ಅಂಪೈರ್
(Search results - 64)CricketJan 22, 2021, 8:53 AM IST
ಜನಾಂಗೀಯ ನಿಂದನೆ: ಕ್ರೀಡಾಂಗಣ ತೊರೆಯಲು ಆಯ್ಕೆ ನೀಡಿದ್ದ ಅಂಪೈರ್!
ಭಾರತಕ್ಕೆ ಆಗಮಿಸಿದ ನಂತರ ತಂದೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಾಜ್, ‘‘ ಕೆಲವು ಪ್ರೇಕ್ಷಕರು ನನ್ನನ್ನು ಬ್ರೌನ್ ಮಂಕಿ ಎಂದು ಕರೆದರು. ಕೂಡಲೇ ಈ ವಿಷಯವನ್ನು ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದೆ. ಈ ಸಂಬಂಧ ರಹಾನೆ ಫೀಲ್ಡ್ ಅಂಪೈರ್ ಪೌಲ್ ರೀಫೆಲ್ ಮತ್ತು ಪೌಲ್ ವಿಲ್ಸನ್ ಅವರಿಗೆ ತಿಳಿಸಿದರು.
CricketJan 12, 2021, 4:59 PM IST
ಅಂಪೈರ್ ನೋ ಬಾಲ್ ಕೊಟ್ಟಿದ್ದಕ್ಕೆ ಆಟಗಾರರ ನಡುವೆ ಭೀಕರ ಬಡಿದಾಟ..!
ಕಾಂಗ್ರೆಸ್ ಮಾಜಿ ಶಾಸಕ ಸಿ ಎಸ್ ನಾಡಗೌಡ ಅಭಿಮಾನಿಗಳು ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಮೆಂಟ್ ಕಳೆದ 12 ದಿನಗಳಿಂದ ನಡೆಯುತ್ತಿತ್ತು. ಹನ್ನೆರಡನೇ ದಿನದ ಟೂರ್ನಮೆಂಟ್ ವೇಳೆ ಈ ರೀತಿಯ ಅವಘಡ ಸಂಭವಿಸಿದೆ.
CricketJan 7, 2021, 8:30 AM IST
ಮೊದಲ ಬಾರಿ ಪುರುಷರ ಟೆಸ್ಟ್ ಪಂದ್ಯಕ್ಕೆ ಮಹಿಳಾ ಅಂಪೈರ್!
ಗುರುವಾರದಿಂದ ಇಲ್ಲಿ ನಡೆಯುತ್ತಿರುವ ಭಾರತ-ಆಸ್ಪ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಕ್ಲೇರ್ 4ನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 32 ವರ್ಷದ ಕ್ಲೇರ್ 2019ರಲ್ಲಿ ಪುರುಷರ ಏಕದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.
CricketDec 11, 2020, 10:28 AM IST
ಅಂಪೈರ್ ಕಂಕಳ ಮೇಲೆ ಡಿಯೋಡ್ರೆಂಟ್ ಜಾಹಿರಾತು!
10ನೇ ಆವೃತ್ತಿಯ ಬಿಗ್ಬ್ಯಾಶ್ ಲೀಗ್ನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪೀಟರ್ ಹ್ಯಾಂಡ್ಸ್ಕಂಬ್ ನೇತೃತ್ವದ ಹೋಬಾರ್ಟ್ ಹರಿಕೇನ್ಸ್ ತಂಡ 16 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
IPLOct 22, 2020, 8:25 PM IST
IPL 2020 - ಕೂಲ್ ಹೇರ್ಸ್ಟೈಲ್ನ ಅಂಪೈರ್ ಲೇಡಿನಾ?
