ಅನಂತ್ ನಾಗ್  

(Search results - 29)
 • ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1973 ರಲ್ಲಿ ನಟರಾಜ್ ಅರಸ್ ಅವರ ಸಂಕಲ್ಪ ಚಿತ್ರದಿಂದ. ಅಲ್ಲಿಂದ ಮುಂದೆ ಅವರನ್ನು ಅವರನ್ನು ಕನ್ನಡ ಚಿತ್ರರಂಗ ಬರಸೆಳೆದು ಅಪ್ಪಿಕೊಂಡಿತು.

  ENTERTAINMENT11, Sep 2019, 9:47 AM IST

  ರಿಷಬ್‌ ಶೆಟ್ಟಿ ಚಿತ್ರಕ್ಕೆ ಅನಂತ್‌ನಾಗ್‌ ಹೀರೋ, ನಟಿ ಬೇಕಂತೆ!

  ಇತ್ತೀಚೆಗೆ 71 ವರ್ಷಗಳನ್ನು ಪೂರೈಸಿದ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಅನಂತ್ ನಾಗ್ ಅವರು ಚಿತ್ರವೊಂದರಲ್ಲಿ ನಾಯಕ ನಟನಾಗಿ ನಟಿಸಲಿದ್ದಾರೆ. ವಯಸ್ಸು 70 ಆದರೇನು? ಮಾಘಿದ ಕಲಾವಿದನಿಗೆ ನಟನೆಯೇ ಉಸಿರು. ಈ ಚಿತ್ರದ ವಿಶೇಷತೆ ಏನು? ಕಥೆ ಹೇಗಿರಲಿದೆ?

 • Anant Nag
  Video Icon

  BUSINESS5, Sep 2019, 9:29 PM IST

  ಆಹಾರ ಸಂಸ್ಥೆಗೆ ಅನಂತ್ ನಾಗ್ ರಾಯಭಾರಿಯಾದ ಕತೆ!

  ದೇಶಿ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆಗೆ ಹಿರಿಯ ನಟ, ಅನಂತ್ ನಾಗ್ ರಾಯಭಾರಿ. ಸಂಸ್ಥೆ ಎರಡು ವರ್ಷ ಪೂರೈಸಿದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತ್ ನಾಗ್ ಅನುಭವ ಹಂಚಿಕೊಂಡರು. ಸದ್ಯದಲ್ಲೇ ಕೆಂಗೇರಿ ಬಳಿ ಸಂಸ್ಥೆಯ ರೆಸ್ಟೊರೆಂಟ್ ಸಹ ತಲೆ ಎತ್ತಲಿದೆ. 

 • Anant Nag
  Video Icon

  News5, Sep 2019, 8:53 PM IST

  ಅನಂತ್ ನಾಗ್ ದನಿಯಲ್ಲಿ.. ಇದು ಎಂಥಾ ಲೋಕವಯ್ಯಾ....!

  ದೇಸಿಯ ತಿನಿಸುಗಳಿಂದ ಜನಪ್ರಿಯವಾಗಿರುವ ‘ಓಗರ’ ಸಂಸ್ಥೆ ಇದೀಗ ಹೊಸ ಹೊಸ ಸಾಧನೆಯ ಹೆಜ್ಜೆಗಳನ್ನು ಇಡುತ್ತಿದೆ. ಹಿರಿಯ ನಟ ಅನಂತ್ ನಾಗ್ ಈ ಸಂಸ್ಥೆಯ ರಾಯಭಾರಿಯಾಗಿದ್ದಾರೆ. ಸಂಸ್ಥೆ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಹಾಜರಿದ್ದ ಅನಂತ್ ನಾಗ್  ತಮ್ಮದೇ ದನಿಯಲ್ಲಿ ‘ಇದು ಎಂಥಾ ಲೋಕವಯ್ಯಾ’ ಗೀತೆಯನ್ನು ಹಾಡಿ  ರಂಜಿಸಿದರು.

