ಆಕ್ಸ್‌ಫರ್ಡ್(ಏ.30): ಪರಗ್ರಹ ಜೀವಿಗಳು ಈಗಾಗಲೇ ಮಾನವ ಸಮಾಜದಲ್ಲಿ ಬೆರೆತಿದ್ದು. ಮಾನವರೊಂದಿಗೆ ದೈಹಿಕ ಸಂಪರ್ಕ ಹೊಂದುವ ಮೂಲಕ ಹೊಸ ತಳಿಯ ಸೃಷ್ಟಿಗೆ ಮುಂದಾಗಿವೆ ಎಂದು ಆಕ್ಸ್‌ಫರ್ಡ್ ವಿವಿಯ ಪ್ರೊಫೆಸರ್‌ವೋರ್ವರು ವಾದ ಮಂಡಿಸಿದ್ದಾರೆ.

ಪರಗ್ರಹ ಜೀವಿಗಳು ಭೂಮಿಯಲ್ಲಿ ವಾಸಿಸುತ್ತಿದ್ದು, ಮಾನವರೊಂದಿಗೆ ದೈಹಿಕ ಸಂಪರ್ಕ ಕೂಡ ಹೊಂದಿವೆ ಆಕ್ಸ್‌ಫರ್ಡ್ ವಿವಿಯ ಪ್ರೊಫೆಸರ್ ಯಂಗ್ ಹಾಯ್ ಚಿ ಪ್ರತಿಪಾದಿಸಿದ್ದಾರೆ.

ಪ್ರಾಕೃತಿಕ ವಿಕೋಪದಿಂದ ತಮ್ಮನ್ನು ಮತ್ತು ಮಾನವ ಜನಾಂಗವನ್ನು ರಕ್ಷಿಸಲು ಪರಗ್ರಹ ಜೀವಿಗಳು ಮಾನವರೊಂದಿಗೆ ದೈಹಿಕ ಸಂಪರ್ಕ ಸಾಧಿಸುವ ಮೂಲಕ ಜೈವಿಕ ಪ್ರಯೋಗಕ್ಕೆ ಮುಂದಾಗಿವೆ ಎಂದು ಹಾಯ್ ಚಿ ಪ್ರತಿಪಾದಿಸಿದ್ದಾರೆ.