ಭಾರತದ ರಾಯಲ್ ಎನ್‌ಫೀಲ್ಡ್ ಖರೀದಿಸಿ ಅಮೆರಿಕಾ ಸುತ್ತಿದ ಕೊರಿಯಾದ ಕೇಝ್

https://static.asianetnews.com/images/authors/dfaa24eb-ede5-5577-a696-88ef5a369928.jpg
First Published 6, Jul 2018, 6:35 PM IST
Royal Enfield owner from Korea ships his Bullet to South America – Rides to Alaska
Highlights

ಭಾರತದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500, ಸೌತ್‌ಕೊರಿಯಾದ ಮಾಲೀಕ, ಅಮೆರಿಕಾದಲ್ಲಿ ಪ್ರಯಾಣ. ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ 51 ಸಾವಿರ ಕೀಲೋಮೀಟರ್ ಪ್ರಯಾಣಿಸಿದ ಸಂಗ್ಮಿನ್ ಜರ್ನಿಯನ್ನ ಬೈಕ್ ಪ್ರೀಯರು ಮಿಸ್ ಮಾಡದೇ ಓದಿ.

ಸೌತ್‌ಕೊರಿಯಾ(ಜು.06): ಬರೋಬ್ಬರಿ 51,000 ಕೀಲೋ ಮೀಟರ್, 11 ತಿಂಗಳು. ಇದು ದಕ್ಷಿಣ ಕೊರಿಯಾದ ಅಹನ್ ಸಂಗ್ಮಿನ್ ಕೇಝ್ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಸುತ್ತಾಟ ನಡೆಸಿದ ರೀತಿ.

ರಾಯಲ್ ಎನ್‌ಫೀಲ್ಡ್‌ಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಅದರಲ್ಲೂ ಸೌತ್‌ಕೊರಿಯಾದ 36 ವರ್ಷದ ಸಂಗ್ಮಿನ್ ಬಳಿ ಇರೋದು ಭಾರತದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 . ಇದೇ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್‌ನಲ್ಲಿ ಸಂಗ್ಮಿನ್ ದಕ್ಷಿಣ ಅಮೇರಿಕಾ ಸುತ್ತಿದ್ದಾರೆ. ಓಟ್ಟು 51 ಸಾವಿರ ಕೀಲೋಮೀಟರ್ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ.

 

 

ಸಂಗ್ಮಿನ್ ಪಯಣವೇ ರೋಚಕವಾಗಿದೆ. ಭಾರತದ ಪ್ರವಾಸಕ್ಕೆ ಆಗಮಿಸಿದ ಸಂದರ್ಭ ಇಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ ಬಾಡಿಗೆ ಪಡೆದು ರೈಡ್ ಮಾಡಿದ್ದರು. ಮೊದಲ ರೈಡ್‌ಗೆ ಸಂಗ್ಮಿನ್ ರಾಯಲ್ ಎನ್‌ಫೀಲ್ಡ್ ಅಭಿಮಾನಿಯಾದರು. ತಾಯ್ನಿಡಿಗೆ ವಾಪಾಸ್ಸಾದ ಸಂಗ್ಮಿನ್, ಸೌತ್‌ಕೊರಿಯಾದ ಬೈಕ್ ಡೀಲರ್ ಬಳಿ ಮನವಿ ಮಾಡಿ ಭಾರತದ ರಾಯಲ್ ಎನ್‌ಫೀಲ್ಡ್ ಖರೀದಿಸಿದರು. 

 

 

ಭಾರತದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್  ಸೌತ್‌ಕೊರಿಯಾ ಸಂಗ್ಮಿನ್‌ಗೆ ತಲುಪು  ವೇಳೆ ಅದರ ಬೆಲೆ 6.2 ಲಕ್ಷ ರೂಪಾಯಿ ಆಗಿತ್ತು. ಇದಕ್ಕಾಗಿ ಸಂಗ್ಮಿನ್ ತನ್ನ ಬಳಿ ಇದ್ದ BMW650 ಕಾರನ್ನ ಮಾರಾಟ ಮಾಡಿದ್ದರು.

 

 

#justgo ver2.0 Day-17 #아메리카 #오토바이여행 👨‍🎨#간단보고 #칠레 #pucon #푸콘 가는길.. 참으로 오랜만의 #라이딩 .. #유라시아횡단 때는 하루 500km 도 거뜬 했는데.. 이젠 300km도 힘들다.. 그래도 좋다.. 영상 3도... 비에 젖어 달달 떨면서도.. 핼멧 안에서는 미친놈 처럼 웃고있다. 태생이 #변태 인가보다.. 라이딩이 1시간이 남어가면 길을 따라 달리면서 이것저것 생각을 하게된다.. 6년전에는 서른의 삶을... 지금은 똥꼬과 나 #우리의 미래를... 7시간을 달리며 공상에 빠진다.. . 남쪽으로 달리면 왼쪽으로 신이 만든 거대한 하얀 장벽이 나를 따라오는... #여기는 푸콘가는 길 #칠레

A post shared by AhnSungmin (@kaze_wolf_min) on Aug 17, 2017 at 2:50pm PDT

 

ಇಲ್ಲಿಂದ ಸಂಗ್ಮಿನ್ ಜರ್ನಿ ಆರಂಭಗೊಳ್ಳುತ್ತೆ. ಸೌತ್‌ಕೊರಿಯಾದಿಂದ ದಕ್ಷಿಣ ಅಮೆರಿಕಾಗೆ ಹಡಗಿನ ಮೂಲಕ ಸಂಗ್ಮಿನ್ ರಾಯಲ್ ಎನ್‌ಫೀಲ್ಡ್ ಬೈಕ್ ರವಾನಿಸಿದರು. ಬಳಿಕ ದಕ್ಷಿಣ ಅಮೆರಿಕಾದಿಂದ ಸಂಗ್ಮಿನ್ ಪ್ರಯಾಣ ಆರಂಭಗೊಂಡಿತು.

 

 

ಅರ್ಜೆಂಟೀನಾ, ದಕ್ಷಿಣ ಅಮೇರಿಕಾ, ನಾರ್ತ್ ಅಮೇರಿಕಾ ಮೂಲಕ ಅಲಸ್ಕಾ ತಲುಪಿದ ಸಂಗ್ಮಿನ್ ತಮ್ಮ ಗುರಿ ಮುಟ್ಟಿದ್ದಾರೆ. ಬರೋಬ್ಬರಿ 51 ಸಾವಿರ ಕೀಲೋಮೀಟರ್ ಭಾರತದ ರಾಯಲ್ ‌ಎನ್‌ಫೀಲ್ಡ್‌ನಲ್ಲಿ ಪ್ರಯಾಣ ಮಾಡಿದ್ದಾರೆ.

ಬಳಿಕ ಅದೇ ರೀತಿ ಹಿಂತಿರುಗಿದ್ದಾರೆ. ಇಷ್ಟೇ ಅಲ್ಲ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನ್ನ ಮತ್ತೆ ಕೊರಿಯಾಗೆ ತಂದಿದ್ದಾರೆ. ಸಂಗ್ಮಿನ್ ತನ್ನ ಮುಂದಿನ ಜರ್ನಿ ಕುರಿತು ಶೀಘ್ರದಲ್ಲೇ  ಬಹಿರಂಗ ಪಡಿಸೋದಾಗಿ ಹೇಳಿದ್ದಾರೆ.
 

loader