 • ananth nag birthday 1

  ENTERTAINMENT4, Sep 2019, 1:14 PM IST

  ಸ್ಯಾಂಡಲ್‌ವುಡ್ ನೆನಪುಗಳ ಮೆಲುಕುಗಳೊಂದಿಗೆ ಅನಂತ್ ನಾಗ್ 71 ರ ಸಂಭ್ರಮ!

  ಕನ್ನಡ ಚಿತ್ರರಂಗ ಕಂಡ ಮೇರು ನಟ, ರಾಜಕಾರಣಿ ಅನಂತ್ ನಾಗ್ ಇಂದಿಗೆ 71 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಹಜವಾದ ನಟನೆ, ಸ್ಪಷ್ಟವಾದ ಕನ್ನಡ, ಸುಲಲಿತವಾಗಿ ಹೇಳುವ ಡೈಲಾಗ್, ವಿಭಿನ್ನವಾದ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಹತ್ತಿರವಾದ ನಾಯಕ ನಟ. ಈ ಸಂದರ್ಭದಲ್ಲಿ ಅವರ ಅಪರೂಪದ ಫೋಟೋಗಳ ಜೊತೆ ನೆನಪುಗಳ ಮೆಲುಕು. 

 • ananth nag 3

  ENTERTAINMENT4, Sep 2019, 8:58 AM IST

  71 ನೇ ಹುಟ್ಟುಹಬ್ಬಕ್ಕೆ ಅನಂತ್ ನಾಗ್ ಏನ್ಮಾಡ್ತಿದ್ದಾರೆ?

  ಮೊನ್ನೆ ಮೊನ್ನೆ ನೋಡಿದಷ್ಟು ಫ್ರೆಶ್ ಆಗಿ ಕಾಣುವ ಹಂಸಗೀತೆ, ಇನ್ನೂ ಕಿವಿಯಲ್ಲಿ ಗುನುಗುನಿಸುವ ಆಕಾಶದಿಂದ ಧರೆಗಿಳಿದ ರಂಭೆ ಗೀತೆ, ಅಣ್ಣ ತಮ್ಮಂದಿರಿಬ್ಬರೂ ಚುರುಕಾಗಿ ತುಂಟರಂತೆ ಮಿಂಚಿನ ಓಟದಲ್ಲಿ ಓಡಾಡುತ್ತಾ ಬೆಳ್ಳಿಮೋಡ ಮುಟ್ಟುತ್ತಾ.. ಬಡತನ ಸುಡುತ್ತಾ.. ಎಂದು ಹಾಡಿದ್ದು, ಮೊನ್ನೆ ಮೊನ್ನೆ ಮರೆಗುಳಿಯಂತೆ ಮಾತಾಡುತ್ತಾ ಪುಷ್ಪಾ ಎಂದು ಹಂಬಲಿಸಿದ್ದು, ಆಕ್ಸಿಡೆಂಟ್ ಚಿತ್ರದ ರಾಜಕಾರಣಿ, ಬೆಂಕಿಯ ಬಲೆಯ ಸ್ಕೂಲ್ ಮೇಷ್ಟ್ರು, ಗಣೇಶನ ಮದುವೆಯ ತುಂಟ, ಉದ್ಭವದ ಕಿಲಾಡಿ, ಯಾರಿಗೂ ಹೇಳ್ಬೇಡಿ ಚಿತ್ರದ ಬ್ರೋಕರ್, ಕೆಜಿಎಫ್ ಚಿತ್ರದ ನಿರೂಪಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟ್ರು, ಕವಲುದಾರಿಯ ನಿವೃತ್ತ ಇನ್ಸ್‌ಪೆಕ್ಟರ್...

