಗಳ ಮೊರೆ ಹೋಗ್ತಾರೆ. ಸರ್ಕಾರಿ ಆಸ್ಪತ್ರೆ ಸೇವೆ ಚೆನ್ನಾಗಿಲ್ಲ ಅನ್ನೋದು ಆರೋಪ. ಇದು ರಾಮನಗರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ರಾಮನಗರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗ್ರಾಮಸ್ಥರು ಅವಧಿ ಮೀರಿದ ಔಷಧಿಗಳನ್ನು ಹೊರಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.

 • undefined

  Karnataka Districts9, Aug 2019, 9:18 AM IST

  'ಸರ್ಕಾರಿ ಆಸ್ಪತ್ರೆ ಮೆಟ್ಟಿಲೇರದೆ ಅಪಪ್ರಚಾರ ಮಾಡ್ಬೇಡಿ'

  ಸರ್ಕಾರಿ ಆಸ್ಪತ್ರೆಗೆ ಒಮ್ಮೆಯೂ ಹೋಗದೆ, ಆಸ್ಪತ್ರೆ ಬಗ್ಗೆ ಅಪಪ್ರಚಾರ ಮಾಡೋದು, ಅಪನಂಬಿಕೆ ಬೇಡ ಎಂದು ಹುಳಿಯಾರು ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕರು ಮನವಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಮಟ್ಟಿಲನ್ನೇ ತುಳಿಯದೆ ಅಪಪ್ರಚಾರ ಮಾಡಬಾರದೆಂದು ಸೂಚಿಸಿದ್ದಾರೆ.

 • hospital

  Karnataka Districts1, Aug 2019, 3:37 PM IST

  ಮಡಿಕೇರಿ: ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಧರಣಿ ಎಚ್ಚರಿಕೆ

  ಎಲ್ಲಡೆ ಜನ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದರೆ ಮಡಿಕೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಅತಿ ಹೆಚ್ಚು ಗ್ರಾಮಗಳನ್ನು ಹೊಂದಿರುವ ನಾಪೋಕ್ಲು ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

 • Manga-Shivamogga
  Video Icon

  NEWS24, Jan 2019, 5:23 PM IST

  ಮಂಗನ ಕಾಯಿಲೆಗೆ ಮದ್ದು ನೀಡುತ್ತಿದ್ದ ಡಾಕ್ಟರ್‌ಗೇ ಮಂಗನ ಕಾಯಿಲೆ

  ಮಂಗನ ಕಾಯಿಲೆಗೆ ಮದ್ದು ನೀಡುತ್ತಿದ್ದ ಡಾಕ್ಟರ್ ಗೇ ಮಂಗನ ಕಾಯಿಲೆ ಬಂದಿದೆ. ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯ ಡಾ. ರಮೇಶ್ ಮಂಗನ ಕಾಯಿಲೆಗೆ ತುತ್ತಾಗಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈಗಾಗಲೇ ಶಿವಮೊಗ್ಗದಲ್ಲಿ 6 ಜನ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.