ಈ ಬಾರಿಯ ಐಪಿಎಲ್ ಮ್ಯಾಚ್ಗಳನ್ನು ನೇರವಾಗಿ ನೋಡಿ ಎಂಜಾಯ್ ಮಾಡುವ ಅವಕಾಶವನ್ನು ಖಂಡಿತವಾಗಿಯೂ ಭಾರತದಲ್ಲಿನ ಫ್ಯಾನ್ಸ್ ಮಿಸ್ ಮಾಡುಕೊಳ್ಳುತ್ತಿದ್ದಾರೆ. ದುಬೈನಲ್ಲಿ ನೆಡೆಯುತ್ತಿರುವ ಈ ಸೀಸನ್ನ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವಿಲ್ಲದಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೂ ಐಪಿಎಲ್ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಆಟಗಾರರ ಜೊತೆ ಈ ಬಾರಿ ಅಂಪೈರ್ ಕೂಡ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ನಡೆದ ಕೆಕೆಆರ್ ಮತ್ತು ಎಸ್ಆರ್ಹೆಚ್ ನಡುವಿನ ಐಪಿಎಲ್ ಪಂದ್ಯದಲ್ಲಿ ಅಂಪೈರ್ ಹುಡುಗನಾ? ಹುಡುಗಿನಾ? ಎಂಬ ಪ್ರಶ್ನೆ ಎಲ್ಲರಿಗೂ ಕಾಡಿತ್ತು. ಇದಕ್ಕೆ ಕಾರಣ ಅವರ ಕೂಲ್ ಹೇರ್ಸೈಲ್. ಆ ಅಂಪೈರ್ ಯಾರು? ವಿವರ ಇಲ್ಲಿದೆ.
CricketOct 4, 2020, 3:55 PM IST
ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಲಿ!
- ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ
- ದಾಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಲಿ
IPLOct 3, 2020, 5:35 PM IST
ಸಂಜು ಸಾಮ್ಸನ್ ಔಟ್ ಅಥವಾ ನಾಟೌಟ್? ವಿವಾದ ಸೃಷ್ಟಿಸಿದ ತೀರ್ಪು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ. ಸಂಜು ಸಾಮ್ಸನ್ ಔಟ್ ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದ್ದರು. ಕೆಲವರ ವಾದ ಇದು ನಾಟೌಟ್, ಮತ್ತ ಕೆಲವರು ಔಟ್ ಎಂದಿದ್ದಾರೆ. ಈ ವಿವಾದಕ್ಕೆ ಕಾರಣವೇನು? ಹಾಗಾದರೆ ಅಸಲಿ ತೀರ್ಪು ಏನು?
IPLSep 21, 2020, 5:01 PM IST
ಮ್ಯಾನ್ ಆಫ್ ದಿ ಮ್ಯಾಚ್ ಅಂಪೈರ್ಗೆ ಕೊಡ್ಬೇಕಿತ್ತು ಎಂದ ಸೆಹ್ವಾಗ್..!
ನವದಹಲಿ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಭಾನುವಾರ(ಸೆ.20) ರಾತ್ರಿ ನಡೆದ ಜಿದ್ದಾಜಿದ್ದಿನ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಆದರೆ ಮೈದಾನದಲ್ಲಿ ಅಂಪೈರ್ ಮಾಡಿದ ಯಡವಟ್ಟಿನಿಂದಾಗಿ ಕೆ.ಎಲ್. ರಾಹುಲ್ ನೇತೃತ್ವದ ಪಂಜಾಬ್ ತಂಡ ಸೋಲಿನ ಕಹಿಯುಣ್ಣಬೇಕಾಯಿತು. ಅಂಪೈರ್ ನಡೆ ಮಾಜಿ ಕ್ರಿಕೆಟಿಗರು ಸೇರಿದಂತೆ ಪಂಜಾಬ್ ಸಹ ಒಡತಿ ಪ್ರೀತಿ ಝಿಂಟಾ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅಂಪೈರ್ನಿಂದಾದ ಪ್ರಮಾದವಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
CricketJul 20, 2020, 8:44 AM IST
ಚೆಂಡಿಗೆ ಎಂಜಲು: ಅಂಪೈರ್ನಿಂದ ಸ್ಯಾನಿಟೈಸರ್ ಹಚ್ಚಿ ಸ್ವಚ್ಛತೆ
ವಿಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಆಟಗಾರ ಡೊಮಿನಿಕ್ ಸಿಬ್ಲಿ ಆಕಸ್ಮಿಕವಾಗಿ ಚೆಂಡಿಗೆ ಎಂಜಲು ಹಾಕಿದರು. ತಕ್ಷಣ ಅಂಪೈರ್ ಸ್ಯಾನಿಟೈಸರ್ ಬಳಸಿ ಚೆಂಡನ್ನು ಸ್ವಚ್ಛಗೊಳಿಸಿದ ಪ್ರಸಂಗ ನಡೆಯಿತು.
stateJul 13, 2020, 9:14 AM IST
#Breaking ಸಿ.ಟಿ ರವಿ ಥರ್ಡ್ ಅಂಪೈರ್ ರಿಸಲ್ಟ್ 'ಔಟ್'..!
ಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಒಂದು ವಾರದಲ್ಲಿ ಎರಡು ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ಪೈಕಿ ಒಮ್ಮೆ ನೆಗೆಟಿವ್ ಬಂದರೆ ಮತ್ತೊಮ್ಮೆ ಪಾಸಿಟಿವ್ ಬಂದಿತ್ತು. ಹೀಗಾಗಿ ಮೂರನೇ ಬಾರಿಗೆ ಟೆಸ್ಟ್ಗೆ ಒಳಗಾಗಿ ಥರ್ಡ್ ಅಂಪೈರ್ ರಿಸಲ್ಟ್ಗಾಗಿ ಕಾಯುತ್ತಿದ್ದೇನೆ ಎಂದು ಭಾನುವಾರವಷ್ಟೇ(ಜು.12) ಅವರು ಟ್ವೀಟ್ ಮಾಡಿದ್ದರು. ಇದೀಗ ಥರ್ಡ್ ಅಂಪೈರ್ ರಿಸಲ್ಟ್ 'ಔಟ್' ಆಗಿದೆ.
CricketJul 12, 2020, 10:02 PM IST
ಅಭಿಮಾನಿಗಳ ಕೂಗಿಗೆ ದನಿಯಾದ ತೆಂಡುಲ್ಕರ್, ಕ್ರಿಕೆಟ್ ನಿಯಮ ಬದಲಿಸಲು ಸಚಿನ್ ಸೂಚನೆ!
ಕ್ರಿಕೆಟ್ನಲ್ಲಿ ಕೆಲವು ನಿಯಮಗಳ ಕುರಿತು ಅಭಿಮಾನಿಗಳಿಗೆ ವಿರೋಧವಿದೆ, ಅಷ್ಟೇ ಗೊಂದಲವಿದೆ. ಅದರಲ್ಲೂ DRS ಮೂಲಕ ತಂಡ ಅಂಪೈರ್ ತೀರ್ಪನ್ನು ರಿವ್ಯೂ ಮಾಡಿದರೆ ಮತ್ತೆ ಆಂಪೈರ್ ಹೇಳುವವರೆಗೆ ಅಭಿಮಾನಿಗಳಿಗೆ ಔಟ್ ಅಥವಾ ನಾಟೌಟ್ ಎಂದು ಊಹಿಸುವುದೇ ಕಷ್ಟ. ಇದೀಗ ಈ ಗೊಂದಲದ DRS ತೀರ್ಪಿನಲ್ಲಿ ಬದಲಾವಣೆಯಾಗಬೇಕು ಎಂದು ಸಚಿನ್ ಹೇಳಿದ್ದಾರೆ. ಸಚಿನ್ ಸರಳ ಸೂತ್ರವನ್ನು ಹೇಳಿದ್ದಾರೆ.
PoliticsJul 12, 2020, 5:32 PM IST
ಒಮ್ಮೆ ಕೊರೋನಾ ಪಾಸಿಟಿವ್, ಮತ್ತೊಮ್ಮೆ ನೆಗೆಟಿವ್: ಥರ್ಡ್ ಅಂಪೈರ್ ಮೊರೆ ಹೋದ ಸಿಟಿ ರವಿ
ಒಂದು ಸಲ ನೆಗೆಟಿವ್ ಮತ್ತೊಂದು ಸಲ ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಸಚಿವ ಸಿಟಿ ರವಿ ಅವರು ಗೊಂದಲಕ್ಕೀಡಾಗಿದ್ದು, ಥರ್ಡ್ ಅಂಪೈರ್ ರಿಸಲ್ಟ್ ಗಾಗಿ ಕಾಯುತ್ತಿದ್ದಾರೆ.
