ಅಭಿವೃದ್ಧಿ  

(Search results - 481)
 • Kota Srinivas

  Karnataka Districts9, Dec 2019, 2:37 PM IST

  'ಕಣ್ಣೀರು ಹಾಕಿದ್ರೆ ಗೆಲುವು ಸಿಗಲ್ಲ', ರಿಸಲ್ಟ್‌ ಬಗ್ಗೆ ಕೋಟ ಮಾತು

  ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ. ಕಣ್ಣೀರು ಹಾಕಿದರೆ, ಕೇಕೆ ಹಾಕಿದರೆ ಗೆಲುವು ಸಿಗಲ್ಲ. ಇದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರಕಾರ ಬಂದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

 • স্বপ্নে স্বামীকে দেখে গর্ভবতী বিহারের মহিলা

  Karnataka Districts9, Dec 2019, 10:54 AM IST

  'ಗರ್ಭಿ​ಣಿ​ಯರಿಗೆ ಸರ್ಕಾರ​ದಿಂದ 5000 ರು. ಸಹಾ​ಯ​ ಧನ'

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗ​ರ್ಭಿಣಿ ಅ​ಥವಾ ಬಾ​ಣಂತಿ​ಯ​ರಿಗೆ 5000 ರು. ಸ​ಹಾ​ಯ​ಧನ ನೀಡುವ ಯೋ​ಜನೆ ರೂ​ಪಿ​ಸಿದೆ. ನೇರ ನ​ಗದು ವ​ರ್ಗಾ​ವಣೆ ಮೂ​ಲಕ ಇ​ದನ್ನು ಮೂರು ಕಂತು​ಗ​ಳಲ್ಲಿ ನೀ​ಡ​ಲಾ​ಗು​ವುದು ಎಂದು ಮಾತೃತ್ವ ವಂದನಾ ಯೋಜನೆ ಬಗ್ಗೆ ಮಾಹಿತಿ ನೀಡಲಾಗಿದೆ. 

 • cow

  India9, Dec 2019, 8:18 AM IST

  ಹುಲಿ, ಆನೆ ಸಫಾರಿ ರೀತಿ ಗೋವು ಸಫಾರಿ ಆರಂಭಕ್ಕೆ ಸರ್ಕಾರ ಚಿಂತನೆ!

  ಹುಲಿ, ಆನೆ ಸಫಾರಿ ರೀತಿ ಗೋವು ಸಫಾರಿ ಆರಂಭಕ್ಕೆ ಉ.ಪ್ರ. ಸರ್ಕಾರ ಚಿಂತನೆ| ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಿರುಗುವ ಬೀಡಾಡಿ ದನಗಳನ್ನು ಒಂದೆಡೆ ಸೇರಿಸಿ, ಆ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧಾರ

 • Road

  Karnataka Districts8, Dec 2019, 7:26 AM IST

  ಮದ್ದೂರು ಅಭಿವೃದ್ಧಿಗೆ 400 ಕೋಟಿ ರೂಪಾಯಿ ಬಿಡುಗಡೆ

  ಮದ್ದೂರು ಕ್ಷೇತ್ರದ ಅಭಿವೃದ್ಧಿಗಾಗಿ 400 ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ. ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆಗೊಳಿಸಲಾಗಿತ್ತು. ಕಾರಣಾಂತರಗಳಿಂದ ಈ ಬಿಜೆಪಿ ಸರ್ಕಾರ ಅದನ್ನು ತಡೆಹಿಡಿಯಲಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

 • Karnataka Districts7, Dec 2019, 11:14 AM IST

  ಬೆಳಗಾವಿ ಸ್ಮಾ ರ್ಟ್‌ಸಿಟಿ ಕಾಮಗಾರಿ ಅವ್ಯವಹಾರ: ಅಧಿಕಾರಿಗಳಿಂದ ಪರಿಶೀಲನೆ

  ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಈಗಲೇ ನಿವಾರಿಸುವ ಕಲ್ಪನೆಯಿಂದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದ್ದಾರೆ. 
   

