Search results - 65 Results
 • Arun Jaitley

  NEWS17, Jan 2019, 11:58 AM IST

  100 ಪರ್ಸೆಂಟ್ ನಿಮ್ಮೊಂದಿಗಿದ್ದೇವೆ: ಜೇಟ್ಲಿಗೆ ಹಾರೈಸಿದ ರಾಹುಲ್!

  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಶಂಕೆ ವ್ಯಕ್ತವಾಗಿದ್ದು, ಶೀಘ್ರ ಗುಣಮುಖರಾಗುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾರೈಸಿದ್ದಾರೆ. ಜೇಟ್ಲಿ ಆರೋಗ್ಯ ಸುಧಾರಣೆ ಬಯಸಿ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೂಡ ಟ್ವೀಟ್ ಮಾಡಿದ್ದಾರೆ. 
   

 • Income Tax

  BUSINESS10, Jan 2019, 1:00 PM IST

  ಫೆ.1ಕ್ಕೆ ಕೇಂದ್ರ ಬಜೆಟ್: ನಮಗೆ, ನಿಮಗೆ, ಎಲ್ಲರಿಗೂ ಟ್ಯಾಕ್ಸ್ ವಿನಾಯ್ತಿ?

  ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್ ಮೇಲೆಯೇ ಎಲ್ಲರ ದೃಷ್ಟಿ ನೆಟ್ಟಿದೆ. ಮಧ್ಯಮ ವರ್ಗದ ವೇತನದಾರ ಮತದಾರರನ್ನು ಸೆಳೆಯಲು ಮೋದಿ ನೇತೃತ್ವದ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ನೀಡುವ ಸಾಧ್ಯತೆಯಿದೆ.

 • Vijaya

  INDIA9, Jan 2019, 12:21 PM IST

  ವಿಜಯಾ ಬ್ಯಾಂಕ್‌ ಉಳಿಸಲು ಜೇಟ್ಲಿಗೆ ಸಂಸದರ ಮನವಿ

  ವಿಜಯಾ ಬ್ಯಾಂಕ್‌ ವಿಲೀನಗೊಳಿಸದೆ ಉಳಿಸಿ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆ ಜೇಟ್ಲಿಗೆ ಸಂಸದರ ಮನವಿ ಸಲ್ಲಿಸಿದ್ದಾರೆ.

 • Modi_Arun

  INDIA4, Jan 2019, 8:20 AM IST

  ಕೇಂದ್ರದ ಉಡುಗೊರೆ: ಆದಾಯದಾರರಿಗೆ ಬಜೆಟ್‌ನಲ್ಲಿ ತೆರಿಗೆ ಇನ್ನಷ್ಟು ಕಡಿತ?

  ಮಧ್ಯಮವರ್ಗ ಓಲೈಕೆಗೆ ಕೇಂದ್ರ ಸರ್ಕಾರದ ಪ್ರಯತ್ನ| ಫೆ.1ಕ್ಕೆ ಮೋದಿ ಸರ್ಕಾರದ ಕೊನೆಯ ಬಜೆಟ್‌

 • BUSINESS3, Jan 2019, 11:34 AM IST

  ನಿರ್ಮಾಣ ಹಂತದ ಫ್ಲ್ಯಾಟ್‌ ಜಿಎಸ್‌ಟಿ ಶೇ.5 ಕ್ಕೆ ಇಳಿಕೆ?

  ಇದೇ ಜನವರಿ 10ರಂದು ಸರಕು-ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್‌ ಹಾಗೂ ಮನೆಗಳ ಮೇಲೆ ಹೇರಲಾಗುವ ಜಿಎಸ್‌ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸುವ ಸಾಧ್ಯತೆ ಇದೆ.

 • Rafale Deal

  NEWS3, Jan 2019, 9:18 AM IST

  ರಫೇಲ್ ಡೀಲ್: ಸುಪ್ರೀಂಕೋರ್ಟಿಗೆ ತೃಪ್ತಿಯಾಗಿದೆ, ಜೆಪಿಸಿ ಬೇಕಿಲ್ಲ!

  ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕು ಎಂದು ಪ್ರಬಲವಾಗಿ ಆಗ್ರಹ ಮಾಡುತ್ತಿರುವ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. ಜೆಪಿಸಿ ತನಿಖೆ ಬೇಡಿಕೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ತಿರಸ್ಕರಿಸಿದೆ.

 • NEWS3, Jan 2019, 7:40 AM IST

  ಕಾಂಗ್ರೆಸ್ ಗೆ ಭಾರೀ ಹಿನ್ನಡೆ

  ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾದಂತಾಗಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕು ಎಂದು ಪ್ರಬಲವಾಗಿ ಆಗ್ರಹ ಮಾಡುತ್ತಿರುವ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. 

 • gst cement

  NEWS25, Dec 2018, 8:41 AM IST

  ಜಿಎಸ್ ಟಿ ಸ್ಲ್ಯಾಬ್ 5 ರಿಂದ 4 ಕ್ಕೆ ಇಳಿಕೆ?