 • ananth nag old

  ENTERTAINMENT3, Sep 2019, 9:04 PM IST

  ಅನಂತ್‌ ನಾಗ್ ರಾಜಕಾರಣದ ಹೆಜ್ಜೆಗುರುತು, ಸಚಿವರಾಗಿಯೂ ಕೆಲಸ ಮಾಡಿದ್ರು!

  ಕನ್ನಡದ ಮಟ್ಟಿಗೆ ಅನಂತ್ ನಾಗ್ ಎವರ್‌ ಗ್ರೀನ್ ಹೀರೋ.. ಅದನ್ನು ಪ್ರೇಕ್ಷಕ ಮಹಾಪ್ರಭುಗಳು ಒಪ್ಪಿಕೊಂಡು ಅಪ್ಪಿಕೊಂಡಾಗಿದೆ. ಅನಂತ್ ನಾಗ್ ಕೇವಲ ಸಿನಿಮಾ ರಂಗವೊಂದರಲ್ಲಿ ಅಲ್ಲ ರಾಜಕಾರಣದಲ್ಲಿಯೂ ಅಚ್ಚಳಿಯದ ಹೆಜ್ಜೆ ಇಟ್ಟಿರುವುದು ಇತಿಹಾಸ. ಅನಂತ್ ನಾಗ್ ಸೆ. 4 ರಂದು 71 ನೇ ವಸಂತಕ್ಕೆ ಕಾಲಿರಿಸುತ್ತಿದ್ದು ಅವರ ರಾಜಕೀಯ ಜೀವನದ ಒಂದು ಸಣ್ಣ ಹಿನ್ನೋಟ ಇಲ್ಲಿದೆ.

 • ananth nag

  ENTERTAINMENT3, Sep 2019, 5:01 PM IST

  ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟ!

  ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟ ಎಂದೇ ಕರೆಯಬಹುದಾದ ಅನಂತ್ ನಾಗ್ ಗೆ 71 ರ ಹರೆಯದ ಸಂಭ್ರಮ. ಆಡು ಮುಟ್ಟದ ಸೊಪ್ಪಿಲ್ಲ, ಅನಂತ್ ನಾಗ್ ಮಾಡದ ಪಾತ್ರವಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಅವರ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ ನೋಡಿ. 

 • girish karnad ananth nag

  WEB SPECIAL11, Jun 2019, 12:26 PM IST

  ಕಡೆ ನಾಟಕ ಬರೆದು ಸಾವಿನ ಸುಳಿವು ನೀಡಿದ್ದ ಕಾರ್ನಾಡ್ !

  ಹಿರಿಯ ನಟ ಅನಂತ್ ನಾಗ್ ತಮ್ಮ ಸ್ನೇಹಿತರಾಗಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಬಗ್ಗೆ ನೆನಪು ಬಿಚ್ಚಿಟ್ಟಿದ್ದಾರೆ. ಗಿರೀಶ್‌ ಕಾರ್ನಾಡರ ಕುರಿತು ಯೋಚನೆ ಮಾಡಿದಾಗೆಲ್ಲ ಹಲವಾರು ಸಂಗತಿಗಳು ಮನಸ್ಸಿನಲ್ಲಿ ಮೂಡುತ್ತವೆ ಅನಂತ್ ನಾಗ್ ಹೇಳಿಕೊಂಡಿದ್ದಾರೆ. ಹಾಗಾದ್ರೆ ಅವರು ಹಂಚಿಕೊಂಡ ವಿಚಾರಗಳೇನು..?

