ನವದೆಹಲಿ(ಸೆ.14): ಹೀರೋ ಮೋಟಾರು ಕಾರ್ಪ್ ಸಂಸ್ಥೆ ನೂತನ ಹಾಗೂ ಆಧುನಿಕ ತಂತ್ರಜ್ಞಾನದ ಬೈಕ್-ಸ್ಕೂಟರ್‌ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಗರಿಷ್ಠ ಗ್ರಾಹಕರನ್ನ ಹೊಂದಿರುವ ಹೀರೋ ಮೋಟಾರ್ ಕಾರ್ಪ್ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಹೊಸ ಇನ್ನಿಂಗ್ಸ್ ಆರಂಭಿಸಿದೆ.

ಹೀರೋ ಮೋಟಾರ್ ಕಾರ್ಪ್ ಇದೀಗ ತನ್ನ ಪ್ರಚಾರದ ರಾಯಭಾರಿಯಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ನೇಮಕ ಮಾಡಿದೆ.  ಹೀರೋ ಕಂಪೆನಿ ಇತ್ತೀಚೆಗೆ ಬಿಡುಗಡೆ ಮಾಡಿದ ಎಕ್ಸ್‌ಕ್ಟ್ರೀಮ್ 200ಆರ್ ಬೈಕ್ ಪ್ರಚಾರದ ಮೂಲಕ ಕೊಹ್ಲಿ ತಮ್ಮ ಹೀರೋ ಕಂಪೆನಿ ಜೊತೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

200 ಸಿಸಿ ಇಂಜಿನ್ ಹೊಂದಿರೋ ಈ ಬೈಕ್ ಸದ್ಯ ಭಾರತದಲ್ಲಿರೋ ಇತರ 200 ಸಿಸಿ ಬೈಕ್‌ಗಳಿಗೆ ಭಾರಿ ಪೈಪೋಟಿ ನೀಡಲಿದೆ. ನೂತನ ಹೀರೋ ಎಕ್ಸ್ಟ್ರೀಮ್ ಬೈಕ್ ಬೆಲೆ 88,000(ಎಕ್ಸ್ ಶೋರೂಂ).  ಸ್ಪೋರ್ಟ್ಸ್ ಲುಕ್, ಎಲ್ಇಡಿ  ಲ್ಯಾಂಪ್ಸ್, ಎಲ್ಇಡಿ ಟೈಲೈಟ್ಸ್, ಅನಲಾಗ್ ಡಿಜಿಟಲ್ ಹಾಗೂ ಸಿಂಗಲ್ ಚಾನೆಲ್ ಎಬಿಎಸ್ ನೂತನ ಹೀರೋ ಎಕ್ಸ್ಟ್ರೀಮ್ 200 ಆರ್ ಬೈಕ್‌ನ ವಿಶೇಷತೆ.

ನೂತನ ಬೈಕ್ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಹೀರೋ ಯುವಕರ ಐಕಾನ್ ಆಗಿರು  ಕೊಹ್ಲಿಯನ್ನ ಕರೆತಂದು ಭಾರತದ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.