ಸ್ಯಾಮ್‌ಸಂಗ್ ಫೋನ್‌ ಮೇಲೆ ಬರೋಬ್ಬರಿ ರೂ. 50 ಸಾವಿರ ರಿಯಾಯಿತಿ!!!

Samsung Galaxy S9 available for a massive Rs 50,000 discount
Highlights

  • ದುಬಾರಿ ಫೋನ್‌ಗಳಿಗೆ ಹೆಸರುವಾಸಿಯಾದ ಸ್ಯಾಮ್‌ಸಂಗ್ ಇದೀಗ ಬದಲಾವಣೆಯ ಹಾದಿಯಲ್ಲಿ?
  • ತನ್ನ ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಪ್ರಕಟಿಸಿರುವ ಸ್ಯಾಮ್‌ಸಂಗ್

 

ದುಬಾರಿ ಫೋನ್‌ಗಳನ್ನು ಹೊಂದಿರುವ ಶೋಕಿ ಉಳ್ಳವರಿಗೆ ಒಂದು ಅಚ್ಚರಿದಾಯಕ ಆಫರ್‌ನ್ನು ಖ್ಯಾತ ಮೊಬೈಲ್ ತಯಾರಕ ಕಂಪನಿ ಸ್ಯಾಮ್‌ಸಂಗ್ ಪ್ರಕಟಿಸಿದೆ.ದುಬಾರಿ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಸ್ಯಾಮ್‌ಸಂಗ್ ಇದೀಗ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ. 

ತನ್ನ ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಪ್ರಕಟಿಸಿರುವ ಸ್ಯಾಮ್‌ಸಂಗ್, ಗ್ಯಾಲಕ್ಸಿ S9 ಆವೃತ್ತಿಯ ಮೇಲೆ ಸುಮಾರು 50000 ರೂ.ಗಳಷ್ಟು ರಿಯಾಯಿತಿಯನ್ನು ಘೋಷಿಸಿದೆ. 

ತನ್ನ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಮೊದಲು 64 ಜಿಬಿ ಗ್ಯಾಲಕ್ಸಿ S9 ಮೇಲೆ ರೂ. 33000 ರಿಯಾಯಿತಿ ನೀಡಿತ್ತು. ಇದೀಗ, ರೂ.5000 ಇನ್ಸ್ಟ್ಯಾಂಟ್ ಕ್ಯಾಶ್‌ಬ್ಯಾಕ್ ಮತ್ತು ಎಚ್‌ಡಿಎಫ್‌ಸಿ ಕಾರ್ಡ್ ಮೂಲಕ ಖರೀದಿಸುವಾಗ ರೂ.6000 ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. 

ಸ್ಯಾಮ್‌ಸಂಗ್‌ನ ಅಪ್ಗ್ರೇಡ್ ಯೋಜನೆಯ ಮೂಲಕ ಹಳೆ ಮಾಡೆಲ್‌ಗಳ ವಿನಿಮಯದೊಂದಿಗೆ [ಲಿಸ್ಟ್ ಕೆಳಗೆ ನೀಡಲಾಗಿದೆ] ಇನ್ನು ಹೆಚ್ಚುವರಿ ರೂ.6000 ರಿಯಾಯಿತಿಯನ್ನು ಪಡೆಯಬಹುದು.  ಇವುಗಳನ್ನೆಲ್ಲಾ ಸೇರಿಸಿ ರೂ.50000ವರೆಗಿನ ಒಟ್ಟು ರಿಯಾಯಿತಿಯನ್ನು ಘೋಷಿಸಿದೆ.

Samsung Note 8 64 GB
Samsung Galaxy S8 64GB
Samsung Galaxy S8 Plus 64GB
Samsung Galaxy S7 32GB
Samsung Galaxy S7 Edge 32 GB
Samsung Galaxy S6 Edge+ (32GB)
Samsung Galaxy S6 Edge 32GB
Samsung Galaxy On Max
Samsung Galaxy A5 (2016)
Samsung Galaxy A8+
Samsung Galaxy J7 Pro 32GB
Samsung Galaxy J7 Max
Samsung Galaxy S6 32GB
Samsung Galaxy A7 (2016)
Samsung Galaxy A9 Pro
Samsung Galaxy A5 (2017)
Samsung Galaxy A7 (2017)
Samsung Galaxy Note 5 32GB
Samsung Galaxy C7 Pro
Samsung Galaxy C9 Pro

loader