Asianet Suvarna News Asianet Suvarna News

ಜಿಯೋಗೆ ಸೆಡ್ಡು ಹೊಡೆಯಲು ವೋಡಾಫೋನ್ ಬಂಪರ್ ಆಫರ್!

ರಿಲಾಯನ್ಸ್ ಜಿಯೋ ಕಂಪೆನಿಗೆ ಪೈಪೋಟಿ ನೀಡಲು ಇದೀಗ ವೋಡಾಫೋನ್ ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡಿದೆ. 99 ರೂಪಾಯಿ ಹಾಗೂ 109 ರೂಪಾಯಿ ರಿಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ. ಈ ಮೂಲಕ ವೋಡಾಫೋನ್ ಗ್ರಾಹಕರಿಗೆ ಅನ್‌ಲಿಮಿಟೆಡ್ ಸೇವೆ ಘೋಷಿಸಿದೆ.

Vodafone launched Unlimited Voice Calls and free Data plan
Author
Bengaluru, First Published Oct 3, 2018, 8:33 PM IST
  • Facebook
  • Twitter
  • Whatsapp

ಮುಂಬೈ(ಅ.03): ಉಚಿತ ಡಾಟಾ, ಅನ್‌ಲಿಮಿಟೆಡ್ ಕಾಲ್ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ ಜಿಯೋ ತನ್ನ ಗ್ರಾಹಕರಿಗೆ ಪ್ರತಿ ದಿನ ಹೊಸ ಹೊಸ ಆಫರ್ ನೀಡುತ್ತಲೇ ಇದೆ. ಇದೀಗ ಜಿಯೋಗೆ ಸೆಡ್ಡು ಹೊಡೆಯಲು ವೋಡಾಫೋನ್ ನೂತನ ಆಫರ್ ನೀಡಿದೆ.

ವೋಡಾಫೋನ್ ಇದೀಗ 99 ರೂಪಾಯಿ ಹಾಗೂ 109 ರೂಪಾಯಿಗಳ ರಿಚಾರ್ಡ್ ಆಫರ್ ನೀಡಿದೆ. ಈ ಆಫರ್ ಮೂಲಕ ಗ್ರಾಹಕರು 28 ದಿನಗಳವರೆಗೆ ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಹಾಗೂ ರೋಮಿಂಗ್ ಕಾಲ್ ಸೇವೆಯನ್ನ ಪಡೆಯಲಿದ್ದಾರೆ. 109 ರೂಪಾಯಿಗಳ ರಿಚಾರ್ಜ್‌ನಲ್ಲಿ  ಅನ್‌ಲಿಮಿಟೆಡ್ ಲೋಕಲ್, ಎಸ್‌ಟಿಡಿ ಹಾಗೂ ರೋಮಿಂಗ್ ಕಾಲ್ ಸೇವೆ ಜೊತೆಗೆ 1ಜಿಬಿ ಡಾಟಾ ಸೇವೆಯನ್ನ ಪಡೆಯಬಹುದಾಗಿದೆ. 

ಇತ್ತೀಚಿಗೆ ಬಿಎಸ್‌ಎನ್ಎಲ್ ಕೂಡ 99 ರೂಪಾಯಿ ರಿಚಾರ್ಜ್ ಆಫರ್ ನೀಡಿತ್ತು. ಹೀಗಾಗಿ ವೋಡಾಫೋನ್ ಕಂಪೆನಿ ಜಿಯೋ ಹಾಗೂ ಬಿಎಸ್‌ಎನ್ಎಲ್‌ ಆಫರ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಪ್ಲಾನ್ ನೀಡಿದೆ.
 

Follow Us:
Download App:
  • android
  • ios