ಆನೆ  

(Search results - 170)
 • wild elephants

  Haveri24, Oct 2019, 8:42 AM IST

  ಹಾನಗಲ್ಲ: ಹೊಲದಲ್ಲಿನ ಬೆಳೆ ನಾಶ ಮಾಡುತ್ತಿರುವ ಗಜಪಡೆ

  ತಾಲೂಕಿನಲ್ಲಿ ಮತ್ತೆ ಆನೆಗಳ ದಾಳಿ ಆರಂಭವಾಗಿದ್ದು ಮಂತಗಿ ಕೊಳಗಿ ಅರಣ್ಯ ಪ್ರದೇಶದಲ್ಲಿ ಆನೆಗಳ ಓಡಾಟದ ಗುರುತುಗಳು ಸಿಕ್ಕಿದ್ದಾಗಿ ಅರಣ್ಯ ಇಲಾಖೆಯಲ್ಲಿ ವರದಿಯಾಗಿದ್ದು ಅರಣ್ಯ ಸಂರಕ್ಷಕರು ಗದ್ದೆಗಳಿಗೆ ಆನೆಗಳು ಬಾರದಂತೆ ಕಾವಲು ಕಾಯುತ್ತಿದ್ದಾರೆ.
   

 • mysore award

  Mysore23, Oct 2019, 6:11 PM IST

  ಎಲ್ಲ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಂಡ ಬಸವಣ್ಣ, ಒಂದೊಂದು ಪೋಟೋಗಳು ಕತೆ ಹೇಳ್ತವೆ!

  ಮೈಸೂರು(ಅ. 23)   ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 65ನೇ ವನ್ಯಜೀವಿ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕನ್ನಡಪ್ರಭ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ (ಅನುರಾಗ್ ಬಸವರಾಜ್) ಅವರಿಗೆ ಮೂರು ವಿಭಾಗಗಳಲ್ಲೂ ಪ್ರಥಮ ಬಹುಮಾನ ಲಭಿಸಿದೆ.  ಹಾಗಾದರೆ ಪ್ರಶಸ್ತಿಗೆ ಪಾತ್ರವಾದ ಪೋಟೋಗಳನ್ನು ನೋಡಿಕೊಂಡು ಬನ್ನಿ..

 • Koppal23, Oct 2019, 8:03 AM IST

  ಕೊಪ್ಪಳ: ವರುಣ ಅಬ್ಬರಕ್ಕೆ ನಲುಗಿದ ಐತಿಹಾಸಿಕ ಸ್ಥಳಗಳು

  ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಟ್ಟಿದ್ದರಿಂದ ಐತಿಹಾಸಿಕ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕಳೆದ ಎರಡು ದಿನಗಳಿಂದ ಅಣೆಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನೆಲ್ಲ ನದಿಗೆ ಬಿಡಲಾಗುತ್ತಿದೆ. ಮಂಗಳವಾರ ಬೆಳಗ್ಗೆ ನದಿಗೆ 1.50 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ಇದರಿಂದ ತಾಲೂಕಿನ ಆನೆಗೊಂದಿ, ಹನುಮನಹಳ್ಳಿ, ಸಣ್ಣಾಪುರ, ವಿರೂಪಾಪುರ ಗಡ್ಡೆ, ಋುಷಿಮುಖಪರ್ವತ, ಸೇರಿದಂತೆ ಐತಿಹಾಸಿಕ ಪ್ರದೇಶಗಳು ಜಲಾವೃತಗೊಂಡಿವೆ.

 • Anegondi

  Koppal23, Oct 2019, 7:47 AM IST

  ಹಂಪಿ ಉತ್ಸವ ಮಾಡ್ತೀರಾ, ಆನೆಗೊಂದಿ ಉತ್ಸವ ಯಾಕೆ ಮಾಡ್ತಿಲ್ಲ?

  ಹಂಪಿಯ ತೂಗುತೊಟ್ಟಿಲು ಎಂದು ಕರೆಯುವ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಮೀನಮೇಷ ಮಾಡುತ್ತಲೇ ಬಂದಿದೆ. ಹಂಪಿ ಉತ್ಸವಕ್ಕೆ ನೀಡುವ ಆದ್ಯತೆ ನೀಡುತ್ತಲೇ ಇಲ್ಲ ಎನ್ನುವ ಕೊರಗಿಗೆ ಮುಕ್ತಿ ಯಾವಾಗ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯೇ ಆಗಿದೆ. ಈಗೇನು ಸರ್ಕಾರ ಹಂಪಿ ಉತ್ಸವನ್ನು ಮಾಡಲು ಮುಂದಾಗಿದ್ದು, ಆನೆಗೊಂದಿ ಉತ್ಸವದ ಕುರಿತುಇದುವರೆಗೂ ಚಕಾರ ಎತ್ತುತ್ತಿಲ್ಲ. 2014 ರಲ್ಲಿ ನಡೆದ ಬಳಿಕ ಮತ್ತೆ ಆನೆಗೊಂದಿ ಉತ್ಸವ ನಡೆದೇ ಇಲ್ಲ. 
   