 • Kavaludaari Anant Nag

  ENTERTAINMENT27, Apr 2019, 10:02 AM IST

  ಕವಲುದಾರಿ ಗಳಿಸಿದ್ದು 6 ಕೋಟಿ: ಅನಂತ್‌ನಾಗ್‌

  - ಹೀಗೊಂದು ಪ್ರಶ್ನೆ ಎದುರಾಗಿದ್ದು ನಿರ್ದೇಶಕ ಹೇಮಂತ್‌ರಾವ್‌ ಅವರಿಗೆ. ಅದು ‘ಕವಲುದಾರಿ’ ಚಿತ್ರದ ಯಶಸ್ಸಿನ ಪತ್ರಿಕಾಗೋಷ್ಟಿ. ಇಡೀ ಚಿತ್ರತಂಡ ಹಾಜರಿತ್ತು. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾಗಿ ಹೇಳಿಕೊಳ್ಳುತ್ತಿರುವಾಗಲೇ, ‘ಹಾಗಾದರೆ ಇಷ್ಟುದಿನದಲ್ಲಿ ಸಿನಿಮಾ ಮಾಡಿರುವ ಗಳಿಕೆ ಎಷ್ಟು’ ಎನ್ನುವುದಕ್ಕೆ ‘ವಿತರಕರಿಂದ ಇನ್ನೂ ಲೆಕ್ಕ ತೆಗೆದುಕೊಳ್ಳುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಕರೆಕ್ಟ್ ಲೆಕ್ಕ ಸಿಗುತ್ತದೆ. ಆದರೆ, ನಿರ್ಮಾಪಕರು ಹಾಗೂ ವಿತರಕರು ಫುಲ್‌ ಖುಷಿಯಾಗಿದ್ದಾರೆ’ ಎಂದಿದ್ದು ಹೇಮಂತ್‌

 • SaReGaMaPa16

  Small Screen19, Apr 2019, 12:24 PM IST

  ಸರಿಗಮಪ ವೇದಿಕೆಗೆ ಅತಿಥಿಯಾಗಿ ಯಂಗ್ ಆ್ಯಂಡ್ ಎನರ್ಜಿಟಿಕ್ ಮ್ಯಾನ್!

  ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 16 ಭಾರೀ ಯಶಸ್ಸಿನೊಂದಿಗೆ ಸಾಗುತ್ತಿದೆ. ಪ್ರತಿವಾರ ಒಂದೊಂದು ವಿಶೇಷತೆಗಳಿರುತ್ತವೆ. ಹೊಸ ಹೊಸ ರೀತಿಯ ಸುತ್ತುಗಳು ಇರುತ್ತವೆ. ಅತಿಥಿಗಳು ಆಗಮಿಸುತ್ತಿರುತ್ತಾರೆ. ಈ ವಾರ ಸರಿಗಮಪ ವೇದಿಕೆಗೆ ನಟ ಅನಂತ್ ನಾಗ್ ಆಗಮಿಸಿದ್ದಾರೆ. 

 • Video Icon

  Sandalwood16, Apr 2019, 2:03 PM IST

  ’ಕವಲುದಾರಿ’ ಯಶಸ್ಸಿನ ಬಗ್ಗೆ ಅನಂತ್‌ನಾಗ್ ಮಾತುಗಳನ್ನು ಕೇಳಲೇಬೇಕು!

  ’ಕವಲುದಾರಿ ’ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ ಹೇಮಂತ್‌ರಾವ್ ಅವರ ಎರಡನೆಯ ಸಿನಿಮಾ ಕವಲುದಾರಿ. ಮಹಾನಗರದ ಪರಿಸರದಲ್ಲಿ ತಂದೆ-ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮೊದಲ ಸಿನಿಮಾದಲ್ಲಿ ಅನ್ವೇಷಿಸಿದ ಹೇಮಂತ್, ಕವಲುದಾರಿ ಚಿತ್ರದಲ್ಲಿ ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹೇಮಂತ್‌ರಾವ್ ಈ ಸಿನಿಮಾವನ್ನು ಸವಿವರವಾಗಿ ಕಟ್ಟಿಕೊಡುತ್ತಾರೆ. 