 • laxman savadi mahesh kumathalli mla

  Karnataka Districts5, Dec 2019, 10:12 AM IST

  ಒಂದು ಕಾಲದಲ್ಲಿ ಎದುರಾಳಿ: ಈಗ ಸವದಿಗೆ ಅಣ್ಣಾ ಅಣ್ಣಾ ಅಂತಾರೆ ಕುಮಟಳ್ಳಿ!

  ನೀನು ಚುನಾವಣೆಯಲ್ಲಿ ಗೆಲ್ಲಬೇಕು, ಮಂತ್ರಿಯಾಗಬೇಕು, ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಆಲ್ ದಿ ಬೆಸ್ಟ್ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರಿಗೆ ಹೇಳಿದ್ದಾರೆ. 
   

 • golden chariot train

  Karnataka Districts4, Dec 2019, 12:42 PM IST

  ಮಾರ್ಚ್‌ನಿಂದ ಗೋಲ್ಡನ್‌ ಚಾರಿಯೆಟ್‌ ರೈಲು ಸಂಚಾರ

   ಮುಂದಿನ ಮಾರ್ಚ್ ತಿಂಗಳಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೋಲ್ಡನ್‌ ಚಾರಿಯೆಟ್‌ ರೈಲಿನ ಸಂಚಾರ ಆರಂಭ ಬಹುತೇಕ ಖಚಿತವಾಗಿದೆ. ಈ ಕುರಿತಂತೆ ಮಹತ್ತರ ಬೆಳವಣಿಗೆಯಾಗಿದ್ದು, ಮಂಗಳವಾರ ನೈಋುತ್ಯ ರೈಲ್ವೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೋಲ್ಡನ್‌ ಚಾರಿಯೆಟ್‌ ರೈಲಿನ ಸಂಚಾರಕ್ಕೆ ನೈಋುತ್ಯ ರೈಲ್ವೆ ಮಹಾಪ್ರಬಂಧಕ ಅಜಯ್‌ ಕುಮಾರ್‌ ಸಿಂಗ್‌ ಮತ್ತು ಪ್ರಧಾನ ಮುಖ್ಯಸ್ಥ ಶಿವರಾಜ್‌ ಸಿಂಗ್‌ ಅವರ ಸಮ್ಮುಖದಲ್ಲಿ ಸಹಿ ಹಾಕಿದೆ.

 • ediyurappa vs sidda

  Karnataka Districts3, Dec 2019, 11:17 AM IST

  ಕೇಳಿದ್ದನ್ನೆಲ್ಲ ಕೊಟ್ಟರೂ ಪಕ್ಷ ಬಿಟ್ಟರು: ಸಿದ್ದರಾಮಯ್ಯ ಕಿಡಿ

  ಪಕ್ಷದಲ್ಲಿ ಕಷ್ಟಪಟ್ಟು ಟಿಕೆಟ್‌ ಕೊಡಿಸಿದೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮಾಡಿದೆ, ಕೇಳದಾಗಲೆಲ್ಲಾ ಅನುದಾನ ಕೊಟ್ಟು ಕ್ಷೇತ್ರ ಅಭಿವೃದ್ಧಿ ಮಾಡಿದ ಮೇಲೆ ಡಾ.ಸುಧಾಕರ್‌ ಪಕ್ಷವನ್ನು ತೊರೆದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

 • Manifesto

  Karnataka Districts3, Dec 2019, 7:53 AM IST

  ಪ್ರಣಾಳಿಕೆ ಬಿಡುಗಡೆ: ಕೆ. ಆರ್. ಪೇಟೆ ಅಭಿವೃದ್ಧಿಗೆ ಬಿಜೆಪಿ ಪ್ಲಾನಿಂಗ್ ಏನು..?