 • elephant

  Shivamogga21, Oct 2019, 10:37 AM IST

  ಆನೆಗಳ ಸರಣಿ ಸಾವು: ಸಕ್ರೆಬೈಲು ಆನೆ ಬಿಡಾರಕ್ಕೆ ದೆಹಲಿ ತಜ್ಞರು

  ಸಕ್ರೆಬೈಲು ಆನೆ ಬಿಡಾರದಲ್ಲಿ  ಆನೆಗಳ ಸರಣಿ ಸಾವಾಗುತ್ತಿದ್ದು ಈ ನಿಟ್ಟಿನಲ್ಲಿ ಸ್ಥಳಕ್ಕೆ ತಜ್ಷರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

 • elephant

  Haveri19, Oct 2019, 11:41 AM IST

  ಹಾವೇರಿ: ಆನೆ ಮೇಲೆ ಕೂರಿಸಿ ಶಾಸಕ ಓಲೇಕಾರ ಮೆರವಣಿಗೆ

  ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ನಡೆಸಿ ಕೃತಜ್ಞತೆ ಸಲ್ಲಿಸಿದ ಅಪರೂಪದ ಘಟನೆ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 
   

 • Train
  Video Icon

  National16, Oct 2019, 10:06 PM IST

  ಆನೆ ಬರುತ್ತಿರುವುದ ಕಂಡು ರೈಲನ್ನೇ ನಿಲ್ಲಿಸಿದ ಚಾಲಕ..ವಿಡಿಯೋ

  ಕೋಲ್ಕತ್ತಾ[ಅ. 16]  ಎರಡು ವಾರಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ  ರೈಲೊಂದು ಆನೆಗೆ ಡಿಕ್ಕಿಹೊಡೆದು ಆನೆ ಸಾವು-ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿತ್ತು. ಈ ವಿಡಿಯೋ ವೈರಲ್ ಆಗಿ ಕೋಟ್ಯಂತರ ಜನ ಕಣ್ಣೀರು ಮಿಡಿದಿದ್ದರು.  ಜನರು ರೈಲ್ವೆ ಅಥಾರಟಿ ಯಾಕೆ ಮುನ್ನೆಚ್ಚರಿಕೆ ವಹಿಸುವುದಿಲ್ಲ ಎಂದು ಸಹ ಪ್ರಶ್ನೆ ಮಾಡಿದ್ದರು.

  ಇದೀಗ ಪಶ್ಚಿಮ ಬಂಗಾಳದ ಅಲಿಪುರ್ ದಾರ್ ರೈಲ್ವೆ ಡಿವಿಸನ್ ಟ್ವಿಟರ್ ಒಂದನ್ನು ಮಾಡಿದೆ. ಇವತ್ತು ಮುಂಜಾನೆ 8.30ರ ಸಮಯದಲ್ಲಿ ಆನೆಯೊಂದು ರೈಲ್ವೆ ಹಳಿ ದಾಟುತ್ತಿದ್ದದ್ದು ಕಂಡುಬಂತು. ತಕ್ಷಣ ರೈಲನ್ನು ಹರಸಾಹಸ ಮಾಡಿ ನಿಲ್ಲಿಸಲಾಯಿತು ಎಂದು ತಿಳಿಸಿದೆ.

 • Raichuru Gori_conv
  Video Icon

  Raichur15, Oct 2019, 12:56 PM IST

  ರಾಯಚೂರಿನಲ್ಲಿ ಉಸಿರಾಡುತ್ತಿರುವ ಗೋರಿಗಳು: ಬೆಚ್ಚಿ ಬಿದ್ದ ಜನತೆ!

  ಪವಾಡ ಪುರುಷರ ಗೋರಿ ಉಸಿರಾಡುತ್ತಿದೆ. ಹೌದು, ಇದು ಸ್ವಲ್ಪ ವಿಚಿತ್ರವಾದರೂ ಸತ್ಯ. ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸುರು ಗ್ರಾಮದಲ್ಲಿ ವಿಚಿತ್ರ ಘಟನೆ ನಡದಿದೆ. 

 • জিনপিং-কে সিল্ক এক্সিবিশন ঘুরে দেখান মোদী।

  News13, Oct 2019, 9:27 AM IST

  ಡ್ರ್ಯಾಗನ್, ಆನೆ ಜೋಡಿ ಕುಣಿತ ಚೆಂದ: ವರ್ಣಿಸಲಸಾಧ್ಯ ಕ್ಸಿ ಹೇಳಿಕೆಯ ಅಂದ!

  ಭಾರತ-ಚೀನಾ ಸಂಬಂಧವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಬಣ್ಣಿಸಿರುವ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಡ್ರ್ಯಾಗನ್ ಹಾಗೂ ಆನೆಯ ಜೋಡಿ ಕುಣಿತ ನೋಡಲು ಚೆಂದ ಎಂದು ವರ್ಣಿಸಿದ್ದಾರೆ.

