Asianet Suvarna News Asianet Suvarna News

ಶೀಘ್ರದಲ್ಲೇ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭ!

ರಿಲಾಯನ್ಸ್ ಇಂಡಸ್ಟ್ರಿ ಶೀಘ್ರದಲ್ಲೇ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ 2500 ಕೋಟಿ ರೂಪಾಯಿ ವ್ಯಯಸಲಿದೆ. ಇಲ್ಲಿದೆ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಕುರಿತ ಮಾಹಿತಿ ಇಲ್ಲಿದೆ.

Reliance Industries in talks to buy Hathway to launch Jio Gigafiber
Author
Bengaluru, First Published Oct 3, 2018, 8:14 PM IST

ಮುಂಬೈ(ಅ.03):  ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರಿ ಇದೀಗ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲು ಸಜ್ಜಾಗಿದೆ. ಇದಕ್ಕಾಗಿ ದೇಶದ ಪ್ರಸಿದ್ಧ ಹಾಥ್ವೇ ಬ್ರಾಡ್‌ಬ್ಯಾಂಡ್ ಕಂಪೆನಿಯನ್ನ ಖರೀದಿಸಲು ಮುಂದಾಗಿದೆ.

ಬರೋಬ್ಬರಿ 2,500 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಆರಂಭಿಸಲು ರಿಲಾಯನ್ಸ್ ಯೋಜನೆ ರೂಪಿಸಿದೆ. ಸದ್ಯ ಬ್ರಾಡ್‌ಬ್ಯಾಂಡ್ ಸರ್ವೀಸ್‌ನಲ್ಲಿ ಭಾರತ ವಿಶ್ವದಲ್ಲಿ 134ನೇ ಸ್ಥಾನದಲ್ಲಿದೆ. ಶೀಘ್ರದಲ್ಲೇ ಭಾರತವನ್ನ ಟಾಪ್ 5 ಸ್ಥಾನಕ್ಕೆ ತರಲಾಗುವುದು ಎಂದು 2018ರ ಆರಂಭದಲ್ಲಿ ಮುಖೇಶ್ ಅಂಬಾನಿ ಹೇಳಿದ್ದರು.

ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಮೂಲಕ ಭರ್ಜರಿ ಆಫರ್ ನೀಡಲು ರಿಲಾಯನ್ಸ್ ಮುಂದಾಗಿದೆ. ಕಡಿಮೆ ಬೆಲೆಯಲ್ಲಿ ಮನೆ ಮನೆಗೆ ಬ್ರಾಡ್‌ಬ್ಯಾಂಡ್ ಸೇವೆ ತಲುಪಿಸಲು ರಿಲಾಯನ್ಸ್ ನಿರ್ಧರಿಸಿದೆ. ಇಷ್ಟೇ ಅಲ್ಲ ಉಚಿತ ಸೇವೆ ನೀಡೋ ಕುರಿತು ಮಾತುಕತೆ ನಡೆಸಿದೆ.

ಜಿಗಾಫೈಬರ್ ಬ್ರಾಡ್ ಬ್ರಾಂಡ್ ಸರ್ವೀಸ್ ಜೊತೆ ಜಿಗಾ ಟಿವಿ ಸೆಟ್‌ಅಪ್ ಬಾಕ್ಸ್ ಸೇವೆಯನ್ನೂ ಆರಂಭಿಸಲು ಮುಂದಾಗಿದೆ. ಈ ಮೂಲಕ 600 ಟಿವಿ ಚಾನೆಲ್ ವೀಕ್ಷಿಸೋ ಸೌಲಭ್ಯ ಪಡೆಯಲಿದ್ದಾರೆ ಎಂದು ರಿಲಾಯನ್ಸ್ ಸಂಸ್ಥೆ ಹೇಳಿದೆ.

Follow Us:
Download App:
  • android
  • ios