  ಮತದಾರರನ್ನು ಸೆಳೆಯಲು ಪ್ರಣಾಳಿಕೆ ಬಿಜೆಪಿ ಪ್ರಣಾಳಿಕೆ ಹೊರತಂದಿದೆ. ಕೆ.ಆರ್‌.ಪೇಟೆ ಅಭಿವೃದ್ಧಿಯ ಕುರಿತ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಅಶ್ವತ್ಥ್‌ ನಾರಾಯಣ, ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಕೆ. ಆರ್. ಪೇಟೆ ಅಭಿವೃದ್ಧಿಗೆ ಬಿಜೆಪಿ ಪ್ಲಾನಿಂಗ್ ಹೇಗಿದೆ..? ಇಲ್ಲಿ ಓದಿ.

 • BY Vijayendra
  Video Icon

  Politics2, Dec 2019, 8:43 PM IST

  'ಅಖಾಡದಲ್ಲಿ ಯುವರಾಜ' ನಾವು ಕಣ್ಣೀರು ಒರೆಸುತ್ತೇವೆ, ಕಣ್ಣೀರು ಹಾಕಲ್ಲ!

  ಬೆಂಗಳೂರು(ಡಿ. 02) ಕೆಆರ್ ಪೇಟೆ ಅಖಾಡಲ್ಲಿ ಅಭ್ಯರ್ಥಿ ನಾರಾಯಣ ಗೌಡರಿಗಿಂತಲೂ ಮುಂದೆ ನಿಂತು ಶ್ರಮಿಸುತ್ತಿರುವ ಬಿ.ವೈ. ವಿಜಯೇಂದ್ರ ಸುವರ್ಣ ನ್ಯೂಸ್ ನೊಂದಿಗೆ ಅನೇಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ಶಾಲಾ ಕಾಲೇಜು ಆಗಬೇಕಿದೆ, ಯುವಕರಿಗೆ ಉದ್ಯೋಗ ಸೃಷ್ಟಿ ಆಗಬೇಕಿದೆ ಎಂದು ವಿಜಯೇಂದ್ರ ಹೇಳಿದ್ದು ಬಿಎಸ್ ಯಡಿಯೂರಪ್ಪ ಅವರ ಅಭಿವೃದ್ಧಿಗೆ ಜನರು ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Karnataka Districts2, Dec 2019, 1:20 PM IST

  'ನನಗೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ಇಚ್ಚೆ ಇಲ್ಲ'

  ನನಗೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ಇಚ್ಚೆ ಇಲ್ಲ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ನನ್ನ ಕೆಲಸದ ಬಗ್ಗೆ ನಮ್ಮವರು, ಕಾಂಗ್ರೆಸ್ ಯಾರು ಮಾತಮಾಡಲಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. 

 • vishwanath

  Karnataka Districts1, Dec 2019, 10:15 AM IST

  ಸಿದ್ದು, ಎಚ್‌ಡಿಕೆ ನನ್ನ ವೈರಿಗಳಲ್ಲ: ವಿಶ್ವನಾಥ್, ಸ್ಪರ್ಧೆ, ಕ್ಷೇತ್ರ ಬಗ್ಗೆ ಏನ್ ಹೇಳ್ತಾರೆ..?

  ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ 93 ಸಾವಿರ ಮತಗಶಳನ್ನು ಪಡೆದು ಆಯ್ಕೆಯಾಗಿದ್ದ ವಿಶ್ವನಾಥ್‌, ಈಗ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದು, ಕಳೆದ 14 ತಿಂಗಳು ಅವರು ಮಾಡಿರುವ ಕೆಲಸ ಮತ್ತು ಸರ್ಕಾರದ ನೂರಾರು ಕನಸುಗಳೊಂದಿಗೆ ಹುಣಸೂರಿನ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಈ ವೇಳೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

 • Karnataka Districts30, Nov 2019, 2:52 PM IST

  'ಕಾಂಗ್ರೆಸ್‌ನ ದುರಂಕಾರದಿಂದ ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ'

