ಲಂಡನ್‌[ಡಿ.05]: 5-10 ವರ್ಷದ ಮಕ್ಕಳು ಹೊಸ ಆಟದ ಸಾಮಾನು ತಂದುಕೊಟ್ಟರೆ ಆಟವಾಡಿ ಮಜಾ ಮಾಡುತ್ತಾರೆ. ಆದರೆ ಅಮೆರಿಕದ 7 ವರ್ಷದ ಬಾಲಕ ರಯಾನ್‌, ಈ ಆಟಿಕೆಗಳ ಬಗ್ಗೆ ತನ್ನ ಯುಟ್ಯೂಬ್‌ನಲ್ಲಿ ವಿಶಿಷ್ಟರೀತಿಯ ವಿವರಣೆ ನೀಡುತ್ತಾನೆ.

ಈತನ ಯುಟ್ಯೂಬ್‌ ಅದೆಷ್ಟುಜನಪ್ರಿಯ ಎಂದರೆ ಅದಕ್ಕೆ 1.7 ಕೋಟಿ ಚಂದಾದಾರರಿದ್ದಾರೆ. ಈತನ ವಿಡಿಯೋಗಳು 260 ಕೋಟಿ ನೋಡಲ್ಪಟ್ಟಿದೆ. ಹೀಗಾಗಿ ಈತನಿಗೆ ಕಳೆದ 1 ವರ್ಷದಲ್ಲಿ 150 ಕೋಟಿ ರು. ಆದಾಯ ಬಂದಿದೆ. ಈ ಮೂಲಕ ಈತ ಯುಟ್ಯೂಬ್‌ನ ನಂ.1 ಸ್ಟಾರ್‌ ಆಗಿ ಹೊರಹೊಮ್ಮಿದ್ದಾನೆ. ಜೊತೆಗೆ ಈತನ ಹೆಸರಲ್ಲಿ ಆಟಿಕೆಗಳೂ ಮಾರುಕಟ್ಟೆಗೆ ಬಿಡುಗಡೆಯಾಗಿವೆ.