  ಹಿರಿಯ ನಟ ಅನಂತ್ ನಾಗ್, ನಿರ್ದೇಶಕ ಹೇಮಂತ್ ರಾವ್ ಚಿತ್ರದ ಯಶಸ್ಸಿನ ಬಗ್ಗೆ ಸುವರ್ಣ ನ್ಯೂಸ್ ನಲ್ಲಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

   

 • Kavaludari

  Sandalwood14, Apr 2019, 12:44 PM IST

  ಮಸಾಲೆದೋಸೆ, ಮೈಸೂರು ಪಾಕ್ ತಿಂದು ಸಕ್ಸಸ್ ಸೆಲಬ್ರೇಟ್ ಮಾಡಿದ ’ಕವಲುದಾರಿ’

  ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ’ಕವಲುದಾರಿ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ. ಮಸಾಲೆ ದೋಸೆ, ಮೈಸೂರು ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಅನಂತ್ ನಾಗ್, ಪತ್ನಿ ಗಾಯತ್ರಿ, ನಿರ್ದೇಶಕ ಹೇಮಂತ್ ರಾವ್ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ. 

 • Anant Nag

  ENTERTAINMENT12, Apr 2019, 9:16 AM IST

  ಅನಂತ್ ನಾಗ್ ಬಗ್ಗೆ ನೀವು ತಿಳಿಯಬೇಕಾದ ಇಂಟರೆಸ್ಟಿಂಗ್ ವಿಚಾರಗಳಿವು!

  ಹೀಗೊಂದು ಸುದ್ದಿ ಪತ್ರಿಕೆಯಲ್ಲಿ ಆಗಾಗ ಬರುತ್ತಿತ್ತು. ಆಗೆಲ್ಲ ವೈಯನ್ಕೆ ‘ಅದು ತೀರಾ ಸಹಜ. ಒಳ್ಳೆಯ ಕಲಾವಿದ ಸದಾ ಪ್ರಕ್ಷುಬ್ಧನಾಗಿಯೇ ಇರುತ್ತಾನೆ’ ಅನ್ನುತ್ತಿದ್ದರು. ಸುದ್ದಿ ಕಾಶ್ಮೀರ ಕಣಿವೆಯಲ್ಲಿರುವ ಅನಂತ್‌ನಾಗ್‌ಗೆ ಸಂಬಂಧಿಸಿದ್ದಾಗಿತ್ತು. ವೈಯನ್ಕೆ ಹೇಳುತ್ತಿದ್ದದ್ದು ನಟ ಅನಂತ್‌ನಾಗ್‌ ಕುರಿತಾಗಿತ್ತು.

 • Shootout

  NEWS21, Nov 2018, 10:30 AM IST

  ಕಣಿವೆಯಲ್ಲಿ ಪ್ರತ್ಯೇಕತವಾದಿ ನಾಯಕನ ಬರ್ಬರ ಹತ್ಯೆ!

  ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾಹ್ ಗಿಲಾನಿಯವರ ತೆಹ್ರೀಕ್-ಇ-ಹುರಿಯತ್ ಸಂಘಟನೆಯ ನಾಯಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ. 

 • Video Icon

  INTERVIEW5, Sep 2018, 6:28 PM IST

  ಅನಂತ್ ನಾಗ್ ಅನ್‌ಲಿಮಿಟೆಡ್! ಎವರ್‌ಗ್ರೀನ್ ನಟನೊಂದಿಗೆ Exclusive ಸಂದರ್ಶನ

  ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ನಟ ಅನಂತ್ ನಾಗ್ ಬದುಕೇ ಒಂದು ಕಾದಂಬರಿ. ಕಾಸರಗೋಡುವಿನಲ್ಲಿ ಕಳೆದ ಬಾಲ್ಯದ ದಿನಗಳಿಂದ ಆರಂಭಿಸಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುವರೆಗೆ ತಮ್ಮ ಜೀವನದ ನೆನಪುಗಳನ್ನು ‘ಅನಂತ ಅಂತರಾಳ’ದಲ್ಲಿ ಸುವರ್ಣನ್ಯೂಸ್ ಜೊತೆ ಮೆಲುಕು ಹಾಕಿದ್ದಾರೆ.