ಅಮಾನ್ಯೀಕರಣ  

(Search results - 38)
 • undefined

  India3, Sep 2020, 4:24 PM

  'ಡಿಮಾನಿಟೈಸೇಶನ್ ಪರಿಣಾಮ ಈಗ ಗೊತ್ತಾಗುತ್ತಿದೆ'

  ಟ್ವಿಟರ್ ನಲ್ಲಿ ವಿಡಿಯೋ ಹಂದಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೋಟು ರದ್ದು ಮಾಡಿದ್ದರ ಪರಿಣಾಮ ಈಗ ಗೊತ್ತಾಗುತ್ತಿದೆ ಎಂದಿದ್ದಾರೆ.

 • <p>पर्स में अश्लील चित्र या अन्य अश्लील सामग्री भी नहीं रखना चाहिए, इससे पर्स की बरकत खत्म होती है।</p>

  CRIME9, Aug 2020, 5:31 PM

  14  ವರ್ಷದ ನಂತ್ರ ಪರ್ಸ್ ಪತ್ತೆ,  ಒಳಗಿದ್ದ ಹಣವೂ ಹಾಗೇ ಇತ್ತು! ಆದರೆ..

   ಮುಂಬೈ ಟ್ರೇನ್ ನಲ್ಲಿ ಹದಿನಾಲ್ಕು ವರ್ಷದ ಹಿಂದೆ ಕಳೆದುಕೊಂಡಿದ್ದ ಪರ್ಸ್ ಮರಳಿ ಸಿಕ್ಕಿದೆ.  ಪರ್ಸ್ ನಲ್ಲಿ ಇದ್ದ  900  ರೂ. ಹಣ ಹಾಗೆ ಇದೆ.  ಆದರೆ ಐದು ನೂರರ ನೋಟು ರದ್ದಾಗಿದೆ!

 • undefined

  Karnataka Districts22, Jan 2020, 7:41 AM

  ಇನ್ನೂ ಇದೇ ನಿಷೇಧಿತ ನೋಟು ಬದಲಾವಣೆ ದಂಧೆ : ಲಕ್ಷ ಲಕ್ಷ ವಂಚನೆ

  ನಿಷೇಧಿತ ನೋಟುಗಳನ್ನು ಬದಲಾವಣೆ ಮಾಡಿಕೊಡುವ ದಂಧೆಗೆ ಇಳಿದು ಹಣದ ದುರಾಸೆಗೆ ಬಿದ್ದವರು ಲಕ್ಷ ಲಕ್ಷ ಹಣವನ್ನು ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಈಗವರು ಪೊಲೀಸರ ಅತಿಥಿಗಳಾಗಿದ್ದಾರೆ. 

 • undefined

  Karnataka Districts26, Dec 2019, 9:27 AM

  'ಭಾರತ ಇತರೆ ರಾಷ್ಟ್ರಗಳಿಗೂ ಸಾಲ ನೀಡುವಷ್ಟು ಆರ್ಥಿಕ ಸದೃಢತೆ ಹೊಂದಿದೆ'

  ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಎನ್ನುವವರು ಪ್ರಸ್ತುತ ಇತರೆ ರಾಷ್ಟ್ರಗಳಿಗೆ ಭಾರತ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಆರ್ಥಿಕ ಸ್ಥಿತಿ ಇನ್ನಷ್ಟು ಸುಧಾರಿಸಿದೆ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.
   

 • modi

  BUSINESS10, Dec 2019, 7:26 PM

  3 ವರ್ಷಗಳ ಬಳಿಕ ನೋಟ್ ಬ್ಯಾನ್ ಪರಿಣಾಮ ಹೇಳಿದ ಮೋದಿ!

  ನೋಟು ಅಮಾನ್ಯೀಕರಣದಿಂದ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೋಟು ಅಮಾನ್ಯೀಕರಣ ನಂತರ 3, 04, 605 ಕೋಟಿಯಷ್ಟು ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

 • fake currency

  INDIA16, Oct 2019, 9:39 AM

  2 ಸಾವಿರ ನೋಟು ಮುದ್ರಣವೇ ಸ್ಥಗಿತ; ಚಲಾವಣೆ ನಿಲ್ಲುತ್ತಾ?