  ಸಿದ್ದರಾಮಯ್ಯ ನೇತೃತ್ವದಲ್ಲಿ ಭಕಾಸುರ‌ ಸರಕಾರ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್‌ ನವರಿಗೆ ಬೇಕಿದ್ದರೆ ಅನರ್ಹ ಶಾಸಕರನ್ನ ಇಟ್ಟುಕೊಳ್ಳಬಹುದಿತ್ತು. ಕಾಂಗ್ರೆಸ್ ನ ದುರಂಕಾರದ ಪರಿಣಾಮ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಒಳ್ಳೆಯವರನ್ನು ಇಟ್ಟುಕೊಳ್ಳಲಾಗದ್ದರಿಂದ ಅವರು ಬಿಜೆಪಿಗೆ ಬಂದಿದ್ದಾರೆ ಎಂದು ನಡೆಸಿದ ಸಂಸದ ಅನಂತಕುಮಾರ ಹೆಗಡೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  
   

 • Smart City

  Karnataka Districts29, Nov 2019, 12:12 PM IST

  ತುಮಕೂರು ಸ್ಮಾರ್ಟ್‌ ಸಿಟಿ ಅಭಿವೃದ್ಧಿಗೆ ಡೆನ್ಮಾರ್ಕ್ ನೆರವು

  ಸ್ಮಾರ್ಟ್‌ ಶಿಕ್ಷಣ, ನಗರ ನೀರು ನಿರ್ವಹಣೆ, ಸಾರಿಗೆ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಜಂಟಿಯಾಗಿ ಯೋಜನೆ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪರಸ್ಪರ ಸಹಕಾರ ನೀಡಲು ಡೆನ್ಮಾರ್ಕ್ ದೇಶದ ಆಲ್‌ಬೋರ್ಗ್‌ ಸ್ಮಾರ್ಟ್‌ ಸಿಟಿ ಮತ್ತು ತುಮಕೂರು ಸ್ಮಾರ್ಟ್‌ ಸಿಟಿ ಕಂಪನಿ ನಡುವೆ ಒಡಂಬಡಿಕೆ ಏರ್ಪಟ್ಟಿದೆ.

 • Hosapete
  Video Icon

  Karnataka Districts29, Nov 2019, 10:39 AM IST

  ‘ನಾನು ಯಾರಿಗೇನು ಕಮ್ಮಿ ಇಲ್ಲ, ಹೊಲದಲ್ಲೂ ಪ್ರಚಾರ ಮಾಡ್ತೇನೆ’

  ಬಳ್ಳಾರಿ[ನ.29]: ವಿಜಯನಗರ ಉಪಚುನಾವಣೆಯಲ್ಲಿ ಮತದಾರನ್ನು ಸೆಳೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರುಗಳು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇವರೆಲ್ಲರ ಮಧ್ಯೆ ನಾನೇನು ಕಡಿಮೆ ಇಲ್ಲ ಎಂಬಂತೆ ಪಕ್ಷೇತರ ಅಭ್ಯರ್ಥಿ ಕಿಚಿಡಿ ಕೊಟ್ರೇಶ್ ಅವರು ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. 

  ಕಿಚಿಡಿ ಕೊಟ್ರೇಶ್ ಮೆಣಸಿನಕಾಯಿ ಹೊಲಗಳಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.  ತಾಲೂಕಿನ ನಲ್ಲಾಪುರ ಗ್ರಾಮದ  ಹೊಲದಲ್ಲಿ ಮೆಣಸಿನಕಾಯಿ ಬಿಡಿಸುತ್ತಿರುವ ಕೆಲಸಗಾರರ ಮುಂದೆ ಕಿಚಿಡಿ ಕೊಟ್ರೇಶ್ ಅವರು ಭಾಷಣ ಮಾಡಿ ಕ್ಷೇತ್ರ ಅಭಿವೃದ್ಧಿಗೆ ತಮಗೆ ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಮಹಿಳೆಯರು ಕೆಲಸ ಮಾಡುತ್ತಲೇ ಕಿಚಿಡಿ ಕೊಟ್ರೇಶ್  ಅವರ ಮಾತುಗಳನ್ನು ಕೇಳಿದ್ದಾರೆ.