ವಿಶ್ವದ ಮೊದಲ 5ಜಿ ಮೊಬೈಲ್ ಬಿಡುಗಡೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 12:15 PM IST
The world first 5G Smartphone just launched
Highlights

ಅತ್ಯಂತ ವೇಗದ ಸೇವೆ ನೀಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ 5 ಜಿ ಮೊಬೈಲ್ ಫೋನ್ ಅನ್ನು ಲೆನೆವೋ ಒಡೆತನದ ಮೋಟೋ ಬಿಡುಗಡೆ ಮಾಡಿದೆ. 

ನ್ಯೂಯಾರ್ಕ್: ಅತ್ಯಂತ ವೇಗದ ಸೇವೆ ನೀಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ 5 ಜಿ ಮೊಬೈಲ್ ಫೋನ್ ಅನ್ನು ಲೆನೆವೋ ಒಡೆತನದ ಮೋಟೋ ಶುಕ್ರವಾರ ಇಲ್ಲಿ ಅನಾವರಣಗೊಳಿಸಿದೆ. ಆದರೆ ವಿಶ್ವದಲ್ಲಿ ಸದ್ಯಕ್ಕೆ ಎಲ್ಲೂ 5ಜಿ ಸೇವೆ ಲಭ್ಯವಿಲ್ಲ. ಮುಂದಿನ ವರ್ಷ 5 ಜಿ ಸೇವೆ ಲಭ್ಯವಾಗಲಿದ್ದು, ಬಳಿಕ ಈ ಮೊಬೈಲ್‌ನಲ್ಲಿ ಅತ್ಯಂತ ವೇಗದ ಮತ್ತು ವಿವಿಧ ಅತ್ಯಾಧುನಿಕ ಸೇವೆಗಳು ಲಭ್ಯವಾಗಲಿದೆ. ಇಲ್ಲಿ ಇನ್ನೊಂದು ಅಂಶವಿದೆ. 

ಕೇವಲ ಮೋಟೋ ಕಂಪನಿಯ ಮೋಟೋ ಝಡ್ 3 ಮೊಬೈಲ್ ಖರೀದಿಸಿದರೆ 5ಜಿ ಸಂಪರ್ಕ ಸಿಗದು. ಇದಕ್ಕಾಗಿ ಮೋಟೋ ಮೂಡ್ ಎಂಬ ಉಪಕರಣ ಖರೀದಿಸಬೇಕು. 

ಇದು ಕೂಡಾ ಮುಂದಿನ ವರ್ಷದ ವೇಳೆಗಷ್ಟೇ ಲಭ್ಯವಾಗಲಿದೆ. ಮೊಬೈಲ್ ಜೊತೆ ಈ ಮೋಟೋ ಮೂಡ್ ಉಪಕರಣ ಬಳಸಿದರೆ, ಅಮೆರಿಕದಲ್ಲಿ 5ಜಿ ಮೊಬೈಲ್ ಸೇವೆ ಒದಗಿಸಲು ಸನ್ನದ್ಧವಾಗಿರುವ ವೆರಿ ಜೋನಾ ಕಂಪನಿಯ ಸಂಪರ್ಕ ಲಭ್ಯವಾಗುತ್ತದೆ. ಈ ಮೊಬೈಲ್ ಆ. 16 ಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

loader