  ಅಪನಗದೀಕರಣದ ಸಂದರ್ಭದಲ್ಲಿ ಚಲಾವಣೆಗೆ ಬಂದ 2 ಸಾವಿರ ರು. ಮುಖಬೆಲೆಯ ನೋಟುಗಳ ಮುದ್ರಣವನ್ನೇ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಸದ್ದಿಲ್ಲದೇ ಸ್ಥಗಿತಗೊಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಇದರಿಂದಾಗಿ ಈ ನೋಟಿನ ಚಲಾವಣೆ ಸ್ಥಗಿತವಾಗುತ್ತಾ ಎಂಬ ಪ್ರಶ್ನೆ ಕೇಳಿಬರಲು ಆರಂಭಿಸಿದೆ.

 • Magadi

  Karnataka Districts1, Aug 2019, 7:59 PM

  ಮಾಗಡಿ ದೇವಾಲಯದ ಹುಂಡಿ ತೆರೆದಾಗ ಕಾದಿದ್ದ ಅಚ್ಚರಿ

  ದೇವಾಲಯದ ಹುಂಡಿ ತರೆದಾಗ ಅಚ್ಚರಿ ಕಾದಿತ್ತು. ಬ್ಯಾನ್ ಆಗಿ ವರ್ಷಗಳೇ ಉರುಳಿದ್ದರೂ ಆ ನೋಟುಗಳು ಸಿಕ್ಕಿದ್ದವು. ಅಲ್ಲದೇ ಭಕ್ತರು ಈ ದೇವರಿಗೆ ವಿದೇಶಿ ಕರೆನ್ಸಿಯನ್ನು ಅರ್ಪಿಸಿದ್ದಾರೆ.

 • Unemployment

  BUSINESS17, Apr 2019, 4:23 PM

  ನೋಟ್ ಬ್ಯಾನ್ ಪರಿಣಾಮ: 5 ಮಿಲಿಯನ್ ಉದ್ಯೋಗ ಕಡಿತ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 5 ಮಿಲಿಯನ್ ಉದ್ಯೋಗ ಕಡಿತಗೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

 • DK shivakumar

  NEWS13, Mar 2019, 8:54 AM

  ನೋಟ್‌ಬ್ಯಾನ್‌ ವೇಳೆ ಡಿಕೆಶಿಯಿಂದ ಹಳೆ ನೋಟು ಅಕ್ರಮ ವಿನಿಮಯ!

  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಇತರೆ ಆರೋಪಿಗಳು ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹಳೆಯ ನೋಟುಗಳ ಅಕ್ರಮ ವಿನಿಮಯ ಕಾರ್ಯದಲ್ಲಿ ಸಹ ಭಾಗಿಯಾಗಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೈಕೋರ್ಟ್‌ಗೆ ತಿಳಿಸಿದೆ.

 • undefined

  NEWS25, Dec 2018, 3:05 PM

  ಮಾರುಕಟ್ಟೆಗೆ ಬರಲಿದೆ ಹೊಸ ನೋಟು : ಹಳೆಯ ನೋಟು ಏನಾಗುತ್ತದೆ..?

  ನೋಟು ಅಮಾನ್ಯೀಕರಣದ ಬಳಿಕ ದೇಶದಲ್ಲಿ ಹೊಸ ರೀತಿಯ ನೋಟುಗಳನ್ನು ಪರಿಚಯಿಸಿದ ಆರ್ ಬಿಐ ಇದೀಗ 20 ರು ಹೊಸ ನೋಟುಗಳನ್ನು ಮಾರುಕಟ್ಟೆಗ ಬಿಡುಗಡೆ ಮಾಡುತ್ತಿದೆ. 