  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ವ್ಯಾಪಾರ ವಲಯದಲ್ಲಿರುವ ಕಳವಳಗಳನ್ನು ಹೋಗಲಾಡಿಸುವ ಪ್ರಯತ್ನ ಮುಂದುವರಿಸಿರುವ ಕೇಂದ್ರ ಸರ್ಕಾರ, ಸದ್ಯ ಜಿಎಸ್‌ಟಿಯಲ್ಲಿರುವ 5 ತೆರಿಗೆ ಸ್ಲಾ್ಯಬ್‌ಗಳನ್ನು 4ಕ್ಕೆ ಇಳಿಸಲು ಚಿಂತನೆಯಲ್ಲಿ ತೊಡಗಿದೆ. ಶೇ.12 ಹಾಗೂ ಶೇ.18 ರ ತೆರಿಗೆ ದರಗಳನ್ನು ವಿಲೀನಗೊಳಿಸಿ, ಒಂದು ತೆರಿಗೆ ದರವನ್ನು ನಿಗದಿಗೊಳಿಸುವ ಸುಳಿವನ್ನು ಖುದ್ದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೇ ನೀಡಿದ್ದಾರೆ.

 • Note Ban

  BUSINESS19, Dec 2018, 3:02 PM IST

  ನೋಟ್ ಬ್ಯಾನ್ ವೇಳೆ ಸತ್ತವರೆಷ್ಟು?: ‘ಸತ್ಯ’ಬಾಯ್ಬಿಟ್ಟ ಕೇಂದ್ರ!

  ನೋಟು ಅಮಾನ್ಯೀಕರಣದ ಎರಡು ವರ್ಷದ ಬಳಿಕ ಕೇಂದ್ರ ಸರ್ಕಾರ ಈ  ಕುರಿತು ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, 2016ರಲ್ಲಿ ಏಕಾಏಕಿ ಹೆಚ್ಚು ಮುಖಬೆಲೆಯ ನೋಟು ಆಮಾನ್ಯೀಕರಣದಿಂದಾಗಿ ಅನೇಕರು ಜೀವ ಕಳೆದುಕೊಂಡಿದ್ದು ಸತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.

 • BUSINESS18, Dec 2018, 4:26 PM IST

  ಊರ್ಜಿತ್ ರಾಜೀನಾಮೆ ಕೊಟ್ಟಿದ್ದೇಕೆ?: ಜೇಟ್ಲಿ ಉತ್ತರ ಸಾಕೇ?

  ಆರ್‌ಬಿಐ ಗವರ್ನರ್‌ ಹುದ್ದೆಗೆ ರಾಜೀನಾಮೆ ನೀಡುವಂತೆ  ಕೇಂದ್ರ ಸರ್ಕಾರ ಉರ್ಜಿತ್ ಪಟೇಲ್ ಅವರನ್ನು ಕೇಳಿರಲಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಕೆಲ ಕ್ಷೇತ್ರಗಳಲ್ಲಿನ ಹಣಕಾಸು ಒತ್ತಡವನ್ನು ನಿಭಾಯಿಸುವಲ್ಲಿನ ವ್ಯತ್ಯಾಸಗಳಿಂದಾಗಿ ಉರ್ಜಿತ್ ಪಟೇಲ್‌ ಅವರು ರಾಜೀನಾಮೆ ನೀಡಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.

 • INDIA8, Dec 2018, 11:52 AM IST

  ಜೇಟ್ಲಿಯಿಂದ ಆರ್‌ಬಿಐ ಲೂಟಿ ಎಂದವಗೆ 50 ಸಾವಿರ ರು. ದಂಡ!

  ಅರುಣ್‌ ಜೇಟ್ಲಿ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ನ ಬಂಡವಾಳ ಸಂಗ್ರಹವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ ಅಲ್ಲದೇ ಅರ್ಜಿದಾರನಿಗೆ 50 ಸಾವಿರ ರು. ದಂಡ ವಿಧಿಸಿದೆ.

 • INDIA29, Nov 2018, 9:01 AM IST

  ಫೆಬ್ರವರಿಯಲ್ಲಿ ಕೇಂದ್ರ ಮಧ್ಯಂತರ ಬಜೆಟ್ ಮಂಡನೆ!

  ಲೋಕಸಭೆ ಚುನಾವಣೆಗೂ ಮೊದಲು ಫೆ.1ರಂದು ಕೇಂದ್ರ ಸರ್ಕಾರವು ತನ್ನ ಕೊನೆಯ ಮಧ್ಯಂತರ ಬಜೆಟ್‌ ಮಂಡಿಸಲಿದೆ. 

 • Arun Jaitley

  NEWS28, Nov 2018, 10:34 AM IST

  ಗಾಂಧೀಜಿ, ಪಟೇಲರ ತಂದೆ ಹೆಸರೇನು?

   ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿರುವ ಬೆನ್ನಲ್ಲೇ ಇದಕ್ಕೆ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ. 

 • NEWS28, Nov 2018, 7:21 AM IST

  ಕರ್ನಾಟಕ ಸರ್ಕಾರದ ವಿರುದ್ಧ ಜೇಟ್ಲಿ ಗರಂ

  ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ. 

 • BUSINESS24, Nov 2018, 5:03 PM IST

  ಆರ್​ಬಿಐ ಹಣದ ಮೇಲೆ ಕಣ್ಣು?: ಜೇಟ್ಲಿಯಿಂದ ಹೊರ ಬಿತ್ತು ಸತ್ಯ!

  ಭಾರತಕ್ಕೆ ಮುಂದಿನ ಆರು ತಿಂಗಳವರೆಗೂ ಆರ್​ಬಿಐನಲ್ಲಿರುವ ನಿಧಿಯ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಹಣಕಾಸಿನ ಕೊರತೆ ಆಪಾದನೆಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಳಿಹಾಕಿದ್ದಾರೆ. ಪ್ರಥಮ ಬಾರಿಗೆ ಮೀಸಲು ನಿಧಿ ಬಳಕೆಯ ಉದ್ದೇಶವನ್ನು ಜೇಟ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಿ ಟೀಕಾಕಾರರಿಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ.