Asianet Suvarna News Asianet Suvarna News

ಯುಟ್ಯೂಬ್​ನಲ್ಲಿ ಉಂಟಾಗಿದ್ದ ಸಮಸ್ಯೆ ನಿವಾರಣೆ

ಯುಟ್ಯೂಬ್‌ನಲ್ಲಿ​ ಮಂಗಳವಾರ ರಾತ್ರಿ ದಿಢೀರನೇ ಸಮಸ್ಯೆ ಉಂಟಾಗಿದೆ. ಇದೀಗ ಆ ಸಮಸ್ಯೆಗೆ ಒಂದು ಗತಿ ಕಾಣಿಸಲಾಗಿದೆ.

YouTube back up after global outage
Author
Bengaluru, First Published Oct 17, 2018, 10:26 AM IST
  • Facebook
  • Twitter
  • Whatsapp

ನವದೆಹಲಿ, [ಅ.17]: ವಿಶ್ವದ  ಬಹು ದೊಡ್ಡ ವಿಡಿಯೋ ಜಾಲವಾಗಿರುವ ಯುಟ್ಯೂಬ್‌ನಲ್ಲಿ​ ಮಂಗಳವಾರ ರಾತ್ರಿ ದಿಢೀರನೇ ಸಮಸ್ಯೆ ಉಂಟಾಗಿದ್ದು, ಬಳಕೆದಾರರು ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್​ ಮಾಡಲು ಹರಸಾಹಸಪಟ್ಟಿದ್ದಾರೆ. 

ಆದರೆ, ಬುಧವಾರ ಬೆಳಗಾಗುವ ಹೊತ್ತಿಗೆ ಯುಟ್ಯೂಬ್ ಸಮಸ್ಯೆ ನಿವಾರಣೆಯಾಗಿದೆ.ಯ್ಯೂಟ್ಯೂಬ್​ ತೆರೆದುಕೊಳ್ಳಲು ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಎರರ್​ ಕೋಡ್​ ಕಾಣಿಸಿಕೊಳ್ಳುತ್ತಿದ್ದರಿಂದ ಜಗತ್ತಿನಾದ್ಯಂತ ಬಳಕೆದಾರರು ಈ ಬಗ್ಗೆ ಯ್ಯೂಟ್ಯೂಬ್​ಗೆ ವರದಿ ಮಾಡಿದ್ದರು. 

ವರದಿಯಿಂದ ತಕ್ಷಣವೇ ಎಚ್ಚೆತ್ತ ಯುಟ್ಯೂಬ್ ಸಮಸ್ಯೆಯ ಕುರಿತು ಬಳಕೆದಾರರಿಂದ ವರದಿ ಪಡೆದುಕೊಂಡು ಕಾರ್ಯಪ್ರವೃತವಾಗಿತ್ತು. ಸಮಸ್ಯೆ ಸರಿಪಡಿಸಲು ಶ್ರಮಿಸುತ್ತಿರುವುದಾಗಿ ತನ್ನ ಅಧಿಕೃತ ಖಾತೆಯಲ್ಲಿ ಸ್ಪಷ್ಟನೆಯನ್ನೂ ನೀಡಿತ್ತು. ಅಷ್ಟೇ ಅಲ್ಲದೇ ತೊಂದರೆಯಾಗಿರುವುದರ ಬಗ್ಗೆ ವಿಷಾದಿಸಿದೆ.

ಯುಟ್ಯೂಬ್​ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯ ಕುರಿತು ವರದಿ ಮಾಡಿರುವುದಕ್ಕೆ ಬಳಕೆದಾರರಿಗೆ ಧನ್ಯವಾದಗಳು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಮಸ್ಯೆ ಸರಿಯಾದ ಕೂಡಲೇ ನಾವು ನಿಮಗೆ ತಿಳಿಸುತ್ತೇವೆ. ನಮ್ಮಿಂದಾದ ತೊಂದರೆಗೆ ಕ್ಷಮೆ ಕೋರುತ್ತೇವೆ ಎಂದು ಯುಟ್ಯೂಬ್ ಸಂಸ್ಥೆ ಹೇಳಿಕೊಂಡಿದೆ.

ಕೊನೆಗೂ ಸತತ ಪ್ರಯತ್ನದಿಂದ ಸಮಸ್ಯೆ ಸರಿಪಡಿಸಿದ್ದು, ಬುಧವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಸಮಸ್ಯೆ ಸರಿಪಡಿಸಿದೆ. ಈಗ ಎಂದಿನಂತೆ ಯುಟ್ಯೂಬ್ ವಿಡಿಯೋಗಳು ಪ್ಲೇ ಆಗುತ್ತಿವೆ.

Follow Us:
Download App:
  • android
  • ios