ನವದೆಹಲಿ[ಸೆ.11] ದೇಶದ ನೂರು ಕೋಟಿ ಜನರ ಬಯೋಮೆಟ್ರಿಕ್ ದಾಖಲೆ ಒಳಗೊಂಡಿರುವ ಆಧಾರ್ ಡಾಟಾ ಬೇಸ್ ಅನ್ನು ಪ್ರಪಂಚದ ಯಾವುದೆ ಮೂಲೆಯಲ್ಲಿ ಕುಳಿತು ಬೇಕಾದರೂ ಹ್ಯಾಕ್ ಮಾಡಬಹುದು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಹಫ್ ಪೋಸ್ಟ್‌ ಸುದ್ದಿ ವೆಬ್‌ ಸೈಟ್‌ ನಡೆಸಿರುವ ತನಿಖಾ ವರದಿ ಬೆಚ್ಚಿ ಬೀಳಿಸುವ ಮಾಹಿತಿ ನೀಡಿದೆ. ಹೊಸ ಬಳಕೆದಾರರನ್ನು ನೋಂದಾಯಿಸುವುದಕ್ಕೆ ಬಳಸಲ್ಪಡುವ ಆಧಾರ್‌ ಸಾಫ್ಟ್  ವೇರ್‌ ಅನ್ನು ಹ್ಯಾಕ್‌ ಮಾಡಲು ಸಾಧ್ಯವಿದೆ. ಅದರಲ್ಲಿನ ಭದ್ರತಾ ಅಂಶಗಳಿರುವ  ನಿರ್ಣಾಯಕ 'ಪ್ಯಾಚ್‌' ನಿಷ್ಕ್ರಿಯಗೊಳಿಸುವ ಮೂಲಕ ಜಗತ್ತಿನಲ್ಲಿ ಎಲ್ಲೇ ಕುಳಿತುಕೊಂಡು ಯಾರೂ ಕೂಡ ಆಧಾರ್‌ ನೋಂದಣಿ ಮಾಡಲು ಸಾಧ್ಯವಿದೆ ಎಂಬ ಅಂಶ ಬಹಿರಂಗವಾಗಿದೆ.

ಪರಿಣಿತರ ಸಹಾಯದಿಂದ ಹಲವಾರು ತಿಂಗಳು ಕಾಲ ಸುದ್ದಿ ಸಂಸ್ಥೆ ಮಾಹಿತಿ ಕಲೆ ಹಾಕಿ ತನಿಖಾ ವರದಿ ಸಿದ್ಧಮಾಡಿದೆ. ಒಟ್ಟಿನಲ್ಲಿ ಆಧಾರ್ ಕಾರ್ಡ್ ಸಂಬಂಧ ಇದ್ದ ಗೊಂದಲಗಳಿಗೆ ಈ ಮಾಹಿತಿ ಮತ್ತೊಂದು ಹೊಸ ಸೇರ್ಪಡೆಯಾಗಿದ್ದು ಸರಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.