Asianet Suvarna News Asianet Suvarna News

ಎಫ್ಡಿಐ ನಿಯಮ ಅನ್ವಯ ಭಾರತದಲ್ಲಿ ಯಾಹೂ ಸುದ್ದಿ ಜಾಲತಾಣ ಸ್ಥಗಿತ

  • ಯಾಹೂ ಸಂಸ್ಥೆಯು ಭಾರತದಲ್ಲಿ ಪ್ರಕಟವಾಗುತ್ತಿದ್ದ ತನ್ನ ಸುದ್ದಿ ಜಾಲತಾಣ ಸ್ಥಗಿತ
  • ವಿದೇಶಿ ನೇರ ಬಂಡವಾಳ ಹೂಡಿಕೆಯ(ಎಫ್‌ಡಿಐ) ಹೊಸ ನಿಯಮಗಳ ಉಲ್ಲಂಘನೆ
Yahoo shuts down news websites in India snr
Author
Bengaluru, First Published Aug 27, 2021, 6:44 AM IST
  • Facebook
  • Twitter
  • Whatsapp

ನವದೆಹಲಿ (ಆ.27): ಯಾಹೂ ಸಂಸ್ಥೆಯು ಭಾರತದಲ್ಲಿ ಪ್ರಕಟವಾಗುತ್ತಿದ್ದ ತನ್ನ ಸುದ್ದಿ ಜಾಲತಾಣ ಸ್ಥಗಿತಗೊಳಿಸಿದೆ. 

ವಿದೇಶಿ ನೇರ ಬಂಡವಾಳ ಹೂಡಿಕೆಯ(ಎಫ್‌ಡಿಐ) ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡಿಜಿಟಲ್‌ ಮಾಹಿತಿ ಪ್ರಕಟಿಸುವ ಮತ್ತು ನಿರ್ವಹಿಸುವ ಮಾಧ್ಯಮ ಸಂಸ್ಥೆಗಳಲ್ಲಿ ವಿದೇಶಿ ಮಾಲಿಕತ್ವವನ್ನು ಮಿತಗೊಳಿಸಿರುವುದರಿಂದ ಯಾಹೂ ಈ ಕ್ರಮ ತೆಗೆದುಕೊಂಡಿದೆ.

ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ವ್ಯಕ್ತಿ ಮೋದಿ

 ಯಾಹೂ ಸಂಸ್ಥೆಯ ಯಾಹೂ ನ್ಯೂಸ್‌, ಯಾಹೂ ಕ್ರಿಕೆಟ್‌, ಹಣಕಾಸು, ಮನರಂಜನೆ ಮತ್ತು ಮೇಕ​ರ್ಸ್ ಇಂಡಿಯಾ ಸೇರಿದಂತೆ ಹಲವು ಜಾಲತಾಣಗಳು ಸ್ಥಗಿತಗೊಂಡಿವೆ. ಆದರೆ ಯಾಹೂ ಈ ಮೇಲ್‌ ಮತ್ತು ಸರ್ಚ್ ಇಂಜಿನ್‌ ಬಳಕೆದಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕಂಪೆನಿ ಹೇಳಿದೆ.

Follow Us:
Download App:
  • android
  • ios