ಕೋಲಾರದಲ್ಲಿ ಆರಂಭವಾಗಲಿರುವ ಐಫೋನ್ ಫ್ಯಾಕ್ಟರಿಯಿಂದ ಕನ್ನಡಿಗರಿಗೇನು ಲಾಭ?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 25, Jul 2018, 2:04 PM IST
Wistron to invest 3,000 cr in Kolar iPhone plant
Highlights

ಕರ್ನಾಟಕದ ಕೋಲಾರದಲ್ಲಿ 3000 ಕೋಟಿ ರೂಪಾಯಿ ವೆಚ್ಚದಲ್ಲಿ ಐಫೋನ್ ಮೋಬೈಲ್ ಘಟಕ ಆರಂಭವಾಗಲಿದೆ. ನೂತನ ಐ ಫೋನ್ ಫ್ಯಾಕ್ಟರಿಯಿಂದ ಕರ್ನಾಟಕಕ್ಕೆ ಆಗೋ ಲಾಭವೇನು? ನಷ್ಟವೇನು? ಇಲ್ಲಿದೆ ವಿವರ.

ಕೋಲಾರ(ಜು.25): ಚಿನ್ನದ ನಾಡು ಎಂದೇ ಹೆಸರಾಗಿರುವ ಕೋಲಾರದಲ್ಲಿ ಐ ಫೋನ್ ಘಟಕ ಸ್ಥಾಪನೆಗೆ ತಯಾರಿ ಆರಂಭಗೊಂಡಿದೆ. ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತೈವಾನಿನ ವಿಸ್ಟನ್ ಟೆಕ್ನಾಲಜಿ ಕಂಪನಿ, ಐಪೋನ್ ತಯಾರಿಸುವ ಘಟಕ ಸ್ಥಾಪನೆಗೆ ಮುಂದಾಗಿದೆ.

ನೂತನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೊತೆ ಈಗಾಗಲೇ ತೈವಾನಿನ ವಿಸ್ಟನ್ ಟೆಕ್ನಾಲಜಿ ಕಂಪನಿ ಮಾತುಕತೆ ನಡೆಸಿದೆ. ಬರೋಬ್ಬರಿ 3000 ಕೋಟಿ ರೂಪಾಯಿ ಬಂಡವಾಳ ಹೂಡಲು ವಿಸ್ಟನ್ ಟೆಕ್ನಾಲಜಿ ಕಂಪನಿ ನಿರ್ಧರಿಸಿದೆ. 

 

 

15000 ಉದ್ಯೂಗ ಸೃಷ್ಠಿ: ನೂತನ ಐ ಫೋನ್ ಘಟಕ ಸ್ಥಾಪನೆಯಿಂದ ಓಟ್ಟು 15000 ಉದ್ಯೋಗ ಸೃಷ್ಠಿಯಾಗಲಿದೆ. ಮೊದಲ ಹಂತದಲ್ಲಿ 2500 ಉದ್ಯೋಗ ಸೃಷ್ಟಿ ಯಾಗಲಿದೆ. ಇನ್ನು ಎರಡನೇ ಹಂತದಲ್ಲಿ 10000 ಮಂದಿಗೆ ಉದ್ಯೋಗ ಸಿಗಲಿದೆ. 

ಕರ್ನಾಟಕ ಸರ್ಕಾರದ ಅನುಮತಿ ಪಡೆದಿರುವ  ವಿಸ್ಟನ್ ಟೆಕ್ನಾಲಜಿ ಕಂಪನಿ  ಆಗಸ್ಟ್ 15 ರಿಂದ ಘಟಕದ ನಿರ್ಮಾಣ ಕಾರ್ಯ ಆರಂಭಿಸಲಿದೆ.  ಆರಂಭಿಕ ಹಂತದಲ್ಲಿ 650 ಕೋಟಿ ವೆಚ್ಚದ ಕಾಮಗಾರಿಗಳು ಆರಂಭವಾಗಲಿದೆ.

ನೂತನ ಐಫೋನ್ ಘಟಕದಿಂದ ಪ್ರತಿ ವರ್ಷ 100 ಮಿಲಿಯನ್ ಐಫೋನ್ ತಯಾರಿಸಲು ಕಂಪೆನಿ ಉದ್ದೇಶಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಪುಷ್ಠಿ ನೀಡಲಿದೆ.