 • Subadhra

  Udupi12, Oct 2019, 12:15 PM IST

  ಸಹಜ ಸಂತಾನಾಭಿವೃದ್ಧಿಗೆ ತುಂಗಾ ತೀರ ಸೇರಿದ ‘ಸುಭದ್ರೆ’

  ಪ್ರಕೃತಿ ಸಹಜವಾದ ಗರ್ಭಧಾರಣೆಯಾಗಲು ಕೃಷ್ಣಮಠದ ಆನೆಯನ್ನು ಮತ್ತೆ ಕಾಡಿಗೆ ಸೇರಿಸಲಾಗಿದೆ. ಸುಮಾರು 23 ವರ್ಷಗಳ ಹಿಂದೆ ಉಡುಪಿ ಕೃಷ್ಣ ಮಠಕ್ಕೆ ಸೇರಿದ ಸುಭದ್ರೆಗೆ ಈಗ 26 ವರ್ಷ ಕಾಡಿನಲ್ಲಿದ್ದಿದ್ದರೆ ಇದುವರೆಗೆ ಕನಿಷ್ಠ 2 ಬಾರಿಯಾದರೂ ಗರ್ಭಧರಿಸುತ್ತಿತ್ತು. ಆದರೆ ಸುಭದ್ರೆ ಇದುವರೆಗೆ ಒಮ್ಮೆಯೂ ಗರ್ಭಧರಿಸಿಲ್ಲ.

 • wild elephants

  Shivamogga12, Oct 2019, 10:25 AM IST

  ಆನೆಗಳಿಗೆ ಹರಡುತ್ತಿದೆ ಹೊಸ ರೋಗ : ಹೈ ಅಲರ್ಟ್‌ ಘೋಷಣೆ

  ಆನೆಗಳ ಆರೋಗ್ಯದ ಮೇಲೆ ಇದೀಗ ಮಾರಾಕ ವೈರಸ್ ಒಂದು ದಾಳಿ ಮಾಡುತ್ತಿದ್ದು ಇದೇ ಆನೆಗಳ ಸಾವಿಗೆ ಕಾರಣ ಎನ್ನಲಾಗಿದೆ. ಅಲ್ಲದೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. 

 • Sakrebail

  Shivamogga11, Oct 2019, 4:37 PM IST

  ಸಕ್ರೆಬೈಲ್ ಆನೆ ಬಿಡಾರದ ಲೋಗೋ ಬಿಡುಗಡೆ

  ಸಕ್ರೆಬೈಲ್ ಆನೆ ಬಿಡಾರದ ಹೊಸ ಲೋಗೋವನ್ನು ಸಮಸದ ಬಿವೈ ರಾಘವೇಂದ್ರ ಬಿಡುಗಡೆಗೊಳಿಸಿದರು

 • Elephant

  Mandya11, Oct 2019, 9:24 AM IST

  ನಾಡಿನಿಂದ ಮತ್ತೆ ಕಾಡಿಗೆ, ಲಾರಿ ಹತ್ತಿ ಹೊರಟ 10 ಆನೆಗಳು

  ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ 10 ಆನೆಗಳು ಮೈಸೂರಿನಿಂದ ಕಾಡಿಗೆ ಹೊರಟು ಹೋಗಿದೆ. 10 ಆನೆಗಳು, ಮಾವುತರು, ಅವರ ಕುಟುಂಬವೂ ದಸರಾ ಮುಗಿಸಿ ಶುಕ್ರವಾರ ತಮ್ಮೂರಿಗೆ ಹೊರಟರು.

 • elephant
  Video Icon

  Mysore10, Oct 2019, 2:57 PM IST

  Video: ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

  ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..!| 1 ಗಂಟೆಯಿಂದ ಲಾರಿ ಹತ್ತದೆ ಸತಾಯಿಸುತ್ತಿರುವ ಲಕ್ಷ್ಮಿ ಆನೆ| ಲಕ್ಷ್ಮಿ ಆನೆಗೆ ದಂತಗಳಿಂದ ತಿವಿದು ಲಟರಿ ಹತ್ತಿಸಲು ಮುಂದಾದ ಗೋಪಿ ಆನೆ| ಗೋಪಿ ಏಟು ತಾಳದೆ ಅರಮನೆ ಆವರಣದಲ್ಲೆಲ್ಲಾ ಓಡಾಡುತ್ತಿರುವ ಲಕ್ಷ್ಮಿ ಆನೆ| ಲಾರಿಗೆ ಕಟ್ಟಲಾಗಿದ್ದ ಚೈನ್ ಕಿತ್ತುಕೊಂಡ ಓಡಿದ ಲಕ್ಷ್ಮಿ ಆನೆ.

 • kerala Elephant

  Shivamogga10, Oct 2019, 1:31 PM IST

  ಶಿವಮೊಗ್ಗ: ದಸರಾ ಆನೆಗಳಿಗೆ ಸಂಭ್ರಮದ ಬೀಳ್ಕೊಡುಗೆ

  ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ಬುಧವಾರ ನಗರದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಹಾನಗರ ಪಾಲಿಕೆ ವತಿಯಿಂದ ಗೌರವಿಸಲಾಯಿತು.