 • Note Ban

  BUSINESS19, Dec 2018, 3:02 PM

  ನೋಟ್ ಬ್ಯಾನ್ ವೇಳೆ ಸತ್ತವರೆಷ್ಟು?: ‘ಸತ್ಯ’ಬಾಯ್ಬಿಟ್ಟ ಕೇಂದ್ರ!

  ನೋಟು ಅಮಾನ್ಯೀಕರಣದ ಎರಡು ವರ್ಷದ ಬಳಿಕ ಕೇಂದ್ರ ಸರ್ಕಾರ ಈ  ಕುರಿತು ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, 2016ರಲ್ಲಿ ಏಕಾಏಕಿ ಹೆಚ್ಚು ಮುಖಬೆಲೆಯ ನೋಟು ಆಮಾನ್ಯೀಕರಣದಿಂದಾಗಿ ಅನೇಕರು ಜೀವ ಕಳೆದುಕೊಂಡಿದ್ದು ಸತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.

 • undefined

  NEWS14, Dec 2018, 12:08 PM

  200, 500, 2000 ರು. ನೋಟುಗಳಿಗೆ ನಿಷೇಧ

  ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ ಜಾರಿಗೆ ತಂದ 200, 500, 2000 ರು.ನೋಟುಗಳ ಚಲಾವಣೆ ನಿಷೇಧಿಸಿ ನೇಪಾಳ ಸರ್ಕಾರ ಆದೇಶ ಹೊರಡಿಸಿದೆ.

 • o.p.rawath

  NEWS4, Dec 2018, 8:22 AM

  ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆ ಆಗ್ಲಿಲ್ಲ: ರಾವತ್‌

  ನೋಟು ರದ್ದತಿ ಒಂದು ಆಘಾತಕಾರಿ ನಿರ್ಧಾರ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್‌ ಹೇಳಿದ್ದರು. ಆರ್‌ಬಿಐ ಮಾಜಿ ಗವರ್ನರ್‌ ರಘುರಾಂ ರಾಜನ್‌ ಕೂಡ ಇದನ್ನು ಟೀಕಿಸಿದ್ದರು. ಈಗ ನೋಟು ರದ್ದತಿಯಿಂದ ಏನೂ ಪ್ರಯೋಜನವಾಗಲಿಲ್ಲ ಎಂಬ ಹೇಳಿಕೆಯ ಸರದಿ ನಿರ್ಗಮಿತ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಅವರದು.

 • undefined

  BUSINESS20, Nov 2018, 2:44 PM

  2019ರಲ್ಲಿ ಮೋದಿ ಭವಿಷ್ಯ 'ಆ'ವರದಿ ಮೇಲೆ ನಿಂತಿದೆ!

  ಭಾರತದ ಆರ್ಥಿಕತೆ ಮೇಲೆ ನೋಟು ಅಮಾನ್ಯೀಕರಣ ಬೀರಿದ್ದ ಪರಿಣಾಮವನ್ನು ಸಿಎಜಿ ವರದಿಯಲ್ಲಿ ವಿವರಿಸಲಾಗುತ್ತದೆ. ಆದರೆ 2019 ಚುನಾವಣಾ ವರ್ಷವಾಗಿರುವುದರಿಂದ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. 

 • Narendra Modi

  NEWS13, Nov 2018, 4:49 PM

  'ಡಿಮಾನಿಟೈಜೇಶನ್ ಪಾರ್ಟ್-2ಗೆ ಮೋದಿ ಸಿದ್ಧತೆ'

  ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಸುತ್ತಿನ ಡಿಮಾನಿಟೈಜೇಶನ್ ಗೆ ಮುಂದಾಗಿದ್ದಾರೆಯೇ? ಕಾಂಗ್ರೆಸ್ ಅಂಥದ್ದೊಂದು ಗಂಭೀರ ಆರೋಪ ಮಾಡಿದೆ . ಹಾಗಾದದರೆ ಇದಕ್ಕೆ ಕಾರಣ ಏನು?