ಬೆಂಗಳೂರಿನಿಂದ 70 ಕೀಮಿ ದೂರದಲ್ಲಿರುವ ಕೋಲಾರ ಬಹುದೊಡ್ಡ ನಗರವಾಗಿ ಬೆಳೆಯುತ್ತಿದೆ. ಹೀಗಾಗಿ ಇಲ್ಲಿನ ಸ್ಥಳೀಯರ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ನಗರ ಮತ್ತಷ್ಟು ಅಭಿವೃದ್ದಿ ಕಾಣಲಿದೆ. ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. 

ಫೋನ್ ಬೆಲೆ ಅಗ್ಗ: ಕೋಲಾರದಲ್ಲಿ ಐ ಫೋನ್ ಫ್ಯಾಕ್ಟರಿ ಆರಂಭದಿಂದ ಐ ಫೋನ್ ಬೆಲೆ ಅಗ್ಗವಾಗಲಿದೆ. ಜೊತೆಗೆ ಕಳೆದ ತಿಂಗಳು ಐಫೋನ್ ಪ್ರತಿಸ್ಪರ್ಧಿಯಾಗಿರೋ ಸ್ಯಾಮ್ಸಂಗ್ ಫೋನ್ ತಯಾರಿಕಾ ಕಂಪೆನಿ ನೋಯ್ಡಾದಲ್ಲಿ ಅತೀ ದೊಡ್ಡ ಫ್ಯಾಕ್ಟರಿ ಆರಂಭಿಸಿದೆ. ಹೀಗಾಗಿ ಭಾರತದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಎರ್ಪಡಲಿದೆ. ಜೊತೆಗೆ ಎರಡು ಕಂಪೆನಿಗಳ ಮೊಬೈಲ್‌ಗಳ ಬೆಲೆ ಅಗ್ಗವಾಗಲಿದೆ.

ಉದ್ಯೋಗ ಸೃಷ್ಟಿ, ಮೋಬೈಲ್ ಬೆಲೆ ಅಗ್ಗ ಸೇರಿದಂತೆ ಹಲವು ವಿಚಾರಗಳು ಕನ್ನಡಿಗರಿಗೆ ಅನುಕೂಲವಾಗಲಿದೆ. ಆದರೆ ಐ ಫೋನ್ ಫ್ಯಾಕ್ಟರಿ ಆರಂಭಕ್ಕೆ ಸರ್ಕಾರ 43 ಎಕರೆ ಭೂಮಿ ನೀಡಲು ಒಪ್ಪಿಗೆ ಸೂಚಿಸಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಕಳೆದ ಕೆಲ ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಕೋಲಾರ ನೀರಿನ ಸಮಸ್ಯೆ ಎದುರಿಸುತ್ತಿದೆ. ಕೋಲಾರದ 67 ಗ್ರಾಮಗಳು ಹಾಗೂ ಚಿಕ್ಕಬಳ್ಳಾಪುರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಇದೀಗ ಫ್ಯಾಕ್ಟರಿ ಆರಂಭದಿಂದ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಾಗಲಿದೆ. ಇದು ಇಲ್ಲಿನ ರೈತರನ್ನ ಮತ್ತಷ್ಟು ಹೈರಾಣಾಗಿಸಲಿದೆ. ಚಿನ್ನದ ನಾಡು ಎಂದೇ ಹೆಸರಾಗಿದ್ದ ಕೋಲಾರ ಮುಂದೊಂದು ದಿನ ಐ ಫೋನ್ ಫ್ಯಾಕ್ಟರಿಯಿಂದ ಗುರುತಿಸಿಕೊಳ್ಳೋ ಸಾಧ್ಯತೆ ಇದೆ.

ಇದನ್ನು ಓದಿ: ಕೋಲಾರದಲ್ಲಿ ಐ ಫೋನ್ ತಯಾರಿಕಾ ಘಟಕ ಆರಂಭ

ಇದನ್ನು ಓದಿ:ಗೋಮಾಂಸ ತಿನ್ನುವುದು ಬಿಟ್ಟರೆ ಥಳಿತ ನಿಯಂತ್ರಣ : RSS ಮುಖಂಡ

loader