ಬೆಂಗಳೂರು(ಡಿ.15): ಜ್ಞಾನಕ್ಕೆ ದೇಶ-ವಿದೇಶಗಳ ಗಡಿಗಳಿಲ್ಲ. ಅದರಲ್ಲೂ ವಿಶ್ವವನ್ನು ತರ್ಕದ ಆಧಾರದ ಮೇಲೆ ಬೆಸೆಯಬಲ್ಲ ವಿಜ್ಞಾನಕ್ಕೆ ಭೂಮಂಡಲವೂ ಅಂತಿಮ ಗಡಿಯಲ್ಲ.

ವಿಜ್ಞಾನದ ಯೋಚನಾ ಲಹರಿಗಳು ಇಡೀ ವಿಶ್ವವನ್ನು ವ್ಯಾಪಿಸಿದ್ದು, ಕೆಲವೇ ಕೆಲವು ಜ್ಞಾನಜೀವಿಗಳು ಇಡೀ ವಸುಧೆಯನ್ನು ತರ್ಕದ ತಳಹದಿಯ ಸಾಮೀಪ್ಯಕ್ಕೆ ತರುವಲ್ಲಿ ಯಶಸ್ವಿಯಾಗಿವೆ.

ಮಾನವನ ನಂಬಿಕೆಗಳಲ್ಲಿ ವೈರುದ್ಧ್ಯ ಕಾಣಬಹುದು. ಆದರೆ ವಿಜ್ಞಾನದಲ್ಲಿ ಇಂತಹ ಭಿನ್ನಮತ ಕ್ಷೀಣ. ಒಂದು ವೇಳೆ ಭಿನ್ನಮತವಿದ್ದರೂ, ಹೊಸದೊಂದು ಕ್ರಾಂತಿಕಾರಕ ಯೋಚನಾ ಲಹರಿಯ ಜನ್ಮಕ್ಕೆ ಅದು ಸಹಾಯಕಾರಿ.

ಪಾರ್ಕರ್ ಪ್ರೋಬ್: ನಾಸಾದಿಂದ ಇಂದು ಮಹತ್ವದ ಸುದ್ದಿಗೋಷ್ಠಿ!

ಅದರಂತೆ ಬೆಂಗಳೂರಿನ ಸೈನ್ಸ್ ಗ್ಯಾಲರಿ ಹಮ್ಮಿಕೊಂಡಿದ್ದ ಮೊಟ್ಟ ಮೊದಲ ಸಾರ್ವಜನಿಕ ಕಾರ್ಯಕ್ರಮದ ಯಶಸ್ಸಿಗೆ ಅಮೆರಿಕ ದೂತಾವಾಸ ಕಚೇರಿ ಬೆಂಬಲ ನೀಡುವ ಮೂಲಕ ವಿಜ್ಞಾನದ ವಿಸ್ತಾರಕ್ಕೆ ಸಾಕ್ಷಿಯಾಗಿದೆ.

ಇದೇ ಡಿ.14  ರಂದು ಸೈನ್ಸ್ ಗ್ಯಾಲರಿ ನೇತೃತ್ವದಲ್ಲಿ ಜರುಗಿದ SUBMERGE ಕಾರ್ಯಕ್ರಮಕ್ಕೆ ಅಮೆರಿಕ ದೂತಾವಾಸ ಕಚೇರಿ ಬೆಂಬಲವಾಗಿ ನಿಂತಿದ್ದು, ಎರಡೂ ದೇಶಗಳ ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಮುನ್ನುಡಿ ಬರೆದಿದೆ.

ಈ ಕುರಿತು ಮಾಹಿತಿ ನೀಡಿರುವ ಸೈನ್ಸ್ ಗ್ಯಾಲರಿಯ ಡಾ. ಜಾನ್ನವಿ ಫಾಲ್ಕೆ, SUBMERGE ಕಾರ್ಯಕ್ರಮದ ಯಶಸ್ಸಿನಲ್ಲಿ ಚೆನ್ನೈನಲ್ಲಿರುವ ಅಮೆರಿಕದ ದೂತಾವಾಸ ಕಚೇರಿಯ ಪಾತ್ರ ದೊಡ್ಡದು ಎಂದು ಹೇಳಿದ್ದಾರೆ.

ಹಬಲ್ ಕಣ್ಣಿಗೆ ಬಿದ್ದ ಸುಂದರ ನೀಲಿ ನಕ್ಷತ್ರಗಳ ಗ್ಯಾಲಕ್ಸಿ!

ಇದೇ ವೇಳೆ ಭವಿಷ್ಯದಲ್ಲೂ ಇಂತಹ ಕಾರ್ಯಕ್ರಮಗಳಿಗೆ ಅಮೆರಿಕ ದೂತಾವಸ ಕಚೇರಿ ಬೆಂಬಲವಾಗಿ ನಿಲ್ಲಲಿದೆ ಎಂದು ಚೆನ್ನೈನ ಅಮೆರಿಕ ದೂತಾವಾಸ ಕಚೇರಿಯ ಕಾನ್ಸುಲೆಟ್ ಜನರಲ್ ಲಾರೆನ್ ಎಚ್. ಲವ್ಲೇಸ್ ಭರವಸೆ ನೀಡಿದ್ದಾರೆ.

ಏಷ್ಯಾದಲ್ಲೇ ವಿಭಿನ್ನವಾಗಿರುವ ಇಂತಹ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ ಭವಷ್ಯದಲ್ಲೂ ಇಂತಹ ಸಹಭಾಗಿತ್ವದ ಅವಕಾಶಕ್ಕಾಗಿ ನಾವು ಎದುರು ನೋಡುತ್ತೇವೆ ಎಂದು ಲಾರೆನ್ ಲವ್ಲೇಸ್ ಹೇಳಿದ್ದಾರೆ.

ಏನಿದು ಮಲ್ಟಿವರ್ಸ್?: ತರ್ಕದ ಅನಂತ ಆಕಾಶಕ್ಕೆ ಸ್ವಾಗತ!

ಕಾರ್ಯಕ್ರಮದಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುದಾರ್ ಶಾ ಹಾಗೂ ಅಂತಾರಾಷ್ಟ್ರೀಯ ಸೈನ್ಸ್ ಗ್ಯಾಲರಿಯ ಮುಖ್ಯಸ್ಥೆ ಡಾ. ಅಂಡ್ರೆಲಾ ಬ್ಯಾಂಡೇಲ್ಲಿ ಹಾಜರಿದ್ದರು.