ಬೆಂಗಳೂರು(ನ.26): ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆ ಉಳಿಸಿಕೊಳ್ಳಲು ಸ್ಯಾಮ್‌ಸಂಗ್ ಇದೀಗ ಹೊಸ ತಂತ್ರಜ್ಞಾನ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಪರಿಚಯಿಸುತ್ತಿದೆ. ಇದೀಗ ವಿಶ್ವದ ಮೊತ್ತ ಮೊದಲ 12 ಜಿಬಿ RAM ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಗ್ಯಾಲಕ್ಸಿ ಎಸ್ ಸೀರಿಸ್ ಸ್ಯಾಮ್‌ಸಂಗ್ S10 ಮೊಬೈಲ್  12 ಜಿಬಿ RAM ಹಾಗೂ 1TB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇಷ್ಟೇ ಅಲ್ಲ 5G ಮಾಡೆಲ್ ಹ್ಯಾಂಡ್‌ಸೆಟ್ ಹೊಸ ಕ್ರಾಂತಿ ಮಾಡಲಿದೆ ಎಂದೇ ಹೇಳಲಾಗುತ್ತಿದೆ.

ಸ್ಯಾಮ್‌ಸಂಗ್ S10 ಮೊಬೈಲ್ ಬಿಳಿ, ಕಪ್ಪು, ಹಳದಿ ಹಾಗೂ ಹಸಿರು ಬಣ್ಣದಲ್ಲಿ ಲಭ್ಯವಿದೆ. ವಿಶೇಷ ಅಂದರೆ 6 ಕ್ಯಾಮಾರ ಹಾಗೂ 5ಜಿ ಕನೆಕ್ಟಿವಿಟಿ ಕೂಡ ಇರಲಿದೆ. ಕ್ವಾಡ್ ಲೆನ್ಸ್ ಕ್ಯಾಮರ ಹೆಚ್ಚಿನ ಕ್ಲಾರಿಟಿ ನೀಡಲಿದೆ. ಇದರ ಬೆಲೆ ಇನ್ನು ಬಹಿರಂಗವಾಗಿಲ್ಲ. 2019ರ ಆರಂಭದಲ್ಲಿ ನೂತನ ಸ್ಯಾಮ್‌ಸಂಗ್ S10 ಬಿಡುಗಡೆಯಾಗಲಿದೆ.