CricketJun 9, 2020, 1:45 PM IST
ಸಚಿನ್ ತೆಂಡುಲ್ಕರ್ ಔಟ್ ಮಾಡಿದ್ದಕ್ಕೆ ಇಂಗ್ಲೆಂಡ್ ವೇಗಿಗೆ ಬಂದಿತ್ತಂತೆ ಜೀವ ಬೆದರಿಕೆ!
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಅನ್ನುವುದಾದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅದಕ್ಕೆ ದೇವರು ಅನ್ನುವ ಮಾತೊಂದಿದೆ. ಅಷ್ಟರ ಮಟ್ಟಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಬೇರೂರಿದ್ದಾರೆ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಸಚಿನ್ ಆರಾಧ್ಯ ದೈವವಾಗಿದ್ದರು.
90ರ ದಶಕದಲ್ಲಿ ಸಚಿನ್ ಔಟಾದರೆ ಮುಗಿಯಿತು ಟೀಂ ಇಂಡಿಯಾ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸಲಾಗುತ್ತಿತ್ತು. ಕೆಲವರಂತು ಸಚಿನ್ ಔಟಾಗುತ್ತಿದ್ದಂತೆ ಟಿವಿಯನ್ನು ಆಫ್ ಮಾಡಿ ಬಿಡುತ್ತಿದ್ದರು. ಶತಕಗಳ ಶತಕದ ಸರದಾರ 90 ರನ್ ಗಳಿಸುತ್ತಿದ್ದಂತೆ ನರ್ವಸ್ ಆಗಿ ವಿಕೆಟ್ ಒಪ್ಪಿಸುತ್ತಿದ್ದರು. ಹೀಗೆ 99 ಶತಕ ಬಾರಿಸಿದ್ದ ತೆಂಡುಲ್ಕರ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 90 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ವಿಕೆಟ್ ಪಡೆದ ಬೌಲರ್ ಹಾಗೂ ವಿವಾದಾತ್ಮಕ ಔಟ್ ನೀಡಿದ ಅಂಪೈರ್ ಜೀವ ಬೆದರಿಕೆ ಎದುರಿಸಿದ್ದರಂತೆ..!
CricketJan 4, 2020, 9:55 AM IST
ಅಂಪೈರ್ ಜೊತೆ ಗಿಲ್ ವಾಗ್ವಾದ; ಕೆಲಕಾಲ ಪಂದ್ಯ ಸ್ಥಗಿತ
ರಣಜಿ ಪಂದ್ಯದಲ್ಲಿ ವಾಗ್ವಾದದಿಂದ ಪಂದ್ಯ ಸ್ಥಗಿತಗೊಂಡ ಘಟನೆ ನಡೆದಿದೆ. ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಶುಭ್ಮನ್ ಗಿಲ್ ವಾಗ್ವಾದ ನಡೆಸಿದ ಕಾರಣ ಪಂದ್ಯವೇ ಕೆಲಕಾಲ ಸ್ಥಗಿತಗೊಂಡಿದೆ.
CricketDec 29, 2019, 7:34 PM IST
ಕೊನೆಯ ಕ್ಷಣದಲ್ಲಿ ನಾಟೌಟ್ ನಿರ್ಧಾರ; ಪೇಚಿಗೆ ಸಿಲುಕಿದ ಅಂಪೈರ್!
ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಹಾಸ್ಯ ಘಟನೆ ನಡೆದಿದೆ. ಔಟ್ ತೀರ್ಪು ನೀಡಲು ಕೈಎತ್ತಿ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಅಂಪೈರ್ ಪೇಚಿಗೆ ಸಿಲುಕಿದ್ದಾರೆ. ಕೊನೆಗೆ ನಾಟೌಟ್, ನಾಟೌಟ್ ಎಂದು ಅಂಪೈರ್ ಕೂಗಿ ಕೂಗಿ ಹೇಳುವ ಪರಿಸ್ಥಿತಿ ಎದುರಾಗಿತ್ತು. ಈ ಘಟನೆ ವಿಡೀಯೋ ವೈರಲ್ ಆಗಿದೆ.