ಸುಳ್ಳು ಸುದ್ದಿಗಳ ಕಡಿವಾಣಕ್ಕೆ ವಾಟ್ಸಪ್‌ ಸುಲಭ ಮಾರ್ಗಗಳು!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 11, Jul 2018, 4:13 PM IST
WhatsApp launches Indian media blitz to dispel fake news woes
Highlights

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವದಂತಿಗಳಿಂದ ಆಗುವ ಅನಾಹುತಗಳು ಒಂದೆರಡಲ್ಲ. ಸುಳ್ಳು ಮಾಹಿತಿ, ನಕಲಿ ಮತ್ತು ಪ್ರಚೋದನಾಕಾರಿ ಸುದ್ದಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ತಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾಟ್ಸಪ್‌ ಮುಂದಾಗಿದೆ. 

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವದಂತಿಗಳಿಂದ ಆಗುವ ಅನಾಹುತಗಳು ಒಂದೆರಡಲ್ಲ. ಸುಳ್ಳು ಮಾಹಿತಿ, ನಕಲಿ ಮತ್ತು ಪ್ರಚೋದನಾಕಾರಿ ಸುದ್ದಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ತಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾಟ್ಸಪ್‌ ಮುಂದಾಗಿದೆ. ಅದಕ್ಕಾಗಿಯೇ ‘ನಾವೆಲ್ಲರೂ ಒಗ್ಗಟ್ಟಾಗಿ ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಬಹುದು’ ಎಂಬ ತಲೆಬರೆಹದಡಿ ಫೇಸ್‌ಬುಕ್‌ ಒಡೆತನದ ವಾಟ್ಸಪ್‌ ಪ್ರಮುಖ ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿದೆ. ಈ ಜಾಹೀರಾತುಗಳಲ್ಲಿ ವಾಟ್ಸಪ್‌ನಲ್ಲಿ ರವಾನೆಯಾಗುವ ಸಂದೇಶವು ವಾಸ್ತವವಾಗಿದೆಯೇ ಅಥವಾ ಸುಳ್ಳೇ ಎಂಬುದರ ಪತ್ತೆಗೆ ವಾಟ್ಸಪ್‌ ಬಳಕೆದಾರರಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.

ಕಳೆದ ಕೆಲವು ದಿನಗಳಿಂದ ವಾಟ್ಸಪ್‌ಗಳಲ್ಲಿ ಹರಿದಾಡಿದ ಮಕ್ಕಳ ಕಳ್ಳರು ಎಂಬ ವದಂತಿಗಳ ಪರಿಣಾಮ ದೇಶದ ವಿವಿಧ ಭಾಗಗಳಲ್ಲಿ ಹಲವು ಅಮಾಯಕರನ್ನು ಹೊಡೆದು ಹತ್ಯೆ ಮಾಡಲಾಗಿತ್ತು. ಅಲ್ಲದೆ, ಮನಸೋ ಇಚ್ಛೆ ಥಳಿಸಲಾಗಿತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌, ಸುಳ್ಳು ಸುದ್ದಿಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುವ ವದಂತಿಗಳಿಗೆ ಆಸ್ಪದ ನೀಡುವುದನ್ನು ಸಹಿಸಲಾಗುವುದಿಲ್ಲ ಎಂದು ವಾಟ್ಸಪ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿರುವ ವಾಟ್ಸಪ್‌, ತಂತ್ರಜ್ಞಾನ ಕಂಪನಿಗಳು, ನಾಗರಿಕ ಸಮಾಜ, ಸರ್ಕಾರಗಳು ಒಟ್ಟಾಗಿ ಕಾರ್ಯ ನಿರ್ವಹಿಸಿದಲ್ಲಿ, ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದೆ. ಅಲ್ಲದೆ, ವಾಟ್ಸಪ್‌ನಲ್ಲಿ ರವಾನೆಯಾಗುವ ಯಾವುದೇ ಸಂದೇಶವು ಸುಳ್ಳು ಅಥವಾ ಸತ್ಯವಲ್ಲ ಎಂಬ ಅನುಮಾನ ವ್ಯಕ್ತವಾದರೆ, ಅಂಥ ಸಂದೇಶವನ್ನು ಇತರರಿಗೆ ರವಾನಿಸಬೇಡಿ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಸೂಚಿಸಲಾಗಿದೆ.

ಫೇಕ್‌ ಸುದ್ದಿ ತಡೆಗೆ ವಾಟ್ಸಪ್‌ ಮದ್ದು ಏನು?

ಸಂದೇಶವನ್ನು ಯಾವಾಗ ಕಳುಹಿಸಲಾಗಿದೆ ಎಂಬುದನ್ನು ಗಮನಿಸಿ

ನಿಮಗೆ ಕಿರಿಕಿರಿಯುಂಟು ಮಾಡುವ ಸಂದೇಶದ ಬಗ್ಗೆ ಪ್ರಶ್ನೆ ಮಾಡಿ

ನಂಬಲು ಅನರ್ಹವಾದ ಸಂದೇಶದ ಬಗ್ಗೆ ಇತರೆಡೆ ಪರೀಕ್ಷಿಸಿ ನೋಡಿ

ನಕಲಿ ಸಂದೇಶಗಳಲ್ಲಿ ಸಾಮಾನ್ಯವಾಗಿ ಕಾಗುಣಿತ ತಪ್ಪು ಹೆಚ್ಚಿರುತ್ತವೆ

ಸಂದೇಶಗಳಲ್ಲಿರುವ ಫೋಟೋಗಳ ಬಗ್ಗೆ ಎಚ್ಚರಿಕೆಯಿಂದ ಗಮನಿಸಿ

ವ್ಯಕ್ತಿಯೋರ್ವ ರವಾನಿಸಿದ ಸಂದೇಶಗಳ ಲಿಂಕ್‌ಗಳನ್ನು ಪರೀಕ್ಷಿಸಿ

ನಿಮಗೆ ರವಾನಿಸಲಾದ ಸಂದೇಶಗಳು ಇತರ ವೆಬ್‌ಸೈಟ್‌ ಅಥವಾ ಪತ್ರಿಕೆಯಲ್ಲಿ ಪ್ರಕಟವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

ನೀವು ಇತರರಿಗೆ ಯಾವ ಕುರಿತಾದ ಸಂದೇಶಗಳನ್ನು ರವಾನಿಸುತ್ತಿದ್ದೀರಿ ಎಂಬುದು ನೆನಪಿರಲಿ

ವಾಟ್ಸಪ್‌ನಲ್ಲಿ ನಿಮಗೆ ಹಿಡಿಸದ ನಂಬರ್‌ಗಳನ್ನು ಬ್ಲಾಕ್‌ ಮಾಡಿ, ಅಂಥ ಗ್ರೂಪ್‌ಗಳಿಂದ ಹೊರ ಹೋಗಿ

ನಿಮಗೆ ಕಳುಹಿಸಲ್ಪಟ್ಟಿರುವ ಸಂದೇಶ ಹೆಚ್ಚು ಬಾರಿ ಹಂಚಿಕೆಯಾಗಿದೆ ಎಂಬ ಕಾರಣಕ್ಕೆ ಅಂಥ ಸಂದೇಶಗಳನ್ನು ಫಾರ್ವರ್ಡ್‌ ಮಾಡುವ ಗೋಜಿಗೆ ಹೋಗಬೇಡಿ.

loader